Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇಂಟರ್‌ನೆಟ್ ವೇಗ ಹೆಚ್ಚಾದಂತೆ ಶಿಶು ಜನನ ಕಡಿಮೆಯಾಗಿದ್ಯಾ..? ಕ್ರೆಡ್ ಸಿಇಒ ಹೇಳಿದ್ದೇನು?
ಮೊಬೈಲ್ ಇಂಟರ್‌ನೆಟ್ ಈಗ ಎಷ್ಟೊಂದು ವೇಗ ಪಡೆದುಕೊಂಡಿದೆ ಎಂಬುದು ನಮ್ಮ ಕಣ್ಣ ಮುಂದಿದೆ. ನಾವು ಸಹ ವೇಗದ ಇಂಟರ್‌ನೆಟ್ ಬಯಸುತ್ತೇವೆ, ನಮ್ಮ ಕೆಲಸಗಳು ಬಹುಬೇಗ ಮುಗಿಯಲು ಹಾಗೂ ಯಾವುದೇ ಅಡೆತಡೆಯಿಲ್ಲದೆ ಮುಗಿಯಬೇಕಾದರೆ ಈಗ ಇಂಟರ್‌ನೆಟ್ ವೇಗವಾಗಿರಬೇಕು. 4ಜಿ, 5ಜಿ ಯಿಂದ 6ಜಿ ವರೆಗೂ ನಾವೀಗ ದಾಟಿ ಬಂದಿದ್ದೇವೆ. ಒಂದು ಸೆಕೆಂಡ್‌ನಲ್ಲಿ ಇಡೀ ಸಿನಿಮಾ ಡೌನ್‌ಲೋಡ್ ಮಾಡುವಂತಹ ವೇಗದಲ್ಲಿ ನಾವು ಇಂಟರ್‌ನೆಟ್ ಪಡೆಯುತ್ತಿದ್ದೇವೆ.
ಆದ್ರೆ ಈ ಇಂಟರ್‌ನೆಟ್‌ನ ವೇಗ ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ನೀವು ಯೋಚಿಸಿದ್ದೀರಾ? ಇಂಟರ್‌ನೆಟ್ ವೇಗ ಹೆಚ್ಚಾದಂತೆಲ್ಲಾ ಶಿಶು ಜನನ ದರದ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ. ಈ ಮಾತು ಹೇಳಿದ್ದು ವೈದ್ಯರಲ್ಲ, ವಿಜ್ಞಾನಿಗಳು ಕೂಡ ಅಲ್ಲ ಬದಲಿಗೆ ಬೆಂಗಳೂರು ಮೂಲದ ಕಂಪನಿಯೊಂದರ ಸಿಇಒ.
ಬೆಂಗಳೂರಿನ ಕ್ರೆಡ್ ಸಂಸ್ಥೆಯ ಸಂಸ್ಥಾಪಕ ಕುನಾಲ್ ಷಾ ಈ ರೀತಿಯ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಇಂಟರ್‌ನೆಟ್ ವೇಗೆ ಹಚ್ಚಾದಂತೆಲ್ಲಾ ಭಾರತದಲ್ಲಿ ಶಿಶೂ ಜನನ ದರ ಇಳಿಕೆಯಾಗುತ್ತಿದೆಯಂತೆ. ಆದರೆ ಇದು ಹೇಗೆ ಸಾಧ್ಯ ಎಂದು ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿದೆ. ಇಂಟರ್‌ನೆಟ್ ವೇಗ ಹಾಗೂ ಈ ಶಿಶು ಜನನ ದರದ ನಡುವೆ ಯಾವ ಸಂಬಂಧವಿದೆ. ಇದು ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಅವರು ವಿವರಿಸಲು ಹೋಗಿಲ್ಲ.

ಹಾಗಾದ್ರೆ ಅಂಕಿ ಅಂಶ ಏನು ಹೇಳುತ್ತದೆ ಎಂಬುದನ್ನು ನೋಡಬೇಕಾಗುತ್ತದೆ. ಭಾರತದಲ್ಲಿ ಪ್ರತಿ ಮಹಿಳೆಗೆ 2.01 ಮಕ್ಕಳ ಅನುಪಾತದಲ್ಲಿ ಶಿಶು ಜನನ ದರವಿದೆ. ಭಾರತದಲ್ಲಿ ಶಿಶು ಜನನ ದರ ಕಡಿಮೆಯೇ ಇದೆ. 2014 ರಿಂದ 2024ರ ವರೆಗೆ, ಜನಸಂಖ್ಯೆ ಬೆಳವಣಿಗೆಯು ಶೇ. 1.27 ರಿಂದ ಶೇ. 0.89ರಷ್ಟಕ್ಕೆ ಇಳಿದಿದೆ. ಹೆಚ್ಚುವರಿಯಾಗಿ, ಭಾರತದ ಶಿಶು ಜನನ ದರವು ಪ್ರತಿ ಮಹಿಳೆಗೆ 2024ರಲ್ಲಿ ಶೇ. 2.31 ರಿಂದ 2024ರಲ್ಲಿ 2.01 ಕ್ಕೆ ಇಳಿದಿದೆ.
5G ಸೇವೆಗಳ ಆರಂಭದಿಂದಾಗಿ ಭಾರತದಲ್ಲಿ ಇಂಟರ್‌ನೆಟ್ ವೇಗ ಕಳೆದ 10 ವರ್ಷಗಳಲ್ ಶೇ.80 ರಷ್ಟು ಹೆಚ್ಚಳ ಕಂಡಿದೆ. ಆದ್ರೆ ಇಂಟರ್ ನೆಟ್ ವೇಗ ಶಿಶು ಜನನ ದರದ ಇಳಿಕೆಗೆ ಕಾರಣವಾಗಿದೆ ಎಂಬುದು ಸಾಬೀತು ಪಡಿಸಲು ಸಾಧ್ಯವಿಲ್ಲ. ಏಕೆಂದರೆ ಯಾವ ಮೂಲದಿಂದಲೂ ಇಂಟರ್‌ನೆಟ್ ಇದಕ್ಕೆ ಕಾರಣಷವಾಗುತ್ತಿದೆ ಎಂಬುದನ್ನು ಸಾಬೀತು ಮಾಡಲು ಸಾಧ್ಯವಿಲ್ಲ.
ಏಕೆಂದರೆ ಜನಸಂಖ್ಯೆಗೆ ಅನುಗುಣವಾಗಿ ಶಿಶು ಜನನ ದರ ನಿರ್ಧಾರವಾಗುವ ಸಾಧ್ಯತೆಯೇ ಹೆಚ್ಚು, ಹಾಗೆ ಇದಕ್ಕೆ ಹತ್ತಾರು ಅಂಶಗಳು ಕಾರಣವಾಗುತ್ತವೆ. ಸಾಮಾಜಿಕವಾಗಿ ಒಂದಿಷ್ಟು ಅಂಶಗಳ ಇಲ್ಲಿ ಉಲ್ಲೇಖಿಸಬಹುದು. ಆದ್ರೆ ಇಂಟರ್‌ನೆಟ್ ವೇಗ ಹೆಚ್ಚಳಕ್ಕೂ ಶಿಶು ಜನನ ದರಕ್ಕೂ ಎಲ್ಲಿಯೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಆದ್ರೆ ಈ ಪೋಸ್ಟ್ ಎಲ್ಲರ ಗಮನ ಸೆಳಯುವಲ್ಲಿ ಯಶಸ್ವಿಯಾಗಿದೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು ಈ ಉದ್ಯಮಿಯ ಯೋಚನೆ ಕುರಿತು ಮಿಶ್ರ ಪ್ರತಿಕ್ರಿಯೆ ಹೊರಹಾಕಿದ್ದಾರೆ. ನಿಜ ಸಮುದಾಯಗಳು ಅಭಿವೃದ್ಧಿ ಹೆಚ್ಚಾದಂತೆ, ಶಿಕ್ಷಣ ಮತ್ತು ವೃತ್ತಿ ಅವಕಾಶಗಳಂತಹ ಅಂಶಗಳು ಜನನ ಪ್ರಮಾಣವನ್ನು ಕಡಿಮೆ ಮಾಡಲು ಒಲವು ತೋರುತ್ತವೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇದು ನಿಜಕ್ಕೂ ಅಚ್ಚರಿ ಎನಿಸುತ್ತಿದೆ, ಒಂದು ವೇಳೆ ನಿಜವಾಗಿದ್ದರೆ ಇದು ಸಮಾಜಕ್ಕಾಗಿ ಪ್ರಕೃತಿಯ ಜಯ ಅಲ್ಲವೇ? ಎಂದು ಮತ್ತೊಬ್ಬರು ಬರೆದಿದ್ದಾರೆ.
ಇನ್ನೊಬ್ಬರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದು, ನಾನು ನಮ್ಮ ಮನೆಯ ವೈಫೈ ಕನೆಕ್ಷನ್ ವೇಗ ಹೆಚ್ಚಿಸಿಕೊಂಡರೆ ನಾನು ತಂದೆಯಾಗುವ ಸಾಧ್ಯತೆ ಕಡಿಮೆಯಾಗುತ್ತಾ ಎಂದು ಪ್ರಶ್ನಿಸಿದ್ದಾರೆ.



Click it and Unblock the Notifications