Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Janmashtami 2025: ಮನೆಯಲ್ಲಿ ಜನ್ಮಾಷ್ಟಮಿ ಆಚರಣೆ ಹೇಗೆ? ಈ ವಸ್ತುಗಳು ಇರಲೇಬೇಕು
ಜನ್ಮಾಷ್ಟಮಿ ಹಬ್ಬ ಹೀಗೆ ಮಾಡಿ. ಈ ವಸ್ತುಗಳು ಇಲ್ಲದಿದ್ದರೆ ಪೂಜೆ ಅಪೂರ್ಣ. ಹೌದು, ಜನ್ಮಾಷ್ಟಮಿ ಹಬ್ಬವನ್ನು (Janmashtami 2025) ಹಿಂದೂಗಳು ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬವು ಶ್ರೀಕೃಷ್ಣನ ಜನ್ಮದಿನವನ್ನು ಸೂಚಿಸುತ್ತದೆ. ಭಕ್ತರು ಉಪವಾಸ ಆಚರಿಸುತ್ತಾರೆ. ಕೃಷ್ಣ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ದಿನದಂದು ಮನೆಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ ಮತ್ತು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಹಾಗಿದ್ರೆ, ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳು (janmasthami things) ಯಾವುವು? ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಭಕ್ತರು ಶ್ರದ್ಧಾಭಕ್ತಿಯಿಂದ ಕೃಷ್ಣನನ್ನು ಪೂಜಿಸಿ, ಉಪವಾಸ ವ್ರತ ಆಚರಿಸುವ ಹಬ್ಬವಿದು. ಹಿಂದೂ ಧರ್ಮದಲ್ಲಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಬಾಲಕೃಷ್ಣನನ್ನು ಪೂಜಿಸುವ ಮೂಲಕ ಆತನ ಆಶೀರ್ವಾದ ಪಡೆಯುವುದು ಸಂಪ್ರದಾಯದ ಭಾಗವಾಗಿದೆ. ಆದರೆ, ಜನ್ಮಾಷ್ಟಮಿ ದಿನದ ಪೂಜೆ ಯಶಸ್ವಿಯಾಗಿ ನಡೆಸಲು ಕೆಲವು ಅವಶ್ಯ ವಸ್ತುಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯ. ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಣೆಗೆ ಬೇಕಾದ ಪ್ರಮುಖ ಸಾಮಗ್ರಿಗಳ ಬಗ್ಗೆ ಈಗ ತಿಳಿಯೋಣ.

ಜನ್ಮಾಷ್ಟಮಿ ಆಚರಣೆಗೆ ಬೇಕಾಗುವ ವಸ್ತುಗಳಿವು
ತೊಟ್ಟಿಲು
ನೀವು ಕಾರ್ಡ್‌ಬೋರ್ಡ್, ಮರ ಅಥವಾ ಚಿಕ್ಕ ಬುಟ್ಟಿಯನ್ನು ಬಳಸಿ ತೊಟ್ಟಿಲು ತಯಾರಿಸಬಹುದು. ಹೂವುಗಳು, ಬಣ್ಣಬಣ್ಣದ ಬಟ್ಟೆಗಳು ಮತ್ತು ಇತರ ಅಲಂಕಾರಿಕ ವಸ್ತುಗಳಿಂದ ಇದನ್ನು ಅಲಂಕರಿಸಬಹುದು. ಕೃಷ್ಣನಿಗೆ ಪ್ರಿಯವಾದ ಹಳದಿ ಅಥವಾ ಇತರ ಪ್ರಕಾಶಮಾನವಾದ ಬಣ್ಣಗಳನ್ನು ಬಳಸಬೇಕು. ಜನ್ಮಾಷ್ಟಮಿಯಂದು ಹಳದಿ ಬಣ್ಣವನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಸೌತೆಕಾಯಿಯನ್ನು ಸಹ ಸಾಂಕೇತಿಕ ತೊಟ್ಟಿಲಾಗಿ ಬಳಸಬಹುದು. ಇದು ಕೃಷ್ಣನನ್ನು ಆರಾಮವಾಗಿ ಇರಿಸಲು ಅವಶ್ಯಕ.
ಕೃಷ್ಣನ ವಿಗ್ರಹ
ಪೂಜೆಯ ಕೇಂದ್ರಬಿಂದು, ಬಾಲಕೃಷ್ಣನ ವಿಗ್ರಹ ಅಥವಾ ಫೋಟೋ ಕಡ್ಡಾಯವಾಗಿ ಇರಬೇಕು. ಪೂಜೆಗೆ ತಾಮ್ರ, ಹಿತ್ತಾಳೆ, ಚಿನ್ನ ಅಥವಾ ಬೆಳ್ಳಿಯಂತಹ ಲೋಹಗಳಿಂದ ಮಾಡಿದ ಕೃಷ್ಣನ ವಿಗ್ರಹವನ್ನು ಬಳಸಬಹುದು. ವಿಗ್ರಹವನ್ನು ಆಭರಣಗಳು ಮತ್ತು ಹೂವುಗಳಿಂದ ಅಲಂಕರಿಸಬಹುದು.
ವಿಗ್ರಹಕ್ಕೆ ವಸ್ತ್ರಗಳು
ಕೃಷ್ಣನ ವಿಗ್ರಹಕ್ಕೆ ಹೊಸ ವಸ್ತ್ರಗಳನ್ನು ತೊಡಿಸಬೇಕು. ಸಾಧ್ಯವಾದರೆ ಹಳದಿ ಅಥವಾ ಇತರ ಪ್ರಕಾಶಮಾನವಾದ ಬಣ್ಣದ ವಸ್ತ್ರಗಳನ್ನು ಬಳಸಬಹುದು.
ನವಿಲು ಗರಿ, ಕೊಳಲು
ಕೃಷ್ಣನ ತಲೆಗೆ ನವಿಲು ಗರಿ ಅಲಂಕಾರ ಪ್ರಮುಖವಾಗಿದೆ. ಇದು ಶುಭ ಸೂಚಕವೂ ಆಗಿದೆ. ಕೃಷ್ಣನ ಕೈಯಲ್ಲಿರುವ ಕೊಳಲು ಆತನ ಪ್ರೀತಿಯ ಪ್ರತೀಕ. ಪೂಜೆಯಲ್ಲಿ ಕೊಳಲು ಇಡುವುದು ಶ್ರೇಷ್ಠ.
ಹಸು ಮತ್ತು ಕರುವಿನ ವಿಗ್ರಹ
ಶ್ರೀಕೃಷ್ಣನಿಗೆ ಗೋವುಗಳೆಂದರೆ ಅತ್ಯಂತ ಪ್ರೀತಿ. ಜನ್ಮಾಷ್ಟಮಿ ದಿನ ಹಸು ಮತ್ತು ಕರುವಿನ ಮೂರ್ತಿಯನ್ನು ಪೂಜಿಸುವುದು ಮಂಗಳಕರ.
ಪೂಜಾ ಮಂದಿರ
ಪೂಜಾ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಹೂವುಗಳು, ರಂಗೋಲಿ ಮತ್ತು ಇತರ ಅಲಂಕಾರಿಕ ವಸ್ತುಗಳಿಂದ ಅದನ್ನು ಸುಂದರವಾಗಿ ಅಲಂಕರಿಸಿ. ಪೂಜಾ ಪರಿಕರಗಳಾದ ದೀಪ, ಕರ್ಪೂರ, ಧೂಪದ್ರವ್ಯ, ಅಗರಬತ್ತಿ, ಗಂಟೆ, ತಟ್ಟೆ ಮತ್ತು ಕಲಶ ಇರಬೇಕು. ಪೂಜೆಗೆ ವಿವಿಧ ಬಣ್ಣಗಳ ತಾಜಾ ಹೂಗಳು ಮತ್ತು ತುಳಸಿ ದಳಗಳನ್ನು ಬಳಸುವುದು ಶ್ರೇಷ್ಠ.
ನೈವೇದ್ಯ ಅಥವಾ ಪ್ರಸಾದ
ಬೆಣ್ಣೆ, ಕಲ್ಲುಸಕ್ಕರೆ, ಶುಂಠಿ, ಮೊಸರನ್ನ ಮತ್ತು ಇತರ ಸಾಂಪ್ರದಾಯಿಕ ತಿನಿಸುಗಳನ್ನು ಒಳಗೊಂಡಂತೆ ವಿವಿಧ ಬಗೆಯ ಪ್ರಸಾದ ಅಥವಾ ಖಾದ್ಯಗಳನ್ನು ತಯಾರಿಸಬಹುದು. ನೈವೇದ್ಯದಲ್ಲಿ ಹಣ್ಣುಗಳು, ಒಣಹಣ್ಣುಗಳು, ಖೀರ್‌ಗಳನ್ನು ಸೇರಿಸಬಹುದು. ಇವು ಶ್ರೀಕೃಷ್ಣನಿಗೆ ಇಷ್ಟವಾದ ಭಕ್ಷ್ಯಗಳು ಎಂದು ಹೇಳಲಾಗುತ್ತದೆ.
ಜನ್ಮಾಷ್ಟಮಿ ದಿನ ಮಧ್ಯರಾತ್ರಿ 12 ಗಂಟೆಗೆ ಶ್ರೀಕೃಷ್ಣನ ಜನ್ಮೋತ್ಸವ ನಡೆಯುವುದರಿಂದ, ಎಲ್ಲಾ ವಸ್ತುಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವುದು ಅವಶ್ಯ. ಈ ಸಮಯದಲ್ಲಿ ಭಜನ-ಕೀರ್ತನೆ, ಆರತಿ ಹಾಗೂ ಮಖನ ಮಿಠಾಯಿ ವಿತರಣೆ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸುತ್ತದೆ.



Click it and Unblock the Notifications

