Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
'ಚಿನ್ನ ಮರುಬಳಕೆ ಎಟಿಎಂ': ಹಳೆಯ ಚಿನ್ನ ಹಾಕಿದ್ರೆ ನೇರ ಖಾತೆಗೆ ಹಣ!
ನೀವು ಎಟಿಎಂ ಕಾರ್ಡ್ ಬಳಸಿ ಹಣ ತೆಗೆದುಕೊಳ್ಳುವ ವಿಧಾನದಿಂದ ಹಿಡಿದು ಹಣ ಹಾಕಿ ಅದರಿಂದ ಸ್ನ್ಯಾಕ್ಸ್‌ಗಳ ಪಡೆಯುವ ವೆಂಡಿಂಗ್ ಮೆಷಿನ್‌ಗಳ ನೋಡಿರುತ್ತೀರಿ. ಭಾರತದಲ್ಲೂ ಅದರಲ್ಲೂ ಮೆಟ್ರೋ ನಗರಗಳಲ್ಲಿ ಈ ರೀತಿಯ ವೆಂಡಿಂಗ್ ಮೆಷಿನ್‌ಗಳ ನೋಡಬಹುದಾಗಿದೆ. ಅದರಲ್ಲೂ ಮುಂದುವರೆದ ದೇಶಗಳಲ್ಲಿ ಈ ವೆಂಡಿಂಗ್ ಮೆಷಿನ್‌ಗಳು ಒಂದು ಹೆಜ್ಜೆ ಮುಂದೆ ಹೋಗಿವೆ. ಮೊಬೈಲ್ ರಿಪೇರಿ, ಮಾರಾಟ, ಪ್ಲಾಸ್ಟಿಕ್ ಬಾಟಲಿ ಹಾಕಿದರೆ ನೀರು ಬರುವುದು ಇಂತಹ ಹತ್ತು ಹಲವು ಆವಿಷ್ಕಾರಗಳು ಈಗ ಆಗಿವೆ.
ಇನ್ನು ಚೀನಾದಂತಹ ತಂತ್ರಜ್ಞಾನದಲ್ಲಿ ಬಹಳ ಅಡ್ವಾಂನ್ಸ್ ಆಗಿರುವ ದೇಶದಲ್ಲಿ ಈ ವೆಂಡಿಂಗ್ ಮೆಷಿನ್‌ಗಳು ಹೆಜ್ಜೆ ಹೆಜ್ಜೆಗೂ ನೋಡಲು ಸಿಗುತ್ತವೆ. ಈಗ ಹೊಸದಾಗಿ ಎಂಟ್ರಿಕೊಟ್ಟಿರುವ ವೆಂಡಿಂಗ್ ಮಷಿನ್‌ವೊಂದು ಸುದ್ದಿಯಾಗುತ್ತಿದೆ. ಅದು ನೀವು ಚಿನ್ನ ಹಾಕಿದರೆ ಕ್ಷಣ ಮಾತ್ರದಲ್ಲಿ ಹಣ ನೀಡುತ್ತದೆ. ಹೌದು ನಿಮ್ಮ ಹಳೆಯ ಅಥವಾ ಹೊಸ ಚಿನ್ನವನ್ನು ಮಾರಾಟ ಮಾಡಲು ಮಳಿಗೆ, ಅಂಗಡಿಗೆ ತೆರಳಬೇಕಾಗಿಲ್ಲ ಕೇವಲ ಮಷಿನ್‌ನಲ್ಲಿ 5 ನಿಮಿಷದೊಳಗೆ ಈ ಕೆಲಸ ಆಗುತ್ತೆ.

ಚೀನಾ ತನ್ನ ಮೊದಲ "ಚಿನ್ನ ಮರುಬಳಕೆ ಎಟಿಎಂ" ಅನ್ನು ಪ್ರಾರಂಭಿಸಿದ್ದು, ಬಳಕೆದಾರರಿಗೆ ತಮ್ಮ ಚಿನ್ನಾಭರಣಗಳನ್ನು ಕೆಲವೇ ನಿಮಿಷಗಳಲ್ಲಿ ತಕ್ಷಣ ನಗದು ರೂಪದಲ್ಲಿ ವಿನಿಮಯ ಮಾಡಿಕೊಳ್ಳಲು ನೆರವಾಗುವ ಹೈಟೆಕ್ ಯಂತ್ರ ಇದಾಗಿದೆ. ಶಾಂಘೈನ ಗ್ಲೋಬಲ್ ಹಾರ್ಬರ್ ಶಾಪಿಂಗ್ ಮಾಲ್‌ನಲ್ಲಿರುವ ಕಿಂಗ್‌ಹುಡ್ ಗ್ರೂಪ್ ಅಭಿವೃದ್ಧಿಪಡಿಸಿದ ಈ ಯಂತ್ರವು ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಹಳೆಯ ಚಿನ್ನಾಭರಣವನ್ನು ಅಂದಿನ ಮಾರುಕಟ್ಟೆ ದರದಲ್ಲಿ ಹಣ ನೀಡುವ ವಿಶ್ವದ ಏಕೈಕ ಯಂತ್ರ ಇದಾಗಿದೆ.
ಈ ಸ್ಮಾರ್ಟ್ ವೆಂಡಿಂಗ್ ಮಷಿನ್ ಗ್ರಾಹಕರ ಚಿನ್ನವನ್ನು ಹಾಗೂ ಅದರ ಪರಿಶುದ್ಧತೆ, ತೂಕ ಸ್ಕ್ಯಾನ್ ಮಾಡಲಿದೆ. ಹಾಗೆ ಅದರ ಮೌಲ್ಯ ಎಷ್ಟು ಎಂಬುದನ್ನು ಹಾಗೆ ಮುಂದುವರೆಯಬೇಕಾ ಬೇಡವೇ ಎಂಬ ಆಯ್ಕೆಯನ್ನು ಕೂಡ ನೀಡಲಿದೆ. ಮುಂದುವರೆಯುವ ಆಯ್ಕೆಯನ್ನು ಗ್ರಾಹಕರು ಮಾಡಿದಾಗ ಚಿನ್ನವನ್ನು ಕರಗಿಸಿ ಅಂದಿನ ಮಾರುಕಟ್ಟೆ ದರದಷ್ಟು ಹಣ ವರ್ಗಾಯಿಸಲಿದೆ. ಯಂತ್ರವು ಮೂರು ಗ್ರಾಂಗಳಿಗಿಂತ ಹೆಚ್ಚು ತೂಕವಿರುವ ಮತ್ತು ಕನಿಷ್ ಶೇ 50ರಷ್ಟು ಚಿನ್ನದ ಶುದ್ಧತೆ ಹೊಂದಿರುವ ವಸ್ತುಗಳನ್ನು ಮಾತ್ರ ಕರಗಿಸಿ ಹಣ ನೀಡಲಿದೆ.
ಇದರ ಪ್ರಯೋಗಾರ್ಥವಾಗಿ ವಾಂಗ್ ಎಂಬ ಗ್ರಾಹಕಿ ತಮ್ಮ 40 ಗ್ರಾಮ್ ತೂಕದ ಸರವನ್ನು ಈ ಎಟಿಎಂನಲ್ಲಿ ಹಾಕಿ ಅದರಿಂದ ಹಣ ಪಡೆಯಲು ಮುಂದಾದರು. ಪ್ರತಿ ಗ್ರಾಮ್‌ಗೆ ಇಂದಿನ ದರದಂತೆ ಅವರಿಗೆ 4.2 ಲಕ್ಷ ರೂಪಾಯಿಯನ್ನು ಖಾತೆಗೆ ನೇರವಾಗಿ ಜಮಾ ಮಾಡಲಾಯಿತು. ಹಾಗೆ ಆ ಚಿನ್ನ ಕರಗಿಸುವ ಮಷಿನ್‌ನ ಒಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಈ ವಿಡಿಯೋ ಬರೋಬ್ಬರಿ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಸಾವಿರಾರು ಮಂದಿ ಈ ವಿಡಿಯೋ ನೋಡಿ ಅಚ್ಚರಿ ಹೊರಹಾಕಿದ್ದಾರೆ. ಹಾಗೆ ಹಲವು ರೀತಿ ಕಮೆಂಟ್‌ಗಳ ಮಾಡಿದ್ದಾರೆ. ಕೆಲವರು ಈ ಅಚ್ಚರಿ ನೋಡಿ, ಚೀನಾ ಇಡೀ ಜಗತ್ತನ್ನು ಹಿಂದೆ ಬಿಟ್ಟು ಬಹಳಷ್ಟು ಮುಂದೆ ಸಾಗಿದೆ ಎಂದಿದ್ದಾರೆ. ಚೀನಾದಲ್ಲಿ ಇಂತಹ ಸಾವಿರಾರು ಆವಿಷ್ಕಾರಗಳು ನಡೆಯುತ್ತಲೇ ಇವೆ. ಆದ್ರೆ ನಾವು ಹಿಂದೆ ಉಳಿದಿದ್ದೇವೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದು ಭವಿಷ್ಯದ ವ್ಯವಹಾರಿಕ ವಿಶ್ವ. ಮುಂದೆ ಎಲ್ಲವೂ ಯಂತ್ರಗಳ ಸಹಾಯದ ಮೂಲಕ ನಡೆಯಲಿದೆ. ಜಗತ್ತು ಮತ್ತಷ್ಟು ವೇಗ ಪಡೆಯಲಿದೆ ಎಂದಿದ್ದಾರೆ. ಆದ್ರೆ ಇದು ಎಷ್ಟು ಪಾರದರ್ಶಕವಾಗಿ ಕೆಲಸ ಮಾಡಲಿದೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications