Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಇಂದು ಅಂತಾರಾಷ್ಟ್ರೀಯ ಸಂಗೀತ ದಿನ: ಈ ದಿನ ಆರಂಭಗೊಂಡಿದ್ದು ಏಕೆ.? ಏನಿದರ ಮಹತ್ವ?
ಸಂಗೀತ ಆಲಿಸೋದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಸಂಗೀತ ಕೇಳೋಕೆ ಇಷ್ಟಪಡುತ್ತಾರೆ. ಹಾಡು ಹೇಳುವವರಿಗಿಂತಲೂ ಕೇಳೋದು ಎಲ್ಲರ ನೆಚ್ಚಿನ ಅಭ್ಯಾಸದಲ್ಲಿ ಒಂದಾಗಿರುತ್ತದೆ. ಸಂಗೀತ ಅಂದ್ರೆ ಅದು ಬರಿ ಹಾಡು ಆಗಿರಬೇಕು ಅಂತೇನು ಇಲ್ಲ. ನಾನು ನಿತ್ಯ ನೋಡುವ ಒಂದೊಂದು ವಸ್ತುವಿನಲ್ಲು ಒಂದೊಂದು ಸಂಗೀತ ಆಲಿಸಬಹುದು.
ಬೆಳಗ್ಗೆ ಎದ್ದಾಗ ಹಕ್ಕಿಗಳ ಕೂಗು ಸಹ ಒಂದು ಸಂಗೀತ, ಪ್ರಾಣಿಗಳ ಕೂಗು, ಗಿಡ ಮರಗಳ ಸದ್ದು, ಪ್ರತಿಯೊಂದು ವಸ್ತುವಿನಿಂದಲೂ ಒಂದೊಂದು ರೀತಿಯ ಸದ್ದು ಹೊರಹೊಮ್ಮುತ್ತದೆ. ಅದು ಒಂದೂ ರೀತಿಯ ಸಂಗೀತವೆ. ಮಗು ಹುಟ್ಟುವ ಮೊದಲೆ ಅದು ತಾಯಿಯ ಗರ್ಭದಲ್ಲಿ ಹೃದಯ ಬಡಿತ ಕೇಳುತ್ತದೆ. ಅದು ಸಹ ಸಂಗೀತವೆ.

ಹೀಗೆ ಪ್ರಕೃತಿಯ ಒಂದೊಂದು ಅಂಶಗಳಲ್ಲೂ ನಮಗೆ ಸಂಗೀತ ಕೇಳಲು ಸಿಗುತ್ತದೆ. ಸಂಗೀತ ಮನಸ್ಸಿಗೆ, ದೇಹಕ್ಕೆ ಅಮೂಲ್ಯ ಚೈತನ್ಯ, ನವೋಲ್ಲಾಸ ನೀಡುವ ಸಾಧನವಾಗಿದೆ. ಇನ್ನು ಈ ಸಂಗೀತಕ್ಕೂ ಒಂದು ದಿನ ಮೀಸಲಿಡಲಾಗಿದ್ದು, ಜೂನ್ 21ರಂದು ಅಂತಾರಾಷ್ಟ್ರೀಯ ಸಂಗೀತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಜಗತ್ತಿನ ಹಲವು ದೇಶಗಳಲ್ಲಿ ವಿಜೃಂಭಣೆಯ ಸಂಗೀತ ದಿನಾಚರಣೆ ಆಚರಿಸುವುದನ್ನು ನಾವು ನೋಡಬಹುದು.
ಸಂಗೀತ ದಿನಾಚರಣೆ ಆರಂಭಗೊಂಡಿದ್ದು ಯಾವಾಗ ?
ಈ ದಿನ ಆರಂಭಗೊಂಡಿದ್ದು, ಫ್ರಾನ್ಸ್‌ನಲ್ಲಿ 1982ರ ವೇಳೆ ಅಲ್ಲಿನ ಸಂಸ್ಕೃತಿ ಸಚಿವರಾಗಿದ್ದ ಜ್ಯಾಕ್ ಲಾಂಗ್ ಅವರಿಗೆ ಸಂಗೀತ ದಿನಾಚರಣೆ ಆಚರಿಸಬೇಕು ಎಂದ ಯೋಚನೆ ಬಂದಿತ್ತು. ಮೊದಲ ಬಾರಿಗೆ ಅಮೆರಿಕನ್ ಸಂಗೀತಗಾರ ಜೋಯೆಲ್ ಕೊಹೆನ್ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ವಿಶ್ವ ಸಂಗೀತ ದಿನಕ್ಕೆ ನಾಂದಿ ಹಾಡಿದರು. ಇದಾದ ಬಳಿಕ ವಿಶ್ವದ ಬಹುತೇಕ ರಾಷ್ಟ್ರಗಳು ಸಂಗೀತ ದಿನಾಚರಣೆ ಆಚರಿಸುತ್ತವೆ.
ಅದ್ರಲ್ಲೂ ಭಾರತದಲ್ಲಿ ಸಂಗೀತ ಎಲ್ಲಿಲ್ಲದ ಮಾನ್ಯತೆ ಇದೆ. ಭಾರತ ಸಂಗೀತ ಪ್ರೇಮಿಗಳ ನಾಡಾಗಿದೆ. ಅದೇಷ್ಟೋ ವಿಧದ ಸಂಗೀತ ಪ್ರಕಾರಕ್ಕೆ ಜನ್ಮ ನೀಡಿರುವುದು ಭಾರತ. ಅಲ್ಲದೆ ಮಹಾನ್ ಸಂಗೀತ ವಿದ್ವಾಂಸರು ಸಹ ಭಾರತದವರೇ ಆಗಿದ್ದಾರೆ. ಭಾರತದಲ್ಲಿ ಸಂಗೀತ ಸಾವಿರಾರು ವರ್ಷಗಳ ಇತಿಹಾಸವನ್ನೇ ಹೊಂದಿದೆ. ಅದು ಜಾನಪದದಿಂದ ಹಿಡಿದು ಶಾಸ್ತ್ರೀಯ ಸಂಗೀತ, ಹಿಪ್ ಹಾಪ್, ವೆಸ್ಟರ್ನ್ ಸಂಗೀತದ ವರೆಗೆ ಭಾರತದಲ್ಲಿ ಫೇಮಸ್ ಆಗಿವೆ.
ವಿಶ್ವ ಸಂಗೀತ ದಿನದ ಮಹತ್ವ ?
ಫೈಟ್ಸ್ ಡೆ ಲಾ ಮ್ಯೂಸಿಕ್ ವಿಶ್ವ ಸಂಗೀತ ದಿನವನ್ನು ಆಚರಿಸುವ ಘೋಷಣೆಯಾಗಿದೆ. ಫೈಟ್ಸ್ ಡೆ ಲಾ ಮ್ಯೂಸಿಕ್ ಅಂದರೆ ಸಂಗೀತ ನುಡಿಸಿ ಎಂದರ್ಥ. ಇದು ಜನರು ತಮ್ಮ ಮನೆಗಳಿಂದ ಹೊರಬರಲು ಮತ್ತು ಅವರ ಸಂಗೀತದೊಂದಿಗೆ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಪ್ರೇರೇಪಿಸುತ್ತದೆ. ಸಂಗೀತವು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ವಿಶ್ವದಾದ್ಯಂತ ಸಂಗೀತವನ್ನು ಪ್ರೀತಿಸುವ ಕೋಟಿ ಕೋಟಿ ಮಂದಿ ಇದ್ದಾರೆ. ಈ ದಿನದಂದು ಸಂಗೀತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಮಹಾನ್ ವ್ಯಕ್ತಿಗಳನ್ನು ಸ್ಮರಿಸಲಾಗುತ್ತದೆ. ಜೊತೆಗೆ ಅವರ ಕೊಡುಗೆಯನ್ನು ಮುಂದಿನ ಪೀಳಿಗೆಗೂ ಪಸರಿಸುವ ಕಾರ್ಯಕ್ಕೆ ಎಲ್ಲರು ಕೈ ಜೋಡಿಸಲಾಗುತ್ತದೆ.
ಹಿತವಾದ ಸಂಗೀತವನ್ನು ಕೇಳುವುದು ನಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಮತ್ತು ನಮ್ಮ ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಗೀತವು ನಮ್ಮ ಮಿದುಳಿನಲ್ಲಿ ಹಾರ್ಮೋನ್, ಡೋಪಮೈನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ, ಇದು ಸಂತೋಷದ ಭಾವನೆಗೆ ಕಾರಣವಾಗುತ್ತದೆ ಎಂದು ಕಂಡುಬಂದಿದೆ. ಅಲ್ಲದೆ ಮಾನಸಿಕ ನೆಮ್ಮದಿಗೆ ಸಂಗೀತ ಬಹಳ ಮುಖ್ಯ ಎಂದು ತಿಳಿದುಬಂದಿದೆ.



Click it and Unblock the Notifications
