Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವ್ಯಾನಿಟಿ ಬ್ಯಾಗ್‌ನಲ್ಲಿರುವ ತಿಂಡಿ ಕೊಡು ಎಂದು ಗೊರಿಲ್ಲಾ ಕೇಳಿದ ಸ್ಟೈಲ್ ಇದೆಯೆಲ್ಲಾ... ವೀಡಿಯೋ ವೈರಲ್
ಈ ಟೂರಿಸ್ಟ್ ಹೋಗುವ ಕಡೆ ಇರುವ ಪ್ರಾಣಿಗಳು ಮನುಷ್ಯರ ಬಗ್ಗೆ ತುಂಬಾನೇ ತಿಳಿದುಕೊಂಡಿರುತ್ತದೆ. ಗೊರಿಲ್ಲಾ ಟೂರಿಸ್ಟ್‌ನ ಬ್ಯಾಗ್‌ನಲ್ಲಿರುವ ತಿಂಡಿ ಬೇಕೆಂದು ಕೇಳಿರುವ ವೀಡಿಯೋ ವೈರಲ್ ಆಗಿದೆ, ಅಷ್ಟಕ್ಕೂ ಅವರೇನೂ ತಿಂಡಿಯನ್ನು ಕಾಣುವಂತೆ ಇಟ್ಟುಕೊಂಡಿರಲಿಲ್ಲ, ಆದರೂ ಅದು ವ್ಯಾನಿಟಿ ಬ್ಯಾಗ್‌ನ ಒಳಗಡೆ ತೋರಿಸಿ ಕೊಡುವಂತೆ ವೀಡಿಯೋ ಸಿಕ್ಕಾಪಟ್ಟೆ ಗಮನ ಸೆಳೆದಿದೆ.

ಗೊರಿಲ್ಲಾ ಹಾಗೂ ಅವರ ಗ್ಲಾಸ್ ಅಡ್ಡವಿದೆ. ಜನರು ಗೊರಿಲ್ಲಾ ನೋಡಲು ಬಂದಿರುತ್ತಾರೆ, ಅಲ್ಲಿಗೆ ಬರುವ ಗೊರಿಲ್ಲ ವ್ಯಾನ್‌ನ ಒಳಗಡೆ ಇರುವ ಮಹಿಳೆ ಬಳಿಯಲ್ಲಿ ಏನೋ ಕೇಳುತ್ತದೆ, ಆಕೆ ತನ್ನ ಬ್ಯಾಗ್‌ನಲ್ಲಿರುವ ಈ ಬಂಚ್ ತೋರಿಸುತ್ತಾಳೆ, ಅದು ಒಪ್ಪುವುದಿಲ್ಲ, ನಂತರ ಬ್ಯಾಗ್ ತೋರಿಸುತ್ತಾಳೆ, ಆವಾಗ ಆ ಗೊರಿಲ್ಲಾ ಅದರೊಳಗಡೆ ತೋರಿಸುವಂತೆ ತಿಳಿಸುತ್ತದೆ. ಅದು ಕೈ ಸೆನ್ನೆ ಮಾಡಿ ನಾನು ಹೇಳುತ್ತಿರುವುದು ಅದಲ್ಲ ಎಂದು ಹೇಳುತ್ತಿರುವ ರೀತಿ ತುಂಬಾನೇ ಕ್ಯೂಟ್ ಇದೆ.
ಗೊರಿಲ್ಲಾ ಅಲ್ಲಿರುವವರೆಗೆ ಕಮಾಂಡ್ ಮಾಡುತ್ತಿದೆ
ಆ ಗೊರಿಲ್ಲಾ ತುಂಬಾನೇ ಹುಷಾರಿದೆ, ಜನರು ಅದನ್ನು ಯಾಮಾರಿಸಲು ನೋಡಿದರೆ ಅದು ಒಪ್ಪಿಕೊಳ್ಳಲು ರೆಡಿಯಿಲ್ಲ, ನಂತರ ಏನೂ ಸಿಗಲ್ಲ ಅಂತ ಅಲ್ಲಿರುವ ಕಡ್ಡಿ ಎತ್ತಿ ನಂತರ ಆ ತಂತಿ ಬೇಲಿ ಏರುತ್ತಿರುವ ದೃಶ್ಯ ಕಾಣುತ್ತೆ, ಗೊರಿಲ್ಲಾ ತಿಂಡಿ ಕೇಳುವ ರೀತಿ ನೆಟ್ಟಿಗರ ಗಮನ ಸೆಳೆದಿದ್ದು ಈ ವೀಡಿಯೋ ವೈರಲ್ ಆಗಿದೆ.
ಪ್ರಾಣಿಗಳಲ್ಲಿ ಗೊರಿಲ್ಲ ಬುದ್ಧಿವಂತ ಪ್ರಾಣಿಯಾಗಿದೆ. ಗೊರಿಲ್ಲ ಮನುಷ್ಯರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತದೆ, ಅಲ್ಲದೆ ಅದು ನಗುತ್ತದೆ, ಅಳುತ್ತದೆ ಹೀಗೆ ಮನುಷ್ಯರಂತೆ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ. ಅಲ್ಲದೆ ಆ ಹಿಂದಿನದರ ಮುಂದಿನದರ ಬಗ್ಗೆ ಯೋಚಿಸುವ ಶಕ್ತಿಯನ್ನು ಹೊಂದಿದೆ. ಇದು ಮನುಷ್ಯರ ಬುದ್ದಿಮಟ್ಟಕ್ಕೆ ಸ್ವಲ್ಪವೇ ಸ್ವಲ್ಪ ಬುದ್ಧಿಮಟ್ಟ ಕಡಿಮೆ ಹೊಂದಿದೆ ಅಷ್ಟೇ, ಅಲ್ಲದೆ ಸ್ವಲ್ಪ ಅಪಾಯಕಾರಿ ಪ್ರಾಣಿಯೂ ಹೌದು, ಇದಕ್ಕೆ ದೈಹಿಕ ಸಾಮರ್ಥ್ಯ ಹೆಚ್ಚಿದೆ. ಹಾಗಾಗಿ ಇದರ ಬಳಿ ಹೋಗುವುದು ಅಪಾಯಕಾರಿ.
ಏನಾದರೂ ಸಮಸ್ಯೆ ಇದ್ದರೆ ಅದನ್ನು ಮನುಷ್ಯರಂತೆ ಯೋಚಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತದೆ, ಅಲ್ಲದೆ ವಸ್ತುಗಳನ್ನು ಆಯುಧವಾಗಿ ಬಳಸುತ್ತದೆ, ಇದು ಮನುಷ್ಯರಿಗೆ ಮಾತ್ರ ಇತರ ಪ್ರಾಣಿಗಳಿಗೂ ಹಾನಿಯನ್ನುಂಟು ಮಾಡುತ್ತದೆ, ಅಲ್ಲದೆ ಇದು ಅದರ ರಕ್ಷಣೆಗೆ ಅಂತ ಬೇಕು ಬೇಕು ಅಂತ ದಾಳಿ ಮಾಡುವ ಗುಣವನ್ನೂ ಹೊಂದಿದೆ. ಹಾಗಾಗಿ ಈ ಪ್ರಾಣಿಯ ಸಮೀಪ ಹೋಗಬಾರದು.
ಅಲ್ಲದೆ ಇದು ಮನುಷ್ಯರನ್ನು ನೋಡಿ ಅವರಂತೆ ವರ್ತಿಸುವುದು ಕೂಡ ಮಾಡುತ್ತದೆ, ನೀವು ಮೃಗಾಲಯಕ್ಕೆ ಹೋದಾಗ ಇವುಗಳ ಬಳಿ ಹೋಗಿ ಚೇಷ್ಠೆ ಮಾಡಿ ತೊಂದರೆಯಲ್ಲಿ ಸಿಲುಕಿಕೊಳ್ಳದಿರಿ.



Click it and Unblock the Notifications
