Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉಪಗ್ರಹಕ್ಕೆ ಸೆರೆಸಿಕ್ಕ ಗುರುಗ್ರಹದ ಚಂದ್ರ..! ಈ ಚಂದ್ರನ ವಿಶೇಷವೇನು ಗೊತ್ತಾ..!?
ಮಾನವನಿಗೆ ಸೌರಮಂಡಲದ ಮೇಲೆ ಎಷ್ಟು ಆಸಕ್ತಿ ಇದೆ ಅಂದ್ರೆ ದಿನದ 24 ಗಂಟೆಯೂ ಆ ಕುರಿತು ಅಧ್ಯಯನಗಳು ನಡೆಯುತ್ತಲೇ ಇದೆ. ನಿತ್ಯವೂ ಒಂದಲ್ಲಾ ಒಂದು ಹೊಸ ವಿಚಾರಗಳು ಹೊರ ಬರುತ್ತಲೇ ಇದೆ. ಇದಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಶೋದನಾ ಸಂಸ್ಥೆಯಾಗಿರುವ ನಾಸಾ ನಾನಾ ರೀತಿಯ ಅಧ್ಯಯನ ಕೈಗೊಳ್ಳುತ್ತಲೇ ಇರುತ್ತದೆ. ತನ್ನ ಉಪಗ್ರಹಗಳ ಮೂಲಕ ಸೌರಮಂಡಲದ ಅದ್ಭುತವಾದ ಫೋಟೋಗಳನ್ನು ತೆಗೆದು ಹಂಚಿಕೊಳ್ಳುತ್ತಲೇ ಇರುತ್ತದೆ.
ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ನಿಯಮಿತವಾಗಿ ನಮ್ಮ ಬ್ರಹ್ಮಾಂಡದ ಅದ್ಭುತ ಚಿತ್ರಗಳನ್ನು ಸೆರೆಹಿಡಿಯುತ್ತದೆ, ಈ ಚಿತ್ರಗಳು ಬಾಹ್ಯಾಕಾಶ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ. US ಸ್ಪೇಸ್ ಏಜೆನ್ಸಿಯ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳು ಶೈಕ್ಷಣಿಕ ವೀಡಿಯೊಗಳು ಮತ್ತು ಭೂಮಿ ಮತ್ತು ಬಾಹ್ಯಾಕಾಶವನ್ನು ಪ್ರದರ್ಶಿಸುವ ಆಕರ್ಷಕ ಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ ಒಂದು ಆಸ್ತಿಯಂತಾಗಿದೆ.
ಈಗ, ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ, ಬಾಹ್ಯಾಕಾಶ ಸಂಸ್ಥೆಯು ಜುನೋ ಬಾಹ್ಯಾಕಾಶ ನೌಕೆಯಿಂದ ಸೆರೆಹಿಡಿಯಲಾದ ಗುರುಗ್ರಹದ ಚಂದ್ರ ಅಯೋನ ಕ್ಲೋಸ್-ಅಪ್ ಚಿತ್ರವನ್ನು ಹಂಚಿಕೊಂಡಿದೆ. ಹೌದು ಹಿಂದೆಂದೂ ಇಷ್ಟು ಸುಂದರವಾದ ಗುರುಗ್ರಹದ ಚಂದ್ರನ ಫೋಟೋ ಲಭ್ಯವಾಗಿಯೇ ಇರಲಿಲ್ಲ. ಈ ಫೋಟೋ ಬಾಹ್ಯಾಕಾಶ ಪ್ರೇಮಿಗಳ ಗಮನ ಸೆಳೆದಿದೆ.
ಫೆ. 3, ಶನಿವಾರದಂದು, ನಮ್ಮ @NASASolarSystem ಜುನೋ ಬಾಹ್ಯಾಕಾಶ ನೌಕೆಯು ಗುರುಗ್ರಹದ ಚಂದ್ರ ಅಯೋನ ಹತ್ತಿರ ಕೊನೆಯ ಹಾರಾಟ ನಡೆಸಿದೆ. ಸುಮಾರು 1,500 ಕಿ ಮೀಟರ್‌ನಷ್ಟು ದೂರರಿಂದ ಈ ಚಿತ್ರ ಸೆರೆಹಿಡಿಯಲಾಗಿದೆ ಎಂದು ನಾಸಾ ತಿಳಿಸಿದೆ.

ಚಿತ್ರದಲ್ಲಿ, ಗುರುಗ್ರಹದ ಅತಿದೊಡ್ಡ ಉಪಗ್ರಹಗಳಲ್ಲಿ ಒಂದಾದ ಅಯೋ, ಸುಂದರವಾಗಿ ಮೂಡಿದೆ. ಒಂದು ಕಡೆ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ. ಮತ್ತೊಂದು ಕಡೆ ಗುರು ಗ್ರಹದ ಬೆಳಕಿನ ಪ್ರತಿಫಲನದಿಂದಾಗಿಯೂ ಕೊಂಚ ಬೆಳಕು ಹೊಂದಿದೆ. ಮೇಳ್ನೋಟಕ್ಕೆ ಚಂದ್ರ ಎರಡು ಹೋಳಾಗಿರುವಂತೆ ಕಂಡುಬರುತ್ತದೆ. ಆದರೆ ಅದರ ಮೇಲ್ಮೈ ಒಂದೇ ಬಣ್ಣದಿಂದ ಕೂಡಿದೆ. ಅಯೋ ಚಂದ್ರನು ಕಿತ್ತಳೆ, ಕಂದು ಮತ್ತು ಹಳದಿ ಬಣ್ಣದ ಛಾಯೆಗಳ ಬಣ್ಣವನ್ನು ಹೊಂದಿದ್ದು, ವೃತ್ತಾಕಾರದ ಜ್ವಾಲಾಮುಖಿ ಬಾವಿಗಳು, ಲಾವಾದ ಹರಿವು, ಮತ್ತು ಪರ್ವತಗಳ ನೆರಳುಗಳನ್ನು ಈ ಚಿತ್ರದಲ್ಲಿ ಗಮನಿಸಬಹುದಾಗಿದೆ. ಗುರು ಗ್ರಹದ ಚಂದ್ರನ ಮೇಲೆ ಚೂಪಾದ ಹತ್ತಾರು ಪರ್ವತಗಳಿರುವುದು ಫೋಟೋದಲ್ಲಿ ಸೆರೆಯಾಗಿದೆ.
ಈ ಗುರುಗ್ರಹದ ಚಂದ್ರ ಅಯೋ, ಗುರುವಿನ ಗುರುತ್ವಾಕರ್ಷಣಾ ಬಲಕ್ಕೆ ಒಳಪಟ್ಟು ಬಂಧಿಯಾಗಿದೆ. ಅಲ್ಲದೆ ಗುರುವಿಂದ ದೂರದಲ್ಲಿರುವ ಮತ್ತೆರಡು ಚಂದ್ರಗಳು ಈ ಅಯೋ ಚಂದ್ರನ ಮೇಲೆ ಹಿಡಿತ ಸಾಧಿಸಿವೆ. ಹೀಗಾಗಿಯೇ ಅಯೋ ಮೇಲ್ಮೈನಲ್ಲಿ ಜ್ವಾಲಾಮುಖಿಗಳು, ಲಾವಾ ಸರೋವರವೇ ಸೃಷ್ಟಿಯಾಗಿದೆ ಎಂಬುದು ನಾಸಾದ ವಾದವಾಗಿದೆ.
ಆಗಸ್ಟ್ 2011ರಲ್ಲಿ ಉಡಾವಣೆಯಾದ ಮತ್ತು ಜುಲೈ 2016 ರಲ್ಲಿ ಗುರು ಮತ್ತು ಅದರ ಚಂದ್ರನ ವ್ಯವಸ್ಥೆಯನ್ನು ತಲುಪಿದ ನಾಸಾದ ಜುನೋ ಬಾಹ್ಯಾಕಾಶ ನೌಕೆಯು ಡಿಸೆಂಬರ್ 30, 2023 ರಂದು (ಶನಿವಾರ) ಅತ್ಯಂತ ಹತ್ತಿರಕ್ಕೆ ಹಾರಾಟವನ್ನು ಮಾಡಿತು. ನೌಕೆಯು ಜೋವಿಯನ್ ಚಂದ್ರನ ವಿವರವಾದ ಚಿತ್ರವನ್ನು ಸೆರೆಹಿಡಿಯಿತು.
ಅಯೋದ ಮೇಲೆ ಮಾನವ ಹೋಗಲು ಸಾಧ್ಯವೆ..?
ಮಾನವ ಎಲ್ಲಾ ಗ್ರಹದ ಮೇಲೂ ಕಾಲಿಡಲು ಮುಂದಾಗಿದ್ದಾನೆ. ಆದರೆ ಗುರಿವಿನ ಈ ಚಂದ್ರನ ಮೇಲೆ ಕಾಲಿಟ್ಟರೆ ಮಾನವ ಕೆಲ ಗಂಟೆಯಲ್ಲೇ ಸಾಯಬಹುದು. ಹೌದು ಈ ಚಂದ್ರನ ಮೇಲೆ ವಿಕಿರಣ ಎಷ್ಟು ಪ್ರಮಾಣದಲ್ಲಿದೆ ಎಂದರೆ ಯಾವ ಸುರಕ್ಷತೆಯೂ ಇಲ್ಲದೆ ಮಾನವ ಅದರ ಮೇಲೆ ಇಳಿದರೆ ಒಂದು ದಿನದಲ್ಲಿ ವಿಕಿರಣದಿಂದ ಸಾಯುತ್ತಾನೆ.



Click it and Unblock the Notifications