Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸ್ಪೈಡರ್ ಮ್ಯಾನ್ ಬಟ್ಟೆ ಧರಿಸಿ ಜಾಲಿ ರೈಡ್: ಯುವ ಯೂಟ್ಯೂಬರ್ ಜೋಡಿ ಅಂದರ್..!
ಸ್ಪೈಡರ್ ಮ್ಯಾನ್ ಯಾರಿಗೆ ಗೊತ್ತಿಲ್ಲಾ ಹೇಳಿ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಸ್ಪೈಡರ್ ಮ್ಯಾನ್ ಯಾರು ಅಂತ ತಿಳಿದಿರುತ್ತಾರೆ. ಅವರು ಒಮ್ಮೆಯಾದರು ಟಿವಿಯಲ್ಲಿ ಇಲ್ಲವೆ ಮೊಬೈಲ್‌ನಲ್ಲಿ ಅದರ ಚಿತ್ರವನ್ನಾದರೂ ನೋಡಿರುತ್ತಾರೆ. ಮಕ್ಕಳಿಗಂತು ಸ್ಪೈಡರ್ ಮ್ಯಾನ್ ಅಂದರೆ ಸೂಪರ್ ಹೀರೋ ಇದ್ದಂತೆ.
ಆದ್ರೆ ನಾವಿಂದು ಹೇಳುತ್ತಿರೋದು ಸಿನಿಮಾ ಮಂದಿಯ ಸೂಪರ್ ಹೀರೋ ಸ್ಪೈಡರ್ ಮ್ಯಾನ್ ಅಲ್ಲ, ಬದಲಿಗೆ ಬೈಕ್ ಏರಿ ಜಾಲಿ ರೈಡ್ ಹೋಗಿದ್ದ ಸ್ಪೈಡರ್ ಮ್ಯಾನ್ ದಂಪತಿ ಬಗ್ಗೆ. ಹೌದು ಯುವ ಜೋಡಿಯೊಂದು ಸ್ಪೈಡರ್ ಮ್ಯಾನ್ ವೇಷ ಹಾಕಿಕೊಂಡು ಬೈಕ್ ಮೇಲೆ ಜಾಲಿ ರೈಡ್ ಹೊರಟು ಬಳಿಕ ಪೊಲೀಸರ ಅತಿಥಯಾಗಿರುವ ಘಟನೆ ನಡೆದಿದೆ.

ಬೈಕ್ ಸ್ಟಂಟ್ ಮಾಡಿ ಅವರ ಜೀವಕ್ಕೂ ಹಾಗೂ ಬೇರೆಯವರು ಜೀವಕ್ಕೂ ಹಾನಿ ಮಾಡಬೇಡಿ ಎಂದು ಪೊಲೀಸರು ಎಷ್ಟು ಜಾಗೃತೆ ಮೂಡಿಸಲು ಮುಂದಾದರು ಇಂತವರು ಕೇಳುವುದೇ ಇಲ್ಲ. ಈಗ ಇಬ್ಬರು ಯುವ ಜೋಡಿ ಸ್ಪೈಡರ್ ಮ್ಯಾನ್ ರೀತಿ ಬಟ್ಟೆ ಹಾಕಿಕೊಂಡು ಹೈವೆಯಲ್ಲಿ ಬೈಕ್ ಮೇಲೆ ಸ್ಟಂಟ್ ಮಾಡಿದ್ದಾರೆ.
ಬರಿ ಸ್ಟಂಟ್ ಮಾಡಿದಷ್ಟೇ ಅಲ್ಲ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಟ್ಟಿದ್ದಾರೆ. ದೆಹಲಿಯ ಮುಖ್ಯರಸ್ತೆಯಲ್ಲಿ ಇಬ್ಬರು ಯೂಟ್ಯೂಬರ್ ಜೋಡಿ ಈ ಕೃತ್ಯ ಎಸಗಿದ್ದರು. ಜನನಿಬಿಡ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುವಾಗಲೇ ಬೈಕ್ ಮೇಲೆ ಸ್ಟಂಟ್ ಮಾಡಿದ್ದರು, ಎರಡೂ ಕೈ ಬಿಟ್ಟುಕೊಂಡು ಬೈಕ್ ಓಡಿಸುವುದು, ಬೈಕ್ ಮೇಲೆ ಡ್ಯಾನ್ಸ್ ಮಾಡುವಂತೆ ಪೋಸ್ ಕೊಟ್ಟು ವಿಡಿಯೋ ಮಾಡುವ ಮೂಲಕ ಸುದ್ದಿಯಾಗಿದ್ದರು.
ವಿಡಿಯೋದಲ್ಲಿ ಏನಿದೆ?
ಮೊದಲಿಗೆ ಸ್ಪೈಡರ್ ಮ್ಯಾನ್ ಬಟ್ಟೆಯಲ್ಲಿ ಯುವಕನೊಬ್ಬ ಬೈಕ್‌ನಲ್ಲಿ ಕುಳಿತಿರುತ್ತಾನೆ. ಹುಡುಗಿಯೊಬ್ಬಳು ಸ್ಪೈಡರ್ ಮ್ಯಾನ್ ರೀತಿ ಬಟ್ಟೆ ಧರಿಸಿ ಬಂದು ಆತನ ಹಿಂದೆ ಕೂರುತ್ತಾಳೆ. ಇಬ್ಬರು ನೈರುತ್ಯ ದೆಹಲಿಯ ದ್ವಾರಕಾ ಹೈವೆಗೆ ಬರುತ್ತಾರೆ. ಆದರೆ ಇಬ್ಬರು ಹೆಲ್ಮೆಟ್ ಧರಿಸಿರುವುದಿಲ್ಲ. ಜೊತೆಗೆ ಬೈಕ್ ಏರಿ ವೇಗವಾಗಿ ಹೈವೇಯಲ್ಲಿ ಹೋಗುತ್ತಿರುವುದು ನೋಡಬಹುದು.
ಜೊತೆಗೆ ಹಾಡಿಗೆ ತಕ್ಕಂತೆ ಎರಡೂ ಕೈ ಬಿಟ್ಟುಕೊಂಡು ಬೈಕ್ ಚಲಾಯಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಹೀಗಾಗಿ ಟ್ರಾಫಿಕ್ ಪೊಲೀಸರು ಇಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಮೋಟಾರು ವಾಹನ (ಎಂವಿ) ಕಾಯ್ದೆಯ ಹಲವು ಸೆಕ್ಷನ್‌ಗಳನ್ನು ಉಲ್ಲಂಘಿಸಿ ಚಾಲನೆ ಮಾಡಿದ್ದಕ್ಕಾಗಿ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಜೊತೆಗೆ ಅಪಾಯಕಾರಿ ವಾಹನ ಚಾಲನೆ ಸೇರಿ ಹಲವು ಸೆಕ್ಷನ್ ಅಡಿ ದಂಡವನ್ನೂ ವಿಧಿಸಿದ್ದಾರೆ. ಈ ರೀತಿ ಸ್ಪೈಡರ್ ಮ್ಯಾನ್ ಆಗಿದ್ದು, ನಜಾಫ್‌ಗಢದ ಆದಿತ್ಯ ಎಂದು ಗುರುತಿಸಲಾಗಿದೆ. ತನ್ನ 19 ವರ್ಷದ ಸ್ನೇಹಿತೆ ಅಂಜಲಿ ಎಂಬಾಕೆಯೊಂದಿಗೆ ಆತ ಜಾಲಿ ರೈಡ್ ಮಾಡಿದ್ದ. ಈ ವಿಡಿಯೋ ಪೋಸ್ಟ್ ಮಾಡಿದ್ದ ಬಳಿಕ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿತ್ತು.
ವಿಡಿಯೋ ಶೇರ್ ಮಾಡಿದ ನಂತರ ಸಿಕ್ಕಿಬಿದ್ದ ಕಿಲಾಡಿಗಳು
ಇಬ್ಬರು ಕಳೆದ ವಾದರ ಹಿಂದೆಯೇ ಈ ಬೈಕ್ ರೈಡ್ ಮಾಡಿದ್ದರು. ಆದರೆ ವಿಡಿಯೋಗೆ ಹಾಡು ಸೆಟ್ ಮಾಡಿ ಅದನ್ನು ಅವರೇ ಶೇರ್ ಮಾಡಿಕೊಂಡ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವಿಡಿಯೋ ನೋಡಿದವರು ಎಕ್ಸ್ (ಟ್ವಿಟರ್) ನಲ್ಲಿ ದೆಹಲಿ ಪೊಲೀಸರಿಗೆ ನೇರವಾಗಿ ಟ್ಯಾಗ್ ಮಾಡಿದ್ದರು. ಹಲವಾರು ಮಂದಿ ಬಳಕೆದಾರರು ಟ್ಯಾಗ್ ಮಾಡಿದ್ದ ಕಾರಣ ಪೊಲೀಸರ ಗಮನ ಈ ವಿಡಿಯೋ ಕಡೆ ಹರಿದಿತ್ತು. ಹೀಗಾಗಿ ಇಬ್ಬರು ಸಿಕ್ಕಬಿದ್ದಿದ್ದಾರೆ ಎಂದು ತಿಳಿದುಬಂದಿದೆ.



Click it and Unblock the Notifications
