Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೀಲ್ಸ್ ಸ್ಟಾರ್ ಖಾಬಿ ಲೇಮ್ ಬಂಧನ: ಆತ ಒಂದೇ ಪೋಸ್ಟ್‌ಗೆ ಗಳಿಸೋ ಹಣವೆಷ್ಟು ಗೊತ್ತಾ?
ಸಾಮಾಜಿಕ ಜಾಲತಾಣ ಎಷ್ಟು ಪವರ್ ಫುಲ್ ಅನ್ನೋದು ನೀವೆಲ್ಲಾ ತಿಳಿದಿದ್ದೀರಿ. ಯಾರೋಬ್ಬರ ಜೀವನ ಹೇಗೆ ಬೇಕಾದರು ಬದಲಾಗಬಹುದು. ಅದ್ರಲ್ಲೂ ಸುಲಭವಾಗಿ ಫೇಮಸ್ ಆಗುವುದರಿಂದ ಹಿಡಿದು ಜೀವನ ಹಾಳಾಗಲು ಕುಡ ಇದು ಕಾರಣವಾಗಬಹುದು. ಹಾಗೆ ಯುವ ಜನತೆಗೆ ಈಗ ಜೀವನ ಕಟ್ಟಿಕೊಟ್ಟಿರುವುದು ಕೂಡ ಈ ಸೋಶಿಯಲ್ ಮೀಡಿಯಾ ಎನ್ನಬಹುದು.
ಸಾಮಾಜಿಕ ಜಾಲತಾಣಗಳಲ್ಲೇ ಜೀವನ ಕಟ್ಟಿಕೊಂಡಿರುವ ಒಂದು ಸಮುದಾಯವೇ ಈಗ ಬೆಳದು ನಿಂತಿದೆ. ನೀವು ಇಂಟರ್‌ನೆಟ್ ಸೆನ್ಸೇನ್ ಆಗಿರುವ ಖಾಬಿ ಲೇಮ್ ಕುರಿತು ಕೇಳಿರಬಹುದು. ಖಾಬಿ ಒಂದೂ ಪದ ಮಾತನಾಡದೆ ಇಂಟರ್‌ನೆಟ್‌ನಲ್ಲಿ ಫೇಮಸ್ ಆದ ವ್ಯಕ್ತಿ ಹಾಗೆ ಮಿಲಿಯನ್ ಮಿಲಿಯನ್ ಫಾಲೋವರ್ಸ್ ಹೊಂದಿರುವ ವ್ಯಕ್ತಿ.

ಕೊರೊನಾ ಸಮಯದಲ್ಲಿ ಆತ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಆತ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ. ತನ್ನ ವಿಭಿನ್ನ ವಿಡಿಯೋಗಳ ಮೂಲಕ ಎಲ್ಲರ ಮನಗೆದ್ದಿದ್ದ. ಆದ್ರೆ ಈಗ ಅಮೆರಿಕ್ ಪೊಲೀಸರ ವಶದಲ್ಲಿದ್ದಾನೆ. ಹಾಗಾದ್ರೆ ಆತನ ಬಂಧಿಸಿದ್ದು ಏಕೆ? ಆತನ ಒಟ್ಟಾರೆ ಆಸ್ತಿ ಎಷ್ಟಿದೆ ಎಂಬ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಖಾಬಿ ವಿಶ್ವದ ಫೇಮಸ್ ವ್ಯಕ್ತಿಗಳ ಭೇಟಿಯಾಗುವ ಮೂಲಕ ವಿಡಿಯೋ ಮಾಡಿ ವೈರಲ್ ಆಗುತ್ತಾನೆ. ಫೇಮಸ್ ಫುಟ್‌ಬಾಲ್ ಆಟಗಾರರು, ಟೆನಿಸ್ ಆಟಗಾರರು, ಸಿಂಗರ್, ನಟರ ಜೊತೆಗೂ ಆತ ವಿಡಿಯೋ ಮಾಡಿದ್ದಾನೆ. ಬಾಲಿವುಡ್ ನಟ ಸೋನು ಸೂದ್ ಜೊತೆಗೆ ಕೂಡ ಆತ ವಿಡಿಯೋ ಮಾಡಿದನ್ನು ನಾವಿಲ್ಲಿ ನೆನೆಯಬಹುದು.
ಆದ್ರೆ ಆತ ಅಮೆರಿಕದ ವಲಸೆ ನೀತಿಯನ್ನು ಮೀರಿದ ಕಾರಣದಿಂದಾಗಿ ಬಂಧಿಸಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಜೂನ್ 6 ರಂದು ಲಾಸ್ ವೇಗಾಸ್ ಹ್ಯಾರಿ ರೀಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ವೀಸಾ ಅವಧಿ ಏಪ್ರಿಲ್ 30ರಂದೆ ಅಂತ್ಯಗೊಂಡಿದೆ. ಆದರೆ ಆತ ಅಮೆರಿಕದಿಂದ ಮರಳದ ಕಾರಕ್ಕೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇಷ್ಟಾದ ಬಳಿಕವೂ ಖಾಬಿ ಅವರ ವಿಡಿಯೋಗಳು ವೈರಲ್ ಆಗಿವೆ. ಅವರ ಹೆಸರು ಗೂಗಲ್ ಟ್ರೆಂಡ್‌ನಲ್ಲಿ ಕಾಣಿಸಿಕೊಂಡ ಪರಿಣಾಮ ಜನರು ಆತನ ಬಗ್ಗೆ ಹುಡುಕಾಡಿದ್ದಾರೆ. ಹಳೆಯ ವಿಡಿಯೋಗಳು ಈಗ ವೈರಲ್ ಆಗುತ್ತಿವೆ.
ಖಾಬಿ ಆಸ್ತಿ ಎಷ್ಟಿದೆ ಗೊತ್ತಾ?
ಟಿಕ್ ಟಾಕ್‌ನಲ್ಲಿ ಖಾಬಿ ಬರೋಬ್ಬರಿ 162 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹಾಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 80 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ಬಹುತೇಕ ವಿಡಿಯೋಗಳಲ್ಲಿ ಆಡಿಯೋಗಳೇ ಇಲ್ಲ. ಅವರು ಒಂದೇ ಒಂದು ಶಬ್ದ ಮಾತನಾಡುವುದಿಲ್ಲ. ಹಲವು ಪ್ರಮೋಷನಲ್ ವಿಡಿಯೋಗಳು ಕೂಡ ಡೈಲಾಗ್ ಹೊಂದಿರುವುದಿಲ್ಲ.
ಸೆನೆಗಲ್‌ನಲ್ಲಿ ಜನಿಸಿದ ಆತ ಬಡತನದಿಂದ ಬೆಳೆದುಬಂದಿದೆ. ಕೋವಿಡ್ ಆರಂಭಕ್ಕೂ ಮೊದಲು ಆತ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕೋವಿಡ್‌ನಲ್ಲಿ ಫ್ಯಾಕ್ಟರಿ ಮುಚ್ಚಿದ ಪರಿಣಾಮ ಆತ ಟಿಕ್‌ಟಾಕ್ ಮಾಡಲು ಆರಂಭಿಸಿದ್ದ. ಈಗ ಅಂದಾಜು ಅವರ ಆಸ್ತಿ 20 ಮಿಲಿಯನ್ ಡಾಲರ್ ಎಂದು ವರದಿಗಳು ಹೇಳುತ್ತವೆ. ಅವರ ಬಳಿ ಐಷಾರಾಮಿ ಬಂಗಲೆ, ಕಾರುಗಳಿವೆ. ಜೀಪ್ ಕಂಪಾಸ್, ಮರ್ಸಿಡಿಸ್ ಜಿ ಕ್ಲಾಸ್, ಬಿಎಂಡಬ್ಲ್ಯು ಎಕ್ಸ್ 5 ಮತ್ತು ಆಡಿ ಆರ್ ಎಸ್ ಸೇರಿ ಹಲವು ಕಾರುಗಳ ಸಂಗ್ರಹ ಹೊಂದಿದ್ದಾರೆ.
2022 ರಲ್ಲಿ ಮ್ಯಾನೇಜರ್ ಅಲೆಸ್ಸಾಂಡ್ರೊ ರಿಗ್ಗಿಯೊ ಖಾಬಿ ಲೇಮ್ ಪ್ರತಿ ಟಿಕ್‌ಟಾಕ್ ಪೋಸ್ಟ್‌ಗೆ $750,000 ವರೆಗೆ ಗಳಿಸಿದ್ದಾರೆ. ಆ 10 ಮಿಲಿಯನ್ ಡಾಲರ್ ಗಳಿಸಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಹಾಗೆ ಅವರು ಫುಟ್‌ಬಾಲ್ ಆಟಗಾರ ಮೆಸ್ಸಿ ಅವರನ್ನು ಭೇಟಿಯಾಗಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.



Click it and Unblock the Notifications
