Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
11 ರೀತಿಯ ವಾಹನಗಳ ಲೈಸೆನ್ಸ್ ಹೊಂದಿರುವ ಮಹಿಳೆ..! ಮಣಿ ಅಮ್ಮ ಎಂಬ ಧೀರ ಮಹಿಳೆ ಕಥೆ
ಮಹಿಳೆ ಈಗ ಎಲ್ಲಾ ರಂಗದಲ್ಲಿಯೂ ತಮ್ಮ ಸಾಧನೆ ಮಾಡಿ ಇಂದು ವಿಶ್ವಕ್ಕೆ ಮಾಧರಿಯಾಗಿದ್ದಾ0ರೆ. ಎಲ್ಲಾ ಉದ್ಯಮದಿಂದ ಹಿಡಿದು ರಾಜಕೀಯ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲೂ ಅವರೀಗ ಮುಂಚೂಣಿಯಲ್ಲಿದ್ದಾರೆ. ಜೊತೆಗೆ ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ.
ಈ ನಡುವೆ ಕೇರಳದ ಓರ್ವ ಮಹಿಳೆ ಪುರುಷರಿಗೂ ಸವಾಲೊಡ್ಡುವ ರೀತಿಯಲ್ಲಿ 11 ವಿಭಿನ್ನ ಡ್ರೈವಿಂಗ್ ಲೈಸೆನ್ಸ್‌ಗಳ ಹೊಂದಿದ್ದು, ಗಮನ ಸೆಳೆದಿದ್ದಾರೆ. ಕೇರಳದ ಮಣಿ ಅಮ್ಮ ಅಂತಲೇ ಕರೆಸಿಕೊಳ್ಳುವ 71 ವರ್ಷದ ಮಹಿಳೆ ಲಿಂಗ ಸಮಾನತೆಯ ಸ್ವರೂಪವಾಗಿ ನಿಂತಿದ್ದಾರೆ. ಅವರು 11 ಬಗೆಯ ವಾಹನಗಳ ಲೈಸೆನ್ಸ್ ಹೊಂದಿದ್ದಾರೆ.

ಮಣಿ ಅಮ್ಮ ಎಂದು ಪ್ರೀತಿಯಿಂದ ಕರೆಯಲಾಗುವ ರಾಧಾಮಣಿ ಅಮ್ಮಾ, 71 ವರ್ಷ ವಯಸ್ಸಿನವರಾಗಿದ್ದರೂ ಅವರು 11 ವಿಭಿನ್ನ ಪರವಾನಗಿಗಳ ಸಂಗ್ರಹವನ್ನು ಹೊಂದಿದ್ದಾರೆ, ಜೆಸಿಬಿಗಳು ಮತ್ತು ಕ್ರೇನ್‌ಗಳಂತಹ ಹೆವಿ ಡ್ಯೂಟಿ ಯಂತ್ರಗಳು ಸೇರಿದಂತೆ ದೊಡ್ಡ ದೊಡ್ಡ ಟ್ರಕ್ ಬಸ್‌ನ ಪರವಾನಗಿಯು ಅವರ ಬಳಿ ಇದೆ. ಇದೇ ಮಾರ್ಗದಲ್ಲಿ ಸಾಗಿದ ಆಕೆ ಈಗ ಭಾರಿ ವಾಹನಗಳ ಚಾಲನ ತರಬೇತಿ ನೀಡುವ ಕೇಂದ್ರ ಆರಂಭಿಸಿದ್ದಾರೆ.
19ರ ದಶಕದಲ್ಲಿ ಡ್ರೈವಿಂಗ್
ಮಣಿ ಅಮ್ಮಾ 1981 ಮೊದಲ ಬಾರಿಗೆ ನಾಲ್ಕು ಚಕ್ರದ ವಾಹನದ ಪರವಾನಗಿ ಪಡೆದಿದ್ದರು. ಬಳಿಕ 1984 ರಲ್ಲಿ ಅವರು ಭಾರೀ ವಾಹನ ಪರವಾನಗಿಯನ್ನು ಪಡೆದುಕೊಂಡರು. ಇದಾದ ಹಲವು ವರ್ಷ ಅವರು ಚಾಲನಾ ತರಬೇತಿಗಾಗಿ ಪರವಾನಗಿ ಪಡೆಯಲು ಹರಸಾಹಸ ಪಟ್ಟಿದ್ದರು. ಅಂತಿಮವಾಗಿ ಎರಡು ವರ್ಷಗಳ ಬಳಿಕ ಕೇರಳದಲ್ಲಿ ಭಾರೀ ವಾಹನಗಳ ಚಾಲನಾ ತರಬೇತಿ ಕೇಂದ್ರ ತೆರೆದರು.
2004 ರಲ್ಲಿ ಅವರ ಪತಿ ಅನಿರೀಕ್ಷಿತವಾಗಿ ನಿಧನರಾದ ನಂತರ, ರಾಧಾಮಣಿ ಹಲವು ರೀತಿಯ ಸವಾಲುಗಳ ಎದುರಿಸಿದರು. ಗಂಡನ ಹೆಸರಿನಲ್ಲಿದ್ದ ಚಾಲನ ಪರಬೇತಿ ಕೇಂದ್ರವನ್ನು ತಮ್ಮ ಹೆಸರಿಗೆ ಹಸ್ತಾಂತರಿಸಲು ಒದ್ದಾಡಿದ್ದರು ಅಂತಿಮವಾಗಿ ಡ್ರೈವಿಂಗ್ ಶಾಲೆಯ ಪರವಾನಗಿ ತಮ್ಮ ಹೆಸರಿಗೆ ವರ್ಗಾವಣೆಗೊಂಡಾಗ ಕೇರಳದ ಮೊದಲ ಹೆವಿ ವೆಹಿಕಲ್ ತರಬೇತಿ ಕೇಂದ್ರದ ಮುಖ್ಯಸ್ಥೆ ಎಂಬ ಕೀರ್ತಿಗೆ ಭಾಜನರಾದರು.
ಆದರೆ ಈ ವೇಳೆಗೆ ಅವರ ಬಳಿ ಕೆಲವೇ ಕೆಲವು ವಾಹನ ಚಾಲನ ಪರವಾನಗಿ ಇತ್ತು. ಹೀಗಾಗಿ ಅವರು ದೊಡ್ಡ ದೊಡ್ಡ ವಾಹನಗಳ ಚಾಲನ ತರಬೇತಿ ನೀಡಬೇಕಾದರೆ ಅವರೂ ಸಹ ಆ ವಾಹನಗಳ ಓಡಿಸುವುದು ಹಾಗೂ ಅದರ ಚಾಲನ ಪರವಾನಗಿ ಪಡೆದುಕೊಳ್ಳಬೇಕಿತ್ತು. ಇಲ್ಲಿಂದ ಅವರು ದೊಡ್ಡ ಟ್ರಕ್‌ಗಳು, ಕ್ರೇನ್‌ಗಳು, ಜೆಸಿಬಿ, ದೊಡ್ಡ ಲಾರಿಗಳ ಓಡಿಸಲು ಮುಂದಾದರು. ಬಳಿಕ ಎಲ್ಲಾ ದೊಡ್ಡ ದೊಡ್ಡ ವಾಹನಗಳ ಲೈಸೆನ್ಸ್ ತಮ್ಮದಾಗಿಸಿಕೊಂಡರು.
ಕಾಲಾನಂತರದಲ್ಲಿ, ಅವರು ಕಾರುಗಳು, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಬಸ್‌ಗಳು, ಟ್ರಕ್‌ಗಳು, ಟ್ರೇಲರ್‌ಗಳು, ಕ್ರೇನ್‌ಗಳು, ಟ್ರಾಕ್ಟರ್‌ಗಳು, ಫೋರ್ಕ್‌ಲಿಫ್ಟ್‌ಗಳು, ಅಗೆಯುವ ಯಂತ್ರಗಳು ಮತ್ತು ರೋಡ್ ರೋಲರ್‌ಗಳು ಸೇರಿದಂತೆ ವಿವಿಧ ವಾಹನಗಳಿಗೆ ಪರವಾನಗಿಗಳನ್ನು ಪಡೆದರು.
ಯಾವುದೇ ನಿರ್ದಿಷ್ಟ ಲಿಂಗಕ್ಕೆ ಪ್ರತ್ಯೇಕವಾದ ಡ್ರೈವಿಂಗ್ ಅನ್ನು ಗ್ರಹಿಸದಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಡ್ರೈವಿಂಗ್‌ನಂತಹ ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯದ ಕ್ಷೇತ್ರಗಳನ್ನು ಪ್ರವೇಶಿಸಲು ಬಯಸುವ ಮಹಿಳೆಯರಿಗೆ ರಾಧಾಮಣಿ ಅಮೂಲ್ಯವಾದ ಸಲಹೆಯನ್ನು ನೀಡುತ್ತಾರೆ.
ಈಗ ಇವರ ಬಳಿ ಬರೋಬ್ಬರಿ 11 ವಿವಿಧ ರೀತಿಯ ವಾಹನಗಳ ಲೈಸೆನ್ಸ್ ಇದ್ದು, ದೇಶದಲ್ಲಿ ಯಾವ ಮಹಿಳೆಯೂ ಓಡಿಸದ, ಯಾರ ಬಳಿಯೂ ಇಲ್ಲದ ವಾಹನಗಳ ಚಾಲನ ಪರವಾನಗಿಯನ್ನು ರಾಧಾಮಣಿ ಅವರು ಪಡೆದುಕೊಂಡಿದ್ದಾರೆ. ಜೊತೆಗೆ ಇಡೀ ಮಹಿಳಾ ಸಮುದಾಯಕ್ಕೆ ಅವರಿಂದು ಸ್ಪೂರ್ತಿಯ ಸೆಲೆಯಾಗಿದ್ದಾರೆ.



Click it and Unblock the Notifications