Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Kantara Chapter 1 Collection: ಮೊದಲ ದಿನ ರಿಷಬ್ ಸಿನಿಮಾ ಗಳಿಸಿದ್ದೆಷ್ಟು? ಬರೆದ ದಾಖಲೆಗಳೇನು?
Kantara Chapter 1 Collection: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ಯದಲ್ಲಿ ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಅದ್ರಲ್ಲೂ ಮುಂದಿನ ಭಾನುವಾರದ ವರೆಗಿನ ಶೋಗಳು ಕೂಡ ಹೌಸ್‌ಫುಲ್ ಆಗಿವೆ. ಅಡ್ವಾನ್ಸ್ ಬುಕ್ಕಿಂಗ್ ಹಾಗೆ ಪ್ರೀಮಿಯರ್ ಶೋನಲ್ಲೂ ಹೌಸ್‌ಫುಲ್ ಆಗಿದೆ.
ಹಾಗೆ ನಿಮ್ಮ ರಾಜ್ಯದಲ್ಲಿ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಕನ್ನಡ ಮಾತ್ರವಲ್ಲದೆ ಉಳಿದೆಲ್ಲಾ ಪ್ರಮುಖ ಭಾಷೆಯಲ್ಲೂ ಸಿನಿಮಾ ಕುರಿತಾಗಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲಾ ಕಡೆ ಸಿನಿಮಾ ನೋಡಿದ ಮಂದಿ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗೆ ಸಿನಿಮಾ ಈಗಾಗಲೇ ಲಾಭದತ್ತ ಸಾಗುತ್ತಿದೆ.

ವರದಿಗಳ ಪ್ರಕಾರ, ಚಿತ್ರ ತೆರೆಕಂಡ ಮೊದಲ ದಿನವೇ ಸಿನಿಮಾ 60 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. ಅಡ್ವಾನ್ಸ್ ಬುಕ್ಕಿಂಗ್ ಹಾಗೆ ಟಿಕೆಟ್ ಸೇಲ್‌ನಿಂದಾಗಿ ಒಂದೇ ದಿನ ಭರ್ಜರಿ ಓಪನಿಂಗ್ ಕಂಡಿದೆ. ಅದ್ರಲ್ಲೂ ಹಿಂದಿ ಹಾಗೂ ತೆಲುಗು ಭಾಷೆಯಲ್ಲು ದಾಖಲೆಯ ಓಪನಿಂಗ್ ಸಿಕ್ಕಿದೆ. ಮೊದಲ ದಿನ ಸುಮಾರು 20 ಕೋಟಿ ರೂಪಾಯಿ ಮುಂಗಡ ಟಿಕೆಟ್ ಬುಕಿಂಗ್‌ನಿಂದ ಗಳಿಸಿದೆ ಎಂದು ವರದಿಯಾಗಿವೆ. ಹೊರ ರಾಜ್ಯದಲ್ಲು ಸೇರಿ ಸುಮಾರು 88.13ರಷ್ಟು ಸೀಟ್‌ಗಳು ತುಂಬಿವೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಪರದೆಯಲ್ಲಿ ಪ್ರದರ್ಶನ ಕಂಡಿದೆ. ಇದರಲ್ಲಿ ಶೇ 90ಕ್ಕಿಂತ ಹೆಚ್ಚಿನ ಪರದೆಗಳು ತುಂಬಿದ್ದವು ಎಂದು ವರದಿಗಳಾಗಿವೆ. ಟ್ರ್ಯಾಕಿಂಗ್ ವೆಬ್‌ಸೈಟ್ ಸಕ್ನಿಲ್ಕ್ ಪ್ರಕಾರ, ಕಾಂತಾರ ಚಾಪ್ಟರ್ 1 ಬಿಡುಗಡೆಯಾದ ದಿನದಂದು ಭಾರತದಲ್ಲಿ 60 ಕೋಟಿ ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ.
ಹಿಂದಿಯಲ್ಲಿ ಗಳಿಸಿದ್ದೆಷ್ಟು?
ಕಾಂತಾರಾ ಚಾಪ್ಟರ್ 1 ಹಿಂದಿ ಭಾಷೆಯ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಸುಮಾರು 19-21 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಲಾಗುತ್ತದೆ. ಸಿಂಗಲ್ ಸ್ಕ್ರೀನ್‌ಗಳನ್ನು ಅವಲಂಬಿಸಿ ಸಂಖ್ಯೆ ಹೆಚ್ಚಾಗಬಹುದು. ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರವು ಹಿಂದಿ ಮಾರುಕಟ್ಟೆಯಲ್ಲಿ ಕನ್ನಡ ಚಿತ್ರವೊಂದು ಅತೀ ಹೆಚ್ಚು ಓಪನಿಂಗ್ ಪಡೆದಿದೆ. ಇದಕ್ಕೂ ಮೊದಲು ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರವು ಮೊದಲ ದಿನವೇ 54 ಕೋಟಿ ರೂಪಾಯಿ ಗಳಿಸಿತ್ತು.
ಬೆಂಗಳೂರು ಸೇರಿ ಹಲವು ಕಡೆ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1200 ರೂಪಾಯಿಗೂ ಟಿಕೆಟ್ ಮಾರಾಟವಾಗಿದೆ. ಪ್ರತಿ ಗಂಟೆಗೆ 85 ಸಾವಿರ ಟಿಕೆಟ್ ಮಾರಾಟವಾಗಿ ದಾಖಲೆ ಬರೆದಿದೆ. ಇದು ಅತೀ ಹೆಚ್ಚು ಟಿಕೆಟ್ ಮಾರಾಟವಾದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
ಕಾಂತಾರ ಚಾಪ್ಟರ್ 2 ಸುಳಿವು
ಕಾಂತಾರ ಮೊದಲ ಭಾಗದ ಯಶಸ್ಸಿನ ನಂತರ ಚಾಪ್ಟರ್ 1 ತೆರೆಗೆ ಬಂದಿದೆ. ಆದ್ರೆ ಈ ಪ್ರೀಕ್ವೆಲ್ ಇಲ್ಲಿದೆ ನಿಲ್ಲುತ್ತಿಲ್ಲ ಎಂಬ ಸುಳಿವು ಸಿಕ್ಕಿದೆ. ಇದರ ಮುಂದಿನ ಭಾಗ ಕಾಂತಾರ ಚಾಪ್ಟರ್-2 ತೆರೆಗೆ ಬರಲಿದೆ ಎಂದು ಸುಳಿವೂ ಕೂಡ ಸಿಕ್ಕಿದೆ. ಸಿನಿಮಾದ ಕೊನೆಯಲ್ಲಿ ಚಾಪ್ಟರ್ 2 ಕುರಿತಾದ ಸುಳಿವು ನೀಡಲಾಗಿದೆ. ಆದ್ರೆ ಈ ಸಿನಿಮಾ ಇನ್ನೆರಡು ವರ್ಷ ಸೆಟ್ಟೇರುವುದು ಅನುಮಾನ. ರಿಷಬ್ ಶೆಟ್ಟಿ ಈಗಾಗಲೇ ತೆಲುಗು ಹಾಗೂ ಹಿಂದಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದರ ನಡುವೆ ಕನ್ನಡದ ಯಾವುದೇ ಸಿನಿಮಾ ಒಪ್ಪಿಕೊಂಡಿದಲ್ಲ. ಆದ್ರೆ ಕಾಂತಾರ ಚಾಪ್ಟರ್ 2 ಆರಂಭವಂತು ತಡವಾಗಲಿದೆ ಅನ್ನೋದು ಖಚಿತ.



Click it and Unblock the Notifications
