Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಇಸ್ರೋದಿಂದ ಉಪಗ್ರಹ ಇಒಎಸ್-08 ಯಶಸ್ವಿ ಉಡಾವಣೆ: ಪರಿಸರ ವಿಪತ್ತುಗಳ ಮೊದಲೇ ಸೂಚನೆ ನೀಡಲಿದೆ ಈ ಉಪಗ್ರಹ
ಬಾಹ್ಯಾಕಾಶ ಲೋಕದಲ್ಲಿ ಭಾರತದ ಸಾಧನೆಯನ್ನು ಇಡೀ ವಿಶ್ಚವೇ ಗಮನಿಸುತ್ತಿದೆ, ಇದೀಗ ನಮ್ಮ ಇಸ್ರೋ ಸಾಧನೆಗೆ ಹೊಸ ಸೇರ್ಪಡೆ ಎಸ್‌ಎಸ್ ಎಲ್‌ವಿ ಯಶಸ್ವಿಯಾಗಿ ಉಡಾವಣೆಯಾಗಿದೆ. ಡಿ3 ರಾಕೆಟ್ ಉಪಗ್ರಹವನ್ನು ಹೊತ್ತುಕೊಂಡು ನಭದತ್ತ ಸಾಗಿದೆ. ಆಗಸ್ಟ್ 16 ಬೆಳಗ್ಗೆ 9:17ಕ್ಕೆ ಉಡಾವಣೆ ಮಾಡಲಾಯಿತು. ಆಂಧ್ರಪ್ರದೇಶದ ಶ್ರಿಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

SSLV-D3/EOS-08 Mission:
— ISRO (@isro) August 16, 2024
✅The third developmental flight of SSLV is successful. The SSLV-D3 🚀placed EOS-08 🛰️ precisely into the orbit.
🔹This marks the successful completion of ISRO/DOS's SSLV Development Project.
🔸 With technology transfer, the Indian industry and…
ರಾಕೆಟ್ ಉಡಾವಣೆಗೆ ಮುನ್ನ ಚೆಂಗಾಲಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಇಸ್ರೋ ಅಧ್ಯಕ್ಷ ಸೋಮನಾಥ್
ದೈವ ಶಕ್ತಿ ಒಂದಿದೆ, ಈ ನಂಬಿಕೆ ವಿಜ್ಞಾನಿಯಾದರೂ ಇಸ್ರೋ ಅಧ್ಯಕ್ಷ ಸೋಮನಾಥ್ ಬಲವಾಗಿ ನಂಬಿದ್ದಾರೆ, ಹಾಗಾಗಿ ಉಡ್ಡಾಯನಕ್ಕೆ ಮೊದಲು ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದಿದ್ದಾರೆ.
ಉಪಗ್ರಹ ಯಶಸ್ವಿಯಾಗಿ ಉಡ್ಡಾಯನ ಆಗಿರುವುದಕ್ಕೆ ಭಾರತೀಯರು ಸಂತೋಷದಿಂದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
🚀SSLV-D3/EOS-08🛰️ Mission:
— ISRO (@isro) August 12, 2024
The launch of the third developmental flight of SSLV is scheduled for August 16, 2024, in a launch window of one hour starting at 09:17 Hrs. IST pic.twitter.com/JWxq9X6rjk
ಪರಿಸರ ವೀಕ್ಷಣೆ ಮಾಡಲಿದೆ ಈ ಉಪಗ್ರಹ
ಈ ಉಪಗ್ರಹ ಪರಿಸರದಲ್ಲಿನ ಬದಲಾವಣೆಯನ್ನು ಗುರುತಿಸಿ ಮಾಹಿತಿ ನೀಡಲಿದೆ, ಪ್ರಕೃತಿ ವಿಕೋಪದಂಥ ಸೂಚನೆಗಳನ್ನು ಮೊದಲೇ ಗ್ರಹಿಸಿ ಸೂಚನೆ ನೀಡಲಿದೆ, ಹೀಗಾಗಿ ಮನುಕುಲ ರಕ್ಷಣೆಯ ದೃಷ್ಟಿಯಿಂದ ಈ ಉಪಗ್ರಹದ ಕಾರ್ಯ ತುಂಬಾನೇ ಮಹತ್ವದ್ದಾಗಿದೆ.
🚀SSLV-D3/EOS-08🛰️ Mission:
— ISRO (@isro) August 12, 2024
The launch of the third developmental flight of SSLV is scheduled for August 16, 2024, in a launch window of one hour starting at 09:17 Hrs. IST pic.twitter.com/JWxq9X6rjk
ಈ ವರ್ಷ ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶದಲ್ಲಿ ಬರೆಕುಸಿತ ಉಂಟಾಗಿ ಹಲವು ಸಾವು -ನೋವುಗಳು ಸಂಭವಿಸಿತು, ಅದರಲ್ಲಿಯೂ ಕೇರಳದ ಭೀಕರ ದುರಂತವನ್ನೇ ಕಂಡಿತು, ಒಂದಿಷ್ಟೂ ಮುನ್ಸೂಚನೆ ಸಿಗಲಿಲ್ಲ, ಸಿಕ್ಕಿದ್ದರೆ ಜೀವಗಳ ರಕ್ಷಣೆ ಮಾಡಬಹುದಿತ್ತು ಎಂದು ಎಲ್ಲರು ಅಂದುಕೊಂಡಿದ್ದರು. ಈಗ ಉಡ್ಡಾವಣೆ ಮಾಡಿದ ಉಪಗ್ರಹ ಇಂತ ವಿಕೋಪಗಳ ಮುನ್ಸೂಚನೆಯನ್ನು ಮೊದಲೇ ನೀಡುವುದು. ಹೀಗಾಗಿ ಜನರ ಜೀವಗಳನ್ನು ರಕ್ಷಣೆ ಮಾಡಲು ಈ ಉಪಗ್ರಹ ನೆರವಾಗಲಿದೆ.



Click it and Unblock the Notifications











