Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಕೆಎಫ್‌ಸಿ ಚಿಕನ್ ಇಲ್ಲದೆ ಜಪಾನ್‌ನಲ್ಲಿ ಕ್ರಿಸ್‌ಮಸ್ ನಡೆಯಲ್ಲ..! ಏಕೆ ಗೊತ್ತಾ?
ವಿಶ್ವದಾದ್ಯಂತ ವರ್ಷದ ಕೊನೆಯ ಹಬ್ಬವಾಗಿರುವ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕಾಗಿ ಕಾಯುತ್ತಿದ್ದಾರೆ. ಕ್ರಿಸ್‌ಮಸ್‌ಗಾಗಿ ಇಡೀ ವಿಶ್ವ ಕಾದು ಕುಳಿತಿದೆ. ಕ್ರಿಸ್‌ಮಸ್ ಅಂದರೆ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಸಂಭ್ರಮಿಸುವ ಹಬ್ಬವಾಗಿದೆ. ವರ್ಷದ ಅಂತ್ಯದಲ್ಲಿ ಬರುವ ಈ ಹಬ್ಬಕ್ಕಾಗಿ ಕೋಟಿ ಕೋಟಿ ಜನರು ಕಾಯುತ್ತಿರುತ್ತಾರೆ.
ಕ್ರಿಸ್‌ಮಸ್ ಅಂದ್ರೆ ನೆನಪಾಗುವುದು ರುಚಿ ರುಚಿಯ ಅಹಾರಗಳು, ಅದರಲ್ಲೂ ಕೇಕ್ ಸೇರಿದಂತೆ ಕ್ರಿಸ್ ಮಸ್ ದಿನದಲ್ಲಿ ಹಲವು ಆಚರಣೆಗಳು ಎಲ್ಲರಿಗೂ ಇಷ್ಟವಾಗುತ್ತದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ನೂರಾರು ಮಿಲಿಯನ್ ಜನರು ಕ್ರಿಸ್ಮಸ್ ಸಮಯದಲ್ಲಿ ಹಬ್ಬದ ವಿಶೇಷ ಆಹಾರ ತಯಾರಿಕೆಯಲ್ಲಿ ತೊಡಗುತ್ತಾರೆ. ಕ್ರಿಸ್ ಮಸ್ ಅಂದರೆ ಟರ್ಕಿ ಕೋಳಿಯ ಆಹಾರ ಇರಲೇಬೇಕು.

ಆದ್ರೆ ಎಲ್ಲಾ ದೇಶದಲ್ಲೂ ಈ ಆಹಾರ ಸಂಪ್ರದಾಯವಾಗಿ ನಡೆದುಕೊಂಡು ಬಂದಿಲ್ಲ. ಅದರಲ್ಲೂ ಜಪಾನ್‌ನಲ್ಲಿನನ ವಿಶೇಷ ಆಚರಣೆ ಎಲ್ಲರಿಗೂ ಅಚ್ಚರಿ ತರಿಸುತ್ತೆ. ಜಪಾನ್‌ನಲ್ಲಿ ಕ್ರಿಸ್‌ಮಸ್ ದಿನ KFCಯೇ ಎಲ್ಲರ ನೆಚ್ಚಿನ ಆಹಾರ ಆಗಿರುತ್ತದೆ. ಕೆಎಫ್‌ಸಿ ಇಲ್ಲದೆ ಅಲ್ಲಿನ ಹಬ್ಬ ಪೂರ್ಣ ಆಗುವುದೇ ಇಲ್ಲ. ಹಾಗಾದ್ರೆ ಅಮೆರಿಕದಲ್ಲಿ ಹುಟ್ಟಿದ್ದ ಈ ಕೆಎಫ್‌ಸಿ ಜಪಾನ್ ದೇಶದಲ್ಲಿ ಹಬ್ಬದ ವಿಶೇಷ ಆಹಾರ ಆಗಿದ್ದೇಗೆ? ಜಪಾನ್‌ಗೂ ಸಾಗರದಾಚೆಯ ಕೆಎಫ್‌ಸಿಗೂ ಇರುವ ಸಂಬಂಧವೇನು ಎಂಬ ಅಚ್ಚರಿಯ ವಿಚಾರಗಳನ್ನು ನಾವಿಂದು ಹೇಳುತ್ತೇವೆ ಕೇಳಿ.
ವಿಶ್ವ ಪ್ರಸಿದ್ಧ ಕೆಎಫ್‌ಸಿ 1970ರಲ್ಲಿ ತನ್ನ ಮೊದಲ ಮಳಿಗೆಯನ್ನು ಜಪಾನ್‌ನಲ್ಲಿ ತೆರೆದಿತ್ತು. ಇಲ್ಲಿನ ನಗೋಯಾ ನಗರದಲ್ಲಿ ಮೊದಲ ಶಾಖೆ ತೆರೆದಿತ್ತು. ಆದ್ರೆ ಈ ಶಾಖೆ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲೇ ಇಲ್ಲ. ಜಪಾನ್ ಗ್ರಾಹಕರು ಕೆಎಫ್‌ಸಿ ರುಚಿಯನ್ನು ಹೆಚ್ಚು ಇಷ್ಟಪಡಲಿಲ್ಲ. ಆದ್ರೆ ಅಂಗಡಿಯಲ್ಲಿ ಆಫರ್‌ಗಳು ನಡೆಯುತ್ತಿದ್ದರೂ ನಿರೀಕ್ಷಿತ ಜನರನ್ನು ಸೆಳೆಯಲು ಹರಸಾಹಸ ಪಡಬೇಕಾಯಿತು.
ಆದ್ರೆ 1974ರಲ್ಲಿ ಕ್ರಿಸ್‌ಮಸ್‌ಗಾಗಿ ಜಪಾನ್‌ನ ಈ ಮಳಿಗೆ ವಿಶೇಷ ಖಾದ್ಯ ಹಾಗೂ ರೆಸಿಪಿಗಳ ಪರಿಚಯಿಸಿತು. ಕೆಎಫ್‌ಸಿಯ ಪ್ರಸಿದ್ಧ ಫ್ರೈಡ್ ಚಿಕನ್‌ನ ಬಕೆಟ್ ಅನ್ನು ಬಾಟಲಿಯ ವೈನ್‌ನೊಂದಿಗೆ ಮಾರಾಟ ಮಾಡಿತು. ಇದು ಕ್ರಿಸ್ ಮಸ್ ಪಾರ್ಟಿಯ ರಂಗು ಹೆಚ್ಚಿಸಿತ್ತು. ಕ್ರಿಸ್‌ಮಸ್ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಹಬ್ಬ ಎಂದು ಪ್ರಚಾರ ಮಾಡಿತ್ತು. ಇದು ಕೆಎಫ್‌ಸಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.
ಆದ್ರೆ ಕ್ರಿಸ್‌ಮಸ್ ಆಚರಿಸಲು ಜಪಾನ್‌ಗೆ ಆಗಮಿಸಿದ್ದ ವಿದೇಶಿ ಪ್ರವಾಸಿಗರು ಇಲ್ಲಿ ಟರ್ಕಿ ಕೋಳಿ ಸಿಗದೆ ಇದ್ದಿದ್ದಕ್ಕೆ ನಿರಾಸೆಗೊಂಡಿದ್ದರು. ಹಾಗೆ ಅವರು ಜಪಾನ್‌ನಲ್ಲಿ ಟರ್ಕಿಯನ್ನು ಪಡೆಯಲು ಸಾಧ್ಯವಿಲ್ಲ, ಆದ್ದರಿಂದ ಕೆಎಫ್‌ಸಿ ಚಿಕನ್‌ನೊಂದಿಗೆ ಕ್ರಿಸ್ಮಸ್ ಆಚರಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಗಳಿಲ್ಲ ಎಂದು ಅಭಿಯಾನಕ್ಕೆ ಕಾರಣರಾದರು. ಹಾಗೆ ಕೆಂಟುಕಿ ಫಾರ್ ಕ್ರೈಸ್ಟ್ ಎಂಬ ಅಭಿಯಾನ ಆರಂಭಿಸಿದರು. ಇದು ಕೆಎಫ್‌ಸಿಗೆ ಬಹುದೊಡ್ಡ ಲಾಭ ತಂದಿತು.
ಇನ್ನು ಕೆಎಫ್‌ಸಿಯನ್ನು ಜಪಾನ್‌ನಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಕ್ರಿಸ್ ಮಸ್ ಹಬ್ಬವನ್ನೇ ಬಳಸಲಾಯಿತು. ಶಾಲೆಗಳಿಗೆ ಈ ಚಿಕನ್ ಪೀಸ್‌ಗಳ ತಂದು ಮಕ್ಕಳಿಗೆ ನೀಡಲಾಯಿತು, ಈ ವೇಳೆ ಮಕ್ಕಳಿಗೆ ಸಾಂತಾಕ್ಲಾಸ್‌ನಂತೆ ವೇಷ ಧರಿಸಿ ಬರುವಂತೆ ಹೇಳಲಾಯಿತು. ಹಾಗೆ ಅಮೆರಿಕದಲ್ಲಿ ಕ್ರಿಸ್‌ಮಸ್‌ಗೆ ಈ ಕೆಎಫ್‌ಸಿಯೇ ನೆಚ್ಚಿನ ಆಹಾರದ ಎಂದು ಜಪಾನ್‌ನಲ್ಲಿ ಪ್ರವಾರ ಮಾಡಲಾಗಿತ್ತು. ಇದು ಮುಂದೆ ಜಪಾನ್ ಜನರಲ್ಲಿ ಅತಿ ಹೆಚ್ಚಾಗಿ ಪ್ರಭಾವ ಬೀರಿತು.
ಇದಾದ ಬಳಿಕ ಜಪಾನ್‌ನಲ್ಲಿ ಕೆಂಟುಕಿ ಕ್ರಿಸ್‌ಮಸ್ ಎಂಬ ವಿಶಿಷ್ಟ ಅಭಿಯಾನ ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ತಲುಪಿತು. ಈಗ ಜಪಾನ್‌ನಲ್ಲಿ ಕೆಎಫ್‌ಸಿ ಇಲ್ಲದೆ ಕ್ರಿಸ್‌ಮಸ್ ನಡೆಯುವುದಿಲ್ಲ. ಕ್ರಿಸ್ ಮಸ್ ದಿನ ಕೆಎಫ್‌ಸಿ ಮಳಿಗೆಗಳಲ್ಲಿ ಕಾಲು ಇಡಲು ಸ್ಥಳವಿರುವುದಿಲ್ಲ. ಹಾಗೆ ಈಗ ಜಪಾನ್‌ನ ಮೂಲೆ ಮೂಲೆಯಲ್ಲೂ ಕೆಎಫ್‌ಸಿ ತನ್ನ ಮಳಿಗೆ ತೆರೆದಿದೆ.



Click it and Unblock the Notifications