Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಶಾಂತ ಸ್ವಭಾವದ ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ನಿಧನ: ಇವರನ್ನು ನೀವೂ ಕೂಡ ನೋಡಿರುತ್ತೀರಿ!
ನೀವು ಸಾಮಾಜಿಕ ಜಾಲತಾಣದ ಸಕ್ರಿಯರಾಗಿದ್ದರೆ ಅಲ್ಲೊಬ್ಬ ಇಂಗ್ಲೀಷ್ ಮಾತನಾಡುವ ಜಡ್ಜ್ ವಿಡಿಯೋ ನೋಡಿರಬಹುದು. ಆತ ಇಳಿ ವಯಸ್ಸಿನಲ್ಲೂ ಎಲ್ಲರ ಸಮಸ್ಯೆಗಳ ಆಲಿಸಿ ಕಾಳಜಿಯಿಂದ ತೀರ್ಪುಗಳ ನೀಡುತ್ತಿದ್ದ ಜಡ್ಜ್. ಅವರು ದೀರ್ಘಕಾಲದ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಫ್ರಾಂಕ್ ಕ್ಯಾಪ್ರಿಯೋ, ತಮ್ಮ ತೀರ್ಪು ನೀಡುವಂತಹ ವಿಧಾನದಿಂದ ಸುದ್ದಿಯಾಗುತ್ತಿದ್ದರು. ಅವರ ವಿಚಾರಣೆಯ ರೀತಿ, ವಿಚಾರಣೆ ಮಾಡುವ ವಿಧಾನ ಎಲ್ಲರಿಗೂ ಪ್ರಿಯವಾಗಿತ್ತು. ಹಾಗೆ ಬಡವರ ಬಗೆಗಿನ ಅವರ ಕಾಳಜಿ ಕೂಡ ವಿಶ್ವದೆಲ್ಲೆಡೆ ಗಮನ ಸೆಳೆದಿತ್ತು. ಶಿಕ್ಷೆ ಎಂದರೆ ಬೇರೆಯರಿಗೆ ನೋವು ನೀಡುವುದು ಅಥವಾ ಅವರಿಗೆ ಮತ್ತಷ್ಟು ಕಷ್ಟ ನೀಡುವುದಲ್ಲ ಎಂಬುದು ಅವರ ವಾದವಾಗಿತ್ತು.

ಹೀಗಾಗಿ ಅವರನ್ನು ಅತ್ಯಂತ ನಮ್ರ ಹಾಗೂ ಕರುಣೆ ಹೊಂದಿರುವ ಜಡ್ಜ್ ಎಂದು ಹೇಳಲಾಗಿತ್ತು. ಅವರು 88ನೇ ವಯಸ್ಸಿನಲ್ಲಿ ಮೃತಪಟ್ಟಿರುವುದು ಈಗ ಅವರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಅವರು ರೋಡ್ ಐಲೆಂಡ್ ವಿಶೇಷ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದ ಅವರು ಎಲ್ಲಾ ಪ್ರಕರಣಗಳನ್ನು ವಿಭಿನ್ನ ರೀತಿಯಾಗಿ ವಿಚಾರಣೆ ನಡೆಸುತ್ತಿದ್ದರು.
ತಮ್ಮ ಸಾವಿಗೆ ಕೆಲವೇ ಗಂಟೆಗಳ ಮೊದಲು ಅವರು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅವರ ಆರೋಗ್ಯ ಸುಧಾರಿಸಲು ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ. ದುರದೃಷ್ಟವಶಾತ್ ನನಗೆ ಹಿನ್ನಡೆಯಾಗಿದೆ. ನಾನು ಈಗ ಆಸ್ಪತ್ರೆಗೆ ಮರಳಿದ್ದೇನೆ ಮತ್ತು ನಾನು ಮತ್ತೆ ನಿಮ್ಮ ಬಳಿಗೆ ಬರುತ್ತಿದ್ದೇನೆ, ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದೇನೆ ಎಂದು ಆಸ್ಪತ್ರೆಯಿಂದ ವಿಡಿಯೋಯೊಂದನ್ನು ಹಂಚಿಕೊಂಡಿದ್ದರು.
ಆದರೆ ಅವರ ಕುಟುಂಬದ ಪ್ರಕಾರ ಅವರು ಕ್ಯಾನ್ಸರ್ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರು ಕೂಡ ಕೊನೆಯ ಸಂದೇಶ ನೀಡಿದ್ದಾರೆ. ಕ್ಯಾಪ್ರಿಯೊಗೆ ನವೆಂಬರ್ 2023 ರಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಮತ್ತು ಫೇಸ್‌ಬುಕ್‌ನಲ್ಲಿ ಈ ಘೋಷಣೆಯನ್ನು ಸಾರ್ವಜನಿಕಗೊಳಿಸಿತು. ಸವಾಲುಗಳ ಹೊರತಾಗಿಯೂ ಅವರು ಆರು ತಿಂಗಳ ಕಾಲ ಕಿಮೋಥರಪಿ ಮತ್ತು 5 ಹಂತದ ವಿಕಿರಣ ಚಿಕಿತ್ಸೆ ಪಡೆದಿದ್ದರು.
ಫ್ರಾಂಕ್ ಕ್ಯಾಪ್ರಿಯೊ ಸಾವಿಗೆ ಕಾರಣ
ಕ್ಯಾಪ್ರಿಯೊ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಕ್ಯಾಪ್ರಿಯೊ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನೊಂದಿಗೆ ದೀರ್ಘ ಮತ್ತು ಧೈರ್ಯಶಾಲಿ ಹೋರಾಟದ ನಂತರ 88 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಘೋಷಿಸಲಾಗಿದೆ. 2024ರಲ್ಲಿ ಅವರು ಎಲ್ಲಾ ಹಂತದ ವಿಕಿರಣ ಚಿಕಿತ್ಸೆ ಪೂರ್ಣಗೊಳಿಸಿದರು. ಆದ್ರೆ ಇತ್ತೀಚಿನ ವಾರಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಕೊನೆಯ ವಾರದಲ್ಲಿ ಅವರು ಆದ್ಪತ್ರೆಗೆ ಸೇರಬೇಕಾಯಿತು.
ಕ್ಯಾಪ್ರಿಯೊ ಅವರ ಕೊನೆಯ ಸಂಪ್ರದಾಯಗಳನ್ನು ಅವರ ನ್ಯಾಯಾಲಯದ ಕೋಣೆಯಲ್ಲೇ ಚಿತ್ರೀಕರಿಸಲಾಗಿದೆ. ಈ ಸಮಯದಲ್ಲಿ ಜಾನಪದ ಹಾಸ್ಯ, ಹಾಡುಗಳ ಒಳಗೊಂಡ ಚಿಕ್ಕ ಸ್ಮರಣಾ ಕಾರ್ಯಕ್ರಮ ನೆರವೇರಿತ್ತು.
ಫ್ರಾಂಕ್ ಕ್ಯಾಪ್ರಿಯೊ ಯಾರು?
ನವೆಂಬರ್ 24, 1936 ರಂದು ರೋಡ್ ಐಲೆಂಡ್‌ನ ಪ್ರಾವಿಡೆನ್ಸ್‌ನಲ್ಲಿ ಜನಿಸಿದ ಫ್ರಾಂಕ್ ಕ್ಯಾಪ್ರಿಯೊ ಇಟಾಲಿಯನ್-ಅಮೇರಿಕನ್ ವಲಸಿಗರ ಮಗ. ಆರಂಭಿಕ ಜೀವನದಲ್ಲಿ ಅವರು ಡಿಶ್‌ವಾಶರ್ ಮತ್ತು ಶೂ-ಶೈನರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಸೆಂಟ್ರಲ್ ಹೈಸ್ಕೂಲ್‌ನಿಂದ ಪದವಿ ಪಡೆದರು. ಅವರು ರಾಜ್ಯ ಮಟ್ಟದ ಕುಸ್ತಿ ಪಟು ಕೂಡ ಹೌದು.
ಕ್ಯಾಪ್ರಿಯೊ 1985 ರಿಂದ 2023 ರಲ್ಲಿ ನಿವೃತ್ತರಾಗುವವರೆಗೆ ಪ್ರಾವಿಡೆನ್ಸ್ ಮುನ್ಸಿಪಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ವಿಶ್ವದ ಅತ್ಯಂತ ದಯೆ ಹೊಂದಿರುವ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸದ್ಯ ಅವರು ತೀರ್ಪು ನೀಡುತ್ತಿದ್ದ ನ್ಯಾಯಾಲಯದ ಕೋಣೆಯನ್ನು ದಿ ಚೀಫ್ ಜಡ್ಜ್ ಫ್ರಾಂಕ್ ಕ್ಯಾಪ್ರಿಯೊ ಕೋರ್ಟ್‌ರೂಮ್ ಎಂದು ಮರುನಾಮಕರಣ ಮಾಡಲಾಗಿದೆ.



Click it and Unblock the Notifications











