June Month Love Horoscope 2023: ಜೂನ್ ತಿಂಗಳು ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?

ಜೂನ್ ತಿಂಗಳಿನಲ್ಲಿ ಮೂರು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿದೆ. ಹೀಗಾಗಿ ಇದರ ಪರಿಣಾಮ ಕೆಲವು ರಾಶಿಗಳ ಮೇಲೆ ಧನಾತ್ಮಕವಾಗಿ ಇದ್ದರೆ ಇನ್ನೂ ಕೆಲವು ರಾಶಿಗಳು ಮೇಲೆ ಋಣಾತ್ಮಕವಾಗಿ ಇರಲಿದೆ. ಇದರ ಪರಿಣಾಮ ಪ್ರೀತಿ ಹಾಗೂ ಸಂಬಂಧದ ಮೇಲೂ ಆಗಲಿದೆ. ಕೆಲವರ ಬಾಳಿನಲ್ಲಿ ತಮ್ಮ ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. ಇನ್ನೂ ಕೆಲವರ ಬಾಳಿನಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಅಷ್ಟಕ್ಕು ಜೂನ್ ತಿಂಗಳಿನಲ್ಲಿ ದ್ವಾದಶ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಯಾರೆಲ್ಲಾ ಪ್ರೀತಿಯಲ್ಲಿ ಇದ್ದಾರೋ ಅವರಿಗೆ ಈ ತಿಂಗಳು ಜೀವನವನ್ನು ಚಿಂತಾಕ್ರಾಂತವಾಗಿ ಕಳೆಯಬೇಕಾಗುತ್ತದೆ. ನಿಮ್ಮ ಪ್ರೀತಿಯ ಸಂಗಾತಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಅವರು ನಿಮ್ಮ ಯಾವುದಾದರೂ ಒಂದು ನಡವಳಿಕೆಯನ್ನು ಇಷ್ಟ ಪಡದೇ ಇರಬಹುದು. ಇದರಿಂದ ನಿಮ್ಮಬ್ಬರ ಮಧ್ಯೆ ಪರಸ್ಪರ ವಿವಾದ ಏರ್ಪಡಬಹುದು. ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಕುಳಿತು ಬಗೆಹರಿಸಿಕೊಳ್ಳುವುದು ಉತ್ತಮ.

June Month Love Horoscope In Kannada

ವೃಷಭ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಉತ್ತಮವಾಗಿಲ್ಲ. ನಿಮ್ಮ ಸಂಗಾತಿಯೊಂದಿಗೆ ಯಾವುದೋ ಒಂದು ವಿಚಾರಕ್ಕೆ ವಿವಾದ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯನ್ನು ಕೆಲವು ವ್ಯಕ್ತಿಗಳು ನಿಮ್ಮ ವಿರುದ್ಧವೇ ಎತ್ತಿ ಕಟ್ಟಬಹುದು. ಹೀಗಾಗಿ ಈ ತಿಂಗಳು ನೀವು ಜಾಗರೂಕರಾಗಿ ಹೆಜ್ಜೆ ಇಡುವುದು ಉತ್ತಮ. ನಿಮ್ಮ ಸಂಗಾತಿಯೊಂದಿಗೆ ಕುಳಿತು ಮಾತನಾಡಿ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಸಂಬಂಧವನ್ನು ಮಧುರಗೊಳಿಸಲು ಸಂಗಾತಿಯೊಂದಿಗೆ ಹೊರಗಡೆ ಸುತ್ತಾಡಿ.

ಮಿಥುನ ರಾಶಿ
ಪ್ರೇಮ ಸಂಬಂಧಗಳಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಾರೆ. ನೀವಿಬ್ಬರೂ ಹೊರಗೆ ಸುತ್ತಾಡಲು ಹೋಗುವ ಸಾಧ್ಯತೆಗಳಿದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ಹೇಳಬಹುದು. ಈ ತಿಂಗಳು ನಿಮ್ಮ ಪ್ರೇಯಸಿ ನಿಮ್ಮ ಜೀವನ ಸಂಗಾತಿಯಾಗಬಹುದು. ಪ್ರೇಮ ಸಂಬಂಧಗಳಿಗೆ ಇದು ಸಮಯ ಸೂಕ್ತವಾಗಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಯಾರೆಲ್ಲಾ ಪ್ರೀತಿಯಲ್ಲಿ ಇದ್ದಾರೋ ಈ ತಿಂಗಳು ನಿಮ್ಮ ಪ್ರೀತಿಯ ಸಂಬಂಧವು ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯನ್ನು ನೀವು ಅನುಮಾನಿಸಬಹುದು. ಈ ಕಾರಣದಿಂದಾಗಿ ಸಂಬಂಧದಲ್ಲಿ ಕಹಿ ಉಂಟಾಗಬಹುದು. ಇನ್ನೊಬ್ಬ ವ್ಯಕ್ತಿಯಿಂದ ನೀವು ಸಲಹೆಯನ್ನು ತೆಗೆದುಕೊಳ್ಳುವುದು ನಿಮ್ಮ ಸಂಬಂಧಕ್ಕೆ ಅಪಾಯಕಾರಿ. ನಿಮ್ಮ ಸಂಗಾತಿಯನ್ನು ಅನುಮಾನಿಸಬೇಡಿ ಮತ್ತು ಒಟ್ಟಿಗೆ ಕುಳಿತು ಮಾತನಾಡುವ ಮೂಲಕ ಸಂಬಂಧವನ್ನು ಸುಧಾರಿಸಿ.

ಸಿಂಹ ರಾಶಿ
ಪ್ರೀತಿಯಲ್ಲಿ ಇರುವವರು ಈ ತಿಂಗಳಿನಲ್ಲಿ ತಮ್ಮ ಪ್ರೇಮ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ನೀವು ಹೇಳುವುದೆಲ್ಲವನ್ನೂ ನಿಮ್ಮ ಸಂಗಾತಿ ಪಾಲಿಸುತ್ತಾರೆ. ಪ್ರೀತಿಯಲ್ಲಿ ಅವರು ನಿಮಗೆ ಎಲ್ಲಾ ಸಂತೋಷವನ್ನು ನೀಡುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಎಲ್ಲೋ ಹೊರಗೆ ಹೋಗಲು ನೀವು ಯೋಜಿಸಬಹುದು. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡುವ ಸಾಧ್ಯತೆಗಳಿದೆ.

ಕನ್ಯಾ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಏರಿಳಿತಗಳಿಂದ ತುಂಬಿರುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ನಂಬುತ್ತಾರೆ. ಕೆಲವು ಗೊಂದಲಗಳಿಂದಾಗಿ ನಿಮ್ಮ ಪ್ರೇಮ ಜೀವನದಲ್ಲಿ ವ್ಯತ್ಯಾಸಗಳಾಗಬಹುದು. ಆದರೆ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ. ನಿಮ್ಮ ಪ್ರೀತಿಯ ಸಂಬಂಧದಲ್ಲಿ ಮಾಧುರ್ಯ ತುಂಬಿರುತ್ತದೆ.

ತುಲಾ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಒಳ್ಳೆಯದಲ್ಲ. ನೀವು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ನಿಮ್ಮ ಸಂಬಂಧವನ್ನು ಹಾಳು ಮಾಡಲು ಯಾರಾದರೂ ಪ್ರಯತ್ನಿಸಬಹುದು. ನಿಮ್ಮ ಸಂಗಾತಿಯು ನಿಮ್ಮನ್ನು ಅನುಮಾನಿಸಬಹುದು. ಇದರಿಂದಾಗಿ ನಿಮ್ಮ ಪ್ರೀತಿಯ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಈ ಬಗ್ಗೆ ಮಾತನಾಡುವುದು ಒಳ್ಳೆಯದು. ನಿಮ್ಮ ಸಂಗಾತಿಯು ನಿಮ್ಮನ್ನು ಹೆಚ್ಚು ಇಷ್ಟಪಡದಿರಬಹುದು.

ವೃಶ್ಚಿಕ ರಾಶಿ
ಪ್ರೀತಿಯಲ್ಲಿ ಇರುವವರು ಈ ತಿಂಗಳು ಜಾಗರೂಕರಾಗಿರಬೇಕು. ಪ್ರೇಮದ ವಿಚಾರದಲ್ಲಿ ಕುಟುಂಬದ ವಿರೋಧವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂಬಂಧದಿಂದ ಕುಟುಂಬ ಸದಸ್ಯರು ಕೋಪಗೊಳ್ಳಬಹುದು. ಇದರಿಂದಾಗಿ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿ ನಿಮ್ಮ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ನೀವು ನಿಮ್ಮ ಸಂಗಾತಿಯನ್ನು ಬೆಂಬಲಿಸಿದರೆ, ಮತ್ತು ನಿಮ್ಮ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರೆ ಎಲ್ಲವೂ ಅಂದುಕೊಂಡಂತೆ ನೆರವೇರುತ್ತದೆ.

ಧನು ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಪ್ರೀತಿಯ ಸಂಬಂಧವು ಮಧುರವಾಗಿರುತ್ತದೆ. ಮತ್ತು ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ನೀವು ಹೊರಗಡೆ ಹೋಗುವ ಸಾಧ್ಯತೆಗಳಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಪ್ರೇಮ ಜೀವನವು ತುಂಬಾ ಉತ್ತಮವಾಗಿರುತ್ತದೆ. ಸಂಗಾತಿಯ ಬೆಂಬಲ ಮತ್ತು ಪ್ರೀತಿ ಸಿಗುತ್ತದೆ. ನಿಮ್ಮ ಸಂಗಾತಿ ಅವರ ಮನಸ್ಸಿನ ಮಾತನ್ನು ಹೇಳಿಕೊಳ್ಳುತ್ತಾರೆ. ಇದರಿಂದ ನಿಮ್ಮ ಮನಸ್ಸು ಖುಷಿಯಾಗಿರುತ್ತದೆ.

ಮಕರ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ತೊಂದರೆಯಾಗಲಿದೆ. ನಿಮ್ಮ ಸಂಗಾತಿಯು ನಿಮ್ಮ ಸ್ವಭಾವದ ಬಗ್ಗೆ ಕೋಪಗೊಳ್ಳಬಹುದು. ಆಗಾಗ್ಗೆ ನೀವು ವಿಷಯಗಳನ್ನು ತಿರುಚುವುದರಿಂದ ನಿಮ್ಮ ಸಂಗಾತಿಗೆ ತೊಂದರೆಯಾಗಬಹುದು. ಅವನು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಹುದು. ಅವರೊಂದಿಗಿನ ಸಂಬಂಧದಲ್ಲಿ ನೀವು ಸಂತೋಷವಾಗಿದ್ದೀರಿ. ಮತ್ತು ನೀವು ಅವರ ಜೊತೆಗಿದ್ದೀರಿ ಎಂದು ನೀವು ಅವರಿಗೆ ಭರವಸೆ ನೀಡುವುದು ಒಳ್ಳೆಯದು.

ಕುಂಭ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಸೂಕ್ತವಲ್ಲ. ನಿಮ್ಮ ಸಂಗಾತಿಯೊಂದಿಗೆ ನೀವು ಯಾವುದಾದರೂ ಒಂದು ವಿಚಾರಕ್ಕೆ ಚರ್ಚೆ ನಡೆಸುತ್ತೀರಿ. ಇದರಿಂದ ನಿಮ್ಮ ನಡುವೆ ಸಂಘರ್ಷ ಹೆಚ್ಚುತ್ತದೆ. ನಿಮ್ಮ ಸಂಗಾತಿಯ ಅನುಮಾನಾಸ್ಪದ ವರ್ತನೆ ನಿಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ದ್ವೇಷವನ್ನು ಉಂಟುಮಾಡಬಹುದು. ಇಬ್ಬರ ನಡುವಿನ ಸಮನ್ವಯದ ಕೊರತೆಯಿಂದಾಗಿ ನಿಮ್ಮ ಜೀವನವು ತೊಂದರೆಗಳಿಂದ ತುಂಬಬಹುದು. ನಿಮ್ಮ ಸಂಬಂಧವನ್ನು ಮಧುರಗೊಳಿಸಲು ನೀವಿಬ್ಬರೂ ಒಟ್ಟಿಗೆ ಆಚೆ ಹೋಗುವುದು. ಮತ್ತು ಪರಸ್ಪರ ಮಾತನಾಡಿಕೊಳ್ಳುವುದು ಒಳ್ಳೆಯದು.

ಮೀನ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಹೊರಗಡೆ ಹೋಗುವ ಸಾಧ್ಯತೆಗಳಿದೆ. ಪ್ರೇಮ ಸಂಬಂಧಗಳಿಗೆ ಈ ಸಮಯ ಅನುಕೂಲಕರವಾಗಿದೆ. ನಿಮ್ಮ ಬಿಡುವಿಲ್ಲದ ಕೆಲಸದಿಂದಾಗಿ ನಿಮ್ಮ ಸಂಗಾತಿ ಒಂಟಿತನವನ್ನು ಅನುಭವಿಸುತ್ತಾರೆ. ಇದರಿಂದಾಗಿ ಅವರು ನಿಮ್ಮೊಂದಿಗೆ ಕೋಪಗೊಳ್ಳಬಹುದು. ನಿಮ್ಮ ಸಂಗಾತಿಗೆ ಸಮಯ ಕೊಡಿ. ಮತ್ತು ಅವರೊಂದಿಗೆ ಉತ್ತಮ ಒಡನಾಟ ನಡೆಸಿ. ಪರಿಚಯಸ್ಥರು ನಿಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸಬಹುದು. ಆದ್ದರಿಂದ ಜಾಗರೂಕರಾಗಿದ್ದರೆ ಒಳ್ಳೆಯದು.

English summary

June Month Love Horoscope In Kannada

Here are June love horoscope in Kannada read on.
Story first published: Tuesday, May 30, 2023, 15:30 [IST]
X
Desktop Bottom Promotion