Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಚೆನ್ನೈನಲ್ಲಿರುವ ಆ್ಯಪಲ್ ಐಫೋನ್ ಘಟಕದಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ನೀಡುತ್ತಿಲ್ಲವೇ? ತಾಳಿ, ಕಾಲುಂಗುರ ತೆಗೆಸುವುದೇಕೆ?
ಇತ್ತೀಚೆಗೆ ಒಂದು ವರದಿ ತುಂಬಾನೇ ಗಮನ ಸೆಳೆದಿತ್ತು. ಚೆನ್ನೈ ಘಟಕದಲ್ಲಿರುವ ಆ್ಯಪಲ್ ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಯಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲ ಎಂಬ ವರದಿ ಎಲ್ಲರಿಗೆ ಶಾಕ್ ನೀಡಿತ್ತು.

ಪುರುಷರ ಸಮಾನವಾಗಿ ಮಹಿಳೆಯರು ದುಡಿಯುವ ಕಾಲವಿದು. ವಿವಾಹಿತ ಮಹಿಳೆಯರು ಬಹುತೇಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಮಹಿಳೆಯರು ಇಂದು ತಮ್ಮ ಶ್ರಮದಿಂದ ಒಳ್ಳೆಯ ಹುದ್ದೆಯನ್ನು ಅಲಂಕರಿಸುತ್ತಾರೆ. ಮಹಿಳೆಯರು ಎಂದು ಅವರು ತಮ್ಮ ಜವಾಬ್ದಾರಿಯಲ್ಲಿ ಹಿಂದೆ ಬೀಳುತ್ತಿಲ್ಲ, ಹೀಗಿರುವಾಗ ಫಾಕ್ಸ್‌ಕಾನ್ ಕಂಪನಿ ಈ ರೀತಿ ಮಾಡಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು, ಈ ಕುರಿತು ರಾಯಟರ್ಸ್‌ನಲ್ಲಿ ವರದಿ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಈ ಕುರಿತು ವರದಿಯನ್ನು ಕೇಳಿತು.
ಆರೋಪವನ್ನು ತಳ್ಳಿ ಹಾಕಿರುವ ಫಾಕ್ಸ್‌ಕಾನ್
ವಿವಾಹಿತ ಮಹಿಳೆಯರನ್ನು ಕೆಲಸಕ್ಕೆ ಸೇರಿಸುತ್ತಿಲ್ಲ ಎಂಬ ಆರೋಪವನ್ನು ಫಾಕ್ಸ್‌ಕಾನ್ ಕಂಪನಿ ತಳ್ಳಿ ಹಾಕಿದೆ. ನಮ್ಮ ಚೆನ್ನೈ ಘಟಕದಲ್ಲಿ ಶೇ.70 ಮಹಿಳೆಯರಿದ್ದಾರೆ, ಅವರಲ್ಲಿ ಶೇ.25ರಷ್ಟು ವಿವಾಹಿತ ಮಹಿಳೆಯರಿದ್ದಾರೆ ಎಂದು ಕಂಪನಿ ಹೇಳಿದೆ. ಆದರೆ ಸುರಕ್ಷತಾ ದೃಷ್ಟಿಯಿಂದ ಯಾವುದೇ ಧರ್ಮದವರಾದರು ಸರಿ ಆಭರಣ ಧರಿಸುವಂತಿಲ್ಲ ಎಂದು ಹೇಳಿಲ್ಲ.
ನಮ್ಮಲ್ಲಿ ಲಿಂಗ ತಾರತಮ್ಯ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿರುವ ಕಂಪನಿ
ಫಾಕ್ಸ್‌ಕಾನ್‌ನ ಈ ಕುರಿತು ವಿವರವನ್ನು ನೀಡುತ್ತಾ ನಮ್ಮಲ್ಲಿ 45 ಸಾವಿರ ನೌಕರರಿದ್ದಾರೆ, ಅವರಲ್ಲಿ ಶೇ.30 ಪುರುಷರಿದ್ದಾರೆ, ಶೇ. 70ರಷ್ಟು ಮಹಿಳೆಯರೇ ಇದ್ದಾರೆ. ಅವರಲ್ಲಿ ಶೇ. 25ರಷ್ಟು ವಿವಾಹಿತ ಮಹಿಳೆಯರಿದ್ದಾರೆ ಎಂದು ಹೇಳಿದೆ, ಈ ಮೂಲಕ ಲಿಂಗತಾರತಮ್ಯ ಮಾಡುತ್ತಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ. ಕೆಲವರು ನಮ್ಮಲ್ಲಿ ಕೆಲಸ ಸಿಕ್ಕಿಲ್ಲ ಅಥವಾ ಕೆಲಸ ಖಾಯಂ ಆಗಿಲ್ಲ ಎಂದು ಈ ಆರೋಪವನ್ನು ಮಾಡುತ್ತಿರಬಹುದು ಎಂದು ಹೇಳಿದೆ.
ಈ ಕಂಪನಿಗೆ ಬರುವವರು ಕಾಲುಂಗುರ, ಮಂಗಳ ಸೂತ್ರ ತೆಗೆದು ಬರಬೇಕು
ಮಂಗಳ ಸೂತ್ರ, ಕಾಲುಂಗುರ ನಮ್ಮ ಸಂಪ್ರದಾಯದ ಸಂಕೇತ ಇದನ್ನು ತೆಗೆದು ಹೋಗಬೇಕೆ? ಎಂಬ ಪ್ರಶ್ನೆಗೆ 'ಸುರಕ್ಷತಾ ದೃಷ್ಟಿಯಿಂದ ಕಂಪನಿಯಲ್ಲಿ ಯಾವುದೇ ಲೋಹದ ವಸ್ತುಗಳನ್ನು ಧರಿಸುವಂತಿಲ್ಲ. ಯಾವುದೇ ಧರ್ಮದವರಾಗಲಿ ಲೋಹದ ವಸ್ತುಗಳನ್ನು ಬಳಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ರೀತಿ ಹೇಳಿದಾಗ ಇದನ್ನು ವಿರೋಧಿಸಲು ಸಾಧ್ಯವಾಗಲ್ಲ. ಹೌದು ನಾವು MRI, ಸ್ಕ್ಯಾನಿಂಗ್ ಮಾಡುವಾಗ ತಾಳಿ, ಕಾಲುಂಗುರ ಹಾಕಿಯೇ ಹಾಕುತ್ತೇನೆ ಎಂದು ನಾವು ಹಠ ಮಾಡಲು ಸಾಧ್ಯನಾ? ಕೆಲವೊಂದು ಕಡೆ ಕೆಲ ನಿಯಮವಿರುತ್ತದೆ, ಅದನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಅದರಲ್ಲಿ ಸತ್ಯಾಂಶವಿದೆ ಎಂದಾದರೆ ಅದನ್ನು ದೊಡ್ಡದು ಮಾಡಲು ಹೋಗಬಾರದು.
ಅದೇ ರೀತಿ ಯಾವುದೇ ಕಂಪನಿಯಾಗಲಿ ಮಹಿಳೆ ಎಂಬ ತಾರತಮ್ಯ ಮಾಡಬಾರದು?
ಒಂದು ಕಂಪನಿಯಲ್ಲಿ ಕನಿಷ್ಠ ಶೇ. 25ರಷ್ಟು ಮಹಿಳೆಯರು ಇರಲೇಬೇಕು ಎಂಬ ನಿಯಮವಿದೆ, ಅಲ್ಲದೆ ಕಂಪನಿಗಳು ನಮ್ಮಲ್ಲಿ ಕೌಶಲ್ಯವಿದ್ದರೆ ಮಾತ್ರ ನಮ್ಮನ್ನು ಇಟ್ಟುಕೊಳ್ಳುತ್ತಾರೆ, ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಹಾಗಾಗಿ ಬಹುತೇಕ ಕಂಪನಿಗಳು ಲಿಂಗ ತಾರತಮ್ಯ ಮಾಡಲ್ಲ, ಕೌಶಲ್ಯ, ಸಾಮರ್ಥ್ಯ ವನ್ನಷ್ಟೇ ನೋಡುತ್ತಾರೆ.



Click it and Unblock the Notifications