Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೊಳ್ಳೆಗಳ ಹೊಡೆದುರುಳಿಸಲು ಐರನ್ ಡೂಮ್..! ಇದು ಹೇಗೆ ಕೆಲಸ ಮಾಡುತ್ತೆ..?
ಈಗ ಸೊಳ್ಳೆಗಳು ಎಷ್ಟೊಂದು ಮಾರಕವಾಗಿ ಕಾಡುತ್ತಿವೆ ಅನ್ನೋದು ನಿಮಗೆ ಗೊತ್ತಿದೆ. ಒಂದೇ ಒಂದು ಸೊಳ್ಳೆ ನಿಮ್ಮ ಜೀವವನ್ನೇ ತೆಗೆಯಬಹುದು. ಡೆಂಗ್ಯೂ, ಚಿಕುನ್ ಗುನ್ಯ, ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳಿಗೆ ಈ ಸೊಳ್ಳೆಗಳೇ ಕಾರಣ. ಒಂದು ಹನಿ ರಕ್ತ ಹೀರುವ ಸೊಳ್ಳೆಗಳು ಮಾನವ ಜನ್ಮವನ್ನೇ ಅಂತ್ಯಗೊಳಿಸುತ್ತವೆ. ಹೀಗಾಗಿ ಇತ್ತೀಚಿನ ದಿನದಲ್ಲಿ ಜನರು ಹಾವಿಗಿಂತ ಹೆಚ್ಚು ಸೊಳ್ಳೆಗಳಿಗೆ ಹೆಸರಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನು ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುವ ಜೀವಿಗಳು ಹೀಗಾಗಿ ಅವುಗಳಿಗೆ ಸಂತಾನೋತ್ಪತ್ತಿಗೆ ಸಹಕಾರಿಯಾಗುವಂತಹ ವಾತಾರವಣ ಕಲ್ಪಿಸಿಕೊಟ್ಟರೆ ನಮ್ಮ ಅನಾರೋಗ್ಯವನ್ನ ನಾವೇ ಬರಮಾಡಿಕೊಂಡಂತೆ. ಈ ಸೊಳ್ಳೆಗಳ ನಾಶ ಮಾಡಲು ಈಗ ಜನ ಏನೆಲ್ಲಾ ಹರ ಸಾಹಸ ಮಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಮಾರುಕಟ್ಟೆಯಲ್ಲಿ ಹತ್ತಾರು ಉತ್ಪನ್ನಗಳು ಸಹ ಇವೆ. ಇದರಿಂದ ಸೊಳ್ಳೆಗಳ ನಾಶ ಮಾಡಿ ಆರಾಮವಾಗಿ ಮಲಗಿ ಎಂಬುದು ಅವುಗಳ ಉದ್ದೇಶ.

ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಸೊಳ್ಳೆಗಳ ಹೊಡೆದುರುಳಿಸಲು ಐರನ್ ಡೂಮ್ ವ್ಯವಸ್ಥೆಯೊಂದನ್ನು ರೆಡಿ ಮಾಡಲಾಗಿದೆ. ಐರನ್ ಡೂಮ್‌ಗಳೆಂದರೆ ಶತ್ರು ರಾಷ್ಟ್ರಗಳಿಂದ ಹಾರಿ ಬರುವ ರಾಕೆಟ್‌ಗಳನ್ನು ಆಕಾಶದಲ್ಲಿಯೇ ಗುರುತಿಸಿ ಪ್ರತಿದಾಳಿ ನಡೆಸುವ ಒಂದು ಸಾಧನವಾಗಿದೆ. ಇದೇ ರೀತಿಯ ವ್ಯವಸ್ಥೆ ಸೊಳ್ಳೆ ಹೊಡೆದುರುಳಿಸಲು ಸಹ ಬಂದಿದೆ.
ಉದ್ಯಮಿ ಆನಂದ್ ಮಹೀಂದ್ರ ಅವರು ಈ ಕುರಿತಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ದೆಹಲಿ, ಮುಂಬೈ ಸೇರಿ ಮಹಾನಗರಗಳಲ್ಲಿ ಡೆಂಗ್ಯೂ ಆತಂಕ ಹೆಚ್ಚಾಗುತ್ತಿದೆ. ಈ ನಗರಗಳಿಗೆ ಇಂತಹ ಆವಿಷ್ಕಾರದ ಅಗತ್ಯವಿದೆ. ಈ ಸಣ್ಣ ಯಂತ್ರವು ಸೊಳ್ಳೆಗಳ ಹಾರಾಟ ಗುರುತಿಸಿ ಅವುಗಳನ್ನು ಕೊಲ್ಲುತ್ತದೆ ಎಂದು ಆನಂದ್ ಮಹೀಂದ್ರ ಹಂಚಿಕೊಂಡಿರುವ ವಿಡಿಯೋದಲ್ಲಿ ತೋರಿಸಲಾಗಿದೆ.
ಯುವಕನೊಬ್ಬ ಒಂದು ಪುಸ್ತಕದಲ್ಲಿ ಯಾವ ಸಮಯಕ್ಕೆ ಯಾವ ಸೊಳ್ಳೆಯನ್ನು ಹೊಡೆಯಲಾಗಿದೆ ಎಂಬುದನ್ನು ದಾಖಲು ಮಾಡಿಟ್ಟಿದ್ದಾನೆ. ಸುಮಾರು ಮೂರು ನಾಲ್ಕು ಪೇಜ್‌ಗಳಲ್ಲಿ ಸೊಳ್ಳೆಗಳ ಸಾಯಿಸಿ ಅವುಗಳ ಗುರುತು ಮಾಡಿಡಲಾಗಿದೆ.
ಆಗಸ್ಟ್ 1 ರಿಂದ ಆಗಸ್ಟ್ 14 ರವರೆಗೆ ಕನಿಷ್ಠ 555 ಡೆಂಗ್ಯೂ ಪ್ರಕರಣಗಳು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC)ನಲ್ಲಿ ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಮಳೆ ಮುಂದುವರಿದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು. ಸೊಳ್ಳೆಗಳು ನಿಮ್ಮ ಹತ್ತಿರ ಸಂತಾನೋತ್ಪತ್ತಿ ಮಾಡುವುದನ್ನು ತಡೆಯಲು ಮಧ್ಯಂತರದಲ್ಲಿ ಅನುಸರಿಸಬೇಕಾದ ನಿಯಮಗಳಿವೆ. ಆದರೆ ಆನಂದ್ ಮಹೀಂದ್ರ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಇದೊಂದು ಒಳ್ಳೆಯ ಉಪಾಯ ಎನ್ನುತ್ತಿದ್ದಾರೆ.
ಚಿಕ್ಕದಾದ ಲೇಸರ್-ಚಾಲಿತ ಫಿರಂಗಿ ಎಂದು ಕರೆಯಲ್ಪಡುವ ಗ್ಯಾಜೆಟ್ ಅನ್ನು ಚೀನೀ ಇಂಜಿನಿಯರ್ ರಚಿಸಿದ್ದಾರೆ. ಇದು ಸೊಳ್ಳೆಗಳ ಪತ್ತೆ ಮಾಡಿ ಹೊಡೆದು ಹಾಕುತ್ತೆ, ಇತ್ತೀಚಿನ ದಿನಗಳಲ್ಲಿ ಈ ಗ್ಯಾಜೆಟ್ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇದು ಸಣ್ಣ ಕ್ಷಿಪಣಿಯಂತೆ ಕೆಲಸ ಮಾಡುತ್ತದೆ. ಇದರಲ್ಲಿ ಸಣ್ಣದೊಂದು ರಾಡರ್ ಸಹ ಇರುವುದು ವಿಡಿಯೋದಲ್ಲಿ ನಾವು ನೋಡಬಹುದು.
ಸದ್ಯ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಎಲ್ಲರ ಬಾಯಲ್ಲೂ ಇದರದ್ದೆ ಮಾತಾಗಿದೆ. ಯಾವುದೇ ಕಷ್ಟವಿಲ್ಲದೆ ಸೊಳ್ಳೆಗಳ ಹೊಡೆದುರುಳಿಸಲು ಹಾಗೂ ಡೆಂಗ್ಯೂದಂತಹ ಕಾಯಿಲೆಯಿಂದ ಪಾರಾಗಲು ಅತ್ಯಂತ ಸೂಕ್ತ ಸಾಧನ ಇದಾಗಿದೆ ಎಂದು ಬಳಕೆದಾರು ಕಮೆಂಟ್ ಮಾಡಿದ್ದಾರೆ. ಆನಂದ್ ಮಹೀಂದ್ರ ಅವರು ಸಾವಿರಾರು ಕೋಟಿ ಮೌಲ್ಯದ ಬ್ಯುಸಿನೆಸ್ ಐಡಿಯಾವನ್ನು ನೀಡಿದ್ದಾರೆ ಎಂದು ಮತ್ತೊಬ್ಬ ಕಮೆಂಟ್ ಮಾಡಿದ್ದಾರೆ.
ಇದು ಚೀನಾ ಉತ್ಪನ್ನ ಆಗಿರೋದ್ರಿಂದ ಇದು ಎಷ್ಟು ಕಾಲ ಕೆಲಸ ಮಾಡುತ್ತೆ ಎಂಬ ಗ್ಯಾರಂಟಿ ಇಲ್ಲ, ಒಮ್ಮೆ ಸೊಳ್ಳೆಗಳಿಗೆ ಈ ಮಾಹಿತಿ ಗೊತ್ತಾದರೆ ಅವುಗಳು ಸಹ ಇದಕ್ಕೆ ಪ್ರತಿರೋಧ ತರುವಂತಹ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಮತ್ತೊಬ್ಬರು ತಮಾಷೆಯ ಕಮೆಂಟ್ ಮಾಡಿದ್ದಾರೆ.



Click it and Unblock the Notifications
