Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಮಾಸಿಕ ರಾಶಿಫಲ: ಗ್ರಹಗತಿಗಳ ಪ್ರಕಾರ ಜೂನ್ ತಿಂಗಳು ಧನು ರಾಶಿಯವರಿಗೆ ಹೇಗಿರಲಿದೆ?
ಗ್ರಹಗತಿಗಳ ಆಧಾರದ ಮೇಲೆ ಜೂನ್ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಧನು ರಾಶಿಯವರಿಗೆ ಜೂನ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ಆರೋಗ್ಯ ಭವಿಷ್ಯದ ಬಗ್ಗೆ ಹೇಳಲಾಗಿದೆ ನೋಡಿ:
ಈ ತಿಂಗಳು ಹಣ, ಆಧ್ಯಾತ್ಮಿಕತೆ ಮತ್ತು ವೃತ್ತಿ ಬೆಳವಣಿಗೆಯ ವಿಷಯದಲ್ಲಿ ಉತ್ತಮವಾಗಿದೆ. ಸಂಪತ್ತಿನ ಎರಡನೇ ಮನೆಯ ಅಧಿಪತಿಯಾದ ಶನಿಯು ನಿಮ್ಮ ಮೂರನೇ ಮನೆಯಲ್ಲಿ ಇರುವುದರಿಂದ ಹಣದ ಸ್ಥಿತಿ ತುಂಬಾ ಚೆನ್ನಾಗಿರುತ್ತದೆ. ಆದರೆ ಹಣ ಬರುತ್ತದೆ, ಆದರೆ ಸ್ವಲ್ಪ ನಿಧಾನವಾಗಬಹುದು ಅಷ್ಟೇ. ಅಲ್ಲದೆ ವಿದೇಶಕ್ಕೆ ಉದ್ಯೋಗಕ್ಕೆ ಹೋಗಲು ಬಯಸುತ್ತಿದ್ದರೆ ಶನಿ 3ನೇ ಮನೆಯಲ್ಲಿರುವುದರಿಂದ ಉದ್ಯೋಗಾವಕಾಶಗಳನ್ನು ಪಡೆಯಬಹುದು.

ಸ್ವಂತ ವ್ಯವಹಾರ ಮಾಡುವವರು ಈ ತಿಂಗಳಿನಲ್ಲಿ ಲಾಭ ಗಳಿಸುವಿರಿ, ನಿಮ್ಮ ಸ್ಪರ್ಧಿಗಳನ್ನು ಗೆಲ್ಲಲು ಸಾಧ್ಯವಾಗುವುದು. ಈ ಸಮಯದಲ್ಲಿ ಹೊಸ ವ್ಯವಹಾರ ಮಾಡುವುದಾದರೆ ಪ್ರಾರಂಭಿಸಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು.
ವೃತ್ತಿ ಭವಿಷ್ಯ
ಧನು ರಾಶಿಯವರು ಈ ತಿಂಗಳಿನಲ್ಲಿ ತಮ್ಮ ವೃತ್ತಿಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಶನಿಯ 3ನೇ ಸ್ಥಾನವು ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ನೀಡುವುದು. ಗ್ರಹಗಳ ಸ್ಥಾನದಿಂದ ವೃತ್ತಿ ಜೀವನದಲ್ಲಿ ಸ್ಥಿರತೆ ಇರಲಿದೆ. ಅಕ್ಟೋಬರ್ 2023 ರವರೆಗೆ, ನಿಮ್ಮ ಹನ್ನೊಂದನೇ ಮನೆಯಲ್ಲಿ ಕೇತು ಇರುತ್ತದೆ, ಇದು ವೃತ್ತಿ ಕ್ಷೇತ್ರದಲ್ಲಿ ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಆದರೆ ನಿಮ್ಮ ಹನ್ನೊಂದನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ನಿಮ್ಮ ಕೋಪವನ್ನು ಹೆಚ್ಚಿಸುತ್ತದೆ, ಕೋಪ ನಿಯಂತ್ರಿಸಲು ಪ್ರಯತ್ನಿಸಿ. ನಿಮಗೆ ಆದಾಯ ಹೆಚ್ಚಾಗಲು ಹಲವು ಅವಕಾಶಗಳು ಸಿಗಲಿದೆ.
ಅಲ್ಲದೆ ಗುರುವು ನಿಮ್ಮ 5ನೇ ಮನೆಯಲ್ಲಿ ಇರುವುದರಿಂದ ಕಷ್ಟಕರವಾದ ಕೆಲಸಗಳನ್ನು ಸಹ ಉತ್ತಮವಾಗಿ ನಿಭಾಯಿಸಲು ಸಾಧ್ಯವಾಗುವಯುದು. ತಮ್ಮ ಕಠಿಣ ಪರಿಶ್ರಮದ ಬಲದ ಮೇಲೆ ಅವರು ಕಚೇರಿಯಲ್ಲಿ ವಿಶಿಷ್ಟವಾದ ಗುರುತನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಗುರುವಿನ ಸ್ಥಾನದಿಂದಾಗಿ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಸ್ವಂತ ವ್ಯಾಪಾರ ಹೊಂದಿರುವವರಿಗೆ ಈ ತಿಂಗಳು ಅದ್ಭುತವಾಗಿರುತ್ತದೆ. ಅಲ್ಲದೆ, ಈ ತಿಂಗಳ ಕೊನೆಯಲ್ಲಿ ಗುರುವು ಫಲಪ್ರದವಾಗುವುದರಿಂದ ನೀವು ವ್ಯಾಪಾರದಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಜೂನ್ ಅಂತ್ಯದಲ್ಲಿ, ನಿಮ್ಮ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುವ ಮೂಲಕ ನೀವು ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ಈ ತಿಂಗಳಲ್ಲಿ, ಸೂರ್ಯನು ನಿಮ್ಮ ಒಂಬತ್ತನೇ ಮನೆಯ ಅಧಿಪತಿಯಾಗಿ ಏಳನೇ ಮನೆಯಲ್ಲಿರುವುದರಿಂದ ಫಲಪ್ರದ ಸ್ಥಾನದಲ್ಲಿರುತ್ತಾನೆ. ಈ ಕಾರಣದಿಂದಾಗಿ, ನೀವು ವಿದೇಶ ಪ್ರವಾಸಕ್ಕೆ ಅವಕಾಶಗಳನ್ನು ಪಡೆಯಬಹುದು.
ಆರ್ಥಿಕ ಭವಿಷ್ಯ
ಎರಡನೇ ಮನೆಯ ಅಧಿಪತಿಯಾದ ಶನಿಯು ನಿಮ್ಮ ಮೂರನೇ ಮನೆಯಲ್ಲಿದ್ದು, ಇದು ಬೆಳವಣಿಗೆಯ ಮನೆಯಾಗಿದೆ, ಇದರಿಂದಾಗಿ ನೀವು ಸುಲಭವಾಗಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಗುರು ಕೂಡ 5ನೇ ಮನೆಯಲ್ಲಿದ್ದು ಗುರುವಿನ ಸ್ಥಾನವು ಅನುಕೂಲಕರವಾಗಿರುತ್ತದೆ. ಗುರುವಿನ ಪ್ರಸ್ತುತ ಸ್ಥಾನದಿಂದಾಗಿ, ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಆದರೆ ನೀವು ಹಣವನ್ನು ಹೂಡಿಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಯೋಚಿಸಿದ ನಂತರ ಹೊಸ ಹೂಡಿಕೆಯನ್ನು ಮಾಡಬಹುದು. ಈ ತಿಂಗಳಿನಲ್ಲಿ ನೀವು ಷೇರುಗಳಿಂದ ಲಾಭದ ರೂಪದಲ್ಲಿ ಉತ್ತಮ ಆದಾಯವನ್ನು ಪಡೆಯಬಹುದು. ಅಲ್ಲದೆ, ಜೂನ್‌ನಲ್ಲಿ ಹಣಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮಗೆ ಪ್ರಯೋಜನಕಾರಿ.
ಆರೋಗ್ಯ ಭವಿಷ್ಯ
ನಿಮ್ಮ ಮೂರನೇ ಮನೆಯಲ್ಲಿ ಶನಿಯು ನೆಲೆಸಿರುವುದರಿಂದ ಧನು ರಾಶಿಯವರು ಈ ತಿಂಗಳಲ್ಲಿ ಆರೋಗ್ಯವಾಗಿ ಮತ್ತು ಫಿಟ್ ಆಗಿರುತ್ತಾರೆ. ಗ್ರಹಗತಿಗಳ ಅನುಕೂಲಕರ ಸ್ತಾನದಿಂದಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರೀತಿ ಮತ್ತು ಮದುವೆ
ಪ್ರೀತಿ ಮತ್ತು ವೈವಾಹಿಕ ಜೀವನದ ವಿಷಯದಲ್ಲಿ, ಈ ತಿಂಗಳು ಧನು ರಾಶಿಯವರಿಗೆ ಅದೃಷ್ಟದಿಂದ ಕೂಡಿದೆ. ನಿಮ್ಮ ಸಂಬಂಧ ತುಂಬಾ ಚೆನ್ನಾಗಿರಲಿದೆ. ಈಗಾಗಲೇ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಲು ಪ್ರಯತ್ನಿಸಬೇಕು. ಪ್ರೇಮಿಗಳು ವಿವಾಹಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು.
ಕುಟುಂಬ
ಶನಿ,ಗುರುವಿನ ಅನುಕೂಲಕರ ಸ್ಥಾನದಿಂದಾಗಿ, ಕುಟುಂಬದ ವಾತಾವರಣವು ಶಾಂತಿಯುತವಾಗಿ ಉಳಿಯುತ್ತದೆ ಮತ್ತು ಕುಟುಂಬ ಸದಸ್ಯರ ನಡುವೆ ಉತ್ತಮ ಪರಸ್ಪರ ತಿಳುವಳಿಕೆ ಇರುತ್ತದೆ.
ಪರಿಹಾರ
* ಗುರುವಾರ ಅಂಗವಿಕಲರಿಗೆ ಆಹಾರ ನೀಡಿ.
"ಓಂ ಬೃಹಸ್ಪತಯೇ ನಮಃ" ಎಂದು ಪ್ರತಿದಿನ 108 ಬಾರಿ ಜಪಿಸಿ.
ಮಂಗಳವಾರ ರಾಹುವಿಗೆ ಯಜ್ಞ-ಹವನ ಮಾಡಿ.
* ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.



Click it and Unblock the Notifications











