Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
Kantara Chapter -1: ನಟ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಪಡೆದ ಸಂಭಾವನೆ ಎಷ್ಟು?
ತುಳು ಸಂಸ್ಕೃತಿ, ಹಾಗೆ ಕರಾವಳಿ ದೈವಾರಾಧನೆಯ ಕುರಿತಾದ ಸಿನಿಮಾ ಕಾಂತಾರ ಬಿಡುಗಡೆಯಾಗಿ ಮೂರು ವರ್ಷ ಕಳೆದಿದೆ. ಈಗ ಕಾಂತಾರ ಚಾಪ್ಟರ್ 1 ಸಿನಿಮಾ ನಾಳೆ ಬಿಡುಗಡೆಗೆ ಸಿದ್ದವಾಗಿದೆ. ನಟ ರಿಷಭ್ ಶೆಟ್ಟಿ ನಿರ್ದೇಶನದ ಸಿನಿಮಾ ಈಗ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ.
ಇನ್ನು ಇದು ಈ ವರ್ಷ ಸಾವಿರ ಕೋಟಿ ಕ್ಲಬ್ ಸೇರುವ ಸಿನಿಮಾ ಎಂಬ ನಿರೀಕ್ಷೆ ಮೂಡಿಸಿದೆ. ಈಗಾಗಲೆ ಟ್ರೈಲರ್ ಹಾಗೂ ಹಾಡಿನಿಂದ ಎಲ್ಲರ ಗಮನ ಸೆಳೆದಿದ್ದು, ಅಡ್ವಾನ್ಸ್ ಬುಕ್ಕಿಂಗ್‌ನಿಂದಲೂ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಬಹುತೇಕ ಕಡೆ 2 ದಿನಗಳ ಶೋಗಳು ಹೌಸ್‌ಫುಲ್ ಆಗಿವೆ. ಹೀಗಾಗಿ ಸಿನಿಮಾದ ಓಪನಿಂಗ್ ಭರ್ಜರಿ ಆಗಿರಲಿದೆ ಎಂಬುದಂತು ಖಚಿತವಾಗಿದೆ.

ಇನ್ನು ಈ ಸಿನಿಮಾ ದುಬಾರಿ ಬಜೆಟ್‌ನಲ್ಲಿ ತಯಾರಾಗಿದೆ. ಕಾಂತಾರ ಮೊದಲ ಭಾಗ ಕೇವಲ 15 ಕೋಟಿ ರೂಪಾಯಿಯಲ್ಲಿ ತಯಾರಾಗಿತ್ತು ಎಂಬುದನ್ನು ಸ್ವತಃ ನಟ ರಿಷಭ್ ಶೆಟ್ಟಿ ಒಪ್ಪಿಕೊಂಡಿದ್ದರು. ಆದ್ರೆ ಈ ಚಾಪ್ಟರ್-1 ಎಷ್ಟು ಬಜೆಟ್‌ನಲ್ಲಿ ತಯಾರಾಗಿದೆ ಎಂಬುದನ್ನು ಎಲ್ಲಿಯೂ ಬಹಿರಂಗಗೊಳಿಸಿಲ್ಲ. ಅದ್ರೆ ದುಬಾರಿ ಬಜೆಟ್ ಸಿನಿಮಾ ಎಂಬುದನ್ನು ಹೇಳಿಕೊಂಡಿದ್ದಾರೆ.
ಕಾಂತಾರ ಬಜೆಟ್ 200 ಕೋಟಿನಾ?
ಆದ್ರೆ ಕಾಂತಾರ ಚಾಪ್ಟರ್-1 ಬಜೆಟ್ ಬರೋಬ್ಬರಿ 150ರಿಂದ 200 ಕೋಟಿ ರೂಪಾಯಿಯಲ್ಲಿ ತಯಾರಾಗಿದೆ ಎಂಬ ವರದಿ ಕೂಡ ಇದೆ. ಆದ್ರೆ ಚಿತ್ರತಂಡ ಈ ಕುರಿತು ಎಲ್ಲಿಯೂ ಹೇಳಿಕೊಂಡಿದ್ದ. ಆದ್ರೆ ಹಲವು ಕಡೆಗಳಲ್ಲಿ ಚಾಪ್ಟರ್ 1 ಭಾಗದ ಅದ್ದೂರಿ ತನಕ್ಕೆ 150ರಿಂದ 200 ಕೋಟಿ ವ್ಯಯಿಸಲಾಗಿದೆ ಎಂದು ವರದಿಗಳಿವೆ. ಆದ್ರೆ ಈ ಕುರಿತು ನಟ ರಿಷಭ್ ಶೆಟ್ಟಿ ಪ್ರತಿಕ್ರಿಯಿಸಿ, ಕೆಲವೇ ದಿನದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಆಗ ಜನರಿಗೇ ಗೊತ್ತಾಗುತ್ತದೆ. ಅದು ಮುಖ್ಯವಲ್ಲ. ಕಥೆ ಏನು ಕೇಳುತ್ತದೆ, ಅದಕ್ಕೆ ನಾವು ಏನು ಕೊಡುತ್ತೇವೆ ಎಂಬುದಷ್ಟೇ ಮುಖ್ಯವಾಗುತ್ತದೆ. ಸಿನಿಮಾ ರಿಲೀಸ್ ಆದ ಬಳಿಕ ಅದೆಲ್ಲವೂ ಬರಹುದು ಎಂಬ ಉತ್ತರ ನೀಡಿದ್ದರು.
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ ಪಡೆದ ಸಂಭಾವನೆ ಎಷ್ಟು?
ಕಾಂತಾರ ಚಾಪ್ಟರ್ 1 ರ ನಟನೆಗಾಗಿ ರಿಷಭ್ ಶೆಟ್ಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಅವರು ಸಂಭಾವನೆಯ ಬದಲಿಗೆ ಸಿನಿಮಾ ನಿರ್ಮಾಣದಲ್ಲಿ ಶೇರು ಪಡೆದಿದ್ದಾರೆ. ಸಿನಿಮಾದಿಂದ ಬರುವಂತಹ ಲಾಭದಲ್ಲಿ ಅವರ ಪಾಲು ಇರಲಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್‌ಗೂ ಮುನ್ನವೇ ಲಾಭದಲ್ಲಿ ಇದೆ. ಹೀಗಾಗಿ ರಿಷಬ್ ಲಾಭದಲ್ಲಿ 100 ಕೋಟಿ ದಾಟಬಹುದು ಎಂಬ ಅಂದಾಜು ಕೂಡ ಇದೆ.
ಇನ್ನು ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಅವರು ಈ ಸಿನಿಮಾದಲ್ಲಿನ ನಟನೆಗಾಗಿ 1 ಕೋಟಿ ರೂಪಾಯಿ ಸಂಭಾವನೆ ನಡೆದಿದ್ದಾರೆ ಎಂದು ವರದಿಯಾಗಿದೆ, ಇನ್ನು ಗುಲ್ಶ್ಯಾನ್ ದೇವಯ್ಯ, ಜಯರಾನ್ ಕೂಡ ಸುಮಾರು 1 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಸಿನಿಮಾ ನಾಳೆ ತೆರೆ ಮೇಲೆ ಬರುತ್ತಿದೆ. ಹಾಗೆ ಸ್ಯಾಂಡಲ್‌ವುಡ್‌ನ ಮತ್ತೊಂದು ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುವ ನಿರೀಕ್ಷೆ ಮೂಡಿಸಿದೆ.
125 ಕೋಟಿ ರೂಪಾಯಿಗೆ ಕಾಂತಾರ ಒಟಿಟಿ ಹಕ್ಕು
ಇನ್ನು ಅಮೇಜಾನ್ ಪ್ರೈಮ್ ಕಾಂತಾರ ಚಾಪ್ಟರ್ 1 ರ ಒಟಿಟಿ ಹಕ್ಕನ್ನು ಬರೋಬ್ಬರಿ 125 ಕೋಟಿ ರೂಪಾಯಿಗೆ ಖರೀದಿಸಿದೆ. ಇದು ಕೆಜಿಎಫ್ ಬಳಕ ಕನ್ನಡ ಸಿನಿಮಾವೊಂದು ಪಡೆದುಕೊಂಡ ಅತ್ಯಂತ ದೊಡ್ಡ ಮೊತ್ತ ಆಗಿದೆ. ಸಿನಿಮಾ ಬಿಡುಗಡೆಯಾಗಿ 5 ಅಥವಾ 6ನೇ ವಾರದಲ್ಲಿ ಒಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆ ಇದೆ.



Click it and Unblock the Notifications
