Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಉದ್ದ ಬಾಲದ ಮೇಕೆ ಆಯ್ತು ಈಗ ಉದ್ದ ಕಿವಿಯ ಮೇಕೆ..! ಇದ್ಯಾವ ತಳಿ.? ಇದರ ವಿಶೇಷ ಗೊತ್ತಾ?
ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ನಾಯಿ ಮಾಂಸ ಬಹಳಷ್ಟು ಸದ್ದು ಮಾಡಿತ್ತು. ಉದ್ದ ಬಾಲದ ಮೇಕೆ ತಳಿ ಎಂದು ವದ ಮಂಡಿಸಿದ್ದಲ್ಲದೆ ಲ್ಯಾಬ್ ರಿಪೋರ್ಟ್‌ನಲ್ಲೂ ಅದು ಮೇಕೆಯ ಮಾಂಸ ಎಂದು ದೃಢವಾಗಿತ್ತು. ಇದು ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಆದರೆ ವಿವಾದ ಹುಟ್ಟಿಕೊಳ್ಳಲು ಮೂಲ ಕಾರಣವಾಗಿದ್ದು ರಾಜಸ್ಥಾನದ ಮೂಲಕ ಉದ್ದ ಬಾಲದ ಮೇಕೆ. ಈ ತಳಿಯ ಮೇಕೆಗಳಿಗೆ ಉದ್ದವಾದ ಬಾಲವಿರುತ್ತದೆ.
ಆದರೆ ಜೀವಂತ ಮೇಕೆಗಳನ್ನು ತಂದು ಇಲ್ಲಿ ಮಾಂಸ ಮಾಡಿ ಮಾರಾಟ ಮಾಡುವುದು ಸಾಗಾಣಿಕೆ ವೆಚ್ಚಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಅಲ್ಲಿಂದಲೇ ಮಾಂಸ ತರಿಸಿಕೊಂಡು ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಈಗ ಈ ಪ್ರಕರಣ ಸುಖಾಂತ್ಯವೂ ಕಂಡಿದೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೇಕೆಯ ಫೋಟೋವೊಂದು ಎಲ್ಲರ ಗಮನ ಸೆಳೆದಿದೆ.

ನಾವು ನೋಡಿದ್ದಂತೆ ಸಾಮಾನ್ಯವಾಗಿ ಮೇಕೆಗಳ ಕಿವಿ ಜೋತು ಬಿದ್ದರೂ ಹೆಚ್ಚು ಉದ್ದವಿರುವುದಿಲ್ಲ. ಆದರೆ ಇಲ್ಲೊಂದು ಮೇಕೆಯ ಕಿವಿಗಳು ನೆಲಕ್ಕೆ ಎಳೆಯುವಷ್ಟು ಉದ್ದವಾಗಿದ್ದು ನೋಡುಗರು ಅಕ್ಷರಶಃ ಅಚ್ಚರಿಗೆ ಒಳಗಾಗಿದ್ದಾರೆ. ಅಮೆರಿಕ ಹಾಗೂ ಚೀನಾದಲ್ಲಿ ಈ ಮೇಕೆಗಳಿಗೆ ಇನ್ನಿಲ್ಲದ ಬೇಡಿಕೆ ಇದೆ.
ಭಾರತದಲ್ಲೂ ಈ ತಳಿಯ ಮೇಕೆಗಳಿದ್ದು ಗುಲಾಬಿ ಪಟೇರಿ ಎಂದು ಇವುಗಳನ್ನು ಕರೆಯಲಾಗುತ್ತದೆ, ಇವುಗಳ ಕಿವಿಗಳು ಸಾಮಾನ್ಯ ಮೇಕೆಗಳಿಗಿಂತ ಉದ್ದವಾಗಿದ್ದು ನೆಲಕ್ಕೆ ತಾಕುವಷ್ಟು ಉದ್ದವಾಗಿಯೂ ಬೆಳೆಯುತ್ತದೆ. ಮೇಲ್ನೋಟಕ್ಕೆ ಯಾರೋ ಬಟ್ಟೆ ಕಟ್ಟಿದಂತೆ ಅವುಗಳ ಕಿವಿ ನೀಳವಾಗಿ ಇಳಿ ಬಿಟ್ಟಿರುತ್ತದೆ.
ಗುಲಾಬಿ ಪಟೇರಿ ಆಡಿನ ಕಿವಿಗಳ ಉದ್ದವು ಭುಜದ ಹಿಂದೆಯಿಂದ ಆರಂಭಗೊಂಡು ಪಾದಗಳವೆರೆಗೆ ಇಳಿಬಿಟ್ಟುಕೊಂಡಿರುತ್ತದೆ. ತಮ್ಮ ಕಿವಿಗಳನ್ನು ಹೊರತುಪಡಿಸಿ, ಈ ಮೇಕೆಗಳು ಹಾಲು ಮತ್ತು ಗುಣಮಟ್ಟದ ಮಾಂಸದ ಕಾರಣದಿಂದಾಗಿ ಹೆಚ್ಚು ಬೇಡಿಕೆ ಹೊಂದಿವೆ. ಹೀಗಾಗಿ ಭಾರತದ ಈ ತಳಿ ಮಧ್ಯಪ್ರಾಚ್ಯ, ಪಾಕಿಸ್ತಾನ ಸೇರಿ ಹಲವು ದೇಶಗಳಲ್ಲಿ ಬಹುಬೇಡಿಕೆಯ ತಳಿಗಳಾಗಿವೆ.
ಆದರೆ ಇವುಗಳ ದೇಹ ರಚನೆ ಬಡಕಲಾಗಿರುತ್ತವೆ, ನೋಡಲು ತೆಳುವಾಗಿರುವುದು ಹೆಚ್ಚು ಕೊಬ್ಬಿನಾಂಶ ಇಲ್ಲದಂತೆ ಕಂಡುಬರುತ್ತವೆ. ಹೀಗಾಗಿ ಇವುಗಳ ಮಾಂಸಕ್ಕೆ ಬಹಳ ಬೇಡಿಕೆ ಇದೆ. ಈ ತಳಿಯ ಮೇಕೆಗಳ ವಿಡಿಯೋವನ್ನು @wildheart_500 ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ವಿಡಿಯೋದಲ್ಲಿ ಮೂರು ಮೇಕೆಗಳ ನೋಡಬಹುದು. ಹಾಗೆ ಅವುಗಳ ಕಿವಿಗಳು ಉದ್ದವಿರುವುದು ಗಮನಿಸಬಹುದು.
ಈ ವಿಡಿಯೋ ನೋಡಿದ ಕೆಲವರು ಇದೆಂತ ವಿಚಿತ್ರ ಎನ್ನುತ್ತಿದ್ದಾರೆ. ಮೊದಲು ಉದ್ದಬಾಲದ ಮೇಕೆ ಸದ್ದು ಮಾಡಿದ್ದ ಬೆನ್ನಲ್ಲೆ ಈ ಉದ್ದ ಕಿವಿಯ ಮೇಕೆಯೂ ಮತ್ತೊಂದು ವಿವಾದ ಹುಟ್ಟಿಸಬಹುದೇ ಎಂಬ ಕುತೂಹಲಕಾರಿ ಪ್ರಶ್ನೆ ಮಾಡಿದ್ದಾರೆ. ಗುಲಾಬಿ ಪಟೇರಿ ಮೇಕೆಗಳು ಗುಲಾಬಿ ಬಣ್ಣದ ಚರ್ಮದೊಂದಿಗೆ ಸಂಪೂರ್ಣವಾಗಿ ಬಿಳಿ ಬಣ್ಣದ ಮೇಲ್ಮೈ ಹೊಂದಿರುತ್ತದೆ. ಇವುಗಳ ಕಾಲುಗಳ ತುದಿ ಹಾಗೂ ಕೊಂಬು ಬಿಳಿ ಬಣ್ಣದಲ್ಲಿ ಕಂಡುಬರುತ್ತದೆ.
ಈ ಮೇಕೆಗಳು ಶೀತ ಪ್ರದೇಶದಲ್ಲಿ ಬೆಳೆಯುವುದಿಲ್ಲ, ಬದಲಿಗೆ ಉಷ್ಣ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತವೆ. 60 ರಿಂದ 100 ಕೆಜಿ ಸಹ ತೂಗಬಹುದು. ಇವು ವರ್ಷದಲ್ಲಿ ಎರಡು ಬಾರಿ ಮರಿಗಳಿಗೆ ಜನ್ಮ ನೀಡುತ್ತವೆ. ಅಚ್ಚರಿ ಎಂದರೆ ಈ ತಳಿಯ ಮೇಕೆಗಳು ಅವಳಿ ಕರುಗಳಿಗೆ ಜನ್ಮ ನೀಡುವುದೇ ಹೆಚ್ಚು. ಇನ್ನು ಭಾರತದಲ್ಲಿ ಒಂದು ವಯಸ್ಕ ಗುಲಾಬಿ ಪಟೇರಿ ಮೇಕೆಯ ಬೆಲೆ 1 ಲಕ್ಷ ರೂಪಾಯಿಯಿಂದ ಆರಂಭಗೊಂಡು 2.5 ಲಕ್ಷ ರೂಪಾಯಿ ವರೆಗೂ ಇರಲಿದೆ ಎಂದು ತಿಳಿದುಬರುತ್ತದೆ.
ಅಮೆರಿಕದಲ್ಲಿ ಒಂದು ಮೇಕೆಯ ಬೆಲೆ 1 ಸಾವಿರ ಯುಎಸ್ ಡಾಲರ್‌ನಿಂದ ಹಿಡಿದು 1500 ಯುಎಸ್ ಡಾಲರ್‌ವೆರೆಗೆ ಇರಲಿದೆ ಎಂದು ತಿಳಿದುಬಂದಿದೆ.



Click it and Unblock the Notifications
