Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಾಲು, ಪನೀರ್ ಮಾಂಸಾಹಾರ: ವೈದ್ಯರ ಪೋಸ್ಟ್ ವೈರಲ್..! ಸಿಕ್ಕ ಉತ್ತರವೇನು?
ಮೊಟ್ಟೆ ಮೊದಲ ಕೋಳಿ ಮೊದಲ ಎಂಬ ಪ್ರಶ್ನೆ ಹೇಗೆ ಜೀವಂತವಾಗಿದೆಯೋ ಅದೇ ರೀತಿ ಸಸ್ಯಹಾರ ಮತ್ತು ಮಾಂಸಾಹಾರದ ವಿಚಾರದಲ್ಲೂ ಕೆಲವು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಅದರಲ್ಲೂ ಮೊಟ್ಟೆ ಸಸ್ಯಹಾರವೋ ಮಾಂಸಾಹಾರವೋ ಎಂಬ ಗೊಂದಲನಾತ್ಮಕ ಪ್ರಶ್ನೆಯ ನಡುವೆ ಈಗ ಈ ಸಾಲಿಗೆ ಹೊಸ ಹೊಸ ವಸ್ತುಗಳು ಕೂಡ ಸೇರಿಸಿಕೊಂಡಿದೆ.
ಅದರಲ್ಲೂ ಹಾಲು ಮತ್ತು ಹಾಲಿನ ಉತ್ಪನ್ನವಾದ ಪನೀರ್ ಸಸ್ಯಹಾರವೋ ಅಥವಾ ಮಾಂಸಾಹಾರವೋ ಎಂಬ ಪ್ರಶ್ನೆ ಈಗ ಮುನ್ನಲೆಗೆ ಬಂದಿದೆ. ಹಾಲು ಮತ್ತು ಹಾಲಿನ ಉತ್ಪನ್ನ ಸಸ್ಯಹಾರ ಎನ್ನುವುದನ್ನು ನಾವು ಕೇಳುತ್ತಾ ಬಂದಿದ್ದೇವೆ. ಆದ್ರೆ ಇಲ್ಲೊಬ್ರು ವೈದ್ಯರ ಪ್ರಕಾರ ಹಾಲು ಮತ್ತು ಪನೀರ್ ಸಸ್ಯಹಾರ ಅಲ್ಲವಂತೆ ಬದಲಿಗೆ ಅದು ಮಾಂಸಾಹಾರವಂತೆ.

ಹಾಲು ಮತ್ತು ಪನೀರ್ ಮಾಂಸಾಹಾರ ಎಂದಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಸ್ಯಹಾರಿಗಳು ವೈದ್ಯರ ಈ ವಾದದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾದ್ರೆ ಏನಿದು ಆಹಾರದ ನಡುವಿನ ಕಿತ್ತಾಟ ಅನ್ನೋದನ್ನ ಸವಿವರವಾಗಿ ನೀಡಿದ್ದೇವೆ ನೋಡಿ.
ಇತ್ತೀಚಿಗೆ ವೈದ್ಯರೊಬ್ಬರು ಎಕ್ಸ್ (ಟ್ವಿಟರ್)ನಲ್ಲಿ ಸಸ್ಯಹಾರಿ ಊಟದ ಥಾಲಿ ಹಂಚಿಕೊಂಡು ಇದು ನನ್ನ ಪತಿಯ ಈ ದಿನದ ಸಸ್ಯಹಾರಿ ಊಟ, ಪ್ರೋಟೀನ್, ಉತ್ತಮ ಕೊಬ್ಬು ಇದರಲ್ಲಿದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಸುಮಾರು 1.2 ಮಿಲಿಯನ್ ವೀಕ್ಷಣೆ ಕಂಡಿದೆ. ಆದ್ರೆ ಈ ಪೋಸ್ಟ್‌ಗೆ ಮತ್ತೊಬ್ಬ ವೈದ್ಯರು ಉತ್ತರಿಸಿ ಹಾಲು ಮತ್ತು ಪನೀರ್ ಸಸ್ಯಹಾರವಲ್ಲ ಅದು ಪ್ರಾಣಿಯ ಮೂಲದಿಂದ ಬಂದಿರುವುದು ಅದು ಮಾಂಸಾಹಾರ ಎಂದಿದ್ದಾರೆ.
ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿರುವ ಜೊತೆಗೆ ಇದು ಹೇಗೆ ಸಾಧ್ಯ ಎಂಬ ಚರ್ಚೆ ಹುಟ್ಟುಹಾಕಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್‌ನ ಕಾರ್ಯನಿರತ ಸಂಪಾದಕಿ ಡಾ. ಸಿಲ್ವಿಯಾ ಕಾರ್ಪಗಮ್, ಪನೀರ್ ಮತ್ತು ಹಾಲು ಸಸ್ಯಾಹಾರಿ ಆಹಾರವಲ್ಲ ಎಂದಿದ್ದರು. ಇದು ಕೋಳಿ, ಮೀನು, ಗೋಮಾಂಸದಂತೆಯೇ ಪ್ರಾಣಿ ಮೂಲ ಆಹಾರವಾಗಿದೆ ಎಂದು ಅವರು ವಾದಿಸಿದ್ದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ. ವೈದ್ಯರ ಪ್ರಕಾರ ಈ ಉತ್ಪನ್ನಗಳು ನೈಸರ್ಗಿಕವಾಗಿ ಸಿಗದೆ ಪ್ರಾಣಿಗಳಿಂದ ಪಡೆಯುತ್ತೇವೆ. ಹೀಗಾಗಿ ಇದು ಮಾಂಸಾಹಾರವೆಂದು ಹೇಳುತ್ತಿದ್ದಾರೆ ಎಂದು ಕೆಲವರು ವಾದಿಸಿದ್ದಾರೆ. ಆದ್ರೆ ಇದಕ್ಕೆ ಪ್ರತಿಯಾಗಿ ಸಸ್ಯಹಾರಿಗಳು ಕೂಡ ಇದು ಸಸ್ಯಹಾರ ಎಂದು ವಾದಿಸಿದ್ದಾರೆ.
ಹಾಲು ಮತ್ತು ಹಾಲಿನ ಪದಾರ್ಥಗಳು ಪ್ರಾಣಿಗಳಿಂದ ಪಡೆದರು ಆ ಪ್ರಾಣಿಗಳನ್ನು ಕೊಲ್ಲದೆ ಈ ಆಹಾರ ಪಡೆಯಲಾಗಿದೆ ಹೀಗಾಗಿ ಅದು ಸಸ್ಯಹಾರವಾಗಿದೆ ಎಂದು ಕೂಡ ವಾದಿಸಿದ್ದಾರೆ. ಆದರೆ ಪ್ರತಿಯಾಗಿ ವೈದ್ಯರು ಮತ್ತೆ ಕೋಳಿಯನ್ನು ಕೊಲ್ಲದೆಯೇ ನಾವು ಮೊಟ್ಟೆ ಪಡೆಯುತ್ತೇವೆ. ಆದ್ರೆ ಆ ಮೊಟ್ಟೆಯನ್ನು ಮಾಂಸಾಹಾರ ಎಂದು ವರ್ಗೀಕರಿಸುವುದು ಏಕೆ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆ ಕೂಡ ಹಲವರಿಗೆ ಗೊಂದಲ ಸೃಷ್ಟಿಸಿದೆ.
ಹೀಗಾಗಿ ಅವರ ಪೋಸ್ಟ್‌ನಲ್ಲಿ ಪರ ವಿರೋಧದ ಚರ್ಚೆ ತಾರಕಕ್ಕೇರಿದೆ. ಅದರಲ್ಲೂ ಕೆಲವರು ಈ ವಿಚಾರವಾಗಿ ಅಗತ್ಯ ಅಧ್ಯಯನ ಬೇಕಿದೆ, ಇದಕ್ಕೊಂದು ತಾರ್ಕಿಕ ಅಂತ್ಯವಾದರೂ ಸಿಗಬೇಕಿದೆ ಎಂದು ವಾದಿಸಿದ್ದಾರೆ.



Click it and Unblock the Notifications
