Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ಫಾರಿನ್ ಅಜ್ಜಿಗೆ ಸೀರೆ ಉಡಿಸಿದಾಗ ಎಷ್ಟೊಂದು ಖುಷಿ ಪಟ್ಟರು ನೋಡಿ, ವೀಡಿಯೋ ವೈರಲ್
ನಾವು ವಿದೇಶಿ ಡ್ರೆಸ್‌ಗೆ ಮಾರು ಹೋಗುತ್ತಿರುವಾಗ ವಿದೇಶಿಗರು ನಮ್ಮ ಸಂಸ್ಕೃತಿ, ನಮ್ಮ ಉಡುಗೆ ತೊಡುಗೆ ಇಷ್ಟಪಡುತ್ತಿದ್ದಾರೆ ಎಂಬುವುದು ಕೂಡ ಅಷ್ಟೇ ಸತ್ಯ. ಭಾರತೀಯ ಹೆಣ್ಣು ಅಂದರೆ ಅವಳನ್ನು ಕಲ್ಪಿಸಿಕೊಳ್ಳುವುದೇ ಸೀರೆಯಲ್ಲಿ. ಅಲ್ಲದೆ ನಮ್ಮ ಬಣ್ಣಕ್ಕೆ ಮಾಡರ್ನ್ ಡ್ರೆಸ್‌ಗಿಂತ ಸೀರೆ ತುಂಬಾನೇ ಚೆನ್ನಾಗಿ ಕಾಣುತ್ತದೆ.
ಭಾರತೀಯ ಮಹಿಳೆರನ್ನು ಸೀರೆಯಲ್ಲಿ ನೋಡಿದ ವಿದೇಶಿ ಮಹಿಳೆಗೆ ಸೀರೆ ಉಡಬೇಕೆಂದು ತುಂಬಾ ಸಮಯದಿಂದ ಆಸೆಯಿತ್ತು, ಆದರೆ ಅಷ್ಟೊಂದು ಉದ್ದದ ಸೀರೆ ಹೇಗಪ್ಪಾ ಉಡುತ್ತಾರೆ ಎಂಬ ಅಚ್ಚರಿಯೂ ಅವರಿಗೆ ಹಾಗಾಗಿ ಸೀರೆ ಉಡಬೇಕೆಂಬುವುದು ಆಸೆ ಆಗಿತ್ತು, ಅವರ ಆಸೆಯನ್ನು ಮೊಮ್ಮಗಳು ನೆರವರಿಸಿದ್ದಾಳೆ, ಆ ವೀಡಿಯೋ ಇದೀಗ ವೈರಲ್ ಆಗಿದೆ.

ಈ ವೀಡಿಯೋ ಶೇರ್ ಮಾಡಿ ಈ ಬಯಕೆ ಹಿಂದಿರುವ ಸುಂದರ ಕತೆಯನ್ನು ಕೂಡ ಹಂಚಿಕೊಂಡಿದ್ದಾರೆ.
ಈ ಕತೆಯ ಫ್ಲ್ಯಾಷ್‌ಬ್ಯಾಕ್ ಪ್ರಾರಂಭವಾಗುವುದು 20 ವರ್ಷಗಳ ಹಿಂದೆ, ಇಟಲಿಯ ಅವರು ವೆಕೇಷನ್‌ಗೆ ಎಂದು ಕುಟುಂಬದ ಜೊತೆಗೆ ಮುಂಬೈಗೆ ಬಂದಿರುತ್ತಾರೆ, ಇಲ್ಲಿ ನೋಡಿದರೆ ಮಹಿಳೆಯರು ಸೀರೆಯಲ್ಲಿ ಓಡಾಡುತ್ತಿರುತ್ತಾರೆ, ನೋಡಲು ತುಂಬಾನೇ ಆಕರ್ಷಕವಾಗಿ ಕಾಣುತ್ತಾರೆ. ಅಲ್ಲದೆ ಅವರು ಹಿಂದೆ ಸೀರಿಯಲ್ ಕೂಡ ನೋಡುತ್ತಾರೆ, ಅದರಲ್ಲಿಯೂ ಮಹಿಳೆಯರು ಸೀರೆ ಉಡುವುದನ್ನು ನೋಡಿ ತುಂಬಾನೇ ಖುಷಿಯಾಗುವುದು.
ಭಾರತದಿಂದ ಹಿಂತಿರುವಾಗ ಒಂದು ಸೀರೆಯನ್ನೂ ಖರೀದಿಸುತ್ತಾರೆ. ಆದರೆ ಅವರಿಗೆ ಡ ಇದನ್ನು ಉಡುವುದು ಹೇಗೆ ಎಂದು ಗೊತ್ತಿರಲಿಲ್ಲ , ಸೀರೆ ಉಡಿಸಿಕೊಡಲು ಯಾರ ಬಳಿಯಾದರೂ ಕೇಳೋಣ ಎಂದರೆ ಸಂಕೋಚ, ಹಾಗಾಗಿ ಅವರ ಆಸೆ ಆಸೆಯಾಗಿಯೇ ಉಳಿದಿತ್ತು.
ಇದು ಮೊಮ್ಮಗಳಿಗೆ ಗೊತ್ತಾಗುತ್ತೆ, ತನ್ನಜ್ಜಿಯಲ್ಲಿ ಇಂಥದ್ದೊಂದು ಆಸೆ ಇದೆ ಎಂದು ತಿಳಿದು ಅಜ್ಜಿಗೆ ಸೀರೆ ಉಡಿಸಲು ಮುಂದಾಗುತ್ತಾಳೆ, ಬಾ ಅಜ್ಜಿ ಸೀರೆ ಉಡಿಸುತ್ತೇನೆ ಎಂದು ಕರೆದಾಗ ತಕ್ಷಣವೇ ಎದ್ದು ನಿಂತು ಬಿಡುತ್ತಾರೆ. ಮೊಮ್ಮಗಳು ಅಜ್ಜಿಗೆ ಸೀರೆ ಉಡಿಸುತ್ತಾಳೆ, ಅಜ್ಜಿಗೆ ತುಂಬಾನೇ ಖುಷಿಯಾಗುವುದು, ಇದೀಗ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ.
ಅಜ್ಜಿಯಂತೂ ತುಂಬಾನೇ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ
ಹೌದು ಅಜ್ಜಿ ಸೀರೆಯಲ್ಲಿ ನೋಡಲು ತುಂಬಾನೇ ಕ್ಯೂಟ್ ಆಗಿ ಕಾಣುತ್ತಿದ್ದಾರೆ, ಬಹುಶಃ ಬೇರೆ ಯಾವ ಡ್ರೆಸ್‌ನಲ್ಲಿಯೂ ಇಷ್ಟು ಮುದ್ದಾಗಿ ಖಂಡಿರಲು ಸಾಧ್ಯವಿಲ್ಲ.



Click it and Unblock the Notifications
