Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಗುರು ವಕ್ರೀ ಚಲನೆಯಲ್ಲಿರುವಾಗ ಈ 3 ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹಕ್ಕೆ ತುಂಬಾನೇ ಮಹತ್ವವಿದೆ. ಗುರು ನಮ್ಮ ಜಾತಕದಲ್ಲಿ ಬಲವಾಗಿದ್ದರೆ ಮಾತ್ರ ನಾವು ಮಾಡುವ ಕಾರ್ಯಗಳಲ್ಲಿ ಯಶಸ್ವಿ ಸಿಗಲಿದೆ. ಗುರು ಗ್ರಹ ದುರ್ಬಲ ಸ್ಥಾನದಲ್ಲಿದ್ದಾಗ ತುಂಬಾನೇ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಸೆಪ್ಟೆಂಬರ್ 5ರಿಂದ ಗುರುಗ್ರಹ ಹಿಮ್ಮುಖವಾಗಿ ಚಲನೆ ಮಾಡುತ್ತಿದೆ. ಸಾಮಾನ್ಯವಾಗಿ ಯಾವುದೇ ಗ್ರಹ ಹಿಮ್ಮುಖ ಚಲನೆ ಮಾಡಲಾರಂಭಿಸಿದರೆ ಅದು ಅಷ್ಟೇನು ಶುಭ ಫಲ ನೀಡುವುದಿಲ್ಲ.ಆದರೆ ಕೆಲವೊಮ್ಮೆ ಅದರ ಸ್ಥಾನಕ್ಕೆ ತಕ್ಕಂತೆ ಶುಭ ಫಲ ಕೂಡ ನೀಡುವುದು.
ಇದೀಗ ಗುರುಗ್ರಹ ಹಿಮ್ಮುಖ ಚಲನೆಯಲ್ಲಿರುವಾಗ ಈ 3 ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ, ಈ ಅವಧಿಯಲ್ಲಿ ಈ ರಾಶಿಯವರು ಗುರು ಗ್ರಹದ ಬಲದಿಂದ ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ, ಏಕೆಂದರೆ ಈ ರಾಶಿಯವರಿಗೆ ಈಗ ಗಜಲಕ್ಷ್ಮಿ ರಾಜಯೋಗ

ಮೇಷ ರಾಶಿ:
ಮೇಷ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ ಉಂಟಾಗಿದೆ, ಇದರಿಂದಾಗಿ ನೀವು ಅದ್ಭುತ ಫಲವನ್ನು ಪಡೆಯಲಿದ್ದೀರಿ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಯೋಜನವನ್ನು ಕಾಣುತ್ತೀರಿ. ಈ ಅವಧಿಯಲ್ಲಿ ನೀವು ಏನಾದರೂ ಯೋಜನೆ ಮಾಡಿದರೆ ಅದೆಲ್ಲವೂ ಯಶಸ್ವಿಯಾಗಲಿದೆ. ಉದ್ಯೋಗಿಗಳು ಈ ಅವಧಿಯಲ್ಲಿ ತಮ್ಮ ಕೆಲಸದಿಂದ ಗುರುತಿಸಿಕೊಳ್ಳುತ್ತಾರೆ. ವ್ಯಾಪಾರಸ್ಥರು ನಿರೀಕ್ಷೆಯಂತೆಯೇ ಉತ್ತಮ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಏನಾದರೂ ಹೊಸ ಕಾರ್ಯ ಪ್ರಾರಂಭಿಸಿದರೆ ಅದರಲ್ಲಿ ಯಶಸ್ಸು ಕಾಣುವಿರಿ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೂ ಈ ಅವಧಿ ಉತ್ತಮವಾಗಿದೆ. ಇನ್ನು ಕುಟುಂಬ ಜೀವನ, ವೈವಾಹಿಕ ಜೀವನ ಉತ್ತಮವಾಗಿರಲಿದೆ.
ಕರ್ಕ ರಾಶಿ
ಗುರು ಹಿಮ್ಮುಖ ಚಲನೆಯಲ್ಲಿರುವಾಗ ಕರ್ಕರಾಶಿಯವರಿಗೆ ಗಜಲಕ್ಷ್ಮಿ ಯೋಗವಿದೆ. ಗುರು ಗ್ರಹವು ನಿಮ್ಮ 10ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಇದು ಈ ಅವಧಿಯಲ್ಲಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ಯಶಸ್ಸು, ಲಾಭ ಗಳಿಸುವಿರಿ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭ ಪಡೆಯಲಿದ್ದೀರಿ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಅಪೇಕ್ಷಿತ ಕೆಲಸ ಸಿಗಲಿದೆ. ಈ ಅವಧಿಯಲ್ಲಿ ನೀವು ಪ್ರಾರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಇರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.
ಮೀನ ರಾಶಿ
ಗುರು ಹಿಮ್ಮುಖ ಚಲನೆಯಲ್ಲಿರುವಾಗ ಮೀನ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ ಉಂಟು ಮಾಡಿದೆ. ಗುರು ನಿಮ್ಮ ರಾಶಿಯ ಎರಡನೇ ಮನೆಯಲ್ಲಿದೆ. ನಿಮ್ಮ ಮಕ್ಕಳು ಅವರ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತಾರೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ.



Click it and Unblock the Notifications
