Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್ ತಿಂಗಳು ಮೇಷ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ
ಗ್ರಹಗತಿಗಳ ಆಧಾರದ ಮೇಲೆ ಜೂನ್ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಮೇಷ ರಾಶಿಯವರಿಗೆ ಜೂನ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ಆರೋಗ್ಯ ಭವಿಷ್ಯದ ಬಗ್ಗೆ ಹೇಳಲಾಗಿದೆ ನೋಡಿ:
ಮೇಷ ರಾಶಿಯವರ ಜೂನ್ ತಿಂಗಳ ಭವಿಷ್ಯ ನೋಡುವುದಾದರೆ ಮೇಷ ರಾಶಿಯವರಿಗೆ ಈ ತಿಂಗಳು ಮಧ್ಯಮವಾಗಿರುತ್ತದೆ. ಏಕೆಂದರೆ ಮೇಷ ರಾಶಿಯಲ್ಲಿ ಗುರು ಮತ್ತು ರಾಹು-ಕೇತು ಏಳನೇ ಮನೆಯಲ್ಲಿ ಕುಳಿತಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮಸ್ಯೆ ಉಂಟಾಗಬಹುದು. ಆದರೆ ಹನ್ನೊಂದನೇ ಮನೆಯಲ್ಲಿ ಶನಿಯ ಸ್ಥಾನವು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಒಳ್ಳೆಯದಿದೆ. ಆದರೆ ಈ ಅವಧಿಯಲ್ಲಿ ಶನಿಯು ನಿಮಗೆ ಒದಗಿಸುವ ಯಾವುದೇ ಫಲಿತಾಂಶಗಳು ತುಂಬಾ ನಿಧಾನವಾಗಬಹುದು ಆದರೆ ಸ್ಥಿರವಾಗಿರುತ್ತವೆ.

ಅಲ್ಲದೆ, ಜೂನ್ ದ್ವಿತೀಯಾರ್ಧದಿಂದ ಜೂನ್ 17, 2023 ರಂದು, ಶನಿಯು ವಕ್ರೀಯವಾದಾಗ ಶನಿ ನಿಮಗೆ ನೀಡುವ ಅದೃಷ್ಟದ ಬಲ ಸ್ವಲ್ಪ ನಿಧಾನವಾಗುವುದು. ಜೂನ್ 15 ರಂದು ಸೂರ್ಯ ಸಂಕ್ರಮಣವಾದಾಗ ಸೂರ್ಯ ನಿಮ್ಮ ರಾಶಿಯ ಮೂರನೇ ಮನೆಯಲ್ಲಿ ಇರಲಿದೆ. ಸೂರ್ಯನು 3ನೇ ಮನೆಯಲ್ಲಿ ಇರುವಾಗ ನಿಮ್ಮ ಬುದ್ಧಿವಂತಿಕೆ ಮತ್ತಷ್ಟು ಹೆಚ್ಚಲಿದೆ. ನೀವು ಹೊಸ ವಿಷಯವನ್ನು ಕಲಿಯುತ್ತೀರಿ. ತಿಂಗಳ ದ್ವಿತೀಯಾರ್ಧದಲ್ಲಿ ಅಂದರೆ ಜೂನ್ 15 ರ ನಂತರ ನಿಮ್ಮ ಹೆಚ್ಚಿನ ಸಮಯವನ್ನು ಪ್ರಯಾಣದಲ್ಲಿ ಕಳೆಯಬಹುದು. ಶುಕ್ರನು ನಿಮ್ಮ 4ನೇ ಮನೆಯಲ್ಲಿ ಇರುವುದರಿಂದ ಆರ್ಥಿಕವಾಗಿ ಚೆನ್ನಾಗಿರಲಿದೆ. ಈ ಸಮಯದಲ್ಲಿ ನೀವು ಮನೆ ಖರೀದಿಯಲ್ಲಿ ಹೂಡಿಕೆ ಮಾಡಬಹುದು. ಈ ಸಮಯದಲ್ಲಿ ನೀವು ಸೌಕರ್ಯಗಳತ್ತ ಅಧಿಕ ಗಮನಹರಿಸುತ್ತೀರಿ.
ಗುರು ನಿಮ್ಮ ಮೊದಲ ಮನೆಯಲ್ಲಿದೆ, ಈ ಅವಧಿಯಲ್ಲಿ ಆತಂಕ ಮತ್ತು ಅಭದ್ರತೆ ಭಾವನೆ ಉಂಟಾಗಬಹುದು ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ ಗುರುವಿನ ಜೊತೆ ರಾಹು ಕೂಡ ಇರುವುದರಿಂದ ರಾಹು ಗುರುವಿನ ಪ್ರಭಾವ ಸಂಪೂರ್ಣವಾಗಿ ಬೀರಲು ಬಿಡುವುದಿಲ್ಲ. ಈ ಸಮಯದಲ್ಲಿ ಧಾರ್ಮಿಕ ಪ್ರಯಾಣಗಳನ್ನು ಮಾಡಬಹುದು. ಈ ಸಮಯದಲ್ಲಿ ನೀವು ಕೆಲಸದ ಸ್ಥಳದಿಂದ ಬೋನಸ್ ಇತ್ಯಾದಿಗಳ ಮೂಲಕ ಹಣದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಮೇಷ ರಾಶಿಯವಿರಿಗೆ ಜೂನ್ ದ್ವಿತೀಯಾರ್ಧವು ಉತ್ತಮವಾಗಿರುತ್ತದೆ. ಶನಿಯು ನಿಮ್ಮ ಹನ್ನೊಂದನೇ ಮನೆಯಲ್ಲಿ ಸ್ಥಿತನಾಗಿದ್ದು ಈ ರಾಶಿಯವರಿಗೆ ಸಮೃದ್ಧಿಯನ್ನು ನೀಡುತ್ತದೆ.
ಆರೋಗ್ಯ ಭವಿಷ್ಯ
ಈ ಅವಧಿಯಲ್ಲಿ ನಿಮಗೆ ತಲೆನೋವು ಮತ್ತು ಜೀರ್ಣಕ್ರಿಯೆಯ ತೊಂದರೆಗಳು ಉಂಟಾಗಬಹುದು ಎಂದು ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಅಲ್ಲದೆ, ಈ ರಾಶಿಯವರು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಪರಿಕರಗಳನ್ನು ನಿರ್ವಹಿಸುವಾಗ ಜಾಗರೂಕರಾಗಿರಬೇಕು.
ಪ್ರೀತಿ ಹಾಗೂ ವೈವಾಹಿಕ ಜೀವನ ಭವಿಷ್ಯ
ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ ರಾಹು ನಿಮ್ಮ ಮೊದಲ ಮನೆಯಲ್ಲಿ ಗುರುವಿನ ಜೊತೆ ಕುಳಿತಿದ್ದಾನೆ, ನಿಮ್ಮ ಅಹಂಕಾರ ಸ್ವಭಾವವು ಸಂಸಾರದಲ್ಲಿ ಸಮಸ್ಯೆ ಉಂಟು ಮಾಡಬಹುದು. ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು, ನೀವು ಹೊಂದಿಕೊಂಡು ಹೋಗಲು ಪ್ರಯತ್ನಿಸಿದರೆ ಒಳ್ಳೆಯದು.
ವೃತ್ತಿ ಭವಿಷ್ಯ
ಗುರುವು ನಿಮ್ಮ ಮೊದಲ ಮನೆಯಲ್ಲಿ ರಾಹು ಜೊತೆ ಕುಳಿತಿರುವುದರಿಂದ ಮೇಷ ರಾಶಿಯ ರಾಶಿಯವರಿಗೆ ಈ ತಿಂಗಳು ಸರಾಸರಿಯಾಗಿರುತ್ತದೆ. ಈ ಕಾರಣದಿಂದಾಗಿ ಕೆಲಸದ ಹೊರೆ ಅಧಿಕವಿರಬಹುದು. ಗುರುವು ನಿಮ್ಮ ಐದನೇ ಮನೆಯನ್ನು ನೋಡುತ್ತಿರುವುದರಿಂದ ವೃತ್ತಿಜೀವನದಲ್ಲಿ ನೀವು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳಿಂದ ಹೊರಬರಲು ಸಹಾಯಮಾಡುತ್ತದೆ. ನೀವು ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು ಈ ಗ್ರಹದ ದಶಾ ವೃತ್ತಿಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ಸ್ವಂತ ವ್ಯಾಪಾರ ಹೊಂದಿರುವ ಜನರಿಗೆ, ಜೂನ್ ಮೊದಲ ಭಾಗ ಅಂದರೆ ಮೊದಲ ಹದಿನೈದು ದಿನಗಳು ಸರಾಸರಿ ಎಂದು ನಿರೀಕ್ಷಿಸಲಾಗಿದೆ. ಆದರೆ 15 ದಿನಗಳ ನಂತರ, ನೀವು ವ್ಯವಹಾರದಲ್ಲಿ ಸುಧಾರಣೆಯನ್ನು ಕಾಣುತ್ತೀರಿ, ಜೊತೆಗೆ ಉತ್ತಮ ಲಾಭದ ಸಾಧ್ಯತೆಯಿದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.
ಆರ್ಥಿಕ ಭವಿಷ್ಯ
ಈ ಅವಧಿ ಆರ್ಥಿಕವಾಗಿ ಒಳ್ಳೆಯದಿದೆ. ಶುಕ್ರನ ಸ್ಥಾನದಿಂದಾಗಿ, ಈ ತಿಂಗಳಲ್ಲಿ ನೀವು ಲಾಭವನ್ನು ಪಡೆಯುತ್ತೀರಿ, ನಿಮ್ಮ ಆದಾಯ ಹೆಚ್ಚಾಗಲಿದೆ. ಈ ಸಮಯದಲ್ಲಿ, ನಿಮ್ಮ ಹೆಚ್ಚಿನ ಹಣವನ್ನು ಕುಟುಂಬಕ್ಕಾಗಿ ಖರ್ಚು ಮಾಡುವ ಸಾಧ್ಯತೆಯಿದೆ. ಅಲ್ಲದೆ ಶನಿಯ ಬಲವಿರುವುದರಿಂದ ಈ ಸಮಯದಲ್ಲಿ ನಿಮಗೆ ಹಣದ ಕೊರತೆಯಾಗಲೀ ಉಂಟಾಗುವುದಿಲ್ಲ. ಈ ಅವಧಿಯಲ್ಲಿ ನೀವು ಗಳಿಸುವ ಯಾವುದೇ ಹಣವನ್ನು ನೀವು ಐಷಾರಾಮಿ ವಸ್ತು ಖರೀದಿಸಲು ಬಳಸಬಹುದು. ಪ್ರಯಾಣದ ಸಮಯದಲ್ಲಿ ಹಣದ ಬಗ್ಗೆ ಜಾಗ್ರತೆ.
ಪ್ರೀತಿ- ವೈವಾಹಿಕ ಜೀವನ ಭವಿಷ್ಯ
ಮೇಷ ರಾಶಿಯ ಪ್ರೇಮಿಗಳಿಗೆ ಜೂನ್ ತಿಂಗಳು ಸರಾಸರಿಯಾಗಿರಲಿದೆ. ಈ ಸಮಯದಲ್ಲಿ ಸಂಗಾತಿ ಜೊತೆ ಕೆಲ ಮನಸ್ತಾಪ ಬರಬಹುದು, ಆದರೆ ನೀವು ಎಲ್ಲವನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿ. ಈ ಸಮಯದಲ್ಲಿ ವಿವಾಹಕ್ಕೆ ಮುಂದಾಗಬೇಡಿ, ಸ್ವಲ್ಪ ಮುಂದೂಡಿದರೆ ಒಳ್ಳೆಯದು.
ವೈವಾಹಿಕ ಜೀವನದಲ್ಲೊ ಸಂಗಾತಿಯೊಂದಿಗೆ ಸಾಮರಸ್ಯದ ಕೊರತೆ ಉಂಟಾಗಬಹುದು. ಈ ಸಂದರ್ಭಗಳನ್ನು ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
ಈ ಅವಧಿಯಲ್ಲಿ ಗ್ರಹಗಳ ಸ್ಥಾನದಿಂದಾಗಿ ಕುಟುಂಬ ಜೀವನದಲ್ಲಿ ಏರಳಿತ ಉಂಟಾಗಬಹುದು. ಸಂತೋಷದ ಕುಟುಂಬ ವಾತಾವರಣವನ್ನು ಕಾಪಾಡಿಕೊಳ್ಳಲು ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಕುಟುಂಬದಲ್ಲಿ ಉದ್ಭವಿಸುವ ಯಾವುದೇ ಭಿನ್ನಾಭಿಪ್ರಾವನ್ನು ಮಾತನಾಡುವ ಮೂಲಕ ಪರಿಹರಿಸಲು ಪ್ರಯತ್ನಿಸಿ
ಪರಿಹಾರ
ಮಂಗಳವಾರ ರಾಹು/ಕೇತುಗಳಿಗೆ ಹವನ ಮಾಡಿ.
ಶನಿವಾರದಂದು ಶನಿ ಗ್ರಹಕ್ಕೆ ಯಜ್ಞ-ಹವನ ಮಾಡಿ.
ಶನಿವಾರದಂದು 17 ಬಾರಿ "ಓಂ ಮಂಡ್ಯಾಯ ನಮಃ" ಎಂದು ಜಪಿಸಿ.



Click it and Unblock the Notifications