Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
International Yoga Day 2025: 'ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ' ಎಂಬ ಅರ್ಥವೇನು?
ಯೋಗ ಭಾರತದಲ್ಲಿ ಶತಮಾನಗಳಿಂದ ಆಚರಣೆಯಲ್ಲಿದ್ದ ಪದ್ಧತಿ. ಆದರೆ ಈಗ ಇಡೀ ವಿಶ್ವವೆ ಒಪ್ಪಿಕೊಂಡು ಆಚರಿಸುವ ಒಂದು ಬಗೆಯಾಗಿದೆ. ಆರೋಗ್ಯಕ್ಕಾಗಿ ಇಂದು ಯೋಗ ಬಹುಮುಖ್ಯ ಅಂಗವಾಗಿದೆ. ಹೀಗಾಗಿ ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸುವುದು ನೋಡಬಹುದು.
ಪ್ರತಿ ವರ್ಷವು ಒಂದೊಂದು ಥೀಮ್‌ನಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ 'ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ' ಎಂಬ ಜಾಗತಿಕ ಘೋಷ ವಾಖ್ಯದಡಿ ಈ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗ ಎಂದರೆ ಕೇವಲ ಒಂದು ದಿನ ವ್ಯಾಯಾಮ ಮಾಡುವುದಿಲ್ಲ. ಹಾಗೆ ಇದೊಂದು ಪ್ರತಿಷ್ಠೆಯೂ ಅಲ್ಲ. ನಮ್ಮನ್ನು ಹಾಗೂ ಇಡೀ ಭೂಮಿಯನ್ನು ಆರೋಗ್ಯವಾಗಿಡುವ ಕಡೆ ಇದು ಕೆಲಸ ಮಾಡಲಿದೆ.

ಸದೃಢ ದೇಹ ಮತ್ತು ಮನಸ್ಸಿಗಾಗಿ ಯೋಗ ಮಾಡುವ ಕುರಿತು ಹಾಗ ಅದರ ಪ್ರಯೋಜನಗಳನ್ನು ಇಡೀ ವಿಶ್ವಕ್ಕೆ ಹರಡುವ ಕಾರಣದಿಂದಾಗಿ ಜೂನ್ 21ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಗ ಜನರ ಜೀವನ ಮತ್ತಷ್ಟು ಆರೋಗ್ಯಕರವಾಗಿಸುವ ದೃಷ್ಟಿಯಿಂದ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
2014 ರಲ್ಲಿ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದೆ. ಹೀಗಾಗಿ ಈ ದಿನದಂದು ವಿಶೇಷವಾಗಿ ವಿಶ್ವದಾದ್ಯಂತ ಕೋಟಿಗೂ ಅಧಿಕ ಮಂದಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗುತ್ತಾರೆ. ಈ ವರ್ಷ ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ ಎಂಬ ಧ್ಯೇಯ ವಾಖ್ಯದಡಿ ಯೋಗ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಥೀಮ್ ಅನ್ನು ಘೋಷಿಸಿದರು.
'ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ' ಎಂದರೆ ಏನು?
ಒಂದು ಭೂಮಿ, ಮಾನವರು, ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಎಲ್ಲಾ ಜೀವಿಗಳು ನಮ್ಮ ಗ್ರಹವನ್ನು ಮನೆ ಎಂದು ಪರಿಗಣಿಸಿವೆ. ನೈಸರ್ಗಿಕವಾಗಿ ಶಾಂತಿಯುತವಾಗಿ ಸಹಬಾಳ್ಬೆಯ ಜೀವನ ನಡೆಸುವುದನ್ನು ನಾವು ಪ್ರಮಾಣಿಕರಿಸಬೇಕು ಎಂಬುದಾಗಿದೆ
ಒಂದು ಆರೋಗ್ಯ, ಪರಿಸರದಲ್ಲಿನ ಸ್ಥಿತಿಯು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಪರಿಸರದ ಬಗ್ಗೆಯೂ ಕಾಳಜಿ ವಹಿಸಬೇಕು. ಇಡೀ ಪರಿಸರ ಆರೋಗ್ಯವಾಗಿದ್ದರೆ ಜೀವ ಸಂಕುಲ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಹಾಗೆ ಪರಿಸರದಲ್ಲಿ ಜೀವಿಸುವ ಪ್ರತಿಯೊಬ್ಬರು ಇದರ ಪ್ರಯೋಜನ ಪಡೆಯಬಹುದು ಎಂಬ ಅರ್ಥವಾಗಿದೆ.
ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
ಮಾರ್ಚ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಯೋಗ ಕುರಿತಾಗಿ ಹೇಳಿಕೊಂಡಿದ್ದಾರೆ. ಅದರಲ್ಲಿ ಈ ವರ್ಷ ನಾವು ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ ಎಂಬ ಆಂದೋಲನದ ಅಡಿ 2025ರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಿದ್ದೇವೆ. ಯೋಗದ ಮೂಲಕ ಎಲ್ಲರು ಆರೋಗ್ಯವಂತರಾಗಿ. ಹಾಗೆ ಜಾಗತಿಕ ಆರೋಗ್ಯ ಸುಧಾರಿಸುವ ಭಾರತದ ಈ ಧ್ಯೇಯವನ್ನು ಅವರು ವಿವರಿಸಿರು.
ಈ ಯೋಗ ದಿನದ ಮುನ್ನ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಐತಿಹಾಸಿಕ ಯೋಗ ದಿನ ಆಚರಿಸಲಾಗುತ್ತಿದೆ. ಇದರಲ್ಲಿ 5 ಲಕ್ಷಕ್ಕೂ ಹೆಚ್ಚು ಯೋಗ ಪಟುಗಳು ಭಾಗಿಯಾಗುತ್ತಿದ್ದಾರೆ. ಇದರಲ್ಲು 1 ಲಕ್ಷಕ್ಕೂ ಹೆಚ್ಚು ಮಂದಿ ಪೂರ್ವ ನಿಯೋಜಿತ ಯೋಗಭ್ಯಾಸದಲ್ಲಿ ಭಾಗಿಯಾಗುತ್ತಿದ್ದಾರೆ. ಇತಿಹಾಸದಲ್ಲಿ ಇದು ದೊಡ್ಡ ಯೋಗ ಅಭ್ಯಾಸ ಪ್ರದರ್ಶನಗಳಲ್ಲಿ ಒಂದಾಗಿರಲಿದೆ.
ಯೋಗವನ್ನು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಖಾತ್ರಿಪಡಿಸುವ ವಿಧಾನ. ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.



Click it and Unblock the Notifications

