Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಜುಲೈ ತಿಂಗಳು ಸಿಂಹ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ
ವೈದಿಕ ಶಾಸ್ತ್ರದ ಪ್ರಕಾರ ಸಿಂಹ ರಾಶಿಯವರಿಗೆ ಜುಲೈ ತಿಂಗಳು ಹೇಗಿರಲಿದೆ? ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ, ಆರೋಗ್ಯ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಜುಲೈ 2023 ರ ಮಾಸಿಕ ಜಾತಕದ ಪ್ರಕಾರ ಸಿಂಹ ರಾಶಿಯವರ ಭವಿಷ್ಯ ನೋಡುವುದಾದರೆ ಈ ತಿಂಗಳು ಅನುಕೂಲಕರವಾಗಿದೆ. ಸಿಂಹ ರಾಶಿಯವರಲ್ಲಿ ಗುರು 9ನೇ ಮನೆಯಲ್ಲಿದ್ದು ಶನಿಯು 7ನೇ ಮನೆಯಲ್ಲಿದೆ. ಶನಿಯ ಪ್ರಭಾವದಿಂದಾಗಿ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಆದರೆ ಗುರುವಿನ ಪ್ರಭಾವದಿಮದ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗುವುದು.
ಶನಿಯು ನಿಮ್ಮ ರಾಶಿಯಲ್ಲಿ ಪ್ರತಿಕೂಲ ಸ್ಥಾನದಿಂದಾಗಿ ನೀವು ಕೆಲವು ಕಷ್ಟಕರ ಫಲಿತಾಂಶಗಳನ್ನು ಎದುರಿಸಬೇಕಾಗಬಹುದು, ಆದರೆ ಗುರುವಿನ ಸ್ಥಾನ ಬಲವಾಗಿರುವುದರಿಂದ ದೊಡ್ಡ ಸಮಸ್ಯೆ ಇರಲ್ಲ. ಆರ್ಥಿಕವಾಗಿ ಈ ಅವಧಿ ಚೆನ್ನಾಗಿರಲಿದೆ. ಒಂಬತ್ತನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯಿಂದಾಗಿ, ನೀವು ವೃತ್ತಿ ಕ್ಷೇತ್ರದಲ್ಲಿ ಬಡ್ತಿ ಪಡೆಯುವ ಸಾಧ್ಯತೆಯಿದೆ.
ವೃತ್ತಿ ಜೀವನ
ಸಿಂಹರಾಶಿಯವರಿಗೆ ವೃತ್ತಿ ಜೀವನದ ದೃಷ್ಟಿಯಿಂದ ಜುಲೈ ತಿಂಗಳು ಅನುಕೂಲಕರವಾಗಿದೆ. ವೃತ್ತಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಗುರು 9ನೇ ಮನೆಯಲ್ಲಿದೆ, ಅಲ್ಲದೆ ಮಂಗಳನ ಮಂಗಳಕರ ಅಂಶದಿಂದಾಗಿ ಬಡ್ತಿ ಪಡೆಯುತ್ತೀರಿ. ಆದರೆ ಶನಿ 7ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಹಿರಿಯರು ಮತ್ತು ಸಹೋದ್ಯೋಗಿಗಳಿಂದ ಸವಾಲುಗಳನ್ನು ಎದುರಿಸಬಹುದು. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸರಿಯಾಗಿ ಪ್ಲ್ಯಾನ್ ಮಾಡಬೇಕಾಗಿದೆ.
ವ್ಯಾಪಾರಸ್ಥರಿಗೆ ಜುಲೈ ತಿಂಗಳು ಲಾಭದಾಯಕವಾಗಿರಲಿದೆ. ಗುರುಗ್ರಹದ ಸ್ಥಾನವು ಅನುಕೂಲಕರವಾದ ಸ್ಥಾನದಲ್ಲಿದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ವ್ಯಾಪಾರವು ನಿಮಗೆ ಉತ್ತಮ ಲಾಭ ನೀಡುವ ಸಾಧ್ಯತೆ ಇದೆ.
ಆರ್ಥಿಕ ಜೀವನ
ಜುಲೈ 2023 ರ ಮಾಸಿಕ ಭವಿಷ್ಯದ ಪ್ರಕಾರ, ಗುರುವು ಒಂಬತ್ತನೇ ಮನೆಯಲ್ಲಿರುವುದರಿಂದ ಹಣಕಾಸಿನ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಇದಲ್ಲದೇ ತಿಂಗಳ ಮಧ್ಯದಲ್ಲಿ ಎರಡನೇ ಮನೆಯ ಅಧಿಪತಿಯಾದ ಬುಧನು ಹನ್ನೆರಡನೇ ಮನೆಯಲ್ಲಿ ಸ್ಥಿತನಿರುವ ಕಾರಣ ನಿಮಗೆ ಲಾಭ ದೊರೆಯುತ್ತದೆ, ಆದರೆ ಖರ್ಚುಗಳು ಕೂಡ ಅಧಿಕವಿರಲಿದೆ. ಒಂಬತ್ತನೇ ಮನೆಯಲ್ಲಿ ಗುರುವಿನ ಅನುಕೂಲಕರ ಸ್ಥಾನದಿಂದಾಗಿ ಹಣಗಳಿಸಲು ಸಾಧ್ಯವಾಗುವುದು, ಆದರೆ ಮಿತಿಮೀರಿ ಖರ್ಚು ಮಾಡಲು ಹೋಗಬೇಡಿ. ಆದರೆ ಶನಿಯ ಪ್ರಭಾವವು ಕೆಲವು ಆತುರದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದು, ಈ ಬಗ್ಗೆ ಜಾಗ್ರತೆವಹಿಸಿ. ಸಂಗಾತಿಗೆ ಆರೋಗ್ಯ ಸಮಸ್ಯೆಯ ಕಾರಣದಿಂದ ಖರ್ಚುಗಳು ಹೆಚ್ಚಿರಬಹುದು.
ಈ ತಿಂಗಳಿನಲ್ಲಿ ಹೊಸ ಪಾಲುದಾರಿಕೆ, ಹೊಸ ವ್ಯವಹಾರ ಮತ್ತು ಹೊಸ ಯೋಜನೆಗಳಿಗೆ ಕೈ ಹಾಕಲು ಹೋಗದಿರುವುದು ಸೂಕ್ತ.
ಆರೋಗ್ಯ ಜೀವನ
ಜುಲೈ 2023 ರ ಮಾಸಿಕ ಭವಿಷ್ಯದ ಪ್ರಕಾರ, ಈ ತಿಂಗಳು ನಿಮಗೆ ಆರೋಗ್ಯದ ದೃಷ್ಟಿಯಿಂದ ಆರೋಗ್ಯಕರವಾಗಿರುತ್ತದೆ, ಏಕೆಂದರೆ ಗುರು ಒಂಬತ್ತನೇ ಮನೆಯಲ್ಲಿದ್ದು ಮಂಗಳನ ಮಂಗಳಕರ ಪ್ರಭಾವ ಕೂಡ ಇರುವುದರಿಂದ ಗುರುವಿನ ಅನುಕೂಲಕರ ಸ್ಥಾನದಿಂದಾಗಿ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗುವುದು.
ಪ್ರೀತಿ, ಮದುವೆ, ಕೌಟುಂಬಿಕ ಜೀವನ
ಜುಲೈ 2023 ರ ಮಾಸಿಕ ಭವಿಷ್ಯದ ಪ್ರಕಾರ, ಒಂಬತ್ತನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು ಉತ್ತಮ ಫಲಿತಾಂಶ ನೀಡಲಿದೆ,ಪ್ರೇಮಿಗಳು ತಮ್ಮ ವಿವಾಹಕ್ಕೆ ಮನೆಯವರಿಂದ ಅನುಮತಿ ಪಡೆಯಲು ಈ ಅವಧಿ ಅನುಕೂಲಕರವಾಗಿದೆ. ಶನಿಯ ಪ್ರಭಾವದಿಂದಾಗಿ ಕುಟುಂಬ ಜೀವನದಲ್ಲಿ ಗೊಂದಲ ಉಂಟಾಗಬಹುದು. ಸಂಬಂಧದಲ್ಲಿ ಅನೇಕ ಅಡೆತಡೆಗಳು ಉಂಟಾಗಬಹುದು. ಕುಟುಂಬ ಸದಸ್ಯರೊಂದಿಗೆ ಅನಗತ್ಯ ಅಹಂಕಾರದ ಸಮಸ್ಯೆಗಳು ಉಂಟಾಗಬಹುದು, ಇದರಿಂದಾಗಿ ನೀವು ಅಸಮಾಧಾನ ಮತ್ತು ಅತೃಪ್ತಿ ಅನುಭವಿಸಬಹುದು. ಆದರೆ ತಿಂಗಳ ಕೊನೆಯಲ್ಲಿ ಎಲ್ಲಾ ತಿಳಿಯಾಗಿ ಮನೆಯಲ್ಲಿ ಸಂತೋಷ ಇರಲಿದೆ.
ಪರಿಹಾರ
ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಆರ್ಘ್ಯ ಅರ್ಪಿಸಿ
ಪ್ರತಿದಿನ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.



Click it and Unblock the Notifications