Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಜೊಮೆಟೋದಲ್ಲಿದೆ ₹50 ಲಕ್ಷ ವೇತನದ ಹುದ್ದೆ..! ಆದ್ರೆ ನೀವೆ ₹20 ಲಕ್ಷ ನೀಡಬೇಕು..!
ದೊಡ್ಡ ದೊಡ್ಡ ಟೆಕ್ ಕಂಪನಿಗಳಲ್ಲಿ ಕೆಲಸ ಗಿಟ್ಟಿಸೋದು ಅಂದ್ರೆ ಈಗ ಐಎಎಲ್‌ನಂತಹ ಪರೀಕ್ಷೆಗಳ ಪಾಸ್ ಮಾಡಿದಂತೆ. ಏಕೆಂದರೆ ಸುಲಭವಾಗಿ ಎಲ್ಲರಿಗೂ ಈ ಕೆಲಸಗಳು ಸಿಗುವುದಿಲ್ಲ. ಸಿಕ್ಕರೂ ಅದನ್ನು ಉಳಿಸಿಕೊಳ್ಳುವುದು ಕೂಡ ಒಂದು ಸವಾಲು. ಇಂತಹ ದೊಡ್ಡ ದೊಡ್ಡ ಕಂಪನಿಗಳು ಕೈ ತುಂಬ ಸಂಬಳ ನೀಡುತ್ತವೆ ಅಂತಲೆ ಯುವ ಜನತೆ ಈ ಕಂಪನಿಗಳ ಹಿಂದೆ ಬಿದ್ದಿರುತ್ತಾರೆ.
ಈ ಸಾಲಿನಲ್ಲಿ ಫುಡ್ ಡೆಲಿವರಿ ಕಂಪನಿಯಾಗಿ ಇತ್ತಿಚಿಗೆ ಐಪಿಒಗೆ ಎಂಟ್ರಿ ಕೊಟ್ಟಿರುವ ಜೊಮೆಟೋ ಈಗ ಹೊಸ ಉದ್ಯೋಗದಿಂದ ಸುದ್ದಿಯಾಗುತ್ತಿದೆ. ಈ ಕಂಪನಿಯಲ್ಲಿ ಕೆಲಸ ಗಿಟ್ಟಿಸಬೇಕಂದ್ರೆ ಹಲವು ರೀತಿ ಕಷ್ಟಪಡಬೇಕು. ಸಂದರ್ಶನಗಳ ಎದುರಿಸಬೇಕಾಗುತ್ತದೆ. ಈಗ ಜೊಮೆಟೋದಲ್ಲಿ ಕೆಲಸ ಮಾಡಲು ಸಿಇಓ ಒಂದು ಆಫರ್ ನೀಡಿದ್ದಾರೆ. ಸಿಇಓ ದೀಪಿಂದರ್ ಗೋಯಲ್ ಕಂಪನಿಯ ಪ್ರಮುಖ ಹುದ್ದೆ ಭರ್ತಿಗೆ ಆಫರ್ ನೀಡಿದ್ದಾರೆ.

ಜೊಮೆಟೋ ಕಂಪನಿಯಲ್ಲಿ ಚೀಫ್ ಆಫ್ ಸ್ಟಾಫ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದರು, ಆದರೆ ಅಚ್ಚರಿ ಅಂದ್ರೆ ಕೆಲಸ ಮಾಡಿದರೆ ಕಂಪನಿಗಳು ಸಂಬಳ ನೀಡಬೇಕು. ಆದ್ರೆ ಇಲ್ಲಿ ನಾವೇ 20 ಲಕ್ಷ ರೂಪಾಯಿ ನೀಡಿ ಈ ಹುದ್ದೆಯಲ್ಲಿ ಕೆಲಸ ಮಾಡಬೇಕು. ಹೌದು ನೀವೆ 20 ಲಕ್ಷ ರೂಪಾಯಿಯನ್ನು ಕಂಪನಿಗೆ ನೀಡಿದರೆ ಈ ಹುದ್ದೆ ಅಲಂಕರಿಸಬಹುದು.
ಹಾಗೆ ಈ ಹುದ್ದೆಗೆ ಆಯ್ಕೆಯಾದ ಮಂದಿಗೆ ಬರೋಬ್ಬರಿ 2 ವರ್ಷದ ವರೆಗೂ ಯಾವುದೇ ವೇತನ ನೀಡುವುದಿಲ್ಲವಂತೆ. ಎರಡು ವರ್ಷದ ವರೆಗೆ ಆತ ಹಾಗೆಯೆ ಕೆಲಸ ಮಾಡಬೇಕಾಗುತ್ತದೆ. ಎರಡು ವರ್ಷದ ಬಳಿಕ ಆತನಿಗೆ ವಾರ್ಷಿಕವಾಗಿ 50 ಲಕ್ಷ ರೂಪಾಯಿ ವೇತನ ನೀಡುವುದಾಗಿ ಅವರು ಹೇಳಿದ್ದಾರೆ. ಆದ್ರೆ 2 ವರ್ಷದ ಒಳಗೆ ಯಾವುದೇ ವೇತನ ನೀಡುವುದಿಲ್ಲ. ಹೀಗಾಗಿ ತಾವಾಗಿಯೇ 20 ಲಕ್ಷ ರೂಪಾಯಿ ನೀಡಿ ಈ ಹುದ್ದೆಗೇರಬಹುದು ಎಂದಿದ್ದಾರೆ.
ಈ ರೀತಿಯ ಪೋಸ್ಟ್ ಹಂಚಿಕೊಂಡ ಬಳಿಕ ಭಾರೀ ವೈರಲ್ ಆಗಿರುವುದಲ್ಲದೆ ಟೀಕೆ ಸಹ ಕೇಳಿಬಂದಿದೆ. ಈ ರೀತಿ ಜನರಿಗೆ ಆಮಿಷ ಒಡ್ಡುವುದು ಎಷ್ಟು ಸರಿ ಎಂದು ಸಿಇಓ ವಿರುದ್ಧ ಟೀಕೆಗಳು ಕೇಳಿಬಂದಿವೆ. 20 ಲಕ್ಷ ರೂಪಾಯಿ ನೀಡಿ ಈ ಗ್ಯಾರಂಟಿ ಅಲ್ಲದೆ ಕೆಲಸ ಮಾಡುವುದು ಎಷ್ಟು ಸುರಕ್ಷಿತ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆ ಯಾವ ಕಂಪನಿಯೂ ನೀಡದ ಈ ರೀತಿಯ ಆಫರ್ ನೀಡಿರುವ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆ ಮಾಡಿದ್ದಾರೆ.
ಆತ 20 ಲಕ್ಷ ರೂಪಾಯಿ ನೀಡಿದ ಹೊರತಾಗಿಯೂ ಸಾಮಾನ್ಯ ಜ್ಞಾನ, ಸಹಾನುಭೂತಿ ಮತ್ತು ಹೆಚ್ಚಿನ ಅನುಭವವಿಲ್ಲದ ವ್ಯಕ್ತಿಯಾಗಿದ್ದರೂ ಸಾಕು ಎಂದಿದ್ದಾರೆ. ಇದು ಕೂಡ ಟೀಕೆಗೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಹಣ ತಂದರೆ ಆತ ಎಂತಹ ವ್ಯಕ್ತಿಯಾಗಿದ್ದರೂ ಕೆಲಸ ಗಿಟ್ಟಿಸಬಹುದು ಆದ್ರೆ ನಿಜವಾದ ಟ್ಯಾಲೆಂಟೆಡ್ ವ್ಯಕ್ತಿಗಳಿಗೆ ಇದು ವಂಚನೆ ಎಸಗಿದಂತೆ. ಈ ರೀತಿ ಹುದ್ದೆ ನೀಡುವ ಬದಲು ಹರಾಜು ಹಾಕಿ ಹೆಚ್ಚು ಹಣ ನೀಡಿದವರಿಗೆ ನೀಡುವುದು ಉತ್ತಮ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಹಣ ನೀಡಿದ ವ್ಯಕ್ತಿಯನ್ನು ಕಂಪನಿಯೇ ಮಧ್ಯದಲ್ಲಿ ತೆಗೆದು ಹಾಕಿದರೆ ಆತ ನೀಡಿದ 20 ಲಕ್ಷ ರೂಪಾಯಿಯಲ್ಲಿ ಬಹುತೇಕ ಕಳೆದುಕೊಳ್ಳುತ್ತಾನೆ. ಹಾಗೆ ಆತ ಉಚಿತವಾಗಿ ಆ ಕಂಪನಿಗೆ ಕೆಲಸ ಮಾಡಿ ಕೊಟ್ಟಿರುತ್ತಾರೆ, ಮೋಸ ಮಾಡುವ ಹೊಸ ವಿಧಾನವಿದು ಎಂದು ಮತ್ತೊಬ್ಬರು ಬಳಕೆದಾರರು ಬರೆದಿದ್ದಾರೆ. ಹಾಗೆ ಈ ರೀತಿ ಹಣ ನೀಡಿ ಯಾರು ಕೆಲಸ ಪಡೆಯುತ್ತಾರೆ ಎಂಬ ಕುತೂಹಲ ಕೂಡ ಮೂಡಿದೆ.



Click it and Unblock the Notifications
