Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಕೇರಳದಲ್ಲಿ ಒಬ್ಬರೇ ಡ್ರೈವ್ ಮಾಡುತ್ತಿದ್ದ ಕಾರಿನ ಫೋಟೋ ತೆಗೆದಾಗ ಪಕ್ಕದಲ್ಲಿದ್ದಳು ಮಹಿಳೆ, ಪಕ್ಕದಲ್ಲಿರುವುದು ದೆವ್ವವೇ?
ಈ ದೆವ್ವ, ಭೂತ ಇವುಗಳೆಲ್ಲಾ ಇದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇಂಥದ್ದು ಏನೂ ಇಲ್ಲ, ಅದು ಭ್ರಮೆಯಷ್ಟೇ ಎಂದು ಹೇಳುತ್ತಾರೆ. ಆದರೆ ಮನುಷ್ಯನಿಗೆ ಭ್ರಮೆಯಾಗಬಹುದು ಆದರೆ ಕ್ಯಾಮರಾ ಕಣ್ಣುಗಳಿಗೆ ಹಾಗೆ ಆಗಲು ಸಾಧ್ಯವೇ?
ಅಲ್ಲಿ ಯಾವುದೇ ವ್ಯಕ್ತಿ ಇರಲ್ಲ, ಆದರೂ ಅಲ್ಲಿ ವ್ಯಕ್ತಿ ಇರುವಂತೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿರುವ ಎಷ್ಟೋ ಉದಾಹರಣೆಗಳಿವೆ, ಅವುಗಳನ್ನು ನೋಡುವಾಗ ಇದು ನಿಜವೇ? ಭ್ರಮವೇ ಎಂದು ನಂಬುವುದು ಕಷ್ಟವಾಗುವುದು. ಅಂಥದ್ದೇ ಘಟನೆ ಕೆಲವು ತಿಂಗಳಿನ ಹಿಂದೆ ಕೇರಳದಲ್ಲಿ ನಡೆದಿತ್ತು, ಆ ಘಟನೆ ತುಂಬಾನೇ ಸುದ್ದಿ ಮಾಡಿತ್ತು, ಆ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವುದು ದೆವ್ವ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಕ್ಯಾಮರಾದಲ್ಲಿ ಸೆರೆಯಾದ ಮಹಿಳೆ ನಿಜದಲ್ಲಿ ಇರಲಿಲ್ಲ
ಅದೊಂದು ಮಾರುತಿ 800, ಆ ಕಾರಿನ ಫೋಟೋವನ್ನು AI ಕ್ಯಾಮರಾ ಕ್ಲಿಕ್ ಮಾಡಿತ್ತು. ಆ ಕಾರಿನಲ್ಲಿ ಯಾವುದೇ ಮಹಿಳೆ ಕೂತಿರಲಿಲ್ಲ, ಆದ್ರೂ ಫೋಟೋ ನೋಡಿದಾಗ ಕಾರಿನೊಳಗೆ ಮಹಿಳೆಯೊಬ್ಬರು ಕುಳಿತಿರುವುದು ಸೆರೆಯಾಗಿತ್ತು, ಇದನ್ನು ನೋಡಿದ ಅವರಿಗೆ ಶಾಕ್ ಆಗಿತ್ತು. ಅರೇ ಆ ಕಾರಿನಲ್ಲಿ ಯಾರೂ ಇಲ್ಲ, ಆದ್ರೂ ಆ ಮಹಿಳೆ ಈ ಫೋಟೋದಲ್ಲಿ ಬಂದಿದ್ದು ಹೇಗೆ ಎಂದು ಆ ಕಾರಿನವರು ಶಾಕ್‌ಗೆ ಒಳಗಾಗಿದ್ದರು.
ಕಣ್ಣೂರ್‌ನಲ್ಲಿ ನಡೆದಿತ್ತು ಅದೇ ರೀತಿಯ ಘಟನೆ
ಇದೇ ರೀತಿಯ ಘಟನೆ ಕಣ್ಣೂರ್‌ನಲ್ಲಿ ನಡೆದಿತ್ತು. ಅದೊಂದು ಟಯೋಟೊ ಗ್ಲಾಂಜಾ ಕಾರು, ಆ ಕಾರಿನ ಓನರ್‌ಗೆ ಸೀಟ್ ಬೆಲ್ಟ್ ಹಾಕಿಲ್ಲ ಎಂದು ಫೈನ್ ಬಂತು, ಆತನಿಗೆ ತುಂಬಾ ಶಾಕ್, ಅರೇ ನಾನು ಯಾವತ್ತೂ ಸೀಟ್ ಬೆಲ್ಟ್ ಹಾಕದೆ ಗಾಡಿ ಓಡಿಸಿಲ್ಲ, ಆದ್ರೂ ಈ ಫೈನ್ ಹೇಗೆ ಬಂತು ಎಂದು ಶಾಕ್ ಆಯ್ತು, ಅದರಲ್ಲೂ ಫೈನ್ ಬಂದಿರುವುದರು ಆತನ ಪಕ್ಕ ಕೂತ ವ್ಯಕ್ತಿ ಸೀಟ್ ಬೆಲ್ಟ್ ಹಾಕಿಲ್ಲ ಎಂಬ ಕಾರಣ, ಅದೂ ಇನ್ನೂ ಅಚ್ಚರಿಗೆ ಕಾರಣವಾಗಿತ್ತು.
ಡ್ರೈವಿಂಗ್ ಸೀಟ್‌ನ ಪಕ್ಕದಲ್ಲಿ ಯಾರೂ ಇರಲಿಲ್ಲ, ಆದರೂ ಒಬ್ಬ ಮಹಿಳೆ ಕೂತಿರುವಂತೆ AI ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಘಟನೆ ಕಣ್ಣೂರ್‌ನ ಪಯ್ಯನೂರ್ ಎಂಬ ಸ್ಥಳದಲ್ಲಿ ನಡೆದಿತ್ತು, ಅದಾದ ಬಳಿಕ ಕಡವತ್ತೂರ್‌ನ ವ್ಯಕ್ತಿಯೊಬ್ಬರಿಗೆ ಮೋಟಾರ್ ವೆಹಿಕಲ್ ಡಿಪಾರ್ಟ್‌ಮೆಂಟ್‌ನಿಂದ ಮತ್ತೊಂದು ಕಾರಿನ ಓನರ್‌ಗೆ ಇದೇ ರೀತಿ ಫೈನ್ ಬಿತ್ತು, ಆದ್ರೆ ಆ ಕಾರಿನಲ್ಲಿಯೂ ನನ್ನ ಪಕ್ಕದಲ್ಲಿ ಯಾರೂ ಇರಲಿಲ್ಲ ಎಂದು ಆತ ಹೇಳಿದಾಗ ಮೋಟಾರ್ ಇಲಾಖೆಯವರಿಗೆ ದೊಡ್ಡ ತಲೆನೋವಾಯ್ತು.
ಈ ಕಾರಿನಲ್ಲಿದ್ದ ವ್ಯಕ್ತಿ ಹೆಸರು ಮೀಥೆಲೆ ಕನ್ನೂತ್ ಅಲಿ, ಇವರು ಕಡವತ್ತೂತ್ ಪನ್ನೂರ್ ಎಂಬಲ್ಲಿ ವಾಸಿಸುವ ವ್ಯಕ್ತಿ. ಇವರು ಹೇಳುವ ಪ್ರಕಾರ ಇವರ ಕಾರಿನಲ್ಲಿ ಯಾವ ಮಹಿಳೆಯೂ ಇರಲಿಲ್ಲ, ಅಲ್ಲದೆ ಕಾರು ಆ ರೂಟ್‌ನಲ್ಲಿ ಹೋಗಿರಲಿಲ್ಲ, ಆದರೆ ಫೋಟೋದಲ್ಲಿ ಇರುವ ಕಾರು ಇವರದ್ದೇ. ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಮೋಟಾರ್ ಇಲಾಖೆ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದೆ. ಒಟ್ಟಿನಲ್ಲಿ ಅವರಿಗೆ ಇದು ಬಿಡಿಸಲಾಗದ ಒಗಟಾಗಿದೆ.
ಇವರುಗಳು ಕಾರಿನಲ್ಲಿರುವ ಮಹಿಳೆ ಯಾರು ಎಂಬುವುದು ಗೊತ್ತಿಲ್ಲ, ನನ್ನ ಪಕ್ಕ ಯಾವ ಮಹಿಳೆಯೂ ಕೂತಿರಲಿಲ್ಲ ಎಂದು ಹೇಳಿದ್ದು ಇದೀಗ ಆ ಪಕ್ಕದಲ್ಲಿ ಇದ್ದಿರುವುದು ದೆವ್ವವಾಗಿರಬಹುದು ಎಂಬ ಸಿದ್ದಿಗಳು ವೇಗವಾಗಿ ಹರಿದಾಡಿದೆ. ಇಂಥ ಘಟನೆಗಳನ್ನು ನೋಡುವಾಗ ಅಚ್ಚರಿಯಾಗುವುದು ಸಹಜ, ಆ ಕ್ಯಾಮರಾದಲ್ಲಿ ಸೆರೆಯಾದ ಮಹಿಳೆ ಯಾರು? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.



Click it and Unblock the Notifications
