Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
554 ಮಿಲಿಯನ್ ವೀಕ್ಷಣೆ ಪಡೆದ ರೀಲ್ಸ್ ಇದು..! ಕೇರಳದ ಹುಡುಗನ ಸಾಧನೆ!
ಇತ್ತೀಚಿಗೆ ನೀವು ಯುವಜನತೆ ರೀಲ್ಸ್ ಹಿಂದೆ ಬಿದ್ದಿರುವುದನ್ನು ಗಮನಿಸಿರಬಹುದು. ಪ್ರತಿಯೊಬ್ಬರು ಈಗ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ನೋಡೋದು ಮಾತ್ರವಲ್ಲ ತಾವೆ ವಿಡಿಯೋ ಅಪ್ಲೋಡ್ ಮಾಡುವುದು ಕಾಮನ್. ಅದೇ ರೀತಿ ಈ ವಿಡಿಯೋಗೆ ಎಷ್ಟು ವೀವ್ಸ್ ಬಂದಿದೆ, ಎಷ್ಟು ಲೈಕ್ಸ್ ಬಂದಿದೆ ಎಂಬ ಲೆಕ್ಕಾಚಾರ ಕೂಡ ಹಾಕುವುದು ಸಹಜ.
ಈಗಂತು ಈ ಆನ್‌ಲೈನ್ ಒಂದು ವೃತ್ತಿಯನ್ನಾಗಿ ಮಾಡಿಕೊಂಡಿರುವವರ ಸಂಖ್ಯೆಯೂ ಅಧಿಕವಾಗಿದೆ. ಜಾಗತಿಕವಾಗಿ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ಸಾಮಾಜಿಕ ಜಾಲತಾಣಗಳನ್ನೇ ವೃತ್ತಿಯಾಗಿಸಿಕೊಂಡಿರುವ ಲಕ್ಷಾಂತರ ಮಂದಿ ನೋಡಬಹುದು. ಅವರೆಲ್ಲಾ ಒಂದೊಂದು ರೀತಿಯ ವಿಚಾರಗಳನ್ನು ಜನರ ಮುಂದಿಡುತ್ತಾರೆ.

ಹಾಗೆ ಈಗ ಇನ್ಸ್‌ಸ್ಟಾಗ್ರಾಮ್, ಫೇಸ್‌ಬುಕ್, ಯೂಟ್ಯೂಬ್ ಸೇರಿ ಸಾಮಾಜಿಕ ಮಾಧ್ಯಮಗಳು ನಿಮ್ಮನ್ನು ಕಂಟೆಂಟ್ ಕ್ರಿಯೇಟರ್ ಎಂದು ಗುರುತಿಸಿ ಅದಕ್ಕೆ ಸಂಭಾವನೆ ಕೂಡ ನೀಡುತ್ತವೆ. ಹೀಗಾಗಿ ಈಗ ಪ್ರತಿಯೊಬ್ಬರು ರೀಲ್ಸ್, ವಿಡಿಯೋ, ವ್ಲೋಗ್‌ಗಳ ಹಿಂದೆ ಬಿದ್ದಿದ್ದಾರೆ. ವಿಡಿಯೋಗಳನ್ನು ಹೆಚ್ಚು ಜನ ನೋಡಲಿ ಎಂದು ಹುಚ್ಚುತನಕ್ಕೂ ಇಳಿಯುತ್ತಾರೆ.
ಆದ್ರೆ ನಿಮಗೆ ಗೊತ್ತಾ ಇಡೀ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡಿರುವ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ಯಾವುದು ಎಂದು? ಸದ್ಯಕ್ಕೆ ನಿಮ್ಮ ಬಳಿ ಇದಕ್ಕೆ ಉತ್ತರ ಇಲ್ಲದಿರಬಹುದು. ಏಕೆಂದರೆ ಇದರ ಕುರಿತು ನೀವು ಎಂದಿಗೂ ಕೇಳಿರುವುದಿಲ್ಲ, ಹಾಗೆ ಹುಡುಕಾಡುವುದಿಲ್ಲ. ಯೂಟ್ಯೂಬ್‌ನಲ್ಲಿ ಬಿಲಿಯನ್ ವೀಕ್ಷಣೆ ಪಡೆದ ಹಲವು ವಿಡಿಯೋಗಳನ್ನು ನೀವು ನೋಡಬಹುದು, ಆದ್ರೆ ಇನ್ಸ್‌ಸ್ಟಾಗ್ರಾಮ್‌ನ ಯಾವ ವಿಡಿಯೋ ಇಷ್ಟೊಂದು ವೀವ್ಸ್ ಪಡೆದಿದೆ ಎಂಬುದು ನಿಮಗೆ ಗೊತ್ತಾ?
ಅದರಲ್ಲೂ ಈ ಸಾಧನೆ ಮಾಡಿರುವುದು ಓರ್ವ ಭಾರತೀಯ ಯುವಕ ಆತನ ಹೆಸರು ಈಗ ವರ್ಡ್ ರೆಕಾರ್ಡ್ ಬುಕ್‌ನಲ್ಲಿಯೂ ಸೇರಿಕೊಂಡಿದೆ. ಮುಹಮ್ಮದ್ ರಿಜ್ವಾನ್ ಎಂಬಾತನ (@riswan_freestyle) ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಒಂದು ರೀಲ್ಸ್ ಇಡೀ ವಿಶ್ವದಲ್ಲೇ ಅತಗೀ ಹೆಚ್ಚು ವೀಕ್ಷಣೆ ಕಂಡಿರುವ ರೀಲ್ಸ್ ಎಂಬ ಖ್ಯಾತಿ ಪಡೆದಿದೆ. ಆತ ಕೇರಳದ ಯುವಕನಾಗಿದ್ದು, ಈ ರೀಲ್ಸ್ ಬರೋಬ್ಬರಿ 554 ಮಿಲಿಯನ್ ವೀವ್ಸ್ ಪಡೆದಿದೆ.
2023ರ ನವೆಂಬರ್‌ನಲ್ಲಿ ರಿಜ್ವಾನ್ ಎಂಬಾತ ಹಾಕಿರುವ ಒಂದು ರೀಲ್ಸ್ 554 ಮಿಲಿಯನ್ ವೀಕ್ಷಣೆ ಕಂಡಿದೆ. ಇದು ಅತೀ ಹೆಚ್ಚು ವೀಕ್ಷಣೆ ಕಂಡಿರುವ ರೀಕ್ಸ್ ಎಂಬ ಖ್ಯಾತಿ ಪಡೆದಿದೆ. ಆತನಿಗೆ ಕೇವಲ 1.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆದ್ರೆ ಇಷ್ಟೊಂದು ಪ್ರಮಾಣದ ವೀವ್ಸ್ ಬಂದಿರುವುದು ಅಚ್ಚರಿ ತಂದಿದೆ.
ಈ ವಿಡಿಯೋದಲ್ಲಿ ಆತ ಜಲಪಾತದ ಮುಂದೆ ನಿಂತು ಫುಟ್‌ಬಾಲ್ ಅನ್ನು ಒದೆಯುತ್ತಿದ್ದಾನೆ. ಅದು ಜಲಪಾತದ ಒಳಗೆ ಬಿದ್ದು ಬಳಿಕ ನೀರಿನಿಂದ ಹೊರಬರುತ್ತದೆ. ಈ ವಿಡಿಯೋದಲ್ಲಿ ಅಂತಹ ವಿಶೇಷ ಏನಿಲ್ಲದಿದ್ದರೂ ಇದು 554 ಮಿಲಿಯನ್ ವೀಕ್ಷಣೆ ಪಡೆದಿರುವುದಲ್ಲದೆ ಇನ್ನೂ ಇದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಜರ್ಮನಿ, ಸ್ಪೇನ್ ಮತ್ತು ಫ್ರಾನ್ಸ್‌ನ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ವೀಕ್ಷಣೆಗಳನ್ನು ಹೊಂದಿದೆ.
ಇದು ಕೇರಳದ ಮಲಪ್ಪುರಂನ ಕೇರಳಂಕುಂಡು ಜಲಪಾತವಾಗಿದೆ. ಈ ರೀಲ್ಸ್‌ಗೆ ಅಷ್ಟೊಂದು ವೀವ್ಸ್ ಬಂದ ಬಳಿಕ ಈ ಫಾಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆ ಜನರು ಇಲ್ಲಿದೆ ಬಂದು ರೀಲ್ಸ್ ಮಾಡುವುದು ಕೂಡ ಹೆಚ್ಚಾಗಿದೆ.



Click it and Unblock the Notifications
