Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗೋಬಿ ಅಲ್ಲ ಗುಲಾಬಿ ಫ್ರೈ..! ಬೀದಿ ಬದಿಯ ಫುಡ್ ವೈರಲ್!
ಇತ್ತೀಚಿಗೆ ಎಷ್ಟೊಂದು ಚಿತ್ರ ವಿಚಿತ್ರ ಆಹಾರಗಳು ನೋಡಲು ಸಿಗುತ್ತವೆ ಅನ್ನೋದನ್ನ ನೀವು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಹೊಸ ಹೊಸ ಪ್ರಯೋಗಗಳ ಹೆಸರಿನಲ್ಲಿ ಚಿತ್ರ ವಿಚಿತ್ರ ರೀತಿಯ ಖಾದ್ಯಗಳನ್ನ ಸವಿಯೋದು ಈಗ ಕಾಮನ್ ಎನ್ನುವಂತಾಗಿದೆ. ಅದರಲ್ಲೂ ಇತ್ರ ವಿಚಿತ್ರ ಕಾಂಬಿನೇಷನ್ ಫುಡ್ ಅನ್ನ ರಸ್ತೆ ಬದಿಯ ಅಂಗಡಿಗಳಲ್ಲಿ ನಾವು ನೋಡಬಹುದು.
ಇತ್ತೀಚಿಗೆ ಮಾವಿನ ಹಣ್ಣು ಬಳಸಿ ಸಮೋಸ ಮಾಡುತ್ತಿದ್ದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಮಂದಿ ಅಕ್ಷರಶಃ ಶಾಕ್ ಆಗಿದ್ದರು. ಆದ್ರೆ ಇಲ್ಲೊಂದು ವಿಡಿಯೋ ಈಗ ಇದಕ್ಕಿಂತ ವಿಚಿತ್ರವಾಗಿದ್ದು ನೋಡುಗರನ್ನು ಅಚ್ಚರಿಯ ಜೊತೆಗೆ ಕುತೂಹಲಕ್ಕೆ ದೂಡಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗುಲಾಬಿ ಹೂವನ್ನು ಫ್ರೈ ಮಾಡಿ ಸವಿಯಲು ನೀಡುತ್ತಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಕೆಂಪು ಬಣ್ಣದ ಗುಲಾಬಿ ಎಲ್ಲರು ತಮ್ಮ ಪ್ರೇಯಸಿಗೆ, ಅಥವಾ ಅತಿಥಿಗಳಿಗೆ ನೀಡುವುದನ್ನು ನಾವು ನೋಡಿರುತ್ತೇವೆ, ಆದ್ರೆ ಆತ ಗುಲಾಬಿ ಹೂವನ್ನು ಕಾದ ಎಣ್ಣೆಯಲ್ಲಿ ಅದ್ದಿ ಅದರಿಂದ ಒಂದು ರೀತಿಯ ಖಾದ್ಯ ತಯಾರಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಅನುರಾಗ್ ಎಂಬ ವ್ಲಾಗರ್ ಒಬ್ಬರು ಹಂಚಿಕೊಂಡಿರುವ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಶ್ಚಿಮ ದೆಹಲಿಯಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ವಿವರಿಸಲಾಗಿದೆ. ಒಂದು ಮೈದಾ ಹಿಟ್ಟಿನ ಪಾತ್ರೆಗೆ ಕೆಂಪು ಬಣ್ಣದ ಗುಲಾಬಿ ಹೂವನ್ನು ಆತ ಅದ್ದಿ ಅದನ್ನು ಕಾದ ಎಣ್ಣೆ ಬಾಣಲೆಗೆ ಅದ್ದುತ್ತಿದ್ದಾನೆ.
ಬಳಿಕ ಈ ಗರಿ ಗರಿ ಗುಲಾಬಿಯನ್ನು ಬೌಲ್‌ಗೆ ಹಾಕಿ ಸವಿಯಲು ನೀಡುತ್ತಿದ್ದಾನೆ. ಈ ಫ್ರೈ ಮಾಡಿರುವ ಗುಲಾಬಿಯು ಸಿಕ್ಕಾಪಟ್ಟೆ ರುಚಿ ನೀಡುತ್ತಂತೆ. ಹಾಗೆ ಈ ಫ್ರೈಡ್ ರೋಸ್ ಸವಿಯಲೆಂದೇ ಇಲ್ಲಿಗೆ ಗ್ರಾಹಕರು ಬರುತ್ತಾರಂತೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೋಡುಗರು ತಾವು ಸಹ ಗುಲಾಬಿ ಫ್ರೈ ಒಮ್ಮೆ ಸವಿಯಬೇಕು ಎಂಬ ಆಸೆ ಹೊರಹಾಕಿದ್ದಾರೆ.
ಮತ್ತೆ ಕೆಲವರು ಇಂತಹ ವಿಚಿತ್ರ ಫುಡ್ ಮಾಡಲು ಆತ ಕಲಿತದ್ದು ಎಲ್ಲಿ. ಯಾರಾದರು ಸುಂದರ ಹೂವುಗಳನ್ನು ಸವಿಯಲು ಮುಂದಾಗುತ್ತಾರಾ ಎಂಬ ಪ್ರಶ್ನೆ ಮಾಡಿದ್ದಾರೆ. ಸದ್ಯ ಹೂವುಗಳನ್ನೇ ಹುರಿಯಲು ಆರಂಭಿಸಿದ್ದೇವೆ, ಮುಂದೆ ಎಲ್ಲವನ್ನೂ ಹುರಿದು ತಿನ್ನುತ್ತೇವೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಹಾಗೆ ಭಾರತ ಈಗ ಸಂಪೂರ್ಣ ಅಮೆರಿಕವಾಗಿ ಬದಲಾಗುತ್ತಿದೆ ಎಂಬ ಅಭಿಪ್ರಾಯ ಸಹ ಹೊರಹಾಕಿದ್ದಾರೆ.
ವೈರಲ್ ಆಗಿತ್ತು ಬತೂರ ಬರ್ಗರ್
ಈ ಮೊದಲು ಬತೂರೆ ಬರ್ಗರ್ ವಿಡಿಯೋವೊಂದು ವೈರಲ್ ಆಗಿತ್ತು ಅದರಲ್ಲಿಯೂ ಕೂಡ ಬತೂರದಿಂದ ಮಾಡಲಾದ ಬರ್ಗರ್ ವಿಡಿಯೋ ನೋಡುಗರ ಹುಬ್ಬೇರಿಸಿತ್ತು. ಇಂತಹ ವಿಚತ್ರ ಕಾಂಬಿನೇಷನ್ ಫುಡ್ ನೋಡಿ ಗ್ರಾಹಕರು ಶಾಕ್ ಆಗಿದ್ದರು. ಇಂತಹ ಹತ್ತಾರು ವಿಲಕ್ಷಣ ಆಹಾರಗಳು ಇತ್ತೀಚಿಗೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.
ಚಾಕೋಲೆಟ್ ಐಸ್‌ಕ್ರೀಮ್ ಪಕೋಡಾ
ಪಕೋಡಾ ಸವಿದವರಿಗೆ ಅದರ ರುಚಿ ಹಿಡಿಸಿರುತ್ತೆ. ಆದ್ರೆ ಚಾಕೋಲೆಟ್ ಐಸ್‌ಕ್ರೀಮ್ ಹಾಕಿ ಮಾಡುವ ಪಕೋಡಾ ಸವಿದಿದ್ದೀರಾ. ಪಕೋಡಾ ಯಾವಗಲು ಗರಂ ಆಗಿ ರೋಸ್ಟ್ ಆಗಿ ಇದ್ದರೇನೆ ರುಚಿ. ಆದರೆ ಐಸ್ ಕ್ರೀಮ್ ಜೊತೆಗೆ ಹಾಕಿ ಕೊಡುವ ವಿಲಕ್ಷಣ ಫುಡ್ ವಿಡಿಯೋ ಸಹ ವೈರಲ್ ಆಗಿತ್ತು.



Click it and Unblock the Notifications
