Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುತೇ ಸಿಗದ ಲುಕ್‌ನಲ್ಲಿ ಜಸ್ಟೀನ್ ಬೀಬರ್: ಬೋಳು ತಲೆ, ಕೃಶವಾದ ಶರೀರ, ಏನಾಗುತ್ತಿದೆ ಖ್ಯಾತ ಗಾಯಕನ ಬದುಕಿನಲ್ಲಿ?
ಜಸ್ಟೀನ್ ಬೀಬರ್ ಇತ್ತೀಚಿನ ಲುಕ್ ತುಂಬಾನೇ ವೈರಲ್ ಆಗುತ್ತಿದೆ, ಇವರೇನಾ ಜಸ್ಟೀನ್ ಬೀಬರ್ ಎಂದು ಅವರ ಅಭಿಮಾನಿಗಳೇ ಡೌಟು ಪಡುತ್ತಿದ್ದಾರೆ, ಹೇಗಿದ್ದ ಜಸ್ಟೀನ್ ಬೀಬರ್ ಹೇಗಾದರು, ಅವರ ಫೋಟೋ ನೋಡಿದಾಗ ಖಂಡಿತ ಅಚ್ಚರಿ ಉಂಟಾಗುತ್ತೆ.
ಹೊಸ ಲುಕ್ ನೋಡಿ ಅವರ ಫ್ಯಾನ್ಸ್ ಶಾಕ್
ಜಸ್ಟೀನ್ ಬೀಬರ್ ಸಂಗೀತಾ ಲೋಕದಲ್ಲಿ ಚಿಕ್ಕ ಪ್ರಾಯದಲ್ಲಿಯೇ ದೊಡ್ಡ ಹೆಸರು ಮಾಡಿದ ಗಾಯಕ. ಕಳೆದ ವರ್ಷ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮದುವೆಯಲ್ಲಿ ಹಾಡಲು ಜಸ್ಟೀನ್ ಬೀಬರ್‌ಗೆ $10m ಹಣ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ಆಲ್ಬಂ ಸಾಂಗ್ ಕೋಟಿಗಟ್ಟಲೆ ಹಣ ಗಳಿಸುವ ಗಾಯಕ, ನೇಮ್, ಫೇಮ್ ಎಲ್ಲವೂ ಇದೆ, ಕಳೆದ ಆಗಸ್ಟ್‌ನಲ್ಲಿಷ್ಟೇ ಮುದ್ದಾದ ಮಗ ಕೂಡ ಬಂದಿದ್ದಾನೆ, ಹೀಗಿರುವಾಗ ಈ ಗಾಯಕನ ಬದುಕಿನಲ್ಲಿ ಏನಾಗುತ್ತಿದೆ, ಏಕೆ ಹೀಗಾಗಿದ್ದಾರೆ ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.

ಜಸ್ಟೀನ್ ಬೀಬರ್‌ನ ಈಗೀನ ಫೋಟೋ ನೋಡಿ Wait! That's Justin Bieber??? ( ಇವರು ನಿಜವಾಗಲೂ ಜಸ್ಟೀನ್ ಬೀಬರಾ?) ಎಂದು ಕೆಲವರು ಕಮೆಂಟ್ ಮಾಡಿದರೆ I don't want to believe that this is Justin Bieber (ಇದು ಜಸ್ಟೀನ್ ಬೀಬರ್ ಅಂತ ನಂಬೋಕೆ ಆಗ್ತಾ ಇಲ್ಲ) ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ, ಒಟ್ಟಿನಲ್ಲಿ ಜಸ್ಟೀನ್ ಬೀಬರ್ ಹೊಸ ಲುಕ್ ಹಲವಾರು ಸಂಶಯಗಳಿಗೆ ಎಡೆ ಮಾಡಿದೆ.
ಕೆಲವರು ಜಸ್ಟೀನ್ ಬೀಬರ್‌ಗೆ ಏನಾದರು ಮಾರಕ ಕಾಯಿಲೆ ಬಂದಿದೆಯೇ? ಎಂದು ಕೇಳಿದರೆ ಇನ್ನು ಕೆಲವರು ಅವರ ವೈವಾಹಿಕ ಬದುಕಿನಲ್ಲಿ ಏನಾದರು ಸಮಸ್ಯೆವಿದೆಯೇ? ಆ ಕಾರಣದಿಂದ ಖಿನ್ನತೆಗೆ ಒಳಗಾಗಿ ಹೀಗಾದರೇ ಎಂದು ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ.
ವೈವಾಹಿಕ ಬದುಕಿನಲ್ಲಿ ಸಮಸ್ಯೆವಿದೆಯೇ?
ಜಸ್ಟೀನ್ ಬೀಬರ್ 2018ರಲ್ಲಿ ಹೇಯ್ಲೇ ಎಂಬುವರನ್ನು ಮದುವೆಯಾಗಿದ್ದಾರೆ, ಇವರಿಗೆ 2024ರ ಆಗಸ್ಟ್‌ನಲ್ಲಿ ಗಂಡು ಮಗು ಕೂಡ ಜನಿಸಿದೆ. ದಂಪತಿ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಜನವರಿ ಮಾಸದಲ್ಲಿ ಜಸ್ಟೀನ್ ಬೀಬರ್ ತಮ್ಮ ಪತ್ನಿಯನ್ನು ಅನ್‌ಫಾಲೋ ಮಾಡಿದ್ದರು, ಆವಾಗ ಇವರಿಬ್ಬರ ನಡುವೆ ಸಮಸ್ಯೆವಿದೆ ಎಂಬ ಸುದ್ದಿ ಬಂದಿತ್ತು, ಅದಕ್ಕೆ ಜಸ್ಟೀನ್ ಬೀಬರ್ ಅದೆಲ್ಲಾ ಸುಳ್ಳು, ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಆಗಿತ್ತು ಎಂದು ಹೇಳಿದ್ದರು.
Justin Bieber was spotted looking gaunt amid speculation of a marital crisis pic.twitter.com/pVxpKqot21
— Naija (@Naija_PR) January 31, 2025
ಆದರೆ ಜಸ್ಟೀನ್ ಲುಕ್ ಮಾತ್ರ ಅವರ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಜಸ್ಟೀನ್ ಬೀಬರ್ ಕೆನಡಾ ಮೂಲದ ಗಾಯಕ, ಜಗತ್ತಿನಾದ್ಯಂತ ತುಂಬಾನೇ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇವರ ಇನ್‌ಸ್ಟಾ ಖಾತೆಯಲ್ಲಿಯೇ 294M ಫಾಲೋವರ್ಸ್ ಇದ್ದಾರೆ ಎಂದ ಮೇಲೆ ಇವರ ಫೇಮ್ ಎಷ್ಟಿದೆ ಎಂದು ಊಹಿಸಬಹುದು.
ಬೋಳಿಸಿದ ತಲೆ,ಸೊರಗಿದ ದೇಹ, ಗುರುತೇ ಸಿಗದಷ್ಟು ಬದಲಾಗಿದ್ದಾರೆ 30 ವರ್ಷದ ಜಸ್ಟೀನ್ ಬೀಬರ್
ನಾವು ಸಾಧಾರಣ ಜನರು ನಮ್ಮಲ್ಲಿ ದುಡ್ಡು-ಖ್ಯಾತಿ ಎಲ್ಲಾ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಎಂದು ಯೋಚಿಸುತ್ತೇವೆ, ಆದರೆ ಇವರ ಬದುಕಿನಲ್ಲಿ ದುಡ್ಡಿಗೆ ಕೊರತೆ ಇರಲ್ಲ, ಖ್ಯಾತಿಗೆ ಕೊರತೆಯಿರಲ್ಲ, ಆದರೂ ನೆಮ್ಮದಿ ಇರಲ್ಲ, ಬೇರೇನೋ ಸಮಸ್ಯೆ ಅವರನ್ನು ಖಿನ್ನತೆಗೆ ದೂಡುತ್ತದೆ, ಅವರನ್ನು ಜರ್ಜಿತರನ್ನಾಗಿ ಮಾಡುತ್ತೆ. ಜಸ್ಟೀನ್ ಬೀಬರ್ ಬದುಕಿನಲ್ಲಿ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ, ಆದರೆ ಅವರನ್ನು ಮೊದಲಿನ ಯೋ ಯೋ ಲುಕ್‌ನಲ್ಲಿ ಕಾಣಲು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಅವರ ಹೊಸ ಆಲ್ಬಂ ಆದಷ್ಟು ಬೇಗ ಬರಲಿ ಎಂದು ಅವರ ಅಭಿಮಾನಿಗಳು ಕಮೆಂಟ್‌ನಲ್ಲಿ ವಿಶಶ್ ತಿಳಿಸುತ್ತಿದ್ದಾರೆ.



Click it and Unblock the Notifications