Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಾಂಗ್ಲಾ ಬೀದಿಯಲ್ಲಿ ಕಾಣಿಸಿಕೊಂಡರಾ ವಿರಾಟ್ ಕೊಹ್ಲಿ..! ಈ ವಿಡಿಯೋದಲ್ಲಿ ಇರೋದು ಯಾರು?
ನೀವು ಕ್ರಿಕೆಟ್ ಪ್ರೇಮಿಗಳಾಗಿದ್ದರೆ ನಿಮಗೆ ಭಾರತ ಕ್ರಿಕೆಟ್ ತಂಡದ ಆಟಗಾರರ ಪರಿಚಯ ಇದ್ದೇ ಇರುತ್ತೆ. ಅದ್ರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಯಾರಿಗೆ ಗೊತ್ತಿಲ್ಲ. ವಿರಾಟ್ ಬ್ಯಾಟ್ ಹಿಡಿದು ಫೀಲ್ಡ್‌ಗೆ ಇಳಿದರೆ ರನ್‌ಗಳ ಮಳೆ ಬರೋದು ಪಕ್ಕ. ಅವರ ಹೆಸರಲ್ಲಿ ನೂರಾರು ರೆಕಾರ್ಡ್‌ಗಳು ತುಂಬಿವೆ. ಹೀಗಾಗಿ ಕ್ರಿಕೆಟ್ ಆಡದೆ ಇರುವ ದೇಶದಲ್ಲೂ ವಿರಾಟ್ ಫೇಮಸ್ ಆಗಿದ್ದಾರೆ.
ಆದ್ರೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿರಾಟ್ ಕೊಹ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹರಡಲಾಗಿದೆ. ಬಾಂಗ್ಲಾದೇಶದಲ್ಲಿ ಅರಾಜಕತೆಯಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುವ ಜನತೆಯ ಪ್ರತಿಭಟನೆ ಹಿಂಸಾರೂಪ ಪಡೆದು ಬಳಿಕ ಪ್ರಧಾನಿ ಶೇಖ್ ಹಸೀನ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ.

ಈ ಹಿನ್ನೆಲೆ ದೇಶದಲ್ಲಿ ಈಗ ಮಿಲಿಟರಿ ಆಡಳಿತ ಜಾರಿಯಾಗಿದೆ. ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ವಿರುದ್ಧ ಆರಂಭಗೊಂಡಿದ್ದ ಪ್ರತಿಭಟನೆ ಬಳಿಕ ಉಗ್ರ ರೂಪ ಪಡೆದಿದ್ದಲ್ಲದೆ ದೇಶದೆಲ್ಲೆಡೆ ಹಿಂಸಾಚಾರ, ಘರ್ಷಣೆ ಏರ್ಪಟ್ಟಿತ್ತು. ಆದರೆ ಈಗ ಮಿಲಿಟರಿ ಆಡಳಿತ ಜಾರಿಯಾಗಿದೆ. ಈ ನಡುವೆ ಬಾಂಗ್ಲಾದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಬೀದಿ ಬೀದಿಯಲ್ಲಿ ಯುವ ಜನೆತೆಯ ಜಯ ಘೋಷಗಳು ಮೊಳಗುತ್ತಿವೆ.
ಈ ರೀತಿಯ ಸಂಭ್ರಮಾಚರಣೆಯ ನಡುವ ವಿರಾಟ್ ಕೊಹ್ಲಿಯ ವಿಡಿಯೋ ಸಹ ವೈರಲ್ ಆಗಿದೆ. ಆದ್ರೆ ಅದು ನಿಜವಾದ ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ. ವಿರಾಟ್ ಕೊಹ್ಲಿ ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾರೆ. ಆದರೆ ಇದು ಕೊಹ್ಲಿಯಂತೆಯೇ ಕಾಣುತ್ತಿರುವ ಯುವಕನೊಬ್ಬನ ವಿಡಿಯೋ ಆಗಿದೆ.
ಪ್ರತಿಭಟನಾ ನಿರತರು ಅಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದು, ಈ ಕೊಹ್ಲಿ ಕೊಹ್ಲಿಯಂತೆ ಕಾಣುವ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಕುಣಿಯುತ್ತಿದ್ದಾರೆ. ಆತ ಸಹ ಕೊಹ್ಲಿಯಂತೆ ಕಾಣುತ್ತಿದ್ದು, ಕನ್ನಡಕ ಸಹ ಹಾಕಿ ಜೈಕಾರ ಹಾಕುತ್ತಿದ್ದಾನೆ. ಈ ವಿಡಿಯೋ ನೋಡಿದ ಮಂದಿ ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ.
ವೀಡಿಯೊದಲ್ಲಿ ವಿರಾಟ್ ಕೊಹ್ಲಿ ಅಂತೆ ಕಾಣುವ ವ್ಯಕ್ತಿ ಆರ್‌ಸಿಬಿ ಲೋಗೋ ಇರುವ ಟೋಪಿಯನ್ನು ಸಹ ಹಾಕಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ. ವೀಡಿಯೊ ಸುಮಾರು 1.4 ಲಕ್ಷ ವೀಕ್ಷಣೆಗಳ ಕಂಡಿದೆ. ಅಲ್ಲದೆ ವಿಡಿಯೋ ನೋಡಿದ ಮಂದಿ ಇದು ನಿಜವಾಗಿಯೂ ವಿರಾಟ್ ಕೊಹ್ಲಿ ಎಂದು ತಿಳಿದು ವಿಭಿನ್ನ ಕಮೆಂಟ್ ಮಾಡಿದ್ದಾರೆ.
ಅಲ್ಲದೆ ಆತನ ಜೊತೆ ಫೋಟೋ ಕ್ಲಿಕ್ಕಿಸಲು ಯುವಕರು ಮುಗಿಬಿದ್ದ ಘಟನೆಯೂ ನಡೆದಿದೆ. ನಿಜವಾಗಲು ವಿರಾಟ್ ಕೊಹ್ಲಿ ಬಂದಿರಬಹುದು ಎಂದು ತಿಳಿದ ಮಂದಿ ಗುಂಪು ಗುಂಪಲ್ಲಿ ಜಾಗಕ್ಕೆ ಬಂದು ಆತನ ಜೊತೆ ಸೆಲ್ಪಿಗೆ ಮುಗಿಬಿದ್ದರು, ಇನ್ನು ವಿಡಿಯೋವನ್ನು ಬಾಂಗ್ಲಾದೇಶದ ಯುವಕರ ಸಂಭ್ರಮದಲ್ಲಿ ಭಾಗಿಯಾಗಿರುವ ವಿರಾಟ್ ಕೊಹ್ಲಿ ಎಂದು ಬರೆದು ಹಂಚಿಕೊಳ್ಳಲಾಗಿದೆ.
ನಿಜವಾಗಲು ವಿರಾಟ್ ಕೊಹ್ಲಿ ಬಾಂಗ್ಲಾದೇಶದಲ್ಲಿದ್ದಾರಾ? ಅವರಿ ಬಾಂಗ್ಲಾ ಯುವಕರಿಗೆ ಬೆಂಬಲ ನೀಡಿದ್ದಾರೆ ಎಂದು ತಿಳಿದರೆ ಸಂತೋಷವಾಗುತ್ತಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ವಿರಾಟ್ ಕೊಹ್ಲಿ ಶ್ರೀಲಂಕಾ ಬಿಟ್ಟು ಬಾಂಗ್ಲಾದಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.



Click it and Unblock the Notifications
