Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
July Horoscope 2023 : ಜುಲೈ ತಿಂಗಳ ಭವಿಷ್ಯ 2023: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ ನೋಡಿ
ವೈದಿಕ ಶಾಸ್ತ್ರದ ಪ್ರಕಾರ ಈ ಜುಲೈ ತಿಂಗಳು ಹೇಗಿರಲಿದೆ? ಈ ತಿಂಗಳು ಯಾರಿಗೆ ತುಂಬಾನೇ ಶುಭವಾಗಿದೆ, ಯಾವೆಲ್ಲಾ ರಾಶಿಯವರು ಈ ತಿಂಗಳು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ, ಯಾರು ಜಾಗ್ರತೆವಹಿಸಬೇಕು ಎಂಬುವುದನ್ನು ಗ್ರಹಗತಿಗಳ ಆಧಾರದ ಮೇಲೆ ಹೇಳಲಾಗುವುದು. ಈ ತಿಂಗಳು ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಜುಲೈ ತಿಂಗಳ ಆರಂಭವು ಮೇಷ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ಈ ತಿಂಗಳು ಅದೃಷ್ಟದ ಬೆಂಬಲ ನಿಮಗಿರಲಿದೆ, ಆದ್ದರಿಂದ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ. ನಿಮ್ಮ ವೈವಾಹಿಕ ಜೀವನದ ಸಾಮರಸ್ಯ ಕಾಪಾಡಲು ಗಮನಹರಿಸಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವಾಡುವ ಮಾತುಗಳ ಬಗ್ಗೆ ಎಚ್ಚರವಹಿಸಿ.
ಮೇಷ ರಾಶಿ ಸಂಪೂರ್ಣ ಭವಿಷ್ಯ
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ತಿಂಗಳು ಅಷ್ಟು ಅನುಕೂಲಕರವಲ್ಲ. ಈ ತಿಂಗಳು ನೀವು ಕುಟುಂಬ ಜೀವನದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬಹುದು. ಪ್ರೇಮಿಗಳು ತಮ್ಮ ಮದುವೆಯ ಬಗ್ಗೆ ಮನೆಯವರ ಮುಂದೆ ಪ್ರಸ್ತಾಪ ಮಾಡಲು ಈ ಸಮಯ ಅನುಕೂಲಕರವಲ್ಲ. ಆರೋಗ್ಯ ಚೆನ್ನಾಗಿರಲಿದೆ. ಈ ಸಮಯದಲ್ಲಿ ಆರ್ಥಿಕ ಕಷ್ಟಗಳು ಎದುರಾಗಬಹುದು ಆದರೆ ತಿಂಗಳ ಕೊನೆಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ.
ಮಿಥುನ ರಾಶಿ
ಜುಲೈ ತಿಂಗಳು ನಿಮಗೆ ತುಂಬಾ ಅನುಕೂಲಕರವಾಗಿರಲಿದೆ. ವ್ಯವಹಾರಸ್ಥರು ಲಾಭ ಗಳಿಸುತ್ತೀರಿ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ, ಆರೋಗ್ಯ ಕೂಡ ಉತ್ತಮವಾಗಿರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಚೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರು ಈ ಅವಧಿಯಲ್ಲಿ ಲಾಭ ಗಳಿಸುತ್ತಾರೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ತಿಂಗಳು ಮಿಶ್ರಫಲ. ನಿಮ್ಮ ಕೆಲಸದಲ್ಲಿ ತಕ್ಕ ಫಲ ಪಡೆಯಲು ಹೆಚ್ಚು ಶ್ರಮಿಸಬೇಕಾಗಿದೆ. ಆರ್ಥಿಕ ಸಮಸ್ಯೆಗಳು ಕೂಡ ಎದುರಾಗಬಹುದು.
ನಿಮ್ಮ ವೈವಾಹಿಕ ಸಂಬಂಧ ಉತ್ತಮವಾಗಿರಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ನೀವು ಯಾವುದೇ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ವ್ಯವಹಾರದ ದೃಷ್ಟಿಯಿಂದ ಈ ತಿಂಗಳು ಬಹಳ ಮುಖ್ಯವಾಗಿರುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿದೆ. ವೃತ್ತಿ ಕ್ಷೇತ್ರದಲ್ಲಿಯೂ ನೀವು ಯಶಸ್ಸನ್ನು ಪಡೆಯಬಹುದು. ಹಣಕಾಸಿನ ದೃಷ್ಟಿಯಿಂದ ಈ ಸಮಯ ಉತ್ತಮವಾಗಿದೆ. ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣುತ್ತೀರಿ, ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಆರೋಗ್ಯ ಜೀವನ ಚೆನ್ನಾಗಿರಲಿದೆ. ಒಟ್ಟಿನಲ್ಲಿ ಈ ಅವಧಿ ಚೆನ್ನಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಜುಲೈ ತಿಂಗಳು ಸರಾಸರಿಯಾಗಿರಲಿದೆ.ಆರ್ಥಿಕ ಸಮಸ್ಯೆ ಎದುರಾಗಬಹುದು, ಇದರಿಂದ ಸಾಲ ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಕುಟುಂಬದಲ್ಲಿ ಕೆಲವು ರೀತಿಯ ಗೊಂದಲಗಳಿರಬಹುದು, ಅವುಗಳನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ . ಈ ಅವಧಿಯಲ್ಲಿ ಅತ್ಯಧಿಕ ಮಾನಸಿಕ ಒತ್ತಡವಿರಬಹುದು, ಧ್ಯಾನ ಮಾಡಿ.
ತುಲಾ ರಾಶಿ
ತುಲಾ ರಾಶಿಯವರ ವೃತ್ತಿಜೀವನವು ತುಂಬಾ ನಿಧಾನಗತಿಯಲ್ಲಿ ಮುಂದುವರಿಯಲಿದೆ. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಕಷ್ಟವಾಗಬಹುದು. ನಿಮ್ಮ ಹಣಕಾಸಿನ ಸ್ಥಿತಿಯಲ್ಲೂ ಏರಿಳಿತ ಉಂಟಾಗಬಹುದು. ಕುಟುಂಬ ಜೀವನದಲ್ಲಿ ಸಮಸ್ಯೆಗಳಿರಬಹುದು. ಆರೋಗ್ಯದ ಕಡೆ ಗಮನಹರಿಸಿ. ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ
ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಮಿಶ್ರಫಲ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರಬಹುದು, ಗಂಡ-ಹೆಂಡತಿ ನಡುವೆ ಅಂತರ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ, ನೀವು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಆರ್ಥಿಕವಾಗಿ ನೋಡುವುದಾದರೆ ಈ ತಿಂಗಳು ಮಿಶ್ರ ಫಲಿತಾಂಶ. ಕೆಲವು ಹಣಕಾಸಿನ ಲಾಭಗಳ ಜೊತೆಗೆ, ನಿಮ್ಮ ವೆಚ್ಚಗಳು ಸಹ ಹೆಚ್ಚಾಗಬಹುದು. ಪೂರ್ವಿಕರ ಆಸ್ತಿಯಿಂದ ಲಾಭ ಪಡೆಯಬಹುದು. ಉದ್ಯೋಗದಲ್ಲಿ ಬದಲಾವಣೆ ಉಂಟಾಗಬಹುದು ಮತ್ತು ನೀವು ಕೆಲವು ಹೊಸ ಜವಾಬ್ದಾರಿಯನ್ನು ಪಡೆಯಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ತಿಂಗಳು ಉತ್ತಮವಾಗಿದೆ. ನೀವು ವಿದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಈ ಅವಧಿ ಫಲಪ್ರದವಾಗಿದೆ. ಆರ್ಥಿಕವಾಗಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಮಕರ ರಾಶಿ
ಈ ಸಮಯದಲ್ಲಿ ನೀವು ವೃತ್ತಿ ಕ್ಷೇತ್ರದಲ್ಲಿ ಮಿಶ್ರ ಫಲಿತಾಂಶ ಪಡೆಯಬಹುದು.ವಿದೇಶಕ್ಕೆ ಹೋಗಲು ಬಯಸಿದವರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ವಾರ ಕೆಲವು ವಿಶೇಷ ಪ್ರಯೋಜನಗಳ ಜೊತೆಗೆ, ನೀವು ಖರ್ಚುಗಳನ್ನು ಸಹ ಭರಿಸಬೇಕಾಗಬಹುದು. ಹಣದ ವಿಷಯದಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರವಹಿಸಿ. ಯಾವುದೇ ಹೊಸ ವ್ಯವಹಾರವನ್ನು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟವನ್ನು ಭರಿಸಿಬೇಕಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿದೆ. ಹಣದ ಉಳಿತಾಯ ಮಾಡಲು ಸಾದ್ಯವಾಗುವುದು. ಆರೋಗ್ಯದ ವಿಷಯದಲ್ಲಿ ಈ ತಿಂಗಳು ಸರಾಸರಿಯಾಗಿರಲಿದೆ. ಕೌಟುಂಬಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಬೇಡಿ.
ಮೀನ ರಾಶಿ
ಮೀನ ರಾಶಿಯವರು ಜುಲೈ ತಿಂಗಳಿನಲ್ಲಿ ಕೆಲ ಸಮಸ್ಯೆ ಎದುರಿಸಬೇಕಾಗಿದೆ. ನಿಮ್ಮ ಆರೋಗ್ಯ ಹದಗೆಡಬಹುದು, ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳಿರಬಹುದು. ಈ ಅವಧಿಯಲ್ಲಿ ನೀವು ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ.



Click it and Unblock the Notifications