Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಜುಲೈನಲ್ಲಿ ಕಾದಿದೆ ಮಹಾದುರಂತ: ಅಧಿಕಾರಿಗಳನ್ನೇ ಬೆಜ್ಜಿ ಬೀಳಿಸಿದೆ ಜಪಾನ್ ಮಹಿಳೆ ಭವಿಷ್ಯ!
ನೀವು ಬಾಬಾ ವಂಗಾ ಹೇಳಿರುವ ದುರಂತಗಳ ಭವಿಷ್ಯ ಕುರಿತು ಕೇಳಿರಬಹುದು. ಆಕೆ ಹೇಳಿರುವ ಪ್ರತಿಯೊಂದು ಭವಿಷ್ಯಗಳು ಅಚ್ಚರಿಯ ರೀತಿ ನಿಜವಾಗುತ್ತಿವೆ. ಇನ್ನು ಆಕೆ 2025ರ ಕುರಿತಾಗಿ ಹೇಳಿರುವ ಭವಿಷ್ಯಗಳು ಕೂಡ ನಿಜವಾಗುತ್ತಿವೆ. ಇನ್ನು ಆಕೆಯ ಪ್ರಕಾರ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ದದ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದರು. ಅದೇ ರೀತಿಯಾಗಿ ಈಗ ಇಸ್ರೇಲ್, ಇರಾನ್ ನಡುವಿನ ಯುದ್ಧದ ಆತಂಕ ಈಗ ಆತಂಕ ಹುಟ್ಟಿಸಿದೆ.
ಇನ್ನು ಬಾಬಾ ವಂಗಾ ಹೇಳುವ ಭವಿಷ್ಯದಲ್ಲಿ 2025ರ ನಡುವೆ ಬಹಳ ಭೀಕರ ಘಟನೆಗಳು ನಡೆಯಲಿವೆ. ಹಾಗೆ ಈಗಾಗಲೇ ಹಲವು ರೀತಿಯ ದುರಂತಗಳು ನಡೆದಿರುವುದು ನಾವು ನೋಡಬಹುದು. 2025ರಲ್ಲಿ ಇನ್ನು 6 ತಿಂಗಳು ಮುಗಿದಿದೆ, ಈಗಾಗಲೇ ಹಲವು ದುರಂತಗಳು ನಡೆದಿದೆ. ಉಳಿದ 6 ತಿಂಗಳಲ್ಲಿ ಇನ್ನೆಷ್ಟು ದುರಂತಗಳು ಸಂಭವಿಸಲಿವೆ ಎಂಬುದು ಎಲ್ಲರಲ್ಲೂ ಆಘಾತ ತರಿಸಿದೆ.

ಇನ್ನು ಬಾಬಾ ವಂಗಾ ಮಾತ್ರವಲ್ಲ ಈಗ ರಿಯೋ ಟಟ್ಸುಕಿ ಎಂಬ ಹೊಸ ಬಾಬಾ ವಂಗಾ ನುಡಿದಿರುವ ಭವಿಷ್ಯಗಳು ಆಘಾತ ಹೆಚ್ಚಿಸುವಂತೆ ಮಾಡಿದೆ. ಜಪಾನ್‌ನ ಈ ಕಲಾವಿದೆ, ತನ್ನ ಕನಸುಗಳಲ್ಲಿ ಮೂಡುವಂತಹ ಭವಿಷ್ಯಗಳನ್ನು ಹೇಳುತ್ತಾಳೆ. ಆಕೆ ಆ ಎಲ್ಲಾ ಭವಿಷ್ಯದ ಕನಸುಗಳನ್ನು ತನ್ನ ದಿ ಪ್ಯೂಚರ್ ಐ ಸಾ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾಳೆ.
ಜಪಾನ್‌ನಲ್ಲಿ ಸಂಭವಿಸಿದ 2011ರ ಸುನಾಮಿಯ ನಂತರ ಆಕೆಗೆ ವಿಚಿತ್ರ ಕನಸುಗಳು ಬೀಳಲು ಆರಂಭವಾದವಂತೆ. ನಂತರ ಆಕೆ ಎಲ್ಲಾ ದುರಂತದ ಕನಸುಗಳನ್ನು ಪುಸ್ತಕದಲ್ಲಿ ಬರೆದಿಡಲು ಮುಂದಾದಳಂತೆ. ಹಾಗೆ 2021ರಲ್ಲಿ ಆಕೆ ತನ್ನ ಪುಸ್ತಕದಲ್ಲಿ ಹೊಸ ಹೊಸ ದುರಂತಗಳ ಸೇರಿಸಿದ್ದಾಳೆ.
ಜುಲೈನಲ್ಲಿದೆ ದುರಂತಗಳ ಸಾಲು
ಜುಲೈನಲ್ಲಿ ನಾವು ಏರ್ ಇಂಡಿಯಾ ದುರಂತ, ಇರಾನ್ ಇಸ್ರೇಲ್ ನಡುವಿನ ಯುದ್ದದ ಆತಂಕ ನೋಡಿದ್ದೇವೆ. ಹಾಗೆ ಜುಲೈನಲ್ಲಿ ಅತ್ಯಂತ ಕಠಿಣ ದಿನಗಳು ಕಾಡಲಿದೆಯಂತೆ. ಜುಲೈ 5ರಂದು ಜಪಾನ್‌ಗೆ ದೊಡ್ಡ ವಿಪತ್ತು ಕಾಡಲಿದೆ ಎಂದಿದ್ದಾಳೆ. ಜಪಾನ್‌ನಲ್ಲಿ ದೊಡ್ಡ ದುರಂತ ಸಂಭವಿಸಲಿದೆ ಎಂಬುದು ಆಕೆಯ ಭವಿಷ್ಯವಾಣಿಯಾಗಿದೆ. ಆದ್ರೆ ಯಾವ ರೀತಿಯಲ್ಲಿ ದುರಂತ ಸಂಭವಿಸಲಿದೆ ಎಂಬುದನ್ನು ಮಾತ್ರ ಉಲ್ಲೇಖಿಸಿಲ್ಲ.
ಆದ್ರೆ ಆಕೆ ಹೇಳಿರುವ ಹಲವು ಭವಿಷ್ಯವಾಣಿಗಳು ನಿಜವಾಗಿರುವುದು ಆಘಾತ ಮೂಡಿಸುವಂತಿದೆ. ಈ ಮೊದಲು ಇಂಗ್ಲೆಂಡ್‌ನ ರಾಜಕುಮಾರಿ ಡಯಾನ ಮರಣ, ಗಾಯಕಿ ಫ್ರೆಡ್ಡಿ ಮರ್ಕ್ಯುರಿ ಸಾವು ಮತ್ತು 2020ರ ಸಮಯದಲ್ಲಿ ಆಘಾತ ತಂದಿದ್ದ ಕೋವಿಡ್ ವೈರಸ್ ಕುರಿತಂತೆಯು ಆಕೆ ಪುಸ್ತಕದಲ್ಲಿ ಉಲ್ಲೇಖವಿದೆ. ಹೀಗಾಗಿ ಆಕೆಯ ಭವಿಷ್ಯವಾಣಿಗಳು ನಿಜವಾಗುತ್ತಿರುವುದು ಅಚ್ಚರಿ ಮೂಡಿಸಿದೆ.
ಆಕೆಯ ಈ ಭವಿಷ್ಯದ ಕಾರಣದಿಂದಾಗಿ ಜಪಾನ್‌ಗೆ ಜುಲೈ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವುದು ಖಚಿತವಾಗಿದೆ. ಅಲ್ಲಿನ ಹೋಟೆಲ್‌ಗಳು, ಪ್ರಯಾಣದ ತಾಣಗಳು ಶೇ.80ರಷ್ಟು ಜನರಿಲ್ಲದೆ ಖಾಲಿಯಾಗಿವೆ ಎಂದು ತಿಳಿದುಬಂದಿದೆ. ಆದ್ರೆ ಜಪಾನ್ ಅಧಿಕಾರಿಗಳು, ವಿಜ್ಞಾನಿಗಳು ಈ ಭವಿಷ್ಯವಾಣಿಗಳ ಮೇಲೆ ನಂಬಿಕೆ ಇಡಬೇಡಿ, ಇದು ಕೇವಲ ಊಹೆಗಳು, ಈ ರೀತಿಯ ಯಾವುದೇ ದುರಂತಗಳು ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
2030ರಲ್ಲಿ ಮತ್ತೊಮ್ಮೆ ವೈರಸ್ ಕಾಟ
2020ರಲ್ಲಿ ಸಂಭವಿಸಿದ ಕೋವಿಡ್‌ನಂತಹ ವೈರಸ್ ಮತ್ತೆ ಭೀಕರತೆ ಸೃಷ್ಟಿಸಲಿದೆ ಎಂದು ಆಕೆ ಹೇಳಿದ್ದಾಳೆ. 2023ರಲ್ಲಿ ಕೋವಿಡ್‌ನಂತ ಭೀಕರ ವೈರಸ್ ಕಾಡಲಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಇದು ಇಡೀ ವಿಶ್ವವನ್ನು ಕಾಡಲಿದ್ದು, ಸಾವು ನೋವಿಗೂ ಕಾರಣವಾಗಲಿದೆ ಎಂದು ಆಕೆ ಪುಸ್ತಕದಲ್ಲಿ ಉಲ್ಲೇಖಿಸಿದ್ದಾಳೆ. 2030ರಲ್ಲಿ ಇಡೀ ವಿಶ್ವದಲ್ಲಿ ಮಾರಣಾಂತಿಕ ವೈರಸ್ ಹರಡಲಿದೆ, ಇದರಿಂದ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಲಿದೆ ಎಂದು ಆಕೆ ಭವಿಷ್ಯ ನುಡಿದಿದ್ದಾಳೆ.



Click it and Unblock the Notifications
