Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಸಿಕ ರಾಶಿಫಲ: ಗ್ರಹಗತಿಗಳ ಪ್ರಕಾರ ಜೂನ್ ತಿಂಗಳು ಸಿಂಹ ರಾಶಿಯವರಿಗೆ ಹೇಗಿರಲಿದೆ?
ಗ್ರಹಗತಿಗಳ ಆಧಾರದ ಮೇಲೆ ಜೂನ್ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಸಿಂಹ ರಾಶಿಯವರಿಗೆ ಜೂನ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ಆರೋಗ್ಯ ಭವಿಷ್ಯದ ಬಗ್ಗೆ ಹೇಳಲಾಗಿದೆ ನೋಡಿ:
ಸಿಂಹ ರಾಶಿಯವರಿಗೆ ಜೂನ್ ತಿಂಗಳು ಅನುಕೂಲಕರವಾಗಿದೆ. ಏಕೆಂದರೆ ಈ ತಿಂಗಳಲ್ಲಿ ಗುರುವು ನಿಮ್ಮ ಒಂಬತ್ತನೇ ಮನೆಯಲ್ಲಿ ನೆಲೆಸಿದ್ದಾನೆ, ಶನಿಯು ಏಳನೇ ಮನೆಯಲ್ಲಿದೆ, ಈ ಕಾರಣಕ್ಕೆ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು. ಶನಿಯ ಪ್ರತಿಕೂಲ ಸ್ಥಾನವು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಆದರೆ ಗುರುವು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮತ್ತು ಕುಟುಂಬದಲ್ಲಿ ಮದುವೆ, ಹೊಸ ವ್ಯವಹಾರದ ಪ್ರಾರಂಭ, ಯಾವುದೇ ಹೊಸ ಹೂಡಿಕೆ ಇತ್ಯಾದಿಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡುವುದು. ಒಂಬತ್ತನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು ಸಿಂಹ ರಾಶಿಯವರಿಗೆ ಅದೃಷ್ಟದ ಬೆಂಬಲ ನೀಡಲಿದೆ.

ಕೇತು ನಿಮ್ಮ ಮೂರನೇ ಮನೆಯಲ್ಲಿ ಸ್ಥಿತವಾಗಿದ್ದು, ಈ ತಿಂಗಳಿನಲ್ಲಿ ನೀವು ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಬಹುದು. ಕೇತುವಿನ ಸ್ಥಾನದಿಂದಾಗಿ, ನಿಮ್ಮ ಆಂತರಿಕ ಶಕ್ತಿಯನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗುತ್ತದೆ.
ಜೂನ್ ತಿಂಗಳ ವೃತ್ತಿ ಭವಿಷ್ಯ
ಸಿಂಹ ರಾಶಿಯವರು ವೃತ್ತಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಗುರು ನಿಮ್ಮ 9ನೇ ಮನೆಯಲ್ಲಿ ಇರುವುದರಿಂದ ಒಳ್ಳೆಯ ಕರ್ಮಫಲ ನೀಡಲಿದ್ದಾನೆ. ಶನಿಯು 7ನೇ ಮನೆಯಲ್ಲಿ ಇರುವುದರಿಂದ ಕೆಲ ಸಮಸ್ಯೆಗಳೂ ಎದುರಾಗುವುದು.
ಈ ತಿಂಗಳಿನಲ್ಲಿ ಸಿಂಹ ರಾಶಿಯವರು ಭವಿಷ್ಯದ ಬಗ್ಗೆ ಕೆಲ ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ಪ್ರಮುಖ ನಿರ್ಧಾರಗಳಿಗೆ ಚಂದ್ರನ ಸ್ಥಾನ ಕೂಡ ಅನುಕೂಲಕರ ಫಲಿತಾಂಶ ನೀಡಲಿದೆ. ಉದ್ಯಮಿಗಳಿಗೂ ಈ ತಿಂಗಳು ಅನುಕೂಲಕರವಾಗಿದೆ. ಈ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವ್ಯವಹಾರಗಳನ್ನು ಮಾಡಲು ಸಾಧ್ಯವಾಗುತ್ತದೆ.
ಆರ್ಥಿಕ ಭವಿಷ್ಯ
ಈ ತಿಂಗಳು ನಿಮಗೆ ಆರ್ಥಿಕವಾಗಿ ಚೆನ್ನಾಗಿದೆ. ಅಲ್ಲದೆ, ತಿಂಗಳ ಕೊನೆಯಲ್ಲಿ, ಬುಧ ನಿಮ್ಮ 11ನೇ ಮನೆಗೆ ಬಂದಾಗ ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ. ಇದು ಉತ್ತಮ ಆರ್ಥಿಕ ಸ್ಥಿತಿಯನ್ನು ಸೂಚಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಂಬಳ ಹೆಚ್ಚಾಗಬಹುದು. ಆದರೆ 7ನೇ ಮನೆಯಲ್ಲಿರುವ ಶನಿಯು ನಿಮ್ಮ ಖರ್ಚುಗಳನ್ನು ಹೆಚ್ಚಿಸಬಹುದು.
ಶನಿಯ ಸ್ಥಾನವು ನಿಮ್ಮನ್ನು ಕೆಲವೊಮ್ಮೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವನ್ನು ಅನುಪಯುಕ್ತ ವಸ್ತುಗಳಿಗೆ ಖರ್ಚು ಮಾಡಬಹುದು. ವ್ಯವಹಾರಸ್ಥರು ಲಾಭ ಗಳಿಸುವಿರಿ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿಕೊಂಡಿದ್ದರೆ ಲಾಭ ದೊರೆಯಲಿದೆ.
ಆರೋಗ್ಯ ಭವಿಷ್ಯ
ಗುರುವು ನಿಮ್ಮ ರಾಶಿಯ 9ನೇ ಮನೆಯಲ್ಲಿ ಇರುವುದರಿಂದ ಆರೋಗ್ಯ ಚೆನ್ನಾಗಿರಲಿದೆ. ಆದರೆ 7ನೇ ಮನೆಯಲ್ಲಿರುವ ಶನಿಯು ನಿಮ್ಮ ಸಂಗಾತಿಯ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು.
ಪ್ರೀತಿ ಮತ್ತು ಮದುವೆ
ಜೂನ್ ತಿಂಗಳಲ್ಲಿಸಿಂಹ ರಾಶಿಯವರು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಏಕೆಂದರೆ ಗುರುವು ನಿಮ್ಮ ಒಂಬತ್ತನೇ ಮನೆಯಲ್ಲಿ ಸ್ಥಾನ ಪಡೆದಿದೆ ಅಲ್ಲದೆ ಚಂದ್ರನ ಸ್ಥಾನ ಕೂಡ ಶುಭ ಫಲಿತಾಂಶ ನೀಡಲಿದೆ. ಈಗಾಗಲೇ ಪ್ರೀತಿಯಲ್ಲಿರುವವರಿಗೆ ಈ ತಿಂಗಳು ಅನುಕೂಲಕರವಾಗಿರುತ್ತದೆ. ನಿಮ್ಮ ವಿವಾಹಕ್ಕೆ ಒಪ್ಪಿಗೆ ದೊರೆಯಲಿದೆ.
ಕುಟುಂಬ ಭವಿಷ್ಯ
ಗುರು 9, ಸೂರ್ಯ 11ನೇ ಮನೆಯಲ್ಲಿರುವುದರಿಂದ ಕುಟುಂಬ ಜೀವನದಲ್ಲಿ ಈ ತಿಂಗಳು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ಖುಷಿಯಾಗಿ ಸಮಯ ಕಳೆಯಲು ಸಾಧ್ಯವಾಗುವುದು. 9ನೇ ಮನೆಯಲ್ಲಿ ಗುರುವಿನ ಅನುಕೂಲಕರ ಸ್ಥಾನದಿಂದಾಗಿ, ಕುಟುಂಬದಲ್ಲಿ ಕೆಲವು ಮಂಗಳಕರ ಕಾರ್ಯಗಳು ನಡೆಯಬಹುದು. ಇದರಿಂದ ಮನೆಯ ವಾತಾವರಣ ಖುಷಿಯಾಗಿರಲಿದೆ.
ಪರಿಹಾರ
* ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
* ಶನಿವಾರ ಶನಿದೇವಾಲಯಕ್ಕೆ ಭೇಟಿಕೊಟ್ಟು ಶನಿಗೆ ಎಳ್ಳೆಣ್ಣೆ ಅರ್ಪಿಸಿ.



Click it and Unblock the Notifications