Latest Updates
-
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ!
ಸಂಖ್ಯಾಶಾಸ್ತ್ರ ಪ್ರಕಾರ ಜುಲೈ 2023ರ ಮಾಸಿಕ ಭವಿಷ್ಯ
ನಾವಿಲ್ಲಿ ಸಂಖ್ಯಾಶಾಸ್ತ್ರ ಪ್ರಕಾರ ಜುಲೈ ತಿಂಗಳು ಹೇಗಿರಲಿದೆ ಎಂದು ಹೇಳಲಾಗಿದೆ. ಸಂಖ್ಯಾ ಶಾಸ್ತ್ರದಲ್ಲಿ 1 ರಿಂದ 9 ರವರೆಗೆ ಸಂಖ್ಯೆಗಳಿದೆ. ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿ ಸಂಖ್ಯೆ ತಿಳಿಯಲು ನಿಮ್ಮ ಜನ್ಮ ದಿನಾಂಕವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 11 ಆಗಿದ್ದರೆ 1+1 = 2 ಈ ರೀತಿ ಲೆಕ್ಕ ಮಾಡಬಹುದು. ಹಾಗಾದ್ರೆ ಜುಲೈ ಮಾಸಿಕ ಸಂಖ್ಯಾ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.
ಸಂಖ್ಯೆ 1 (ಜನ್ಮ ದಿನಾಂಕ 1,10, 19, 28)
ಜುಲೈ ತಿಂಗಳಲ್ಲಿ ಸಂಖ್ಯೆ 1ರವರಿಗೆ ಮಿಶ್ರ ಫ. ನಿಮ್ಮ ಅಹಂಕಾರದ ವರ್ತನೆ ಹೆಚ್ಚು ಹಾನಿಯುಂಟು ಮಾಡುವುದು, ಆದ್ದರಿಂದ ಜಾಗರೂಕರಾಗಿರಿ. ನೀವು ಮನೆ ಖರೀದಿಸಲು ಯೋಜಿಸುತ್ತಿದ್ದರೆ ಈ ತಿಂಗಳಿನಲ್ಲಿ ಯಶಸ್ವಿಯಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದರೆ ನೀವು ಯಶಸ್ಸನ್ನು ಪಡೆಯಬಹುದು. ಈ ಇಡೀ ತಿಂಗಳು ನಿಮಗೆ ಕಠಿಣ ಪರಿಶ್ರಮದಿಂದ ತುಂಬಿರಲಿದೆ.
ಪರಿಹಾರ- ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.

ಸಂಖ್ಯೆ 2 (ಜನ್ಮ ಸಂಖ್ಯೆ 2, 11, 20, 29)
ಈ ತಿಂಗಳು ನಾನಾ ಆಲೋಚನೆಗಳು ನಿಮ್ಮ ತಲೆಯಲ್ಲಿ ತುಂಬಿರುತ್ತದೆ. ಒಂದೇ ಸಮಯದಲ್ಲಿ ಅನೇಕ ಕೆಲಸವನ್ನು ಮಾಡುತ್ತೀರಿ. ನೀವು ಕಾರ್ಯಕ್ಷೇತ್ರದಲ್ಲಿ ಹೊಸತನ್ನು ಟ್ರೈ ಮಾಡಲು ಈ ಸಮಯ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಈ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
ಪರಿಹಾರ - ಚಂದ್ರನಿಗೆ ಆರ್ಘ್ಯ ಅರ್ಪಿಸಿ.
ಸಂಖ್ಯೆ 3 (ಜನ್ಮ ಸಂಖ್ಯೆ 3, 12, 21, 30)
ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 3 ಆಗಿದ್ದರೆ ದುಂದುಗಾರಿಕೆಯನ್ನು ತಪ್ಪಿಸುವುದು ಒಳ್ಳೆಯದು. ಈ ತಿಂಗಳು ನೀವು ಬಯಸಿದ ಪ್ರಯೋಜನ ಪಡೆಯುವಿರಿ. ಈ ತಿಂಗಳು ನಿಮ್ಮ ಆದಾಯ ಚೆನ್ನಾಗಿರುವುದರಿಂದ ಆರ್ಥಿಕ ಸ್ಥಿತಿ ಚೆನ್ನಾಗಿರಲದೆ. ಅವಾಹಿತರು ಸಂಗಾತಿಯ ಹುಡುಕಾಟದಲ್ಲಿದ್ದರೆ ಒಳ್ಳೆಯ ಜೋಡಿ ಸಿಗಲಿದೆ. ಒಟ್ಟಾರೆಯಾಗಿ ಈ ತಿಂಗಳು ನಿಮಗೆ ಉತ್ತಮವಾಗಿದೆ.
ಪರಿಹಾರ - ಪ್ರಾಣಿಗಳಿಗೆ ಆಹಾರ ಹಾಕಿ.
ಸಂಖ್ಯೆ 4 (ಜನ್ಮ ದಿನಾಂಕ 4, 13, 22, 31)
ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 4 ಆಗಿದ್ದರೆ ನೀವು ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ಜಾಗರೂಕರಾಗಿ. ಯಾರ ಜೊತೆಗೂ ಜಗಳಕ್ಕೆ ಹೋಗಬೇಡಿ, ಆದಷ್ಟು ತಾಳ್ಮೆಯಿಂದ ವರ್ತಿಸಿ. ಈ ತಿಂಗಳಿನಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ನಿಮ್ಮ ಸೌಕರ್ಯಕ್ಕಾಗಿ ಹಣವನ್ನು ಖರ್ಚು ಮಾಡುತ್ತೀರಿ. ಈ ತಿಂಗಳಿನಲ್ಲಿ ನೀವು ಉದ್ಯೋಗವನ್ನು ಬದಲಾಯಿಸುವಂತಹ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಅಲ್ಲದೆ ಕೆಲಸದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಬೇಡಿ.
ಪರಿಹಾರ- ಈ ತಿಂಗಳು ಕಪ್ಪು, ಬೂದು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ನೀವು ಧರಿಸಿರುವ ತಿಳಿ ಬಣ್ಣದ ಬಟ್ಟೆಗಳು ಸ್ವಚ್ಛ ಮತ್ತು ಪರಿಮಳಯುಕ್ತವಾಗಿರಬೇಕು. ಸುವಾಸನೆ ದ್ರವ್ಯ ಬಳಸಿ.
ಸಂಖ್ಯೆ 5 (ಜನ್ಮ ದಿನಾಂಕ 5, 14, 23)
ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 5 ಆಗಿದ್ದರೆ ಈ ತಿಂಗಳಿನಲ್ಲಿ ತುಂಬಾ ಖುಷಿಯಾಗಿರುತ್ತೀರಿ. ನೀವು ಅನಗ್ಯತವಾಗಿ ಚಿಂತೆ ಮಾಡುವ ಬದಲು ಅಂಥ ಆಲೋಚನೆಗಳಿಂದ ಹೊರಬರುವುದು ಒಳ್ಳೆಯದು. ನಿಮ್ಮ ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಫಲವನ್ನು ನೀವು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಈ ತಿಂಗಳು ಅನುಕೂಲಕರವಾಗಿದೆ.
ಪರಿಹಾರ - ನಿಮ್ಮ ಮನೆಯ ಸಮೀಪ ಹಣ್ಣಿನ ಗಿಡ ನೆಟ್ಟು ಅದನ್ನು ಆರೈಕೆ ಮಾಡಿ.
ಸಂಖ್ಯೆ 6 (ಜನ್ಮ ದಿನಾಂಕ 6, 15, 24)
ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 6 ಆಗಿದ್ದರೆ ಈ ತಿಂಗಳು ನೀವು ಎಲ್ಲಾ ಕ್ಷೇತ್ರಗಳಲ್ಲಿ ಬಹಳ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಸಾಮಾಜಿಕ ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಜನರು, ಪಾರ್ಲರ್ ಅಥವಾ ಅಂಗಡಿಗೆ ಸಂಬಂಧಿಸಿದವರು, ಕಾಸ್ಮೆಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವವರು ಈ ತಿಂಗಳಿನಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ, ನೀವು ಹಿರಿಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.
ಪರಿಹಾರ - ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸಿ.
ಸಂಖ್ಯೆ 7 (ಜನ್ಮ ದಿನಾಂಕ 7, 16, 25)
ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 7 ಆಗಿದ್ದರೆ ನೀವು ಅಧ್ಯಯನದಲ್ಲಿ ತೊಡಗಿಸಿಕೊಂಡರೆ, ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ನೀವು ದೀರ್ಘಕಾಲದಿಂದ ತೊಡಗಿಸಿಕೊಂಡಿದ್ದರೂ ಯಾವುದೇ ಪ್ರಯೋಜನವನ್ನು ಪಡೆಯದ ಅಧ್ಯಯನವನ್ನು ಬಿಡಲು ಕೈ ಬಿಡಲು ನೀವು ಯೋಚಿಸುತ್ತಿದ್ದರೆ, ಸ್ವಲ್ಪ ಸಮಯ ಕಾಯುವುದು ಒಳ್ಳೆಯದು. ನೀವು ಮನೆ ಖರೀದಿಸುವ ಆಲೋಚನೆಯಲ್ಲಿದ್ದರೆ, ನಿಮ್ಮ ಕನಸು ನನಸಾಗಬಹುದು.
ಪರಿಹಾರ - ಗಣಪತಿಯನ್ನು ಪೂಜಿಸಿ, ಗಣೇಶ ಅಥರ್ವಶೀರ್ಷವನ್ನು ನಿಯಮಿತವಾಗಿ ಪಠಿಸಿ.
ಸಂಖ್ಯೆ 8 (ಜನ್ಮ ದಿನಾಂಕ 8, 17, 26)
ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 8 ಆಗಿದ್ದರೆ ನಿಮಗೆ ಈ ತಿಂಗಳು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ, ನಿಮಗೆ ಅದೃಷ್ಟದ ಬೆಂಬಲವಿರುತ್ತದೆ. ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಆಧ್ಯಾತ್ಮದ ಕಡೆಗೆ ಆಸಕ್ತಿ ಹೆಚ್ಚಾಗಲಿದೆ. ಯಾರೊಂದಿಗೂ ವಿವಾದಕ್ಕೆ ಹೋಗಬೇಡಿ, ಗಾಡಿ ಚಲಾಯಿಸುವಾಗ ಜಾಗ್ರತೆವಹಿಸಿ.
ಪರಿಹಾರ- ಬಡವರಿಗೆ ಅಗ್ಯತ ವಸ್ತುವನ್ನು ದಾನ ಮಾಡಿ.
ಸಂಖ್ಯೆ 9 (ಜನ್ಮ ದಿನಾಂಕ 9, 18, 27)
ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ9 ಆಗಿದ್ದರೆ ಈ ತಿಂಗಳಿನಲ್ಲಿ ನಿಮ್ಮ ಹಿಂದಿನ ಜನ್ಮದ ಕರ್ಮಗಳ ಫಲವನ್ನು ನೀವು ಪಡೆಯಬಹುದು. ಲಾಭದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿಲ್ಲ. ತಪ್ಪಾಗಿ ಸಂಪಾದಿಸಿದ ಹಣವು ನಿಮ್ಮಿಂದ ದೂರ ಹೋಗಬಹುದು. ಕೆಲವು ಗುಪ್ತ ಪ್ರೀತಿ ಎಲ್ಲರ ಮುಂದೆ ಬರಬಹುದು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಮತ್ತಷ್ಟು ಶ್ರಮಹಾಕಬೇಕು.
ಪರಿಹಾರ- ಹನುಮಂತನಿಗೆ ರಾಮನ ಹೆಸರಿನ ಧ್ವಜವನ್ನು ಅರ್ಪಿಸಿ.



Click it and Unblock the Notifications