Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಜಪಾನ್ ಭೂಕಂಪದ ಈ ದೃಶ್ಯ ವೈರಲ್: ನೋಡುವಾಗಲೇ ಭಯವಾಗುತ್ತೆ
2024 ಮೊದಲ ದಿನವೇ ಜಪಾನ್‌ಗೆ ದುಃಸ್ವಪ್ನವಾಗಿ ಕಾಡಿದೆ. ಸುನಾಮಿ, ಭೂಕಂಪದಿಂದಾಗಿ ಜಪಾನ್ ದೇಶ ತತ್ತರಿಸಿ ಹೋಗಿದೆ. ಒಂದೇ ದಿನದಲ್ಲಿ 155 ಬಾರಿ ಭೂಕಂಪನ ಸಂಭವಿಸಿದೆ.
ಅವುಗಳಲ್ಲಿ 21 ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ದಾಖಲಾಗಿದೆ. ಆದರೆ ಭೂಕಂಪದ ತೀವ್ರತೆ 7.6 ಹಾಗೂ ಕೆಲವೊಂದು 6.1 ತೀವ್ರತೆ ಕಂಡು ಬಂದಿದ್ದು ಇದರಿಂದಾಗಿ ಜಪಾನ್‌ನ ಚಿತ್ರಣವೇ ಬದಲಾಗಿದೆ.

ಇದೀಗ ಜಪಾನ್ ಭೂಕಂಪದ ಕೆಲವೊಂದು ವೀಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಈ ವೀಡಿಯೋ ತುಂಬಾನೇ ಗಮನ ಸೆಳದಿದೆ. ಫುಟ್‌ಪಾತ್‌ನಲ್ಲಿ ಹಾಕಿದ್ದ ಇಂಟರ್‌ಲಾಕ್ ಸಮುದ್ರದ ಅಲೆಯಂತೆ ಉಬ್ಬಿ ಇಳಿಯುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದ್ದು ತುಂಬಾನೇ ವೈರಲ್ ಆಗುತ್ತಿದೆ.
ಜಪಾನ್‌ನಲ್ಲಿ ಆಗಾಗ ಭೂಕಂಪನ ಸಂಭವಿಸುತ್ತಲೇ ಇರುತ್ತದೆ
ಜಪಾನ್‌ನಲ್ಲಿ ಆಗಾಗ ಭೂಕಂಪನ ಉಂಟಾಗುತ್ತಲೇ ಇರುತ್ತದೆ, ಆದರೆ ಇಷ್ಟೊಂದು ತೀವ್ರತೆಯಲ್ಲಿ ಈ ಒಂದು ದಶಕದಲ್ಲಿ ಕಂಡು ಬಂದಿರಲಿಲ್ಲ, 2020ರಿಂದ ಇಲ್ಲಿಯವರೆಗೆ 506 ಭಾರಿ ಭೂಕಂಪನ ಉಂಟಾಗಿದೆ. ಕಡಿಮೆ ತೀವ್ರತೆಯೆಂದರೆ 1.0 ಆಗಿತ್ತು, ಆದರೆ ಇದೀಗ ಇದ್ದಕ್ಕಿದ್ದಂತೆ ಭೂಕಂಪನದ ತೀವ್ರತೆ ಹೆಚ್ಚಾಗಲು ಕಾರಣವೇನು ಎಂಬುವುದರ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ.
ಸೋಮವಾರ ಸಂಭವಿಸಿದ ಭೂಕಂಪನದ ತೀವ್ರತೆ 1885ರಿಂದ ಕಂಡು ಬಂದಿರಲಿಲ್ಲ. ಹೊಸ ವರ್ಷದ ದಿನವೇ ಸೋಮವಾರದಂದು ಜಪಾನ್‌ನ ಹೊಸ ವರ್ಷದ ಸಂಭ್ರಮ ಕಿತ್ತುಕೊಂಡಿದೆ. 2011ರಲ್ಲಿ ಟೋಕಿಯೋದಲ್ಲಿ ಸಂಭವಿಸಿದ ಭೂಕಂಪನದಲ್ಲಿ 18 ಸಾವಿರ ಜನ ಸಾವನ್ನಪ್ಪಿದ್ದರು. ಅದಾದ ಬಳಿಕ ಅತಿ ದೊಡ್ಡ ಭೂಕಂಪನ ಇದಾಗಿದೆ.
ಅಪಾಯದ ಮುನ್ಸೂಚನೆ ಮೊದಲೇ ಸಿಕ್ಕ ಕಾರಣ ಸಾವು ಕಡಿಮೆಯಾಗಿದೆ
ಸುನಾಮಿ, ಭೂಕಂಪನ ಎರಡೂ ಜೊತೆಯಾಗಿ ಬಂದರೂ ಜಪಾನ್‌ನಲ್ಲಿ ಈ ಬಾರಿ ಅಧಿಕ ಸಾವು ಸಂಭವಿಸಿಲ್ಲ, ಏಕೆಂದರೆ ಮೊದಲೇ ಅಪಾಯದ ಸೂಚನೆ ಸಿಕ್ಕಿ ಆ ಭಾಗದಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು, ಆದರೆ ಬ್ರಿಡ್ಜ್‌ಗಳು, ಬೋಟ್‌ಗಳು, ದೊಡ್ಡ-ದೊಡ್ಡ ಕಟ್ಟಡಗಳು, ಗಾಡಿಗಳು ಇವೆಲ್ಲಾ ಸುನಾಮಿ, ಭೂಕಂಪನದಿಂದ ನಾಶವಾಗಿದೆ.



Click it and Unblock the Notifications
