Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಐದು ರಾಶಿಯವರು ಹೆಚ್ಚು ಅಂತರ್ಮುಖಿ ಗುಣ ಹೊಂದಿರುತ್ತಾರೆ !
ನಮ್ಮಲ್ಲಿ ಎಲ್ಲರ ಗುಣ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ಗುಣ ಹೊಂದಿರುತ್ತಾರೆ. ಕೆಲವರಿಗೆ ಹೊರಗಡೆ ಸ್ನೇಹಿತರ ಜೊತೆಗೆ ಹೋಗಿ ಸಮಯ ಕಳೆಯೋದಕ್ಕೆ ಇಷ್ಟವಾದ್ರೆ, ಇನ್ನೂ ಕೆಲವರು ರಜೆ ಇದ್ರೂನೂ ಮನೆ ಬಿಟ್ಟು ಎಲ್ಲೂ ಹೋಗೋದಿಲ್ಲ. ಅವರ ಹೆಚ್ಚಿನ ಸಮಯವನ್ನು ಒಂಟಿಯಾಗಿ ಕಳೆಯುತ್ತಾರೆ. ಈ ರಾಶಿಯವರು ಒಬ್ಬರೇ ಆರಾಮಾಗಿ ತಮ್ಮ ಪ್ರಪಂಚದಲ್ಲಿ ಕಳೆಯೋದಕ್ಕೆ ಇಷ್ಟ ಪಡುತ್ತಾರೆ. ಹುಟ್ಟು ಹಬ್ಬವನ್ನೂ ಮನೆಯಲ್ಲೇ ಕೇಕ್ ತಂದು ಆಚರಣೆ ಮಾಡಿಕೊಳ್ತಾರೆ.
ಇಂತಹ ಗುಣ ಉಳ್ಳವರು ಅಂತರ್ಮುಖಿಗಳು. ನಾವಾಯ್ತು ನಮ್ಮ ಕೆಲಸ ಆಯ್ತು ಅಂತ ಇರುತ್ತಾರೆ. ಬೇರೆಯವರ ಸಂಘ ಇವರಿಗೆ ಬೇಕಾಗಿಲ್ಲ. ಇನ್ನೊಬ್ಬರ ಹತ್ತಿರ ಅಗತ್ಯಕ್ಕಿಂತ ಹೆಚ್ಚಾಗಿ ಮಾತಾಡುವವರಲ್ಲ ಇವರು. ಇಲ್ಲಿ ನಾವು ಹೇಳೋದಕ್ಕೆ ಹೊರಟಿರುವ ಕೆಲವು ರಾಶಿಯವರು ಕೂಡ ಅಂತಮುರ್ಖಿಗಳಾಗಿದ್ದಾರೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕುಂಭ ರಾಶಿ
ಈ ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯವರಲ್ಲಿ ಅತೀ ಹೆಚ್ಚು ಅಂತರ್ಮುಖಿ ಗುಣ ಇರುತ್ತದೆ. ಈ ರಾಶಿಯವರು ತಮ್ಮ ಸಂಗಡಿಗರನ್ನು ಬಿಟ್ಟು ಬೇರೆಯವರ ಜೊತೆಗೆ ಬೆರೆಯೋದಕ್ಕೆ ಇಷ್ಟ ಪಡೋದಿಲ್ಲ. ಈ ರಾಶಿಯವರಿಗೆ ನಾಚಿಗೆ ಸ್ವಭಾವ ಹೆಚ್ಚು ಹಾಗೂ ಇವರು ಹೆಚ್ಚು ಮಾತನಾಡೋದಿಲ್ಲ. ಇವರು ಯಾವಾಗಲಾದರೂ ಒಮ್ಮೆ ತಮಗೆ ಬೇಕಾದವರ ಜೊತೆಗೆ ಮನಬಿಚ್ಚಿ ಮಾತನಾಡುತ್ತಾರೆ ಅಷ್ಟೇ. ಇನ್ನೂ ಇವರು ತುಂಬಾನೇ ಭಾವುಕ ಜೀವಿಗಳು. ತಮ್ಮವರನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುವ ಗುಣ ಇವರಲ್ಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೂಡ ಅಂತರ್ಮುಖಿಗಳಾಗಿರುತ್ತಾರೆ. ಇವರು ರಹಸ್ಯವನ್ನು ಪ್ರೀತಿಸುತ್ತಾರೆ. ಹಾಗೂ ತಮ್ಮದೇ ಆದ ಚೌಕಟ್ಟಿನಲ್ಲಿ ಬದುಕೋದಕ್ಕೆ ಇಷ್ಟ ಪಡುತ್ತಾರೆ. ಇವರು ತಮ್ಮ ರಹಸ್ಯಗಳನ್ನು ಹೊರ ಹಾಕೋದಕ್ಕೆ ಇಷ್ಟ ಪಡೋದಿಲ್ಲ. ಇವರು ಒಂದೇ ರೀತಿಯ ಆದರ್ಶಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮತ್ತು ರಹಸ್ಯಗಳನ್ನು ಇಟ್ಟುಕೊಳ್ಳುವ ಜನರ ಸುತ್ತಲೂ ಬದುಕಲು ಇಷ್ಟಪಡುತ್ತಾರೆ. ಇವರು ಎಲ್ಲರನ್ನೂ ನಂಬೋದಕ್ಕೆ ಹೋಗೋದಿಲ್ಲ. ಇವರು ಯಾರನ್ನೂ ತುಂಬಾ ನಂಬುತ್ತಾರೋ ಅವರ ಜೊತೆಗೆ ಆತ್ಮೀಯರಾಗಿರುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಸೃಜನಾತ್ಮಕ ವ್ಯಕ್ತಿತ್ವವುಳ್ಳ ಜನರು. ಇವರು ದಿನದಲ್ಲಿ ಅರ್ಧದಷ್ಟು ಸಮಯವನ್ನು ಕಲಾತ್ಮಕ, ಮೂಲ ಮತ್ತು ಸೃಜನಶೀಲ ವಿಚಾರಗಳನ್ನು ಯೋಚಿಸುತ್ತಾ ಕಳೆಯುತ್ತಾರೆ. ಇವರು ಜನರೊಂದಿಗೆ ಹೆಚ್ಚಾಗಿ ಕಳೆಯೋದನ್ನು ಬಿಟ್ಟು ತಮ್ಮದೇ ಆದ ಜಗತ್ತಿನಲ್ಲಿ ಕನಸುಗಳೊಂದಿಗೆ ಕಳೆಯೋದಕ್ಕೆ ಇವರಿಗೆ ತುಂಬಾನೇ ಇಷ್ಟವಾಗುತ್ತದೆ. ಮೀನ ರಾಶಿಯವರನ್ನು ನೀವು ಗಮನಿಸಿ ನೋಡಿ ಯಾರಾದರೂ ಗುಂಪಿನಲ್ಲಿ ಮಾತನಾಡುತ್ತಿದ್ದರೆ ಅವರು ಅಲ್ಲಿ ಇರೋದಕ್ಕೆ ಇಷ್ಟ ಪಡೋದಿಲ್ಲ.
ವೃಷಭ ರಾಶಿ
ವೃಷಭ ರಾಶಿಯವರು ಒಂದು ವಿಚಾರದ ಬಗ್ಗೆ ಹೆಚ್ಚು ಚರ್ಚಿಸುತ್ತಾರೆ. ಇವರು ತುಂಬಾನೇ ಹಠಮಾರಿ ಸ್ವಭಾವದವರಾಗಿರುತ್ತಾರೆ. ಹಾಗೂ ಅತೀ ಹೆಚ್ಚಿನ ಮಾತು ಚರ್ಚೆಯಲ್ಲಿ ಅಂತ್ಯವಾಗುತ್ತೆ ಎಂದು ಇವರು ನಂಬಿದ್ದಾರೆ. ಇವರು ಯಾರಿಂದಲಾದರೂ ಟೀಕೆಯನ್ನು ಎದುರಿಸಿದಾಗ ಅವರಿಂದ ಮತ್ತಷ್ಟು ದೂರ ಹೋಗೋದಕ್ಕೆ ಬಯಸುತ್ತಾರೆ. ಇವರು ಒಂಟಿತನದಲ್ಲೇ ಸುಖ ಕಾಣುತ್ತಾರೆ. ವೃಷಭ ರಾಶಿಯವರು ಎಂದಿಗೂ ತಮ್ಮ ದುರ್ಬಲತೆಯನ್ನು ಇತರರ ಮುಂದೆ ತೋರಿಸುವುದಿಲ್ಲ. ವೃಷಭ ರಾಶಿಯವರು ತಮ್ಮ ದೌರ್ಬಲ್ಯವನ್ನು ಇತರರ ಮುಂದೆ ತೋರ್ಪಡಿಸೋದಕ್ಕೆ ಇಷ್ಟ ಪಡೋದಿಲ್ಲ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಮನೆಯಲ್ಲೇ ಇರಲು ಇಷ್ಟಪಡುತ್ತಾರೆ. ಮೇಲಿನ ನಾಲ್ಕು ರಾಶಿಗಳಿಗೆ ಹೋಲಿಸಿದ್ರೆ ಇವರು ಕೊಂಚ ಪರವಾಗಿಲ್ಲ. ಜನರೊಂದಿಗೆ ಸೇರುತ್ತಾರೆ. ಮನೆಯಲ್ಲಿಯೇ ಪಾರ್ಟಿ ಆಚರಣೆ ಮಾಡಿ ಎಂಜಾಯ್ ಮಾಡುತ್ತಾರೆ. ಇವರು ಅಂತರ್ಮುಖಿ ಸ್ವಭಾವದವರು ಆದರೆ ಸ್ನೇಹಪರ ಗುಣ ಇವರಲ್ಲಿದೆ. ಇನ್ನೂ ಮನೆ ಬಿಟ್ಟು ಹೊರಗಡೆ ಹೋಗೋದು, ಅಲ್ಲಿ ಪಾರ್ಟಿ ಮಾಡೋದು ಇವರಿಗೆ ಇಷ್ಟ ಆಗೋದಿಲ್ಲ. ಇವರು ತಮ್ಮ ಜಾಗಕ್ಕೆ ಅಂಟಿಕೊಂಡಿರುತ್ತಾರೆ.



Click it and Unblock the Notifications
