Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
18 ವರ್ಷದ ಬಳಿಕ ದರಿದ್ರ ಯೋಗ ಸೃಷ್ಟಿ: ಕೇತು-ಸೂರ್ಯನ ಸಂಯೋಗ ತರಲಿದೆ ಸಮಸ್ಯೆ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಸೂರ್ಯನ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಸೂರ್ಯನು ಒಂದು ತಿಂಗಳ ಕಾಲ ಒಂದೇ ರಾಶಿಯಲ್ಲಿ ಚಲಿಸಲಿದ್ದಾನೆ. ಇದು 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಈಗ ಸೂರ್ಯನು ಕರ್ಕ ರಾಶಿಯಲ್ಲಿ ಚಲಿಸುತ್ತಿದ್ದಾನೆ.
ಹಾಗೆ ಕರ್ಕ ರಾಶಿಯಿಂದ ತನ್ನ ಸ್ವಂತ ರಾಶಿಯಾಗಿರುವ ಸಿಂಹ ರಾಶಿಗೆ ಚಲಿಸಲಿದ್ದಾನೆ. ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದಾನೆ. ಇದು ಎಲ್ಲರ ಜೀವನದಲ್ಲೂ ಬದಲಾವಣೆಗಳ ತರುವಂತಹ ಸಮಯ ಎನ್ನಬಹುದು. ಈ ಆಗಸ್ಟ್ 17ರಂದು ಸಿಂಹ ರಾಶಿಗೆ ಚಲಿಸಲಿದ್ದಾನೆ. ಆದ್ರೆ ಸಿಂಹ ರಾಶಿಯಲ್ಲಿ ಈಗಾಗಲೇ ಕೇತುವಿನ ಸಂಚಾರವಿದೆ.

ಸಿಂಹ ರಾಶಿಯಲ್ಲಿ ಸೂರ್ಯ ಹಾಗೂ ಕೇತುವಿನ ಸಂಯೋಗವು ಅಶುಭಕಾರಕ. ಈ ರಾಶಿಯಲ್ಲಿ ಕೇತುವಿನೊಂದಿಗೆ ಸೂರ್ಯನ ಸಂಯೋಗವು ದರಿದ್ರಯೋಗಕ್ಕೆ ಕಾರಣವಾಗುತ್ತಿದೆ. ಈ ಸಮಯದಲ್ಲಿ ಹಲವು ರಾಶಿಗಳಲ್ಲಿ ಬದಲಾವಣೆಗಳು, ನಾಕಾರಾತ್ಮಕ ಪರಿಣಾಮಗಳು, ಸಮಸ್ಯೆಗಳು ಎದುರಾಗಬಹುದು. ಹಾಗಾದ್ರೆ ಈ ರಾಶಿಯಲ್ಲಿ ಸೂರ್ಯನ ಜೊತೆ ಕೇತುವಿನ ಸಂಯೋಗ ಯಾರಿಗೆಲ್ಲಾ ಸಮಸ್ಯೆ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಸೂರ್ಯ-ಕೇತುವಿನ ಈ ಅಶುಭ ಸಂಯೋಜನೆಯು ಮೇಷ ರಾಶಿಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಿಮ್ಮಲ್ಲಿ ಸಮಯೋಜಿತ ಅನಾರೋಗ್ಯ ಸಮಸ್ಯೆ ಹೆಚ್ಚಾಗಬಹುದು, ಹೃದಯ ಸಂಬಂಧಿ, ಮಧುಮೇಹಿಗಳು ಹಾಗೆ ಗರ್ಭಿಣಿಯರು ಜಾಗೃತೆ ವಹಿಸಬೇಕು. ನಿಮ್ಮ ಆರ್ಥಿಕ ಸಮಸ್ಯೆಗಳು ಹೆಚ್ಚಾಗುವ ಸಂಭವವಿದೆ. ವ್ಯಾಪಾರಿಗಳಿಗೆ ಬಹಳ ನಷ್ಟವಾಗುವ ದಿನಗಳು ಎದುರಾಗಬಹುದು. ನಿಮ್ಮ ವ್ಯಾಪಾರ ಪ್ರಗತಿ ವಿಚಾರದಲ್ಲಿ ನಿಮ್ಮ ನಿರ್ಧಾರದಿಂದ ನಷ್ಟವಾಗಬಹುದು.
ವೃಷಭ ರಾಶಿ
ಕೇತು-ಸೂರ್ಯನ ಸಂಯೋಗವು ಈ ರಾಶಿ ಜನರಗೆ ಅನುಕೂಲಕರವಾಗಿರುವುದಿಲ್ಲ. ನಿಮಗೆ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಲಿದೆ. ನಿಮ್ಮ 4ನೇ ಮನೆಯಲ್ಲಿ ದರಿದ್ರಯೋಗ ರೂಪುಗೊಳ್ಳುತ್ತದೆ. ಇದು ನಿಮ್ಮ ಪೋಷಕರ ಅನಾರೋಗ್ಯ, ಗೊಂದಲಗಳು, ದಾಂಪತ್ಯ ಸಮಸ್ಯೆ ಹೆಚ್ಚಾಗುವ ಸಂಭವವಿದೆ. ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುವ ಹಲವು ಘಟನೆಗಳು ಎದುರಾಗಬಹುದು. ಉದ್ಯೋಗ ಸಂಬಂಧವಾಗಿಯು ನಿಮಗೆ ಉತ್ತಮ ದಿನಗಳಲ್ಲ. ನಿಮ್ಮ ಔದ್ಯೋಗಿಕ ಒತ್ತಡ ಎದುರಾಗಬಹುದು. ಪ್ರವಾಸಗಳಲ್ಲಿ ನಿಮಗೆ ಸಮಸ್ಯೆ ಕಾಡಬಹುದು. ನಿಮ್ಮ ಬಹಳ ದಿನಗಳಿಂದ ಬಯಸಿದ್ದ ವಸ್ತು ನಿಮಗೆ ಸಿಗುವಲ್ಲಿ ಮತ್ತೆ ವಿಳಂಬವಾಗಬಹುದು. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಸಮಸ್ಯಾತ್ಮಕವಾಗಬಹುದು.
ಕರ್ಕ ರಾಶಿ
ಸೂರ್ಯ-ಕೇತುವಿನ ಸಂಯೋಗವು ಈ ರಾಶಿ ಜನರಿಗೆ ಕೆಲವು ಸಮಸ್ಯೆ ಉಂಟುಮಾಡಬಹುದು. ಈ ಸಂಯೋಗವು ಎರಡನೇ ಮನೆಯಲ್ಲಿ ಸಂಭವಿಸುವುದರಿಂದ ಪಂಚೇಂದ್ರಿಯ ಸಂಬಂಧಿ ಸಮಸ್ಯೆ ಎದುರಿಸಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ಬಹಳ ಸಂಕಷ್ಟ ಇರಬಹುದು. ಉಳಿತಾಯದ ಹಣವನ್ನು ನೀವು ಬೇರೊಂದು ವಿಚಾರಕ್ಕೆ ಬಳಸಬಹುದು, ನಿಮ್ಮ ಸಾಲದ ಪ್ರಮಾಣ ಹೆಚ್ಚಾಗಬಹುದು. ಮಕ್ಕಳಿಂದ ನಿಮಗೆ ಸಮಸ್ಯೆಗಳು ಬರಬಹುದು. ವಾಹನದ ವಿಚಾರವಾಗಿ ನಷ್ಟವಾಗುವ ಭೀತಿ ಇದೆ.
ಧನು ರಾಶಿ
ಕೇತು ಮತ್ತು ಸೂರ್ಯನ ಸಂಯೋಗದಿಂದ ರೂಪುಗೊಂಡ ದರಿದ್ರ ಯೋಗವು ಈ ರಾಶಿಚಕ್ರದ ಜನರ ಜೀವನದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರಬಹುದು. ಸಮಾಜದಲ್ಲಿ ನಿಮ್ಮ ಗೌರವ ಹಾಳು ಮಾಡುವ ಕೆಲಸ ಮಾಡಬಹುದು. ಬಹಳ ಸಮಯದಿಂದ ಎದುರಾಗಿದ್ದ ಸಮಸ್ಯೆ ಮತ್ತಷ್ಟು ಜಟಿಲ ಆಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











