Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ 10ರಂದು ದೊಡ್ಡದಾಗಿ ಪ್ರಕಾಶಮಾನವಾಗಿ ಕಾಣಲಿದ್ದಾನೆ ಗುರು; ನೋಡುವ ಸಮಯವೇನು? ಹೇಗೆ?
ಆಗಸದಲ್ಲಿ ಹಲವು ರೀತಿಯ ವಿದ್ಯಮಾನಗಳು ಅಚ್ಚರಿಗಳನ್ನು ಕಣ್ತುಂಬಿಕೊಳ್ಳುವ ನಿಮ್ಮ ಹವ್ಯಾಸ ಆಗಿದ್ದರೆ ಜನವರಿ 10ರಂದು ನಡೆಯಲಿರುವ ವಿಶೇಷ ಹಾಗೂ ಅಪರೂಪದ ವಿದ್ಯಮಾನವನ್ನು ಮರೆಯಬೇಡಿ. ಅಲ್ಲದೆ ಆಗಸದಲ್ಲಿ ನಡೆಯುವ ಗ್ರಹಣಗಳು, ಗ್ರಹ ಸಂಚಾರಗಳು ಹಾಗೆ ಆಕಾಶಕಾಯಗಳು, ಧೂಮಕೇತು, ಕ್ಷುದ್ರಗ್ರಹ ಸೇರಿದಂತೆ ಹಲವು ವಿದ್ಯಮಾನ ನಡೆಯುತ್ತಿದೆ.
2026ರಲ್ಲಿ ಹಲವು ರೀತಿಯ ಅಚ್ಚರಿಯ ವಿದ್ಯಮಾನಗಳು ನಡೆಯುತ್ತಿವೆ. ಕಳೆದ ಕೆಲ ದಿನಗಳ ಹಿಂದಷ್ಟೇ ವರ್ಷದ ಮೊದಲ ಸೂಪರ್ ಮೂನ್ ವಿದ್ಯಮಾನ ಸಂಭವಿಸಿದ್ದು ನಿಮಗೆಲ್ಲಾ ತಿಳಿದಿರಬಹುದು. ಆದ್ರೆ ಈಗ ಜನವರಿ 10ರಂದು ಗುರು ಗ್ರಹವು ವಿಶೇಷ ಸಂದರ್ಭವನ್ನು ಸೃಷ್ಟಿಸುತ್ತಿದೆ. ಗುರು ಗ್ರಹವು ಈ ದಿನ ಅತ್ಯಂತ ದೊಡ್ಡದಾಗಿ ಹಾಗೆ ಪ್ರಕಾಶಮಾನವಾಗಿ ಕಾಣಿಸಲಿದೆ.

ಈ ದಿನ ಇಡೀ ರಾತ್ರಿ ಗುರು ಸಾಮಾನ್ಯಕ್ಕಿಂತ ದೊಡ್ಡದಾಗಿ ಹಾಗೆ ಪ್ರಕಾಶಮಾನವಾಗಿ ಕಾಣಿಸಲಿದೆ. ಭೂಮಿಯು ಗುರು ಹಾಗೂ ಸೂರ್ಯನ ನಡುವೆ ವಿರೋಧವಾಗಿ ಬರುವ ಕಾರಣದಿಂದಾಗಿ ಗುರು ಅತ್ಯಂತ ದೊಡ್ಡದಾಗಿ ಹಾಗೆ ಪ್ರಕಾಶಮಾನವಾಗಿ ಕಾಣಿಸಲಿದ್ದಾನೆ. ಈ ವರ್ಷ ಗುರುಗ್ರಹವನ್ನು ಅತ್ಯುತ್ತಮವಾಗಿ ನೋಡಲು, ಪೂರ್ವಕ್ಕೆ ನೋಡಿ ಮತ್ತು ಸಂಜೆಯ ಉದ್ದಕ್ಕೂ ನೀವು ಗುರುವನ್ನು ವೀಕ್ಷಿಸಬಹುದು. ಇದು ರಾತ್ರಿ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ವಸ್ತುಗಳಲ್ಲಿ ಒಂದಾಗಿರುತ್ತದೆ (ಚಂದ್ರ ಮತ್ತು ಶುಕ್ರ ಮಾತ್ರ ಪ್ರಕಾಶಮಾನವಾಗಿರುತ್ತದೆ) ಎಂದು ನಾಸಾ ತಿಳಿಸಿದೆ.
ಯಾವಾಗ ನೋಡಬಹುದು? ಹೇಗೆ?
ಇನ್ನು ಗುರು ಗ್ರಹದ ವಿಶೇಷ ವಿದ್ಯಮಾನವನ್ನು ನಾವು ಜನವರಿ 10ರಂದು ನೋಡಬಹುದು. ಅದ್ರಲ್ಲು ಮಧ್ಯರಾತ್ರಿ ಸಮಯದಲ್ಲಿ ಗುರು ಪ್ರಕಾಶಮಾನವಾಗಿ ಕಾಣಲಿದ್ದಾನೆ. ಹಾಗೆ ಬರಿಗಣ್ಣಿನಲ್ಲಿಯೇ ನೀವು ಸಹ ವೀಕ್ಷಿಸಬಹುದು. ಮಿಥುನ ನಕ್ಷತ್ರಪುಂಜದಲ್ಲಿ ಗುರುವನ್ನು ನೋಡಲು ಸೂರ್ಯಾಸ್ತದ ದಿಕ್ಕಿನತ್ತ ಸುತ್ತಲೂ ಪೂರ್ವಕ್ಕೆ ನೋಡಬೇಕಾಗುತ್ತದೆ. ಇದನ್ನು ನೋಡಲು ದೂರದರ್ಶಕದ ಅವಶ್ಯಕತೆ ಇರುವುದಿಲ್ಲ. ಆ ದಿನ ಶುಕ್ರನನ್ನು ಹಾಗೂ ಚಂದ್ರನ ಬಿಟ್ಟರೆ ನಿಮಗೆ ಗುರು ಹೆಚ್ಚು ಪ್ರಕಾಶವಾಗಿ ಕಾಣಿಸಲಿದೆ. ಶುಕ್ರನಿಗಿಂತ ಪ್ರಕಾಶಮಾನವಾಗಿ ಗುರು ಕಾಣಿಸಲಿದ್ದಾನೆ.
ಗುರುವು -2.7ರ ಪ್ರಮಾಣದಲ್ಲಿ ಹೊಳೆಯುತ್ತದೆ, ಇದು ಬರಿಗಣ್ಣಿಗೆ ಸುಲಭವಾಗಿ ಗೋಚರಿಸುತ್ತದೆ. ಇದರ ಡಿಸ್ಕ್ 45.6 ಆರ್ಕ್ ಸೆಕೆಂಡುಗಳ ವ್ಯಾಸದಲ್ಲಿ ಗೋಚರಿಸುತ್ತದೆ, ಇದು ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ಅದ್ಭುತ ದೃಶ್ಯವಾಗಿರಲಿದೆ.
ಗುರು ಬಹಳ ಪ್ರಕಾಶಮಾನವಾಗಿ ಕಾಣಿಸುವುದರಿಂದ ಪಶ್ಚಿಮ ದಿಕ್ಕಿನಲ್ಲಿ ನೋಡಿದರೆ ಅದನ್ನು ಗುರುತಿಸಬಹುದು. ಆದ್ರೆ ಮಧ್ಯರಾತ್ರಿಯಲ್ಲಿ ಎತ್ತರದಲ್ಲಿದ್ದಾಗ ಗುರು ಬಹಳ ಸ್ಪಷ್ಟವಾಗಿ ಕಾಣಲಿದ್ದಾನೆ. ಈ ವಿದ್ಯಮಾನ ಯಾವಾಗಲು ಸಂಭವಿಸುವುದಿಲ್ಲ ಬದಲಿಗೆ ಬಹಳ ಅಪರೂಪಕ್ಕೆ ಸಂಭವಿಸುವ ವಿದ್ಯಮಾನವಾಗಿದೆ. ಹೀಗಾಗಿ ಜನವರಿ 10ರಂದು ನಡೆಯುವ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.
ಗುರು ಗ್ರಹಕ್ಕೆ ಪ್ರಾಚೀನ ರೋಮನ್ ದೇವರ ಹೆಸರನ್ನು ಇಡಲಾಗಿದೆ. ರೋಮನ್ ದೇವರ ರಾಜನನ್ನು ಜೂಪಿಟರ್ ಎಂದು ಕರೆಯಲಾಗಿದೆ. ಹೀಗಾಗಿ ಆತನ ಹೆಸರನ್ನು ಇಡಲಾಗಿದೆ. ಗುರುವಿನ ಪರಿಸರವು ನಮಗೆ ತಿಳಿದಿರುವಂತೆ ಜೀವಿಗಳಿಗೆ ಅನುಕೂಲಕರವಾಗಿಲ್ಲ. ಗುರು ಭೂಮಿಗಿಂತ ಬರೋಬ್ಬರಿ 11 ಪಟ್ಟು ದೊಡ್ಡದಾಗಿದೆ. ಸೂರ್ಯನ ಬೆಳಕು ಗುರುವನ್ನು ತಲುಪಲು 43 ನಿಮಿಷ ಬೇಕಾಗುತ್ತದೆ.
ಗುರು ಬಹುತೇಕ ನೇರವಾಗಿ ಚಲಿಸಲಿದೆ. ಅಂದರೆ ಭೂಮಿ ಸುಮಾರು 23 ಡಿಗ್ರಿ ಲಂಬವಾಗಿ ಭಾಗಿದೆ. ಆದ್ರೆ ಗುರು ಕೇವಲ 3 ಡಿಗ್ರಿಯಷ್ಟು ಓರೆಯಾಗಿದೆ. ಗುರು ತನ್ನ ಕಕ್ಷೆಯ ಮೇಲೆ ಒಂದು ಸುತ್ತು ಬರಲು 9.9 ಗಂಟೆ ತೆಗೆದುಕೊಳ್ಳಲಿದೆ. ಹಾಗೆ ಸೂರ್ಯನ ಸುತ್ತ ಒಂದು ಸುತ್ತು ಬರಲು ಅಂದರೆ 4,333 ದಿನ ತೆಗೆದುಕೊಳ್ಳಲಿದೆ. ಹಾಗೆ ಗುರು 95 ಚಂದ್ರನನ್ನು ಹೊಂದಿದೆ.



Click it and Unblock the Notifications










