Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಆಸ್ತಿ ಎಷ್ಟಿದೆ ಗೊತ್ತಾ? ಐಷಾರಾಮಿ ಕಾರುಗಳ ಕಲೆಕ್ಷನ್!
Actor Rishab Shetty: ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಪಾನ್ ಇಂಡಿಯಾ ಸಿನಿಮಾ ಮೂಲಕ ಅವರೀಗ ಮನೆ ಮಾತಾಗಿದ್ದಾರೆ. ಅವರ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೊಂಡು ದೇಶದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗೆ ಎಲ್ಲಾ ಕಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗೆ ಮುಂದಿನ ಚಾಪ್ಟರ್ ಕೂಡ ತೆರೆಗೆ ಬರಲಿದೆ ಎಂಬ ಸುಳಿವು ಕೂಡ ಸಿಕ್ಕಿದೆ.
ಇನ್ನು ಕುಂದಾಪುರದಿಂದ ಬಂದ ರಿಷಬ್ ಶೆಟ್ಟಿ ಈಗ ನ್ಯಾಷನಲ್ ಹೀರೋ ಆಗಿದ್ದಾರೆ. ಕಾಂತಾರ ಚಾಪ್ಟರ್ 1ರ ನಂತರ ಅವರು ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಹಾಗೆ ಅವರು ಇಡೀ ಸಿನಿಮಾವನ್ನು ತಮ್ಮ ಸ್ವಂತ ಊರಿನಲ್ಲೇ ಚಿತ್ರಿಸಿದ್ದಾರೆ. ಕುಂದಾಪುರದ ಗ್ರಾಮದಲಲ್ಲಿಯೇ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ.

ಅವರ ಸ್ವಂತ ಊರಿನಲ್ಲಿ ದೊಡ್ಡ ಮಟ್ಟದ ವ್ಯವಹಾರಗಳಿಗೆ ಕಾರಣರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿನ ನಟನೆಗೆ ಅವರು ಹೊಂಬಾಳೆ ಜೊತೆ ಕೈಜೋಡಿಸಿದ್ದು, ಲಾಭದಲ್ಲಿ ಶೇರು ಪಡೆಯಲಿದ್ದಾರೆ. ಅವರ ಆಸ್ತಿಯ ವಿಚಾರವಾಗಿ ಮಾತನಾಡುವುದಾದರೆ ಅವರು ಸ್ವಂತ ಊರಾದ ಕುಂದಾಪುರದಲ್ಲೇ ದೊಡ್ಡ ಮನೆ ಹೊಂದಿದ್ದಾರೆ.
ಹಾಗಾದ್ರೆ ರಿಷಬ್ ಶೆಟ್ಟಿ ಆಸ್ತಿ ಎಷ್ಟಿದೆ? ಅವರ ಬಳಿರುವ ಕಾರುಗಳೆಷ್ಟು? ಮನೆಯ ಮೌಲ್ಯ ಎಷ್ಟು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬರೋಬ್ಬರಿ ಕೋಟಿ ರೂ.ಗಳ ದೊಡ್ಡ ಬಂಗಲೆ ಹೊಂದಿದ್ದಾರೆ. 83 ಲಕ್ಷ ರೂ. ಐಷಾರಾಮಿ ಕಾರುಗಳ ಹೊಂದಿದ್ದಾರೆ. 2022 ರ ಬಿಳಿ ಆಡಿ Q7 ಸೇರಿ ರೆಡ್ ರೇಜ್ 2021 ಮಹೀಂದ್ರಾ ಥಾರ್, 2020 ರ ಜೀಪ್ ಕಂಪಾಸ್ ಟ್ರೈಲ್‌ಹಾಕ್, ಮತ್ತು 2019 ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಕೂಡ ಅವರ ಸಂಗ್ರಹದಲ್ಲಿದೆ.
ಅವರು ಒಟ್ಟಾರೆಯಾಗಿ 12ರಿಂದ 15 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ. ಇನ್ನು ಸಿನಿಮಾವೊಂದರಲ್ಲಿ ನಟನೆಗಾಗಿ 4 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದ್ರೆ ಕಾಂತಾರ ಸಿನಿಮಾಗಾಗಿ ಅವರು ಶೇರು ಪಡೆದುಕೊಂಡಿದ್ದು ಅದು 50ರಿಂದ 100 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.
ಅವರು 2022ರಲ್ಲಿ ಸ್ಯಾಂಡಲ್‌ವುಡ್ ನಟ ದ್ವಾರಕೀಶ್ ಅವರ ಮನೆಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಸುಮಾರು 10.5 ಕೋಟಿ ರೂಪಾಯಿಯಲ್ಲಿ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮನೆಯನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ. ಹಾಗೆ ಇತ್ತೀಚಿಗೆ ಅವರು ಟೊಯೋಟಾ ವೆಲ್ಫೈರ್ ದುಬಾರಿ ಕಾರು ಖರೀದಿಸಿದ್ದರು. ಈ ಕಾರಿನ ಬೆಲೆ 1 ಕೋಟಿ 40 ಲಕ್ಷ ರೂಪಾಯಿ ಆಗಿದೆ.
ರಿಷಬ್ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕದ್ರಿಯಲ್ಲಿ 7 ಜುಲೈ 1983 ರಂದು ಜನಿಸಿದರು. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಬಿಕಾಂ ಮಾಡಲು ಬೆಂಗಳೂರಿನ ವಿಜಯಾ ಕಾಲೇಜಿಗೆ ಸೇರಿದರು. ಶಾಲಾ ಶಿಕ್ಷಣದಲ್ಲೇ ಅವರು ನಾಟಕದಲ್ಲಿ ಅಭಿನಯಿಸಲು ಮುಂದಾದರು. ಬೆಂಗಳೂರಿನಲ್ಲಿದ್ದಾಗಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. 2004 ರಲ್ಲಿ ನಟನೆಗಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.
ಹಾಗೆ 2016ರ ರಕ್ಷಿತ್ ಶೆಟ್ಟಿ ನಟನೆಯ ರಿಕಿ ಸಿನಿಮಾದಿಂದ ಅವರು ನಿರ್ದೇಶನಕ್ಕೆ ಕಾಲಿಟ್ಟರು, ಇದಾದ ಬಳಿಕ ನಟರಾಗಿಯೂ ರಿಷಬ್ ಶೆಟ್ಟಿ ಕಾಣಿಸಿಕೊಂಡರು. ಮೊದಲ ಬಾರಿಗೆ ಬೆಲ್ ಬಾಟಂನಲ್ಲಿ ನಟರಾಗಿ ಅವರು ಕಾಣಿಸಿಕೊಂಡರು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ನ್ಯಾಷನಲ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.



Click it and Unblock the Notifications