Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ಅಮೆಜಾನ್ ಕಾಡಿನಲ್ಲಿ ಬುಡಕಟ್ಟು ವ್ಯಕ್ತಿ ಪತ್ತೆ..! ಲೈಟರ್‌ನಿಂದ ಬೆಂಕಿ ಹೊತ್ತಿಸೋದು ನೋಡಿ ಅಚ್ಚರಿ!!
ನೀವು ಶಿಲಾಯುಗದ ಜನರು ಹೇಗೆ ಬದುಕಿದ್ದರು ಎಂಬುದನ್ನು ಓದಿ ತಿಳಿದಿರಬಹುದು. ಇಂದಿಗೂ ಕೆಲವು ದ್ವೀಪದಲ್ಲಿ ಬುಡಕಟ್ಟು ಜನಾಂಗ ಈ ಆಧುನಿಕ ಜಗತ್ತಿನ ಸಂಪರ್ಕವೇ ಇಲ್ಲದೆ ಬದುಕುತ್ತಿರುವುದು ನಾವು ನೋಡಬಹುದು. ಕೆಲವು ದ್ವೀಪಗಳಲ್ಲಿ ಹಾಗೆ ಅಮೇಜಾನ್‌ನಂತಹ ದೊಡ್ಡ ಅರಣ್ಯ ಪ್ರದೇಶದಲ್ಲಿ ಇಂದಿಗೂ ಈ ರೀತಿ ಬುಡಕಟ್ಟು ಜನರು ವಾಸವಿದ್ದಾರೆ.
ಅವರನ್ನು ಭೇಟಿಯಾಗುವುದು ಬಹಳ ಅಪಾಯಕಾರಿ ಎಂಬ ಉದ್ದೇಶದಿಂದ ಇಂದಿಗೂ ಅವರ ಕುರಿತ ಅಧ್ಯಯನವಾಗಲಿ, ಅಥವಾ ಅವರನ್ನು ಅಲ್ಲಿಂದ ಕರೆತರುವ ಕಾರ್ಯವಾಗಲಿ ಮಾಡುತ್ತಿಲ್ಲ. ಆದ್ರೆ ಈಗಲೂ ಇಂತಹ ಬುಡಕಟ್ಟು ಮಂದಿ ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕುವುದು ಕೂಡ ನೋಡಬಹುದು.

ಹೀಗೆ ಅವರು ಹೊಸ ಹೊಸ ಆವಿಷ್ಕಾರಗಳ ಕಲಿಯಲು ಅಳವಡಿಸಿಕೊಳ್ಳಲು ಇಷ್ಟಪಡೋದಿಲ್ಲ. ಹಾಗೆ ಇಲ್ಲೊಬ್ಬ ಯುವಕನ ವಿಡಿಯೋ ಕೂಡ ಈಗ ಬಹಳ ಕುತೂಹಲಕ್ಕೆ ಕಾರಣವಾಗಿದೆ. ಅಮೆಜಾನ್ ಕಾಡಿನಲ್ಲಿ ಇಂತಹ ಬುಡಕಟ್ಟು ಜನಾಂಗವೊಂದು ಪತ್ತೆಯಾಗಿದೆ ಎಂದು ವರದಿಯಾಗಿದೆ. ನೈರುತ್ಯ ಅಮೆಜಾನ್ ಪುರುಸ್ ನದಿಯ ಉದ್ದದಲ್ಲಿ ವ್ಯಕ್ತಿಯೊಬ್ಬ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದಾನೆ.
ಫೆಬ್ರವರಿ 12ರ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ನೈಋತ್ಯ ಅಮೆಜಾನ್‌ನ ಪುರುಸ್ ನದಿಯ ತಟದಲ್ಲಿ ಆತ ಪತ್ತೆಯಾಗಿದ್ದಾನೆ. ಮೈ ಮೇಲೆ ಕೇವಲ ಒಂದು ಬಟ್ಟೆ ಧರಿಸಿರುವ ಆತ ನೋಡಲು ಸಾಮಾನ್ಯನಂತೆ, ಶಾಂತವಾಗಿ ಕಾಣಿಸುತ್ತಾನೆ, ಆರೋಗ್ಯವಂತನಾಗಿದ್ದಾನೆ. ಆದರೆ ಮೊದಲು ಆತ ಮಾನವರ ಮೇಲೆ ದಾಳಿಗೆ ಮುಂದಾಗಿದ್ದ ಎನ್ನಲಾಗಿದೆ.
ಆತ ಉಳಿದವರ ಜೊತೆಗೆ ಮಾತುಕತೆಗೆ ಇಳಿದು ಬೆಂಕಿ ಹೊತ್ತಿಸಲು ಹೇಳಿದ್ದಾನೆ. ರಾತ್ರಿ ಸಮಯವಾಗಿದ್ದು ಮೈ ಕೊರೆಯುವ ಚಳಿಯಲ್ಲಿ ಆತ ಬೆಂಕಿ ಹೊತ್ತಿಸಲು ಕೇಳಿಕೊಂಡಿದ್ದಾನೆ. ಆದ್ರೆ ಮಾನವರ ಬಳಿ ಇದ್ದ ಸಣ್ಣ ಲೈಟರ್‌ನಿಂದ ಬೆಂಕಿ ಬರುವುದು ನೋಡಿ ಆತ ಅಚ್ಚರಿಗೊಂಡಿದ್ದಾನೆ. ಏಕೆಂದರೆ ಆತನ ಬುಡಕಟ್ಟು ಮಂದಿ ಇಂದಿಗೂ ಸಾಂಪ್ರದಾಯಿಕ ರೀತಿ ಬೆಂಕಿ ಬಳಸುವ ಪ್ರಕ್ರಿಯೆ ಮಾಡುತ್ತಿರಬಹುದು.
ಅಂದರೆ ಆತ ಕಲ್ಲಿನಿಂದಲ ಅಥವಾ ಕಿಡಿಯನ್ನು ಹೊತ್ತಿಸಿಕೊಳ್ಳುವ ಮೂಲಕವೇ ಇಂದಿಗೂ ಬೆಂಕಿಯ ಬಳಕೆ ಮಾಡುತ್ತಿದ್ದಾನೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಆತ ಲೈಟರ್‌ನಿಂದ ಬೆಂಕಿ ಬರುವುದು ನೋಡಿ ಅಚ್ಚರಿಗೊಳಗಾಗಿದ್ದಾನೆ. ಹಾಗೆ ಲೈಟರ್‌ನಿಂದ ಬೆಂಕಿ ಹೊತ್ತಿಸಲು ಆತ ಕೂಡ ಪ್ರಯತ್ನಿಸುತ್ತಾನೆ. ನಂತರ ಅಧಿಕಾರಿಗಳು ಆಗಮಿಸಿ ಆತನನ್ನು ಹತ್ತಿರದ ಕಾಳಜಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಆತ ಆರಂಭದಲ್ಲಿ ಬೆಂಕಿ ಕೇಳುವುದು ನೋಡಬಹುದು ಆದ್ರೆ ಲೈಟರ್‌ನಿಂದ ಬೆಂಕಿ ಹೊತ್ತಿಸುವುದು ಹೇಗೆ ಅನ್ನೋದು ಆತನಿಗೆ ತಿಳಿದಿಲ್ಲ. ಹಲವು ಬಾರಿ ಪ್ರಯತ್ನಿಸಿದ ಬಳಿಕ ಆತನಿಗೆ ಬೆಂಕಿ ಹೊತ್ತಿಸುವುದು ಹೇಗೆ ಎಂಬುದು ತಿಳಿದುಬಂದಿದೆ. ಸದ್ಯ ಆತನನ್ನು ಪರಿಹಾರ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷಿಸಲಾಗಿದೆ.
ಆತನ ಕುರಿತು ಮಾಹಿತಿ ಪಡೆದು ಆ ಸ್ಥಳದಲ್ಲಿ ಇನ್ನೆಷ್ಟು ಮಂದಿ ಉಳಿದಿದ್ದಾರೆ ಎಂಬುದನ್ನು ಪತ್ತೆ ಮಾಡಲು ಈಗ ಮುಂದಾಗಲಾಗಿದೆ. ಆತ ಮಾಮೋರಿಯಾ ಗ್ರಾಂಡೆ ಪ್ರದೇಶಕ್ಕೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಈ ಪುರುಸ್ ನದಿ ತೀರದಲ್ಲಿ ಇಂತಹ ಬುಡಕಟ್ಟು ಜನಾಂಗ ಇಂದಿಗೂ ನೆಲೆಸಿದ್ದು, ಅವರ ಕುರಿತ ಮಾಹಿತಿ ಕಲೆಹಾಕಲು ನಿರಂತರವಾಗಿ ಯತ್ನ ಮಾಡಲಾಗುತ್ತಿದೆ.
ಮಾಮೋರಿಯಾ ಗ್ರಾಂಡೆ ಪ್ರದೇಶದಲ್ಲಿ ಬುಡಕಟ್ಟು ಜನಾಂಗಗಳು ನೆಲೆಸಿದ್ದು, ಅಲ್ಲಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಬ್ರೆಜಿಲ್‌ನ ಮಳೆಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗ ವಾಸವಿರುವುದು ಕೂಡ ನಾವು ಇಲ್ಲಿ ನೆನೆಯಬಹುದು.



Click it and Unblock the Notifications











