Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಖಪ್ಪರ ಯೋಗ : ಮುಂದಿನ 30 ದಿನಗಳ ಈ 5 ರಾಶಿಯವರಿಗೆ ಸಂಕಷ್ಟ ಬೆನ್ನು ಹತ್ತಲಿದೆ!
ಶ್ರಾವಣ ಮಾಸ ಪ್ರಾರಂಭವಾಗಿದೆ. ಈ ವರ್ಷ ಶ್ರಾವಣ ಮಾಸ ಹೆಚ್ಚು ದಿನಗಳ ಕಾಲ ಇರೋದ್ರಿಂದ ಈ ಬಾರಿ ಹಲವು ಹಬ್ಬಗಳು ತಡವಾಗಿ ಬರಲಿದೆ. ಶ್ರಾವಣ ಮಾಸದ ಪರಿಣಾಮವಾಗಿ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳೂ ರೂಪುಗೊಳ್ಳುತ್ತಿವೆ.
ಇದೇ ಸಮಯದಲ್ಲಿ ಬುಧಾದಿತ್ಯ ರಾಜ ಯೋಗ ಮತ್ತು ಲಕ್ಷ್ಮಿ ರಾಜ ಯೋಗದಂತಹ ಮಂಗಳಕರ ಯೋಗಗಳು ರೂಪುಗೊಳ್ಳುತ್ತದೆ. ಮತ್ತೊಂದೆಡೆ ಖಪ್ಪರ ಯೋಗವೂ ರೂಪುಗೊಳ್ಳುತ್ತದೆ. ಖಪ್ಪರ ಯೋಗವನ್ನು ಜ್ಯೋತಿಷ್ಯದಲ್ಲಿ ಅಶುಭವೆಂದು ಪರಿಗಣಿಸಲಾಗಿದೆ.

ಶ್ರಾವಣ ಮಾಸದಲ್ಲಿ ಖಪ್ಪರ ಯೋಗ ರೂಪುಗೊಳ್ಳುತ್ತಿರೋದ್ರಿಂದ ಮುಂದಿನ ದಿನಗಳಲ್ಲಿ ಕೆಲವು ರಾಶಿಯವರು ಜಾಗ್ರತೆ ವಹಿಸಬೇಕಾಗುತ್ತದೆ. ಖಪ್ಪರ್ ಯೋಗವು ಕೆಲವು ರಾಶಿಯವರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಷ್ಟಕ್ಕು ಯಾವೆಲ್ಲಾ ರಾಶಿಯವರ ಮೇಲೆ ಖಪ್ಪರ ಯೋಗದ ಪರಿಣಾಮ ಬೀಳಲಿದೆ ಅನ್ನೋದನ್ನು ತಿಳಿಯೋಣ.
ಮಿಥುನ ರಾಶಿ
ಶ್ರಾವಣ ಮಾಸದಲ್ಲಿ ರೂಪುಗೊಂಡ ಖಪ್ಪರ ಯೋಗವು ಮಿಥುನ ರಾಶಿಯವರಿಗೆ ಅಶುಭ ಸಂಕೇತವಾಗಿದೆ. ಖಪ್ಪರ ಯೋಗದ ಸಮಯದಲ್ಲಿ ನೀವು ಕೆಲಸದಲ್ಲಿ ವೈಫಲ್ಯ ಮತ್ತು ಒತ್ತಡವನ್ನು ಎದುರಿಸಬೇಕಾಗಬಹುದು. ಹಣದ ನಷ್ಟದ ಸಾಧ್ಯತೆಯು ಹೆಚ್ಚಾಗಿರುತ್ತದೆ. ನೀವು ಎಷ್ಟೇ ಕಷ್ಟ ಪಟ್ಟರೂ ಕೂಡ ನಿಮ್ಮ ಕೈಯಲ್ಲಿ ದುಡ್ಡು ಉಳಿಯೋದಿಲ್ಲ. ಉದ್ಯೋಗಸ್ಥರು ಕಛೇರಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಾಗಿ ನೀವು ಜಾಗರೂಕರಾಗಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಆಪತ್ತನ್ನು ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಖಪ್ಪರ ಯೋಗದ ರಚನೆಯ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ನಿಮ್ಮ ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಯಾವುದೇ ವ್ಯಾಪಾರ ಮಾಡಿದರೂ ಕೂಡ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಬಿಟ್ಟು ಬಿಡದಂತೆ ಕಾಡುತ್ತದೆ. ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಸಣ್ಣ ರೋಗವಾದರೂ ಸರಿ ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ದುಡ್ಡು ಕಾಸಿನ ವ್ಯವಹಾರ ಮಾಡುವಾಗ ಹುಷಾರಿದ್ದಷ್ಟು ನಿಮಗೆ ಒಳ್ಳೆಯದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಖಪ್ಪರ ಯೋಗವು ಬಹಳ ಕೆಟ್ಟ ಪರಿಣಾಮವನ್ನೇ ಬೀರಲಿದೆ. ನೀವು ಹೋದಲೆಲ್ಲಾ ಒಂದಲ್ಲ ಒಂದು ವಿವಾದ ಉಂಟಾಗುತ್ತದೆ, ಇದರಿಂದಾಗಿ ನಿಮಗೆ ಕಾನೂನು ತೊಡಕು ಉಂಟಾಗುವ ಸಾಧ್ಯತೆಯಿದೆ. ಮನೆಯ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿರುವಾಗ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಸ್ಥರು ತಮ್ಮ ಅಧಿಕಾರಿಗಳೊಂದಿಗೆ ಕೆಲಸದ ಸ್ಥಳದಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದುತ್ತಾರೆ. ಈ ಸಂದರ್ಭದಲ್ಲಿ ನೀವು ಮೈಯೆಲ್ಲಾ ಕಣ್ಣಾಗಿದ್ದರೆ ಒಳ್ಳೆಯದು.
ವೃಶ್ಚಿಕ ರಾಶಿ
ಶ್ರಾವಣ ಮಾಸದಲ್ಲಿ ರೂಪುಗೊಂಡ ಖಪ್ಪರ್ ಯೋಗವು ನಿಮಗೆ ಒಳ್ಳೆಯ ಸಂಕೇತವಲ್ಲ. ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಅನೇಕ ಏರಿಳಿತಗಳಾಗುತ್ತದೆ. ನಿಮ್ಮ ಕೆಲಸ-ಕಾರ್ಯಗಳಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಭೂಮಿ
ಯಾವುದೇ ಆಸ್ತಿ ಸಂಬಂಧಿತ ವಿವಾದದಲ್ಲಿ ಭಾಗಿಯಾಗುವುದು ನಿಮಗೆ ನಷ್ಟವನ್ನು ಉಂಟುಮಾಡಬಹುದು. ಮತ್ತೊಂದೆಡೆ ಉದ್ಯೋಗದಲ್ಲಿರುವವರು ವೈಫಲ್ಯವನ್ನು ಎದುರಿಸಬೇಕಾಗಬಹುದು.
ಮೀನ ರಾಶಿ
ಶ್ರಾವಣ ಮಾಸದಲ್ಲಿ ರೂಪುಗೊಂಡ ಖಪ್ಪರ ಯೋಗವು ಮೀನ ರಾಶಿಯವರ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ನೀವು ಕೈ ಹಾಕಿದ ಕೆಲಸಗಳೆಲ್ಲಾ ಹಾಳಾಗಬಹುದು. ವ್ಯವಹಾರದಲ್ಲಿ ಸ್ವಲ್ಪ ನಷ್ಟವನ್ನು ಅನುಭವಿಸಬೇಕಾಗಬಹುದು. ಮನಸ್ಸಿಗೆ ನೆಮ್ಮದಿ ಇರೋದಿಲ್ಲ. ಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ.



Click it and Unblock the Notifications
