Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
60ರ ಪ್ರಾಯದ ಅಜ್ಜಿಯ ನೃತ್ಯಕ್ಕೆ ನೆಟ್ಟಿಗರು ಫುಲ್ ಫಿದಾ: ಎಂಥ ಅದ್ಭುತ ಪ್ರತಿಭಾವಂತರು
ಈ ಸೋಷಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಸೆಲೆಬ್ರಿಟಿಗಳಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಒಂದೇ ದಿನದಲ್ಲಿ ದೊಡ್ಡ ಸೆಲೆಬ್ರಿಟಿಗಳಾದವರು ತುಂಬಾ ಜನರಿದ್ದಾರೆ. ಕೇರಳದ 60ರ ಪ್ರಾಯದ ಮಹಿಳೆಯೊಬ್ಬರು ಇದೇ ರೀತಿ ತಮ್ಮ ಪ್ರತಿಭೆ ಮೂಲಕ ಒಂದೇ ದಿನದಲ್ಲಿ ಸೆಲೆಬ್ರಿಟಿಯಾಗಿದ್ದಾರೆ. ಇವರ ವೀಡಿಯೋ ಕೇರಳ ದಾಟಿ ವೈರಲ್ ಆಗಿದೆ, ಅವರು ಮಾಡುತ್ತಿರುವ ನೃತ್ಯ ನೋಡುತ್ತಿದ್ದರೆ ಕಳೆದ ಹೋಗಿ ಬಿಡುತ್ತೇವೆ, ಅಷ್ಟೊಂದು ಚೆನ್ನಾಗಿ ಹೆಜ್ಜೆ ಹಾಕಿದ್ದಾರೆ.

ಮದುವೆ ಫಂಕ್ಷನ್‌ನಲ್ಲಿ ಅವರು ಹೆಜ್ಜೆ ಹಾಕಿದ್ದನ್ನು ನೋಡಿ ಎಲ್ಲರೂ ವಾವ್! ಎಷ್ಟೊಂದು ಚೆನ್ನಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರ ಜೊತೆ ಚಿಕ್ಕ ಹುಡುಗಿಯರು ಡ್ಯಾನ್ಸ್ ಮಾಡಿದರೂ ಗಮನ ಸೆಳೆದಿದ್ದು ಮಾತ್ರ ಇವರ ಡ್ಯಾನ್ಸ್ ಮಾತ್ರ. ಒಳ್ಳೆಯ ಡ್ಯಾನ್ಸ್ ಎಕ್ಸ್‌ಪರ್ಟ್ ರೀತಿ ಹೆಜ್ಜೆ ಹಾಕಿದ್ದಾರೆ, ಅವರು ಡ್ಯಾನ್ಸ್ ನೋಡಿ ಅವರ ಜೊತೆ ಇವರ ಜೊತೆ ಇಷ್ಟು ಸಕತ್ತಾಗಿ ಡ್ಯಾನ್ಸ್ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಹಿಂದೆ ಸರಿದಿದ್ದಾರೆ.
ತಾಯಿಯ ನೃತ್ಯಕ್ಕೆ ಮಗನ ಪ್ರೋತ್ಸಾಹ
ಇವರ ಮಗ ಅವೈ ಸಂತೋಷ್, ಅವರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ತಾಯಿ-ಮಗ ಮ್ಯೂಸಿಕ್ ಆಗಿ ಡ್ಯಾನ್ಸ್ ಮಾಡುತ್ತಿದ್ದರು. ಅವರು ಒಂದು ಮದುವೆಗೆ ಹೋದಾಗ ಅಲ್ಲಿ ಮಕ್ಕಳು, ಹೆಣ್ಮಕ್ಕಳು ಡ್ಯಾನ್ಸ್ ಮಾಡುತ್ತಿರುತ್ತಾರೆ.
ಆವಾಗ ಮಗ ಖುಷಿಯಿಂದ ತನ್ನ ತಾಯಿಯನ್ನೂ ಸ್ಟೇಜ್‌ನತ್ತ ತಳ್ಳಿ ಬಿಡುತ್ತಾನೆ, ಅಮ್ಮ ಡ್ಯಾನ್ಸ್ ಮಾಡಿದ್ದು ಇಷ್ಟೊಂದು ವೈರಲ್ ಆಗುತ್ತದೆ ಎಂದು ಮಗನಿಗೂ ಇರಲಿಲ್ಲ, ಆ ತಾಯಿಗೂ ಇರಲಿಲ್ಲ, ಅವರ ಡ್ಯಾನ್ಸ್ ವೀಡಿಯೋ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಆಗಿದ್ದೇ ತಡ, ಕೆಲವೇ ಗಂಟೆಗಳಲ್ಲಿ ಅವರ ವೀಡಿಯೋ ವೈರಲ್ ಆಯ್ತು.
60ರ ಹರೆಯದಲ್ಲಿ ಆ ಎನರ್ಜಿ
ಅವರ ಡ್ಯಾನ್ಸ್ ಮಾಡಿದ್ದ ರೀತಿ, ಬೀಟ್‌ಗೆ ಅವರು ಹಾಕಿದ್ದ ಸ್ಟೆಪ್ಸ್ ಎಷ್ಟೊಂದು ಚೆಂದ, ಇಷ್ಟು ವರ್ಷ ಡ್ಯಾನ್ಸ್ ಫೀಲ್ಡ್‌ನಲ್ಲಿ ಇದ್ದವರಂತೆ ಡ್ಯಾನ್ಸ್ ಮಾಡಿದ್ದಾರೆ. ಅವರು ಚಿಕ್ಕ ಪ್ರಾಯದಲ್ಲಿ ಇದ್ದಾಗ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದ್ದರೆ ಅವರು ಖಂಡಿತ ದೊಡ್ಡ ಸೆಲೆಬ್ರಿಟಿಯಾಗುತ್ತಿದ್ದರು ಎನ್ನುವುದರಲ್ಲಿ ನೋ ಡೌಟ್...
ಲೇಟ್ ಆದರೂ ಲೇಟಸ್ಟ್ ಆಗಿ ಸೆಲೆಬ್ರಿಟಿ ಆಗಿದ್ದಾರೆ, ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಿನಿಮಾದಿಂದಲೂ ಕೆಲವೊಂದು ಅವಕಾಶ ಸಿಕ್ಕಿದೆಯಂತೆ. ಈ ವೀಡಿಯೋ ವೈರಲ್ ಆದ ಮೇಲೆ ನ್ಯೂಸ್ ಚಾನಲ್‌ಗಳು ಇವರ ಸಂದರ್ಶನ ಮಾಡುತ್ತಿದ್ದಾರೆ, ಅಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಅವರು ಬ್ರೇಕ್ ಡ್ಯಾನ್ಸ್ ಕೂಡ ತುಂಬಾನೇ ಚೆನ್ನಾಗಿ ಮಾಡುತ್ತಾರೆ, ಇವರ ಎನರ್ಜಿಯೊಂದಿಗೆ ಬೇರೆಯವರು ಹೆಜ್ಜೆ ಹಾಕಲು ಸ್ವಲ್ಪ ಕಷ್ಟವೇ ಆಗುವುದು, ಅಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ, ತಾಳಕ್ಕೆ ತಕ್ಕ ಹೆಜ್ಜೆ ಹಾಕುವುದನ್ನು ನೋಡಲು ತುಂಬಾ ಸೊಗಸಾಗಿರುತ್ತದೆ.
ವಯಸ್ಸಾದರೂ ಇಷ್ಟೊಂದು ಚಟುವಟಿಕೆ ಇರುವವರನ್ನು ನೋಡಿ ಕಲಿಯಬೇಕು ಈ ಪೀಳಿಗೆ
ಆ ವಯಸ್ಸಿನಲ್ಲಿಯೂ ಎಷ್ಟೊಂದು ಲವಲವಿಕೆಯಿಂದ ಇದ್ದಾರೆ, ಅವರನ್ನು ನೋಡಿ ಈ ಪೀಳಿಗೆಯವರು ಕಲಿಯಬೇಕು, ವಯಸ್ಸಾಯ್ತು ಎಂದು ಮೂಲೆಯಲ್ಲಿ ಏಕೆ ಕೂರಬೇಕು ಅಲ್ವಾ? ಈ ರೀತಿ ಲವಲವಿಕೆಯಿಂದ ಇರಬೇಕು.
ಪ್ರತಿಭೆಯಿದ್ದರೆ ಈ ಜಗತ್ತನ್ನೇ ಗೆಲ್ಲಬಹುದು
ಪ್ರತಿಭೆಯಿದ್ದರೆ ಒಂದಲ್ಲಾ ಒಂದು ದಿನ ಜನ ಗುರುತಿಸಿಯೇ ಗುರುತಿಸುತ್ತಾರೆ. ಅದರಲ್ಲೂ ಈ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಭೆಯಿದ್ದರೆ ಬೇಗನೆ ಗುರುತಿಸಿಕೊಳ್ಳಬಹುದು. ಪ್ರತಿಭೆ ಇದ್ದರೆ ಅದಕ್ಕೆ ಒಂದು ಸೂಕ್ತ ವೇದಿಕೆ ಸಿಕ್ಕರೆ ಮಾತ್ರ ನಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ.



Click it and Unblock the Notifications