Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜುಲೈ 23ರ ದಿನ ಭವಿಷ್ಯ: ಭಾನುವಾರ 12 ರಾಶಿಗಳಿಗೆ ಹೇಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 23 ಭಾನುವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ:
ದಿನಾಂಕ: ಜುಲೈ 23
ತಿಥಿ: ಬೆಳಗ್ಗೆ 11:44ರವರೆಗೆ ಪಂಚಮಿ, ಷಷ್ಠಿ
ನಕ್ಷತ್ರ: ಉತ್ತರ ಫಲ್ಗುಣಿ
ಪಕ್ಷ: ಶುಕ್ಲ ಪಕ ಪಕ್ಷ
ರಾಹುಕಾಲ: ಸಂಜೆ 05:21ರಿಂದ 06:59ರವರೆಗೆ
ಮೇಷ ರಾಶಿ
ಕೆಲವು ಸಂದರ್ಭಗಳಲ್ಲಿ ಇಂದು ನಿಮಗೆ ಉತ್ತಮವಾಗಿರಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರವಾಗುವುದರಿಂದ ದೊಡ್ಡ ಚಿಂತೆ ದೂರಾಗಲಿದೆ. ಉದ್ಯಮಿಗಳಿಗೆ ಹೊಸ ವ್ಯವಹಾರ ಪ್ರಸ್ತಾಪವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ವ್ಯಾಪಾರಸ್ಥರಿಗೆ ಒಳ್ಳೆಯ ಆರ್ಥಿಕ ಲಾಭವಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ

ವೃಷಭ ರಾಶಿ
ಈ ದಿನ ನೀವು ತುಂಬಾ ರಿಲ್ಯಾಕ್ಸ್ ಆಗಿರುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಇಂದು ನಿಮಗೆ ಕೆಲವು ಪ್ರಮುಖ ಮತ್ತು ಜವಾಬ್ದಾರಿಯುತ ಕೆಲಸವನ್ನು ವಹಿಸಿಕೊಡಬಹುದು, ಅದನ್ನು ತಪ್ಪಾಗದಂತೆ ಎಚ್ಚರಿಕೆಯಿಂದ ಮಾಡಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯ ಸುಧಾರಿಸಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ
ಮಿಥುನ ರಾಶಿ
ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ. ಮನೆಯಲ್ಲಿ ಹಣದ ಬಗ್ಗೆ ಚರ್ಚೆಯಾಗಬಹುದು. ನೀವು ತುಂಬಾ ಸಮತೋಲಿತ ರೀತಿಯಲ್ಲಿ ವರ್ತಿಸಿದರೆ ಒಳ್ಳೆಯದು, ಕೆಲಸದ ಬಗ್ಗೆ ಹೇಳುವುದಾದರೆ ಈ ದಿನ ತುಂಬಾ ಕಾರ್ಯನಿರತರಾಗಿರುತ್ತೀರಿ. ಕೆಲಸದ ಹೊರೆ ಹೆಚ್ಚಿರಲಿದೆ.
ಅದೃಷ್ಟದ ಬಣ್ಣ: ಗಾಢ ಹಳದಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 4:05 ರಿಂದ ರಾತ್ರಿ 9 ರವರೆಗೆ
ಕರ್ಕ ರಾಶಿ
ನೀವು ಅವಿವಾಹಿತರಾಗಿದ್ದರೆ ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಸಬಹುದು. ಹಣದ ವಿಷಯದಲ್ಲಿ ದಿನವು ಸರಾಸರಿಯಾಗಲಿದೆ. ಯೋಚನೆಯಿಲ್ಲದೆ ಏನನ್ನೂ ಖರ್ಚು ಮಾಡಬೇಡಿ. ಉದ್ಯೋಗಸ್ಥರು ಪ್ರಗತಿಯನ್ನು ಪಡೆಯಲು ಬಯಸಿದರೆ, ನೀವು ಕಷ್ಟಪಟ್ಟು ಕೆಲಸ ಮಾಡಲು ಸಲಹೆ ನೀಡಲಾಗಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 5:45 ರಿಂದ 10:25 ರವರೆಗೆ
ಸಿಂಹ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ. ಸಂಗಾತಿಯೊಂದಿಗೆ ಸಂಬಂಧ ಚೆನ್ನಾಗಿರಲಿದೆ. ಕೆಲಸದ ಬಗ್ಗೆ ಹೇಳುವುದಾದರೆ ಈ ದಿನ ಉತ್ತಮವಾಗಿದೆ. ಈ ದಿನ ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ
ಕನ್ಯಾ ರಾಶಿ
ಈ ದಿನ ನಿಮಗೆ ತುಂಬಾ ಚೆನ್ನಾಗಿದೆ, ಈ ದಿನ ನಿಮ್ಮ ಪ್ರಮುಖ ಸಮಸ್ಯೆ ಕೊನೆಯಾಗುವುದು. ಆರ್ಥಿಕ ಸ್ಥಿತಿ ಈ ದಿನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಗೆ ಅನಾರೋಗ್ಯ ಸಮಸ್ಯೆವಿದ್ದರೆ ಈ ದಿನ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಈ ದಿನ ನಿಮ್ಮವವರಿಗಾಗಿ ಸಾಕಷ್ಟು ಸಮಯ ಕೊಡಲು ಸಾಧ್ಯವಾಗುವುದು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಮಧ್ಯಾಹ್ನ 2:15 ರಿಂದ ರಾತ್ರಿ 8:10 ರವರೆಗೆ
ತುಲಾ ರಾಶಿ
ಈ ದಿನ ನಿಮ್ಮ ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ, ಈ ದಿನ ಖರ್ಚು ಕಡಿಮೆ ಇರಲಿದೆ. ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 6 ರಿಂದ 8:15 ರವರೆಗೆ
ವೃಶ್ಚಿಕ ರಾಶಿ
ಇಂದು ನಿಮ್ಮ ಮನಸ್ಸು ತುಂಬಾ ಧನಾತ್ಮಕವಾಗಿರುತ್ತದೆ. ಈ ದಿನ ನಿಮ್ಮ ಸ್ಥಗಿತಗೊಂಡ ಯಾವುದೇ ಕೆಲಸವನ್ನು ಪೂರ್ಣಗೊಳಿಸಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ
ಧನು ರಾಶಿ
ಈ ದಿನ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ನೀವು ತಕ್ಷಣ ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಉದ್ಯೋಗವಿರಲಿ, ವ್ಯಾಪಾರವಿರಲಿ, ಈ ದಿನ ತುಂಬಾ ಎಚ್ಚರಿಕೆವಹಿಸಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 38
ಅದೃಷ್ಟದ ಸಮಯ: ಬೆಳಿಗ್ಗೆ 7:55 ರಿಂದ 10:30 ರವರೆಗೆ
ಮಕರ ರಾಶಿ
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ದಿನ ಸವಾಲಿನ ದಿನವಾಗಿರಲಿದೆ. ನೀವು ಕೋಪ ಮತ್ತು ಆತುರವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಗಾಢ ಗುಲಾಬಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:30 ರವರೆಗೆ
ಕುಂಭ ರಾಶಿ
ನೀವು ಕೆಲವು ದಿನಗಳಿಂದ ನಿಮ್ಮ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡು ಬರಲಿದೆ. ಆ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 7 ರವರೆಗೆ
ಮೀನ ರಾಶಿ
ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು. ಸಂಗಾತಿಯ ವರ್ತನೆ ನಿಮಗೆ ದುಃಖ ತರಬಹುದು ತಾಳ್ಮೆಯಿಂದ ಮಾತನಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅನಗತ್ಯ ವಿಷಯಗಳಿಗೆ ವ್ಯರ್ಥ ಮಾಡುವುದನ್ನು ತಪ್ಪಿಸಿ. ಕೆಲಸದ ಹೊರೆ ಹೆಚ್ಚಾಗಿರಲಿದೆ, ನಿಮ್ಮ ಆರೋಗ್ಯದ ಬಗ್ಗೆ ಕೂಡ ಕಾಳಜಿವಹಿಸಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ



Click it and Unblock the Notifications
