Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ರಸ್ತೆ ಮೇಲೆ ಕಂತೆ ಕಂತೆ ಹಣ ಎಸೆದ ಯುವಕ..! ವಿಡಿಯೋ ವೈರಲ್
ದಾರಿಯಲ್ಲಿ ಒಂದು ರೂಪಾಯಿ ನಾಣ್ಯ ಬಿದ್ದರೂ ಕೂಡ ಎತ್ತಿಕೊಳ್ಳುವ ನಾವು ಇನ್ನು ಸಾವಿರಾರು ರೂಪಾಯಿ ಸಿಗುತ್ತೆ ಅಂದ್ರ ಎಂತಹ ಸಾಹಸಕ್ಕೂ ಕೈಹಾಕುತ್ತೇವೆ. ಇನ್ನು ಈ ಜಗತ್ತಲ್ಲಿ ಸುಮ್ಮನೆ ಹಣ ಯಾರ ಕೈಗೂ ಬರುವುದಿಲ್ಲ ಅದಕ್ಕೆ ಶ್ರಮ, ಕಷ್ಟ ಪಡಲೇಬೇಕಾಗಿತ್ತದೆ. ಆದ್ರೆ ಕೆಲವರು ಒಂದೊಂದು ರೂಪಾಯಿಗೂ ಕಷ್ಟ ಪಡುವುದನ್ನು ನಾವು ನೋಡಿದ್ದೇವೆ. ಹಾಗೆ ಒಂದೊಂದು ರೂಪಾಯಿಯನ್ನು ಈಗ ಲೆಕ್ಕ ಮಾಡಿ ಖರ್ಚು ಮಾಡಬೇಕಾಗಿದೆ.
ಆದರೆ ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಕಂತೆ ಕಂತೆ ಹಣವನ್ನು ರಸ್ತೆಯಲ್ಲಿ ಎಸೆಯುತ್ತಿದ್ದಾನೆ. ಹೌದು ಆತ ಹಣವನ್ನು ಗಾಳಿಯಲ್ಲಿ ಎಸೆದು ವಿಡಿಯೋ ಸಹ ಮಾಡಿ ಪೋಸ್ಟ್ ಮಾಡಿದ್ದಾನೆ. ಹೈದರಾಬಾದ್‌ನ ಕುಕಟ್‌ಪಳ್ಳಿಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಯುವಕನೊಬ್ಬ ಜನನಿಬಿಡ ಪ್ರದೇಶದಲ್ಲಿ ಕುತ್ತಿಗೆಗೆ ಬ್ಯಾಗ್ ಹಾಕಿಕೊಂಡು ಹಣ ಎಸೆಯುತ್ತಿದ್ದಾನೆ.

its_me_power ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ವೈರಲ್ ಆಗಿದೆ. ಬ್ಯಾಗ್‌ನಿಂದ ಎರಡೂ ಕೈನಲ್ಲಿ ನೋಟುಗಳ ಹಿಡಿದ ಆತ ಗಾಳಿಯಲ್ಲಿ ಎಸೆದಿದ್ದಾನೆ. ಈ ವಿಲಕ್ಷಣ ಘಟನೆಯಿಂದ ಶಾಕ್‌ಗೆ ಒಳಗಾದ ಅಲ್ಲಿದ್ದವರು ನೋಟುಗಳನ್ನು ಎತ್ತಿಕೊಳ್ಳಲು ನಾಮುಂದು ತಾಮುಂದು ಎಂದು ಓಡುತ್ತಿರುವುದು ನೋಡಬಹುದು.
ಇನ್ನು ಈ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಕೂಡಿದ್ದು, ವಾಹನಗಳ ನಡುವೆ ಜನರು ಜೀವದ ಹಂಗು ತೊರೆದು ನೋಟುಗಳ ಎತ್ತಿಕೊಳ್ಳಲು ಮುಂದಾಗುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ವಾಹನವನ್ನ ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ನೋಟನ್ನು ಎತ್ತಿಕೊಳ್ಳಲು ಓಡುತ್ತಿದ್ದಾರೆ. ಇದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ನೋಟುಗಳನ್ನ ಆತ ಏಕೆ ಎಸೆಯುತ್ತಿದ್ದಾನೆ ಎಂದು ಎಲ್ಲರು ಅಚ್ಚರಿಯಿಂದ ನೋಡುತ್ತಿದ್ದಾರೆ.
ಇದೆಲ್ಲದರ ಗಲಾಟೆ ಗದ್ದಲದ ನಡುವೆ ಚಿಕ್ಕ ಮಗುವೊಂದನ್ನ ಎತ್ತಿಕೊಂಡ ಮಹಿಳೆ ಸಹ ನೋಟು ಎತ್ತಿಕೊಳ್ಳುತ್ತಿರುವುದನ್ನು ಸಹ ನಾವು ನೋಡಬಹುದು. ಆಕೆ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ನೋಟುಗಳ ಆಯ್ದು ಕೈ ಮುಗಿಯುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸದ್ಯ ಈ ವಿಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಬಳಕೆದಾರರು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ನಡುರಸ್ತೆಯಲ್ಲಿ ಜನರ ಜೀವಕ್ಕೆ ಕುತ್ತು ತಂದ ಹಾಗೂ ಟ್ರಾಫಿಕ್‌ಗೆ ಕಾರಣನಾಗಿರುವುದಲ್ಲದೆ ಅಶಾಂತಿ ಸೃಷ್ಟಿಸಿದ ಯುವಕನ ವಿರುದ್ಧ ಕ್ರಮ ಜನರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಆದ್ರೆ ಆತ ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೋ ಮಾಡಿ ಅಪ್‌ಲೋಡ್ ಮಾಡುವ ಹಾಗೂ ವೈರಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಅದರಲ್ಲೂ ಜನನಿಬಿಡ ಪ್ರದೇಶದಲ್ಲಿ ಈ ರೀತಿ ಕೃತ್ಯ ಎಸಗಿದ್ದರ ವಿರುದ್ಧ ಆಕ್ರೋಶ ಕೇಳಿಬಂದಿದೆ.
Dear @RachakondaCop @TelanganaDGP can u Warn such Chapris who are creating Nuisance on Roads in Name of Content??? pic.twitter.com/pEX3BLCeiq
— Mahesh Goud #9999# (@indian66669296) August 21, 2024
ಇದಕ್ಕೂ ಮೊದಲು ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಫ್ಲೈ ಓವರ್ ಮೇಲಿನಿಂದ ನೋಟುಗಳ ಎಸೆದು ಸುದ್ದಿಯಾಗಿದ್ದ. ಕಳೆದ ವರ್ಷ ಜನವರಿ 24ರಂದು ಈ ಘಟನೆ ನಡೆದಿತ್ತು. ಕೆ ಆರ್ ಮಾರ್ಕೇಟ್ ಫ್ಲೈಓವರ್ ಮೇಲಿಂದ 10 ರೂ.ಮುಖಬೆಲೆಯ ನೋಟುಗಳ ರಾಶಿಯನ್ನು ಎಸೆದ ಘಟನೆ ನಡೆದಿತ್ತು. ಸೂಟ್ ಹಾಕಿಕೊಂಡು ಸ್ಕೂಟಿಯಲ್ಲಿ ಬಂದಿದ್ದ ಆತ ಫ್ಲೈ ಓವರ್ ಮೇಲಿಂದ 10, 20, 50 ರೂಪಾಯಿ ನೋಟುಗಳ ಎಸೆದಿದ್ದ. ನೋಟುಗಳು ಬೀಳುತ್ತಿದ್ದಂತೆ ಅದನ್ನು ಎತ್ತಿಕೊಳ್ಳಲು ನೂರಾರು ಜನ ಸೇರಿದ್ದರು.
ಈ ಘಟನೆಯ ಬಳಿಕ ಅರುಣ್ ಎಂಬ ಯುವಕನಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ ಉತ್ತರ ನೀಡುವಂತೆ ಹಾಗೂ ಠಾಣೆಗೆ ಬರುವಂತೆ ಕೋರಿದ್ದರು. ಆದ್ರೆ ಈಗ ಹೈದರಾಬಾದ್‌ನಲ್ಲೂ ಈ ಘಟನೆ ನಡೆದಿದೆ.



Click it and Unblock the Notifications











