Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಸೂರ್ಯ ಮುಳುಗುವ ಮುನ್ನ ಗಡಿ ಆಕ್ರಮಣ ನಿಲ್ಲಲಿದೆ: ಟ್ರಂಪ್ ಭಾಷಣದ ಹೈಲೆಟ್ಸ್ ಇಲ್ಲಿದೆ..!!
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುವ ಮುನ್ನಾದಿನ ವಾಷಿಗ್ಟಂನ್ ಡಿಸಿಯಲ್ಲಿ ತಮ್ಮ ಅಭಿಮಾನಿಗಳು, ನಾಗರಿಕರ ಉದ್ದೇಶಿಸಿ ಅವರು ಭಾಷಣ ಮಾಡಿದ್ದಾರೆ. ಇಂದು ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಎರಡನೇ ಬಾರಿಗೆ ಅಧ್ಯಕ್ಷರಾಗುತ್ತಿರುವ ಅವರು ತಮ್ಮ ಪದಗ್ರಹಣ ಮುನ್ನ ದಿನದ ಭಾಷಣದಲ್ಲಿ ಹಲವು ರೀತಿಯ ವಿಚಾರಗಳ ಕುರಿತು ಹೇಳಿಕೊಂಡಿದ್ದಾರೆ.
ಮತದಾರರಿಗೆ ಧನ್ಯವಾದ ಅರ್ಪಿಸಿದ ಅವರು, ಅಮೆರಿಕವನ್ನು ಮತ್ತೊಮ್ಮೆ ಗ್ರೇಟ್ ಮಾಡುವ ಸಂಕಲ್ಪ ಮಾಡಿದರು, ಹಾಗೆ ಅವರ ಭಾಷಣದ ಉದ್ದಕ್ಕೂ ಇಡೀ ವಿಶ್ವಕ್ಕೆ ಒಂದು ರೀತಿ ಸೂಚನೆ, ಸಂದೇಶ ನೀಡದಂತಿತ್ತು, ಅವರ ಅಧಿಕಾರವಧಿಯಲ್ಲಿ ಅಮೆರಿಕೆ ಹೇಗಿರಲಿದೆ, ಮುಂದೆ ಏನೆಲ್ಲಾ ಮಾಡುತ್ತೇವೆ ಎಂಬುದನ್ನು ಅವರು ವಿವರಿಸಿದ್ದಾರೆ.

ಅವರ ಭಾಷಣ ಕೇಳಲು ಸುಮಾರು 20 ಸಾವಿರ ಮಂದಿ ಅಲ್ಲಿ ನೆರೆದಿದ್ದರು. ಭಾಷಣ ಆರಂಭಿಸುತ್ತಲೇ ಅವರು ಅಮೆರಿಕದ ಮುಂದಿನ ಭವಿಷ್ಯಗಳ ಕುರಿತು ಹೇಳಿದರು. ನಾವು ಮೂರನೇ ಮಹಾ ಯುದ್ಧವನ್ನು ತಡೆಯಲಿದ್ದೇವೆ. ಹಾಗೆ ನಮ್ಮ ಗಡಿಗಳ ಆಕ್ರಮಣವನ್ನು ಎಂದಿಗೂ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು. ಹಾಗೆ ನಮ್ಮ ದೇಶ ಎದುರಿಸುತ್ತಿರುವ ಪ್ರತಿಯೊಂದು ಬಿಕ್ಕಟ್ಟುಗಳನ್ನು ಕೂಡ ನಾವು ಬಗೆಹರಿಸುತ್ತೇವೆ. ಮಾದರಿ ರಾಜ್ಯಗಳು ಕಾಣಿಸುತ್ತವೆ ಎಂದರು.
ನಾಳೆ ಸೂರ್ಯ ಮುಳುಗುವ ಮುನ್ನವೇ ಗಡಿ ಮೇಲಿನ ಆಕ್ರಮಣ ನಿಲ್ಲಲಿದೆ ಎಂದು ಟ್ರಂಪ್ ಪುನರ್ ಉಚ್ಚರಿಸಿದರು, ಅಮೆರಿಕ ಕೆನಡಾ ಹಾಗೂ ಉತ್ತರ ಮೆಕ್ಸಿಕೋ ನಡುವೆ ತನ್ನ ಗಡಿ ಹಂಚಿಕೊಳ್ಳುತ್ತದೆ. ಅಮೆರಿಕದೊಳಗೆ ಅಕ್ರಮವಾಗಿ ನುಸುಳುವವರ ಸಂಖ್ಯೆ ನಿತ್ಯವು ಲಕ್ಷ ಮೀರಬಹುದು. ಹೀಗಾಗಿ ಗಡಿ ನುಸುಳುವುದು ಆಕ್ರಮಣ ನಡೆಯುವುದು ಸಾಮಾನ್ಯವಾಗಿದೆ.
ನಾವು ನಮ್ಮ ದೇಶವನ್ನು ಸರಿಯಾದ ಹಾದಿಯಲ್ಲಿ ಹೊಂದಿಸಬೇಕು. ನಾಳೆ ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ಗಡಿಗಳ ಮೇಲಿನ ಆಕ್ರಮಣ ನಿಲ್ಲುತ್ತದೆ. ಗಡಿ ನುಸುಳಿ ಒಳ ಬಂದವರು ಒಂದಲ್ಲಾ ಒಂದು ರೀತಿಯಲ್ಲಿ ವಾಪಾಸು ಮನೆಗೆ ತೆರಳುತ್ತಾರೆ. ಲಕ್ಷಾಂತರ ಮಂದಿ ಗಡಿಯಿಂದ ನಮ್ಮ ದೇಶಕ್ಕೆ ಬಂದರು. ಯಾರಿಗೂ ತಪಾಸಣೆ ಇಲ್ಲ, ಪರಿಶೀಲನೆ ಇಲ್ಲ, ಅವರಲ್ಲಿ ಹಲವರು ಅಪರಾಧಿಗಳು, ಅಮೆರಿಕದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುವವರು, ಕೊಲೆಗಾರರು ಎಂದು ಟ್ರಂಪ್ ಗುಡುಗಿದ್ದಾರೆ.
ಗಾಜಾ ಹಾಗೂ ಇಸ್ರೇಲ್ ನಡುವಿನ ಯುದ್ಧದ ಸಮಯದಲ್ಲಿ ನಾನು ಅಧ್ಯಕ್ಷ ಹುದ್ದೆಯಲ್ಲಿದ್ದರೆ ಆ ಯುದ್ಧವೇ ನಡೆಯುತ್ತಿರಲಿಲ್ಲ ಎಂದು ಟ್ರಂಪ್ ಹೇಳಿದರು. ಹಾಗೆ ಕದನ ವಿರಾಮಕ್ಕೂ ನಾವು ಕಾರಣರಾದೆವು ಎಂದು ಅವರು ಹೊಗಳಿದರು. ಜಗತ್ತು ಕಂಡಂತಹ ಅಮೆರಿಕದ ಗಡಿಗಳನ್ನು ಮತ್ತೆ ನಾವು ಮರುಸ್ಥಾಪಿಸಲಿದ್ದೇವೆ. ಹಾಗೆ ಸುರಕ್ಷಿತ ಗಡಿಯನ್ನಾಗಿಸಲಿದ್ದೇವೆ ಎಂದರು.
ನಾನು ಅಧ್ಯಕ್ಷನಾಗದೆ ಇದ್ದ ಈ ಮೂರು ತಿಂಗಳಲ್ಲಿನಲ್ಲಿ ಪ್ರಮುಖವಾಗಿ ಮಧ್ಯಪ್ರಾಚ್ಯದಲ್ಲಿ ನಮ್ಮಿಂದಾಗಿ ಏನೆಲ್ಲಾ ಸಂಭವಿಸಿದೆ. 4 ವರ್ಷದಲ್ಲಿ ಜೋ ಬೈಡನ್ ಮಾಡಿದ್ದಕ್ಕಿಂತಲೂ ಹೆಚ್ಚಿನದನ್ನು ನಾವು ಈಗಾಗಲೇ ಸಾಧಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಅವ್ಯವಸ್ಥೆಯನ್ನು ತಡೆಯುತ್ತೇವೆ, 3ನೇ ಮಹಾಯುದ್ಧವನ್ನು ನಾವು ತಡೆಯುತ್ತೇವೆ. ಅದಕ್ಕೆ ನಾವು ಎಷ್ಟು ಹತ್ತಿರದಲ್ಲಿದ್ದೇವೆ ಎಂಬುದು ನಿಮಗೆ ತಿಳಿದಿಲ್ಲ ಎಂದರು.
ಚೀನಾಗೆ ಟಕ್ಕರ್
ಟ್ರಂಪ್ ತಮ್ಮ ಭಾಷಣದಲ್ಲಿ ಚೀನಾ ವಿರುದ್ಧವೂ ಟಕ್ಕರ್ ನೀಡಿದ್ದಾರೆ. ಈ ಗುಂಪಿನಲ್ಲಿ ಎಷ್ಟು ಜನ ಟಿಕ್‌ಟಾಕ್ ಬಳಸುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದರು. ನಾವು ಯುವ ಮತಗಳ ಗೆಲ್ಲುವ ಉದ್ದೇಶದಿಂದ ಟಿಕ್‌ಟಾಕ್ ಪ್ರವೇಶಿಸಿದೆವು. ನಿಮ್ಮಲ್ಲಿ ಹಲವರು ಅದನ್ನು ಬಳಸಿದ್ದೀರಿ. ಈ ಬಾರಿ ಅಧಿಕ ಪ್ರಮಾಣದ ಯುವ ಮತಗಳನ್ನು ನಾವು ಗೆದ್ದೆವು ಹೀಗಾಗಿ ನನಗೂ ಟಿಕ್‌ಟಾಕ್ ಅಂದರೆ ಇಷ್ಟ ಎಂದರು. ಆದ್ರೆ ನಾವು ನಮ್ಮ ಕೆಲಸಗಳನ್ನು, ನಮ್ಮ ವ್ಯಹವಾರಗಳನ್ನು ಚೀನಾಗೆ ನೀಡಬಾರದು, ಬಹಳಷ್ಟು ಉದ್ಯೋಗಗಳನ್ನು ನಾವು ಉಳಿಸಬೇಕಿದೆ. ನಾವು ನಮ್ಮ ಹಣ ಚೀನಾಗೆ ನೀಡಲು ಬಯಸುವುದಿಲ್ಲ ಎಂದು ಟ್ರಂಪ್ ಹೇಳಿದರು.



Click it and Unblock the Notifications