Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಪ್ರಕೃತಿಯ ಶಕ್ತಿಯೇ ಅಂಥದ್ದು..! ಸೌದಿ ಮರುಭೂಮಿ ಈಗ ಹಸಿರು ಹುಲ್ಲುಗಾವಲು..!
ಸೌದಿ ಅರೇಬಿಯಾ ಅಂದ ತಕ್ಷಣ ನಿಮ್ಮ ನೆನಪಿಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲಿಫಾ ನೆನಪಿಗೆ ಬರುತ್ತೆ. ಜಗತ್ತಿನ ಗಮನ ಸೆಳೆಯುವ ಗಗನ ಚುಂಬಿ ಕಟ್ಟಡಗಳು ಅಲ್ಲಿವೆ. ಇದನ್ನು ಬಿಟ್ಟರೆ ನಿಮಗೆ ನೆನಪಾಗೋದು ವಿಸ್ತಾರವಾದ ಮರುಭೂಮಿ. ಸೌದಿ ಅಂದರೆ ಅದೊಂದು ಮರುಭೂಮಿ ಪ್ರದೇಶ. ಅಲ್ಲಿ ಕಣ್ಣು ಹಾಯಿಸಿದಷ್ಟು ದೂರ ಮರುಭೂಮಿ ಇದೆ.
ಆದ್ರೆ ಈಗ ಸೌದಿ ಅರೇಬಿಯಾದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಮರುಭೂಗಿಯಾಗಿದ್ದ ನಾಡು ಈಗ ಹಸಿರು ಹೊದಿಕೆಯಂತಾಗುತ್ತಿದೆ. ನಿಮಗೆ ಈ ಸುದ್ದಿ ಕೇಳಿ ಅಚ್ಚರಿಯಾಗಬಹುದು. ಮರಳುಗಾಡಿನಲ್ಲಿ ಅಲ್ಲಲ್ಲಿ ಹಸಿರು ಕಾಣಸಿಗುವುದೇ ಕಷ್ಟ ಆದ್ರೆ ಸೌದಿಯಲ್ಲಿ ಈಗ ಮರಳುಗಾಡಿನಲ್ಲಿ ಹಸಿರು ಕಂಗೊಳಿಸುತ್ತಿದೆ.

ಈ ವಿದ್ಯಮಾನ ಕಂಡು ಸ್ಥಳೀಯರೇ ದಂಗಾಗಿದ್ದಾರೆ. ಅವರೇ ಇದು ಹೇಗೆ ಸಾಧ್ಯ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ದೃಷ್ಟಿ ಹಾಯಿಸಿದ ಕಡೆಯಲ್ಲ ಬರಿ ಮರಳು ಕಾಣುತ್ತಿದ್ದ ಜಾಗದಲ್ಲಿ ಈಗ ಹಸಿರು ಕಾಣಿಸುತ್ತಿದೆ. ಎಲ್ಲಾ ಕಡೆಗಳಿಂದ ಈಗ ಹುಲ್ಲುಗಾವಲಿನಂತೆ ಕಾಣುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಮರುಭೂಮಿಯಂತಹ ಕಠಿಣ ಪರಿಸ್ಥಿತಿಯಲ್ಲಿ ಹುಲ್ಲು ಚಿಗುರಿರುವುದು ಎಲ್ಲರಿಗೂ ಅಚ್ಚರಿ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ. ಈ ಹಿಂದೆ ಈ ಮರುಭೂಮಿ ಹುಲ್ಲುಗಾವಲಿನಿಂದಲೇ ತುಂಬಿತ್ತು ಎಂಬ ಅಂಶಗಳು ಈಗ ಮತ್ತೆ ಜೀವ ಪಡೆದಿವೆ. ಸೌದಿಯಲ್ಲಿ ಮಳೆಯಾದ ಕಾರಣಕ್ಕೆ ಮರುಭೂಮಿ ಪ್ರದೇಶ ಹಸಿರಿನಿಂದ ಕೂಡಿದೆ.
ಸಮುದಾಯಗಳು ಈ ಅನಿರೀಕ್ಷಿತ ವಿದ್ಯಮಾನದಲ್ಲಿ ವಿಸ್ಮಯಗೊಂಡಂತೆ, ಇದು ಅತ್ಯಂತ ಅಸಂಭವ ಸ್ಥಳಗಳಲ್ಲಿಯೂ ಸಹ ನೈಸರ್ಗಿಕ ಪ್ರಪಂಚದ ವಿಸ್ಮಯಕಾರಿ ಶಕ್ತಿ ಮತ್ತು ಸೌಂದರ್ಯದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.
ಸೌದಿ ಮರುಭೂಮಿಯಲ್ಲಿ ಏನಾಯಿತು?
ಇತ್ತೀಚಿನ ಭಾರೀ ಮಳೆಯ ನಂತರ, ಮೆಕ್ಕಾ ಮತ್ತು ಮದೀನಾದ ಪವಿತ್ರ ನಗರಗಳ ನಡುವಿನ ಸೌದಿ ಅರೇಬಿಯಾದ ವಿಸ್ತಾರವಾದ ಮರುಭೂಮಿಯ ಭೂದೃಶ್ಯದ ಒಂದು ಭಾಗವು ಗಮನಾರ್ಹವಾದ ರೂಪಾಂತರಕ್ಕೆ ಒಳಗಾಗಿದೆ. ಹೇರಳವಾದ ಮಳೆಯು ಒಂದು ಕಾಲದಲ್ಲಿ ಶುಷ್ಕ ಮತ್ತು ಬಂಜರು ಭೂಪ್ರದೇಶಕ್ಕೆ ಹೊಸ ಜೀವವನ್ನು ನೀಡಿದೆ, ಇದು ಹಸಿರು ರೋಮಾಂಚಕ ವರ್ಣಗಳಲ್ಲಿ ಹೊರಹೊಮ್ಮಲು ಕಾರಣವಾಗುತ್ತದೆ.
ಈ ನಾಟಕೀಯ ಬದಲಾವಣೆಯು ಮುಖ್ಯವಾಗಿ ಪಶ್ಚಿಮ ಪ್ರದೇಶಗಳಲ್ಲಿ ಕಂಡುಬಂದಿದೆ, ಮಳೆಯಿಂದ ಹೆಚ್ಚುವರಿ ನೀರಿನ ಒಳಹರಿವು ಎಂದು ಹೇಳಬಹುದು, ಇದು ಹಿಂದೆ ಒಣಗಿದ ಮಣ್ಣನ್ನು ಪೋಷಿಸಿದೆ ಮತ್ತು ಸೊಂಪಾದ ಸಸ್ಯವರ್ಗದ ಏಳಿಗೆಯನ್ನು ಉತ್ತೇಜಿಸಿದೆ. ಬಿರುಗಾಳಿ ಸಹಿತ ಭಾರೀ ಮಳೆಯಾದ ಕಾರಣದಿಂದಾಗಿ ಈ ಮರುಭೂಮಿಯಲ್ಲಿ ಹಸಿರು ಚಿಗುರೊಡೆದಿದೆ.
ಈ ವಿಶೇಷ ವಿದ್ಯಮಾನವನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಲವರು ಹಂಚಿಕೊಂಡಿದ್ದಾರೆ. ಕೆಲವರು ಈ ದೃಶ್ಯ ಕಂಡು ಇದು ಸೌದಿ ಅರೇಬಿಯಾ ಅಲ್ಲವೆಂದು ಅಚ್ಚರಿ ಪಡುತ್ತಿದ್ದರೆ ಮತ್ತೆ ಕೆಲವರು ಪ್ರಕೃತಿಯ ಶಕ್ತಿಗೆ ಮರುಳಾಗಿದ್ದಾರೆ. ಎಂತಹ ಮರುಭೂಮಿಯನ್ನೂ ಹಸಿರಾಗಿ ಪರಿವರ್ತಿಸುವ ಶಕ್ತಿ ಇರುವುದು ಪ್ರಕೃತಿಗೆ ಮಾತ್ರ ಎಂದು ನೆನೆಯುತ್ತಿದ್ದಾರೆ.
ಸದ್ಯ ಮರುಭೂಮಿಯಲ್ಲಿ ಹಸಿರು ಕಂಡಿರುವ ಅಲ್ಲಿನ ಜೀವನಾಡಿ ಒಂಟೆಗಳು ಎಲ್ಲೆಂದರಲ್ಲಿ ಈಗ ಹುಲ್ಲು ಮೇಯುವುದು ಕಾಣಬಹುದು. ತಮ್ಮ ಜೀವಿತಾವದಿಯಲ್ಲಿ ಹಸಿರನ್ನೇ ಕಾಣದ ಒಂಟೆಗಳು ಈಗ ಹಸಿರು ಹುಲ್ಲುಗಳ ರುಚಿ ನೋಡುತ್ತಿದ್ದಾವೆ.
ಈ ಹಸಿರು ಹುಲ್ಲುಗಾವಲು ಎಷ್ಟು ದೊಡ್ಡ ಮಟ್ಟಕ್ಕೆ ಹರಡಿಕೊಂಡಿದೆ ಅಂದರೆ ಈ ಚಿತ್ರವನ್ನು ನಾಸಾ ಉಪಗ್ರಹ ಸಹ ಸರೆಹಿಡಿದಿದೆ. ದೂರ ದೂರದ ಪ್ರದೇಶ ಈಗ ಹಸಿರಾಗಿರುವುದು ಸ್ಯಾಟಲೈಟ್ ಚಿತ್ರಣಗಳ ಮೂಲಕ ತಿಳಿಯಬಹುದಾಗಿದೆ. ಇಲ್ಲಿ ಒಂದೇ ಪ್ರಬೇಧದ ಹುಲ್ಲುಗಳು ಹುಟ್ಟುಕೊಂಡಿವೆ. ಇವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಬೆಳೆಯಬಲ್ಲವಂತೆ. ಹೀಗಾಗಿ ಕಡಿಮೆ ನೀರಿರುವ ಈ ಬಂಜರು ಮರಳು ಭೂಮಿಯಲ್ಲಿ ಈ ಹುಲ್ಲು ಬೆಳೆಯುತ್ತಿದೆ.
ಸದ್ಯ ಸೌದಿ ಅರೇಬಿಯಾದ ಸುತ್ತಲು ಇನ್ನಷ್ಟು ಮಳೆ ಬಿದ್ದರೆ ಮರುಭೂಮಿ ಮಾಯವಾಗಿ ಹುಲ್ಲುಗಾವಲು ನಿರ್ಮಾಣವಾಗುವುದರಲ್ಲಿ ಅಚ್ಚರಿ ಏನಿಲ್ಲ. ಆದರೆ ಮಳೆಯಾಗಬೇಕಿದ್ದ ಹಲವು ಕಡೆಗಳಲ್ಲಿ ಮಳೆಯಾಗದೆ ಆ ಪ್ರದೇಶ ಬಂಜರು ಭೂಮಿಯಾಗಿ ಮುಂದೊಂದು ದಿನ ಮರುಭೂಮಿ ಆದರೂ ಆಶ್ಚರ್ಯ ಪಡಬೇಕಿಲ್ಲ.



Click it and Unblock the Notifications
