Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
IPL: ಮುಂದಿನ ವರ್ಷ ಐಪಿಎಲ್ ಯಾವಾಗ ಆರಂಭ? ಏನೆಲ್ಲಾ ಬದಲಾವಣೆ ಗೊತ್ತಾ?
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬ ಹೆಗ್ಗಳಿಕೆ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇಂದು ಫೈನಲ್ ಹಂತ ತಲುಪಿದೆ. ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೆ ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗುತ್ತಿವೆ. ಎರಡೂ ತಂಡಗಳಿಗೂ ಇದು ಮೊದಲ ಪ್ರಶಸ್ತಿ ಆಗಿರಲಿದೆ. ಯಾವ ತಂಡ ಗೆದ್ದರು ಹೊಸ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.
ಇನ್ನು 2025ರ ಐಪಿಎಲ್ ಕೊನೆಯ ಹಂತ ತಲುಪಿರುವಾಗಲೇ ಐಪಿಎಲ್ 2026ರ ಆವೃತ್ತಿ ಕುರಿತು ಈಗ ಎಲ್ಲೆಡೆ ಚರ್ಚೆ ಆರಂಭಗೊಂಡಿದೆ. ಈ ವರ್ಷ ನಿಗಧಿತ ಸಮಯಕ್ಕಿ ಐಪಿಎಲ್ ಆರಂಭಗೊಂಡಿತ್ತು. ಆದ್ರೆ ತಡವಾಗಿ ಮುಕ್ತಾಯವಾಗುತ್ತಿದೆ. ಮಧ್ಯದಲ್ಲಿ ಒಂದು ವಾರಗಳ ಕಾಲ ಅಂತರ ನೀಡಿದ ಬಳಿಕ ಪಂದ್ಯಗಳು ಮುಂದೂಡಲ್ಪಟ್ಟಿವೆ. ಹೀಗಾಗಿ ಈ ಬಾರಿಯ ಪಂದ್ಯಗಳು ತಡವಾಗಿ ಮುಗಿಯುತ್ತಿವೆ.

ಇನ್ನು ಮುಂದಿನ ಬಾರಿಯ ಐಪಿಎಲ್ ಹಲವು ಕಾರಣಗಳಿಂದ ವಿಶೇಷ ಎನಿಸಿದೆ. ಅದರಲ್ಲೂ 2026ರ ಐಪಿಎಲ್‌ಗೂ ಮುನ್ನ ಯಾವ ಸ್ಟಾರ್ ಆಟಗಾರರು ನಿವೃತ್ತಿ ಪಡೆಯಲಿದ್ದಾರೆ ಎಂಬ ಚರ್ಚೆ ಕೂಡ ಆರಂಭಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಎಂ.ಎಸ್ ಧೋನಿ, ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಸೇರಿ ವಿರಾಟ್ ಕೋಹ್ಲಿ ಕೂಡ ಮುಂದಿನ ಐಪಿಎಲ್ ಟೂರ್ನಿ ಆಡಲಿದ್ದಾರಾ? ಅಥವಾ ಅದಕ್ಕೂ ಮುನ್ನವೇ ನಿವೃತ್ತಿ ಘೋಷಿಸುತ್ತಾರಾ ಎಂಬ ಅನುಮಾನ ಸಹ ವ್ಯಕ್ತವಾಗಿದೆ.
ಇತ್ತೀಚಿಗೆ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಬೆನ್ನಲ್ಲೇ ಐಪಿಎಲ್‌ನಿಂದಲೂ ಅವರು ದೂರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾದರೆ 2026ರ ಐಪಿಎಲ್‌ನಲ್ಲಿ ಈ ಮೂವರು ಆಟಗಾರರನ್ನು ನೋಡುವುದು ಕಷ್ಟವಾಗಬಹುದು. ಇನ್ನು ಮುಂದಿನ ಬಾರಿಯ ಐಪಿಎಲ್‌ನಲ್ಲಿ ಪಂದ್ಯಗಳು ಹೆಚ್ಚಾಗಲಿವೆ. ಈವರೆಗಿನ ಟೂರ್ನಿಯಲ್ಲಿ 74 ಪಂದ್ಯಗಳು ನಡೆಯುತ್ತಿದ್ದವು ಆದರೆ ಮುಂಬರುವ ಐಪಿಎಲ್‌ನಲ್ಲಿ ಈ ಸಂಖ್ಯೆ 84ಕ್ಕೆ ಏರಿಕೆಯಾಗಲಿದೆ. ಇನ್ನು 2027ರಲ್ಲಿ ಈ ಪಂದ್ಯಗಳ ಸಂಖ್ಯೆ 94ಕ್ಕೆ ಏರಿಕೆಯಾಗಲಿದೆ.
ಪಂದ್ಯಗಳು ಮಾತ್ರವಲ್ಲ ಮುಂದಿನ ಬಾರಿಯ ಪಂದ್ಯಗಳು ಹಲವು ರಾಜ್ಯಗಳಿಗೆ ವಿಸ್ತರಿಸಬಹುದು. ಹೊಸ ಮೈದಾನಗಳಲ್ಲಿಯೂ ಪಂದ್ಯಗಳು ಆಯೋಜನೆಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಮುಂಬರುವ ಐಪಿಎಲ್ ಬಹಳ ಕುತೂಹಲಕ್ಕೆ ಕಾರಣವಾಗಿದೆ.
2026ರ ಐಪಿಎಲ್ ಯಾವಾಗ ಆರಂಭ?
ವಿಶ್ವದ ಶ್ರೀಮಂತ ಲೀಗ್ ಹಾಗೂ ಪಾಕಿಸ್ತಾನವನ್ನ ಹೊರತುಪಡಿಸಿ ಉಳಿದ ಎಲ್ಲಾ ದೇಶದ ಕ್ರಿಕೆಟ್ ಆಟಗಾರರು ಕೂಡ ಈ ಟೂರ್ನಿಯಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಐಪಿಎಲ್ ಟೂರ್ನಿಯ ಸಮಯದಲ್ಲಿ ಐಸಿಸಿ ದೊಡ್ಡ ಟೂರ್ನಿಯನ್ನು ಆಯೋಜಿಸುವುದಿಲ್ಲ 2 ತಿಂಗಳ ಕಾಲ ದೊಡ್ಡ ಮಟ್ಟದ ಟೂರ್ನಿಗಳ ಆಯೋಜನೆ ಇರುವುದಿಲ್ಲ.
ಇನ್ನು ಮುಂಬರುವ ಐಪಿಎಲ್ 2026ರನ್ನು ಮಾರ್ಚ್ 15ರಿಂದ ಮೇ 31ರ ವರೆಗೆ ನಡೆಯುವ ಸಾಧ್ಯತೆ ಇದೆ, ಆದ್ರೆ ಈ ದಿನಾಂಕದಲ್ಲೂ ಬದಲಾವಣೆ ಆಗಬಹುದು. ಇನ್ನು 2026ರಲ್ಲಿ ಸಂಪೂರ್ಣ ವಿದೇಶಿ ಆಟಗಾರರು ಟೂರ್ನಿಗೆ ಲಭ್ಯವಿರುತ್ತಾರೆ ಎಂದು ತಿಳಿದುಬಂದಿದೆ.
ಐಪಿಎಲ್ ಗೆದ್ದ ತಂಡಕ್ಕೆ ಸಿಗುವ ಬಹುಮಾನವೆಷ್ಟು?
ಇನ್ನು ಐಪಿಎಲ್ ಟೂರ್ನಿ ಗೆದ್ದ ತಂಡಕ್ಕೆ ಸುಮಾರು 20 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ. ಅದರ ಜೊತೆಗೆ ಒಂದು ಟೂರ್ನಿ ಸಹ ಸೇರಿದೆ. ಇನ್ನು ಈ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಹಾಗೆ ರನ್ನರ್ ಅಪ್ ತಂಡಕ್ಕೂ ನಗದು ಬಹುಮಾನ ಸಿಗಲಿದೆ. ಅಲ್ಲದೆ ಮ್ಯಾನ್ ಆಫ್‌ದಿ ಸೀರಿಸ್ ಆಗಿ ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್ ಹೊಂದಿರುವವರಿಗೂ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ.



Click it and Unblock the Notifications