Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಕರ್ನಾಟಕ: ಬರಿ ವಿಚ್ಛೇದನ ಹಣಕೋಸ್ಕರ 7 ಮದುವೆ, 7 ಡಿವೋರ್ಸ್, ಆದರೆ 7ನೇ ಬಾರಿ ನಡೆಯಲಿಲ್ಲ ಆಕೆಯ ಆಟ
ಮದುವೆ ಸೂಪರ್ ಫಾಸ್ಟ್ ಆಗಿ ಕಾಲಗಳು ಉರುಳಿದೆ. ಮದುವೆ ಅದರ ಬೆನ್ನಲ್ಲೇ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಘಟೆನೆಗಳ ನಡುವೆ ಹಣ ದೋಚಲು ಮದುವೆಯನ್ನೇ ಅಸ್ತ್ರವಾಗಿ ಬಳಸಿಕೊಂಡ ಹಲವು ಉದಾಹರಣೆಗಳಿವೆ. ಇದೀಗ ಕರ್ನಾಟಕ ಮೂಲದ ಮಹಿಳೆಯ 7ನೇ ಡಿವೋರ್ಸ್ ಪ್ರಕರಣ ನ್ಯಾಯಧೀಶರನ್ನೇ ಚಕಿತಗೊಳಿಸಿದೆ.

ಒಂದೊಂದು ವರ್ಷಕ್ಕೆ ಒಬ್ಬರನ್ನು ಮದುವೆಯಾಗಿರುವ ಈಕೆ, ಬಳಿಕ ವಿಚ್ಚೇದ ಪಡೆದುಕೊಂಡಿದ್ದಾಳೆ. ಎಲ್ಲಾ ಮಾಜಿ ಪತಿಯರ ವಿರುದ್ದ ಚಿತ್ರಹಿಂಸೆ, ಮಾನಸಿಕ ಹಾಗೂ ದೈಹಿಕ ಹಿಂಸೆ, ಕ್ರೌರ್ಯ ಪ್ರಕರಣ ದಾಖಲಿಸಿ ಬೆದರಿಸಿದ್ದಾಳೆ. ಪರಿಣಾಮ 6 ಮಾಜಿ ಪತಿಗಳು ಈಕೆಗೆ ಹಣ ನೀಡಿ ಕೇಸ್ ಸೆಟ್ಲ್‌ಮಾಡಿಕೊಂಡಿದ್ದಾರೆ. ಆದರೆ 7ನೇ ಪತಿ ಇದೀಗ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಕೋರ್ಟ್ ವಿಚಾರಣೆಯ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಮಹಿಳೆ 6 ತಿಂಗಳಿಂದ ಒಂದು ವರ್ಷದೊಳಗೆ ಗಂಡನ ಬದಲಾಯಿಸಿದ್ದಾಳೆ. ಹಳೇ ಗಂಡನಿಗೆ ಪಾದಕ್ಕೆ ಟಾಟಾ ಹೇಳಿ ಹೊಸ ಗಂಡನಿಗೆ ಒಕೆ ಎಂದಿದ್ದಾಳೆ. ಪ್ರತಿ ಬಾರಿ ಗಂಡನ ವಿರುದ್ಧ ಸೆಕ್ಷನ್ 498ಎ ಪ್ರಕರಣ ದಾಖಲಿಸಿ ಚಿತ್ರ ಹಿಂಸೆ ನೀಡಿದ್ದಾಳೆ. ಕೋರ್ಟ್, ಪ್ರಕರಣ, ಶಿಕ್ಷೆಗೆ ಬೆದರಿದ ಮಾಜಿ ಪತಿಗಳು ಸೆಟ್ಲ್‌ಮೆಂಟ್ ಮಾಡಿದ್ದಾರೆ. ದುಬಾರಿ ಹಣ ನೀಡಿ ದೂರು ವಾಪಸ್ ತೆಗೆಸಿದ್ದಾರೆ. ಹೀಗೆ 7ನೇ ಪತಿ ವಿರುದ್ದವೂ 409ಎ ಪ್ರಕರಣ ದಾಖಲಿಸಿದ್ದಾಳೆ. ಇದರ ವಿಚಾರಣೆಯ ವಿಡಿಯೋ ಇದೀಗ ಚರ್ಚೆಗೆ ಗ್ರಾಸವಾಗಿದೆ.
SERIAL 498A ACCUSER
— Deepika Narayan Bhardwaj (@DeepikaBhardwaj) July 26, 2024
A WOMAN IN KARNATAKA HAS MARRIED 7 TIMES
STAYED WITH EACH MAX 1 YEAR
FILED 498A, MAINTENANCE CASES ON ALL
TAKEN MONEY FROM 6 HUSBANDS
NOW FIGHTING CASE WITH 7TH
Despite having all records with him, MiLord not sending her to Jail
JAI HO EQUALITY 🙏 pic.twitter.com/3zpdBFNP1m
ನ್ಯಾಯಾಧೀಶರು ವಕೀಲರ ಬಳಿ ಇದು ಮಹಿಳೆಯ 7ನೇ ವಿಚ್ಚೇದನ ಪ್ರಕರಣವೇ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಇಲ್ಲಿ ನಿಂತಿರುವುದು 7ನೇ ಪತಿ ಅನ್ನೋದನ್ನು ಖಚಿತಪಡಿಸಿಕೊಂಡಿದ್ದಾರೆ. ಎಲ್ಲಾ ಪತಿಯರ ವಿರುದ್ಧೂ ಈಕೆ ದಾಖಲಿಸಿರಿವುದು 498ಎ ಪ್ರಕರಣವೇ ಅನ್ನೋದನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಕೀಲರು, ಎಲ್ಲಾ ಪತಿಯರ ವಿರುದ್ಧ ಚಿತ್ರಹಿಂಸೆ,ಕ್ರೌರ್ಯ ಪ್ರಕರಣ ದಾಖಲಿಸಿ ವಿಚ್ಛೇದನ ಬಯಸಿದ್ದಾಳೆ. ಬಳಿಕ ಸೆಟ್ಲೆಮೆಂಟ್ ಮಾಡಿಕೊಂಡಿದ್ದಾಳೆ. 6 ತಿಂಗಳಿನಿಂದ 1 ವರ್ಷದವರೆಗೆ ಒಬ್ಬೊಬ್ಬರ ಬಳಿ ಸಂಸಾರ ನಡೆಸಿದ್ದಾಳೆ.
ಈ ಪ್ರಕರಣ ಮಾಹಿತಿ ಪಡೆಯುತ್ತಿದ್ದಂತೆ ನ್ಯಾಯಾಧೀಶರಿಗೆ ಅಚ್ಚರಿಯಾಗಿದೆ. ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾನೂನನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲು ಬಯಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ವಿಚಾರಣೆ ಮುಂದೂಡಿದ ನ್ಯಾಯಾಧೀಶರು, ಮುಂದಿನ ವಿಚಾರಣೆಯಲ್ಲಿ ಈ ಹಿಂದಿನ 6ಪತಿಗಳ ಎಲ್ಲಾ ವಿವರ ನೀಡುವಂತೆ ಸೂಚಿಸಿದ್ದಾರೆ.
ಈ ವಿಡಿಯೋಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ನ್ಯಾಯಾಧೀಶರನ್ನು ಪ್ರಶಂಸಿಸಿದ್ದಾರೆ. ಇದೇ ವೇಳೆ ಇಲ್ಲಿ ಮಹಿಳೆ ಸ್ಥಾನದಲ್ಲಿದ್ದ ಪುರುಷನಿದ್ದರೆ ಇಷ್ಟು ಹೊತ್ತಿಗೆ ಜೈಲು ಸೇರಿರುತ್ತಿದ್ದ ಎಂದು ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications











