Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
IPL 2025: ಈ ಬಾರಿ ಐಪಿಎಲ್ ಗೆಲ್ಲುವ ತಂಡವಿದು..! ಎಐ ಹೇಳಿದ ಭವಿಷ್ಯ!
ಇಡೀ ವಿಶ್ವವೀಗ AI ಕೃತಕ ಬುದ್ದಿಮತ್ತೆಯ ಬಳಕೆಯಲ್ಲಿ ಭಾರೀ ಪೈಪೋಟಿ ನಡೆಸುತ್ತಿವೆ. ಎಲ್ಲಾ ವಯಲವು ಈಗ ಎಐ ಮೂಲಕ ಕಾರ್ಯ ನಿರ್ವಹಿಸಲು ಮುಂದಾಗಿವೆ. ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟ ಎಐ ಮುಂದೆ ಏನೇನು ಸಂಭವಿಸಲಿದೆ ಎಂಬುದನ್ನು ಕೂಡ ಊಹಿಸುವಷ್ಟು ಚಾಣಾಕ್ಷತೆ ಪಡೆದುಕೊಂಡಿವೆ. ಈಗ ಇದೇ ಎಐ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಾರು ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ಕೂಡ ಜನರ ಮುಂದಿಟ್ಟಿವೆ.
ಐಪಿಎಲ್ ಕೊನೆಯ ವಾರಕ್ಕೆ ಕಾಲಿಟ್ಟಿದೆ ಈ ಬಾರಿ ಯಾರು ಪ್ರಶಸ್ತಿ ಗೆಲ್ಲಲ್ಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಅದ್ರಲ್ಲೂ ಬಲಿಷ್ಟ 4 ತಂಡಗಳ ನಡುವೆ ಪ್ರಶಸ್ತಿ ತನ್ನದಾಗಿಸುವ ಒಂದು ತಂಡ ಯಾವುದು ಎಂಬ ಚರ್ಚೆ ಆರಂಭಗೊಂಡಿದೆ. ಅಭಿಮಾನಿಗಳು ತಮ್ಮ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಹಾಗೆ ಗುಜರಾತ್ ಟೈಟನ್ಸ್ ಪ್ಲೇಆಫ್ ತಲುಪಿವೆ. ಹಾಗೆ ಒಂದು ಜೂನ್ 3ರಂದು ಫೈನಲ್ ಆಡಲು ಕಾತರದಿಂದ ಎರಡು ತಂಡಗಳು ಕಾದಿವೆ. ಆದ್ರೆ AI ಪ್ರಕಾರ ಯಾವ ಟೀಮ್ ಫೈನಲ್ ಆಡಲಿದೆ ಎಂಬುದನ್ನು ತಿಳಿದುಕೊಳ್ಳಿ.
ಹಲವು ಕಂಪನಿಗಳು ತಮ್ಮ ಎಐ ತಂತ್ರಾಂಶಗಳ ಹೊರತಂದಿವೆ. ಒಂದೊಂದು ಎಐ ಒಂದೊಂದು ತಂಡದ ಪರ ಬ್ಯಾಟ್ ಬೀಸಿವೆ. ಮೊದಲು ನಾವು ಫೇಮಸ್ ಎಐ ಟೂಲ್ ಆಗಿರುವ ಓಪನ್ ಎಐ ಚಾಟ್ ಜಿಪಿಟಿ ಹೇಳಿರುವ ಭವಿಷ್ಯದ ಕುರಿತು ತಿಳಿಯೋಣ.
ಗುಜರಾತ್ ಪರ ಬ್ಯಾಟ್ ಬೀಸಿದ ಚಾಟ್ ಜಿಪಿಟಿ (Chat GPT)
ಚಾಟ್ ಜಿಪಿಟಿ ಈ ಬಾರಿ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ಪಡೆಯಲಿದೆ ಎಂದು ತಿಳಿಸಿದೆ. ಅವರ ಗೆಲುವಿನ ಲಯ ಹಾಗೆ ನೆಟ್ ರನ್ ರೇಟ್ ಅನ್ನು ಪರಿಗಣಿಸಿ ಗುಜರಾತ್ ಗೆಲುವು ಕಾಣಲಿದೆ ಎಂದು ಚಾಟ್ ಜಿಪಿಟಿ ತಿಳಿಸಿದೆ.
ಡೀಪ್‌ಸೀಕ್ ಹೇಳಿದ್ದೇನು? (DeepSeek)
ಚೀನಾದ ಈ ಎಐ ತಂತ್ರಜ್ಞಾನವಾಗಿರುವ ಡೀಪ್ ಸೀಕ್ ಈ ಮೊದಲು ಭಾರೀ ಸಂಚಲನ ಮೂಡಿಸಿತ್ತು, ಈಗ ಐಪಿಎಲ್‌ನಲ್ಲಿ ಜಯ ದಾಖಲಿಸುವ ತಂಡ ಯಾವುದು ಎಂಬುದನ್ನು ತಿಳಿಸಿದೆ. ಹಾಗೆ ಅದು ಕೂಡ ಅಚ್ಚರಿ ಮೂಡಿಸಿದೆ. ಈ ಬಾರಿ ಮುಂಬೈ ಇಂಡಿಯನ್ಸ್ ಪಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ ಎಂದಿದೆ. ಕಳೆದ ಹಲವು ಪಂದ್ಯವನ್ನು ಅವರು ಗೆದ್ದಿರುವುದನ್ನು ಪರಿಗಣಿಸಿ ಈ ರೀತಿ ಫಲಿತಾಂಶ ನೀಡಿದೆ
ಗ್ರೂಕ್ (Grok)
ಎಕ್ಸ್ ಗ್ರೂಪ್‌ನ ಎಐ ತಂತ್ರಜ್ಞಾನ ಗ್ರೂಕ್ ಬಹಳಷ್ಟು ಸುದ್ದಿಯಾಗಿತ್ತು, ಎಲ್ಲಾ ಭಾಷೆಯಲ್ಲೂ ಥಟ್ ಅಂತ ನೀವು ಕೇಳಿದ್ದಕ್ಕೆ ಉತ್ತರ ನೀಡುವ ತಂತ್ರಜ್ಞಾನವಿದು. ಗ್ರೂಕ್ ಪ್ರಕಾರ ಬಲಶಾಲಿ ಬ್ಯಾಟಿಂಗ್, ಬೌಲಿಂಗ್ ಹಾಗೆ ನೆಟ್ ರನ್ ರೇಟ್ ಪರಿಗಣಿಸಿ ರಾಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಗಳಿಸಲಿದೆ ಎಂದಿದೆ.
ಹೀಗೆ ಒಂದೊಂದು ಎಐ ಒಂದೊಂದು ತಂಡವು ಈ ಬಾರಿಯ ಐಪಿಎಲ್ ಜಯಗಳಿಸಲಿದೆ ಎಂದಿದೆ. ಹೀಗಾಗಿ ಈ ಬಾರಿಯ ಟೂರ್ನಿಯು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ ನಾವು ಈ ಬಾರಿಯ ಐಪಿಎಲ್ ಪ್ರಶಸ್ತಿ ಯಾರು ಮುಡಿಗೇರಿಸಿಕೊಳ್ಳಲ್ಲಿದ್ದಾರೆ ಅನ್ನೋದನ್ನು ಜೂನ್ 3ರಂದು ತಿಳಿಯಬಹುದು.
ಗೆದ್ದ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು?
ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ ಐಪಿಎಲ್ ಕೂಡ ಒಂದು. 2025 ರ ಐಪಿಎಲ್ ಟೂರ್ನಿ ಗೆದ್ದ ತಂಡ 20 ಕೋಟಿ ರೂಪಾಯಿ ಪಡೆಯಲಿದೆ. ಹಾಗೆ ರನ್ನರ್ ಅಪ್ ತಂಡ ಕೂಡ ಪ್ರಶಸ್ತಿ ಮೊತ್ತ ಪಡೆಯಲಿದೆ. 2008ರಲ್ಲಿ ಈ ಮೊತ್ತ ಕೇವಲ 4.8 ಕೋಟಿ ರೂಪಾಯಿ ಆಗಿತ್ತು.



Click it and Unblock the Notifications
